Connect with us

International news

WATCH VIDEO : ಪ್ರವಾಸಿಗರ ಸಮೀಪದಲ್ಲೇ ದನದ ಮೇಲೆ ಎಗರಿದ ಹುಲಿ; ಎದೆ ಝಲ್ ಎಂದೆನಿಸುವ ಭಯಾನಕ ವಿಡಿಯೋ ವೈರಲ್

Published

on

ವನ್ಯಜೀವಿ ಸಫಾರಿ ಮಾಡಲು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರಾಣಿಗಳನ್ನು ಹತ್ತಿರದಿಂದ ಕಾಣಲು ಬಯಸುವ ಮಂದಿಗೆ ಇದು ಥ್ರಿಲ್ ನೀಡುತ್ತದೆ ಅನ್ನೋದಂತೂ ಸತ್ಯ. ಹಾಗಾಗಿ ಸಫಾರಿ ಹೋಗಲು ಪ್ರಾಣಿ ಪ್ರಿಯರು ಬಯಸುತ್ತಾರೆ. ಈ ಅದ್ಭುತ ಅನುಭವ ಪಡೆಯಲು ಬಯಸುವ ಮಂದಿ ಸಫಾರಿ ಹೋಗಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳೂ ನಡೆಯುವುದಿದೆ. ಭಯ ಬೀಳುವ ಘಟನೆಗಳು ಸಂಭವಿಸುತ್ತದೆ. ಇಂತಹುದೇ ವೀಡಿಯೋ ಒಂದು ವೈರಲ್ ಆಗಿದೆ.

ಏನಿದು ಘಟನೆ?

ಪ್ರಾಣಿಗಳು ಹೇಳಿ ಕೇಳಿ ಬೇಟೆಯಾಡುವುದರಲ್ಲಿ ಹುಷಾರ್. ಅದರಲ್ಲೂ ಹುಲಿ ಅಂದ್ರೆ ಕೇಳ್ಬೇಕಾ..? ಅಬ್ಬಾ! ದಾಳಿ ನಡೆಸಿ ಆರ್ಭಟಿಸೋ ಕ್ರೂ*ರ ಮೃಗ. ಹಾಗಾಗಿ ಈ ಮೈ ಜುಮ್ಮೆನ್ನಿಸುವ ಈ ದೃಶ್ಯ ನಿಜಕ್ಕೂ ಒಮ್ಮೆ ಗಾಬರಿ ಹುಟ್ಟಿಸೋದು ಸುಳ್ಳಲ್ಲ. ಈ ಘಟನೆ ನಡೆದಿರೋದು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ.
ಹುಲಿ ಬೇಟೆಯ ದೃಶ್ಯವನ್ನು ಪ್ರವಾಸಿಗರು ಹತ್ತಿರದಲ್ಲೇ ನೋಡಿದ್ದಾರೆ. ಅಲ್ಲದೇ, ಹೌಹಾರಿರೋದು ಸುಳ್ಳಲ್ಲ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಫಾರಿ ವಾಹನ ಪ್ರವಾಸಿಗರು ವನ್ಯಜೀವಿಗಳ ವೀಕ್ಷಣೆಯಲ್ಲಿರುತ್ತಾರೆ. ಪೊದೆಯಲ್ಲಿ ಹುಲಿಯೊಂದು ಅಡಗಿ ಕುಳಿತಿರುತ್ತದೆ. ಅಷ್ಟರಲ್ಲಿ ದನವೊಂದು ಅದೇ ಜಾಗದಲ್ಲಿ ಮುಂದೆ ಸಾಗುತ್ತೆ. ಅದನ್ನ ಹುಲಿ ನೋಡಿದ್ಮೇಲೆ ಕೇಳ್ಬೇಕಾ…!? ದನದ ಮೇಲೆ ಎಗರುತ್ತೆ. ಅದರ ಮೇಲೆ ದಾಳಿ ನಡೆಸಿ ಬೇಟೆಗೆ ಯತ್ನಿಸುತ್ತದೆ. ಈ ವೇಳೆ ಹುಲಿಯಿಂದ ತಪ್ಪಿಸಿಕೊಳ್ಳುವ ದನ ಬದುಕಿದ್ಯಾ ಬಡ ಜೀವವೇ ಎಂದುಕೊಂಡು ಓಡಿ ಹೋಗುತ್ತೆ. ಈ ದೃಶ್ಯ ನಡೆಯೋದು ಸಫಾರಿ ವಾಹನದ ಸಮೀಪದಲ್ಲೇ. ವಾಹನದ ಬಳಿಯೇ ಜಿಗಿದಿದ್ದರಿಂದ ಪ್ರವಾಸಿಗರು ಗಾಬರಿ ಬಿದ್ದಿದ್ದಾರೆ. ಈ ವಿಡಿಯೋವನ್ನು ರಣಥಂಬೋರ್ ಪಾರ್ಕ್ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

