ಎಲ್ಲಿಯ ಅಯೋಧ್ಯೆ, ಎಲ್ಲಿಯ ಕಾರ್ಕಳದ ಈದು? ದೈವ ಸಂಕಲ್ಪಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬಹುಷ ಯಾರಿಗೂ ಬೇಡವಾಗಿರಕ್ಕಿಲ್ಲ..!
ಉಡುಪಿ : ಎಲ್ಲಿಯ ಅಯೋಧ್ಯೆ, ಎಲ್ಲಿಯ ಕಾರ್ಕಳದ ಈದು? ದೈವ ಸಂಕಲ್ಪಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬಹುಷ ಯಾರಿಗೂ ಬೇಡವಾಗಿರಕ್ಕಿಲ್ಲ..!
ನೇಪಾಳದ ಗಂಡಕೀ ನದಿಯಿಂದ ಬಂದ ಸಾಲಿಗ್ರಾಮ ಶಿಲೆಗೆ ರಾಮನಾಗಲು ಯೋಗವಿಲ್ಲ ಎಂದಾದಾಗ ಪ್ರಭು ಶ್ರೀ ರಾಮಚಂದ್ರನ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಚಂದ್ರನ ಮೂರ್ತಿಯಾಗುವ ಯೋಗ ಕೂಡಿ ಬಂದಿದ್ದು ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿ ಯವರ ಭೂಮಿಯಲ್ಲಿದ್ದ ಜಗತ್ತಿನ ಅತ್ಯಂತ ಶ್ರೇಷ್ಠ ಶಿಲೆಗೆ.
ಬಹುಶಃ ಯಾವುದೋ ಶಾಪಗ್ರಸ್ತ ದೇವತೆ ಶಿಲೆಯ ರೂಪದಲ್ಲಿ ಯುಗಗಳಿಂದ ರಾಮದರ್ಶನಕ್ಕಾಗಿ ತಪಸ್ಸು ಮಾಡುತ್ತಿತ್ತೋ ಏನೋ ಅನ್ನಿಸುತ್ತದೆ.
ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾದ ಕಾರ್ಕಳದ ಪುಣ್ಯ ಮಣ್ಣಿನಲ್ಲಿ ಬ್ರಹ್ಮಬೈದರ್ಕಳ ಆರಾಧನೆ ಮಾಡುವ ಕುಟುಂಬವೊಂದರ ಭೂಮಿಯಲ್ಲಿದ್ದ ತುಳುನಾಡಿನ ಕೃಷ್ಣ ಶಿಲೆಗೆ ರಾಮನಾಗುವ ಯೋಗ ಒಲಿದು ಬಂತು’ ಎನ್ನುವುದು ಯೋಗಾಯೋಗವಲ್ಲದೆ ಮತ್ತೇನು.? ಎಂಬ ಪ್ರಶ್ನೆ ತುಳುನಾಡ ಆಸ್ತಿಕರದ್ದು.
https://youtu.be/T563zAOvqko