‘ದನದ ಮೇಲೆ ಹುಲಿಯ ಅನಿರೀಕ್ಷಿತ ಎನ್ಕೌಂಟರ್ ದೃಶ್ಯ ಕ್ಯಾಮೆರಾದಲ್ಲಿ ಸೆರೆ’ ಎಂದು ಬರೆದುಕೊಂಡಿದೆ. ರಾಜಸ್ಥಾನದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರತಿವರ್ಷ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ.

 

International news

4 ಸಾವಿರ ಕೋಟಿಯ ಮನೆ..8 ಖಾಸಗಿ ಜೆಟ್..700 ಹೈಎಂಡ್ ಕಾರುಗಳು..! ಯಾರು ಈ ಶ್ರೀಮಂತ..?

Published

on

ಮಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಎಲೋನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲರೂ ಹುಬ್ಬೇರುವಷ್ಟು ಆಸ್ತಿ, ಪಾಸ್ತಿ ಹೊಂದಿದ್ದಾರೆ. ಆದರೆ, ಅವರಿಗಿಂತಲೂ ಶ್ರೀಮಂತರಿದ್ದಾರೆ ಗೊತ್ತಾ!? ಅಬ್ಬಾ! ಹೌದಾ! ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ನೀವು ಹುಬ್ಬೇರಿಸುತ್ತಿರಬಹುದು. ಇಲ್ಲಿದೆ ಆ ಕುಟುಂಬದ ಸಂಪೂರ್ಣ ವಿವರ.

ಬ್ಲೂಮ್‌ಬರ್ಗ್ ವರದಿ ಮಾಡಿರೋ ಶ್ರೀಮಂತರು

ಎಲೋನ್ ಮಸ್ಕ್ ಮನೆ ಬರೋಬ್ಬರಿ 4 ಸಾವಿರ ಕೋಟಿ ಬೆಲೆ ಬಾಳಿದ್ರೆ, ಈ ಕುಟುಂಬ 8 ಖಾಸಗಿ ಜೆಟ್ ಗಳನ್ನು ಹೊಂದಿದೆ. 700 ಹೈ ಎಂಡ್ ಕಾರುಗಳು ಇವರಲ್ಲಿದೆ. ಬ್ಲೂಮ್‌ ಬರ್ಗ್ ಇತ್ತೀಚಿಗೆ ಮಾಡಿದ ವರದಿಯಂತೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವ ಎಲೋನ್ ಮಸ್ಕ್ ಆಸ್ತಿ 14,87,360 ಕೋಟಿ(ಹದಿನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಮುನ್ನೂರ ಅರುವತ್ತು ಕೋಟಿ)ಯಾಗಿದೆ.

ಆದ್ರೆ, ಆ ಕುಟುಂಬದ ಒಟ್ಟು ಆಸ್ತಿ ಕನಿಷ್ಟ ಅಂದ್ರೂ 25,33,113 ಕೋಟಿ (ಇಪ್ಪತೈದು ಲಕ್ಷದ ಮೂವತ್ತಮೂರು ಸಾವಿರದ ನೂರ ಹದಿಮೂರು ಕೋಟಿ) ಎಂದು ಅಂದಾಜಿಸಿದೆ. ಆದ್ರೆ, ಎಲೋನ್ ಮಸ್ಕ್ ಆಸ್ತಿ ವೈಯಕ್ತಿಕವಾಗಿದ್ದರೆ, ಇವರದ್ದು ಕುಟುಂಬದ ಆಸ್ತಿಯಾಗಿದೆ. ಆದ್ರೆ ಜಗತ್ತಿನಲ್ಲೇ ಅತ್ಯಂತ ಐಶಾರಾಮಿ ಜೀವನ ನಡೆಸ್ತಾ ಇದೆ ಈ ಕುಟುಂಬ.

ಯಾವುದು ಆ ಕುಟುಂಬ?


ಅಂದಹಾಗೆ ಅತ್ಯಂತ ಐಷಾರಾಮಿ ಜೀವನ ಸಾಗಿಸುತ್ತಿರುವ ಆ ಕುಟುಂಬ  ‘ಅಬುಧಾಬಿಯ ರಾಜಮನೆತನ‘. ಇದನ್ನು ಅಲ್‌-ನಯನ್ ಕುಟುಂಬ ಎಂದೂ ಕೂಡಾ ಕರೆಯಲಾಗುತ್ತದೆ. ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಇವರೇ ಅತ್ಯಂತ ಐಶಾರಾಮಿ ಜೀವನ ಸಾಗಿಸುತ್ತಿರುವ ಕುಟುಂಬ. ಇವರು ವಾಸವಾಗಿರುವ ಅರಮನೆಯ ಅಂದಾಜು ಮೌಲ್ಯ 4000 ಕೋಟಿಯದ್ದಾಗಿದೆ. ಇನ್ನು 700 ಐಶಾರಾಮಿ ಕಾರುಗಳು, ಗಾಲ್ಫ್ ಆಡಬಹುದಾದ ದೊಡ್ಡದಾದ ವಿಹಾರ ನೌಕೆ, ಇನ್ನು ತಿರುಗಾಡಲು 8 ಖಾಸಗಿ ಜೆಟ್‌ಗಳು ಇವರ ಬಳಿ ಇದೆ.

ಜಗತ್ತಿನಾದ್ಯಂತ ಸಾವಿರಾರು ಕೋಟಿ ಹೂಡಿಕೆ


ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮತ್ತು ಮುಖ್ಯಸ್ಥ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯಾನ್ ಅವರ ಕುಟುಂಬವು ಪ್ರಪಂಚದಾದ್ಯಂತ ಸಾವಿರಾರು ಹೂಡಿಕೆಗಳನ್ನು ಹೊಂದಿದೆ. ಅಲ್ಲದೇ, ಜಗತ್ತಿನಾದ್ಯಂತ ಸಾಕಷ್ಟು ಆಸ್ತಿಗಳನ್ನು ಈ ಕುಟುಂಬ ಖರೀದಿಸಿದೆ. ಪ್ಯಾರಿಸ್‌ನಲ್ಲಿರುವ ಚಟೌ ಡಿ ಬೈಲೊ ಮತ್ತು ಯುಕೆಯಲ್ಲಿನ ಅನೇಕ ಆಸ್ತಿಗಳ ಮಾಲೀಕತ್ವದ ಕಾರಣ ಶೇಖ್ ಖಲೀಫಾ ಅವರನ್ನು ಲಂಡನ್‌ನ ಜಮೀನುದಾರ ಎಂದು ಕರೆಯಲಾಗುತ್ತದೆ. ಈ ಕುಟುಂಬವು ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಹೂಡಿಕೆ ಮಾಡಿದೆ. ಇದು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ ಎಕ್ಸ್ ಮತ್ತು ರಿಹಾನ್ನಾ ಅವರ ಐಷಾರಾಮಿ ಕಂಪನಿ ಸ್ಯಾವೇಜ್ ಎಕ್ಸ್‌ನ ಹೆಸರುಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ : ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

ರಾಯಲ್ ವಿಹಾರ ನೌಕೆ :


ರಾಯಲ್ ಫ್ಯಾಮಿಲಿ ಅಂದ್ರೆ ಕೇಳ್ಬೇಕಾ..! ಎಲ್ಲವೂ ರಾಯಲ್ ಆಗೇ ಇರುತ್ತದೆ. ಈ ಕುಟುಂಬ ಪ್ರಪಂಚದ ಅತಿದೊಡ್ಡ ವಿಹಾರ ನೌಕೆಯನ್ನು ಹೊಂದಿದೆ, ಅದರ ಮೇಲೆ ಗಾಲ್ಫ್ ಕೋರ್ಸ್ ಅನ್ನು ನಿರ್ಮಿಸಲಾಗಿದೆ. ನೀಲಿ ಸೂಪರ್‌ಯಾಚ್‌ನ ಉದ್ದವು ಸುಮಾರು 591 ಅಡಿಗಳು, ಇದರ ಬೆಲೆ ಸುಮಾರು 4,991 ಕೋಟಿ ರೂ. ಜೊತೆಗೆ ಹಲವು ಐಶಾರಾಮಿ ಕಾರುಗಳೂ ಇವೆ. ಬುಗಾಟಿ, ಫೆರಾರಿ, ಮೆಕ್ಲಾರೆನ್, ಮರ್ಸಿಡಿಸ್-ಬೆನ್ಜ್ ಮತ್ತು ಲಂಬೋರ್ಘಿನಿ ಸೇರಿದಂತೆ ಹಲವು ಕಾರುಗಳಿವೆ.

Continue Reading

International news

WATCH VIDEO : ಆಗಸದಲ್ಲೇ ಡಿ*ಕ್ಕಿಯಾದ ಸೇನಾ ಹೆಲಿಕಾಪ್ಟರ್; 10 ಮಂದಿ ಸಾ*ವು

Published

on

ಕೌಲಾಲಂಪುರ : ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಡಿ*ಕ್ಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಇಹಲೋಕ ತ್ಯಜಿಸಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಲೇಷ್ಯಾ ನೌಕಾಪಡೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್‌ಗಳು ನಾರ್ತ್ ಪೆರಾಕ್ ಸ್ಟೇಟ್‌ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂ*ತ ಸಂಭವಿಸಿದೆ.


ರಾಯಲ್ ಮಲೇಷ್ಯಾ ನೇವಿ ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿಯಾಗಿದ್ದು, ವೈಮಾನಿಕ ಕಸರತ್ತು ನಡೆಸುತ್ತಿದ್ದ ಎಲ್ಲಾ 10 ಸಿಬ್ಬಂದಿ ವಿ*ಧಿವಶರಾಗಿದ್ದಾರೆ. ಮೃ*ತರ ದೇಹಗಳನ್ನು ಮಲೇಷ್ಯಾ ನೌಕಾಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ತನಿಖೆಗೆ ಆದೇಶ:


ಘಟನೆಗೆ ಸಂಬಂಧಪಟ್ಟಂತೆ ಮಲೇಷ್ಯಾ ತನಿಖೆಗೆ ಆದೇಶಿಸಿದೆ. ಮಲೇಷ್ಯಾದ ವಸತಿ ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಯುರೋಕಾಪ್ಟರ್ ಫೆನೆಕ್ ಮತ್ತು ಅಗಸ್ಟಾ-ವೆಸ್ಟ್‌ಲ್ಯಾಂಡ್ ಸಂಸ್ಥೆ ನಿರ್ಮಿಸಿದ AW-1 ಚಾಪರ್ ಮೇ ತಿಂಗಳಲ್ಲಿ ಬೇಸ್‌ನಲ್ಲಿ ನಿಗದಿಪಡಿಸಲಾದ TLDM ಫ್ಲೀಟ್ ಓಪನ್ ಡೇಗಾಗಿ ಫ್ಲೈಪಾಸ್ಟ್ ರಿಹರ್ಸಲ್‌ ಮಾಡುತ್ತಿದ್ದವು.
ಈ ವೇಳೆ ಹೆಲಿಕಾಪ್ಟರ್ ಗಳ ರೆಕ್ಕೆಗಳು ಪರಸ್ಪರ ಬಡಿದಿದ್ದು, ಈ ವೇಳೆ ಕಾಪ್ಟರ್ ಗಳನ್ನು ಪತನವಾಗಿದೆ ಎಂದು ಹೇಳಿದೆ.

Continue Reading

International news

WATCH : ಮೂರೇ ಜಿಗಿತಕ್ಕೆ ಮೂರು ದೇಶಕ್ಕೆ ಎಂಟ್ರಿ..! ಮಹಿಳೆಯ ವಿಡಿಯೋ ವೈರಲ್‌

Published

on

ಕೇವಲ ಮೂರು ಹೆಜ್ಜೆಯಲ್ಲಿ ಮೂರು ದೇಶಕ್ಕೆ ಹೋಗಿ ಬರಲು ಸಾಧ್ಯವಿದೆಯಾ? ಅಂತಹ ಒಂದು ಸಾಧ್ಯತೆಯನ್ನು ಓರ್ವ ಮಹಿಳೆ ಮಾಡಿ ತೋರಿಸಿದ್ದಾಳೆ. ಕೇವಲ ಮೂರು ಸಾರಿ ಜಿಗಿದು ಮೂರು ದೇಶಕ್ಕೆ ಪ್ರವೇಶ ಮಾಡಿದ್ದಾರೆ. ಇದು ತಮಾಷೆ ಅಂತ ಅನಿಸಬಹುದು. ಆದ್ರೆ, ಇದು ನಿಜವಾಗಿ ನಡೆದಿದೆ. ಕಾಡಿನ ನಡುವಿನಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಮೂರು ದೇಶಕ್ಕೆ  ಜಿಗಿತ :


ಕಾಡಿನ ನಡುವೆ ಇರುವ ಸಿಮೆಂಟ್ ನೆಲದಲ್ಲಿ ಮೂರು ಬಾರಿ ಜಿಗಿದ ಮಹಿಳೆ ಮೂರು ದೇಶಗಳಿಗೆ ಕ್ಷಣ ಮಾತ್ರದಲ್ಲಿ ಪ್ರವೇಶ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸದ್ಯ 32 ಲಕ್ಷಕ್ಕೂ ಅಧಿಕ ಜನ ವಿಡಿಯೋ ನೋಡಿ ಕಮೆಂಟ್ ಮಾಡುತ್ತಿದ್ದಾರೆ.
ಇಂಡಿಯಾ – ಪಾಕಿಸ್ತಾನದಲ್ಲಿ ಯಾರಾದ್ರೂ ಗಡಿ ದಾಟಿದ ಅಂದ್ರೆ ಆತನ ಕಥೆ ಮುಗಿತು ಅಂತಾನೆ ಲೆಕ್ಕ. ಆದ್ರೆ ಈ ಮಹಿಳೆ ಮೂರು ದೇಶಕ್ಕೆ ಪ್ರವೇಶ ಮಾಡಿದ್ರೂ, ಈಕೆಯನ್ನು ಯಾರೂ ತಡೆಯಲು ಇಲ್ಲ, ಕೇಳಲು ಇಲ್ಲ. ಅಷ್ಟಕ್ಕೂ ಮಹಿಳೆ ಪ್ರವೇಶ ಮಾಡಿದ ದೇಶಗಳು ಯಾವುವು ಅಂದ್ರೆ ಅದು ಜರ್ಮನಿ, ನೆದರ್ಲ್ಯಾಂಡ್ ಮತ್ತು ಬೆಲ್ಜಿಯಂ.

ಈ ಮೂರು ದೇಶಗಳನ್ನು ಅ ಮಹಿಳೆ ಮೂರು ಜಿಗಿತದಲ್ಲಿ ಪ್ರವೇಶ ಮಾಡಿದ್ದಾರೆ. ಮೂರು ದೇಶದ ಗಡಿಯಲ್ಲೂ ಇವರಿಗೆ ಯಾವುದೇ ಭದ್ರತೆಯ ತೊಂದರೆ ಕೂಡಾ ಆಗಿಲ್ಲ. ಅಲ್ಲದೆ, ಪಾಸ್‌ಪೋರ್ಟ್‌ ವಿಸಾವನ್ನು ಚೆಕ್‌ ಮಾಡುವ ಅಧಿಕಾರಿಗಳೂ ಕೂಡಾ ಇರಲಿಲ್ಲ.

ಇದು ನಡೆದಿದ್ದು ಎಲ್ಲಿ?

ಜರ್ಮನಿ, ನೆದರ್ಲ್ಯಾಂಡ್ ಮತ್ತು ಬೆಲ್ಜಿಯಂ ಈ ಮೂರು ದೇಶಗಳ ಗಡಿಯನ್ನು ಸುಲಭವಾಗಿ ದಾಟಬಹುದು. ಈ ಮೂರು ದೇಶದ ಗಡಿ ಒಂದು ಕಡೆ ಸಂಧಿಸುತ್ತಿದ್ದು, ಅದು ನೆದರ್ಲ್ಯಾಂಡ್‌ನ ಲಿಂಬರ್ಗ್‌ ಪ್ರಾಂತ್ಯದ ವಾಲ್ಸ್‌ ಎಂಬಲ್ಲಿದೆ. ಇಲ್ಲಿ ಮೂರು ದೇಶದ ಗಡಿಗಳು ಒಂದಕ್ಕೊಂದು ಸಂಧಿಸುತ್ತದೆ.

ಇದನ್ನೂ ಓದಿ : ಇದು ಕಳ್ಳನೊಬ್ಬ ಜಡ್ಜ್‌ ಆದ ರೋಚಕ ಕಥೆ..! ಜಡ್ಜ್‌ ಆಗಿ ಆತ ಮಾಡಿದ್ದೇನು ಗೊತ್ತಾ..?

ಸುಮಾರು 323 ಮೀಟರ್ ಎತ್ತರದ ಪ್ರದೇಶದಲ್ಲಿ ಈ ಗಡಿಗಳು ಸಂಧಿಸುವ ಜಾಗ ಇದೆ. ಇದು ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿರುವ ಪ್ರವಾಸಿ ತಾಣ ಕೂಡಾ ಹೌದು. ಇಲ್ಲಿ ಸಿಮೆಂಟ್ ನೆಲದ ಮೇಲೆ ಮೊನಚಾದ ಒಂದು ಕಲ್ಲು ಇದೆ. ಅದರ ಒಂದು ಬದಿಯಲ್ಲಿ N ಎಂದು ಬರೆಯಲಾಗಿದೆ. ಇದು ನೆದರ್ಲ್ಯಾಂಡ್‌ನ್ನು ಸೂಚಿಸುತ್ತದೆ.

ಮತ್ತೊಂದು ಬದಿಯಲ್ಲಿ B ಎಂದು ಬರೆಯಲಾಗಿದ್ದು, ಅದು ಬೆಲ್ಜಿಯಂ ಭಾಗವಾಗಿದೆ ಮತ್ತು G ಎಂದು ಬರೆಯಲಾಗಿರುವ ಜಾಗ ಜರ್ಮನಿಗೆ ಸೇರಿದ್ದಾಗಿದೆ.

Continue Reading

LATEST NEWS

Trending