Connect with us

LATEST NEWS

UDUPI : ನನ್ನ ಸ್ಪರ್ಧೆಯಿಂದ ಯಾರಿಗೂ ನೋವಾಗಿಲ್ಲ, ಶುಭ ಕೋರಿದ್ದಾರೆ : ಕೋಟ ಶ್ರೀನಿವಾಸ ಪೂಜಾರಿ

Published

on

ಉಡುಪಿ : ಸಮಾಜದ ಕೊನೆಯ ಮನುಷ್ಯನಿಗೆ ಕೂಡಾ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಭಾವುಕರಾಗಿ ಮಾತನಾಡಿದ್ದಾರೆ. ಟಿಕೆಟ್ ಸಿಕ್ಕ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂಬೇಡ್ಕರ್‌ ಅವರ ಸಂವಿಧಾನ, ಬಿಜೆಪಿಯ ಒಟ್ಟು ಆಶಯದಿಂದ ಇದೆಲ್ಲ ಸಾಧ್ಯವಾಯ್ತು. ಗ್ರಾಮ ಪಂಚಾಯತ್ ಸದಸ್ಯನಾಗಿ ನಾನು ಕೆಲಸ ಮಾಡಿಕೊಂಡಿದ್ದೆ. ಇಂದು ಸಂಸತ್ ಪ್ರವೇಶ ಮಾಡ್ಲಿಕ್ಕೆ ಪಕ್ಷ ಟಿಕೆಟ್ ಕೊಟ್ಟಿದೆ. ಇದು ಸಣ್ಣ ವಿಚಾರ ಅಲ್ಲ. ಬಹಳ ಶ್ರದ್ಧೆಯಿಂದ ಪುನೀತನಾಗಿ ಈ ಅವಕಾಶವನ್ನು ಸ್ವೀಕರಿಸಿ ಸ್ಪರ್ಧೆಗೆ ಧುಮುಕುತ್ತಿದ್ದೇನೆ. ಬಿಜೆಪಿಯ ಸಂಘಟನೆ ಪ್ರಧಾನಿ ಮೋದಿಯ ಕಾರ್ಯಶೈಲಿ ಸಂಸದನಾಗಿ ಆಯ್ಕೆ ಮಾಡಿದೆ ಎಂದರು.

ಬೇಸರ, ಅಸಮಾಧಾನ ಇಲ್ಲ

ಟಿಕೆಟ್ ಆದಮೇಲೆ ಬಿಜೆಪಿಯೊಳಗೆ ಬೇಸರ ಅಸಮಾಧಾನ, ಚರ್ಚೆ ಆಗಲ್ಲ. ಅಭ್ಯರ್ಥಿ ಎಂದು ಘೋಷಣೆಯಾದ ಮೇಲೆ ಎಲ್ಲಾ ನಾಯಕರು ಶುಭ ಕೋರಿದ್ದಾರೆ. ಸಿಟಿ ರವಿ, ಪ್ರಮೋದ್ ಮಧ್ವರಾಜ್, ಉದಯ ಶೆಟ್ಟಿ, ಶೋಭಾ ಕರಂದ್ಲಾಜೆ ಹಾರೈಸಿದ್ದಾರೆ. ಸಂಘಟನೆ ನಾಯಕತ್ವ ಗಟ್ಟಿ ಇದೆ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂದರು.

ಸಮಾವೇಶಕ್ಕೆ ಗೈರು; ಸ್ಪಷ್ಟನೆ ಕೊಟ್ಟ ಕೋಟ

ಇನ್ನು ಬುಧವಾರ ನಡೆದ ಸರ್ಕಾರದ ಗ್ಯಾರಂಟಿ ಸಮಾವೇಶದಿಂದ ಬಿಜೆಪಿ ಶಾಸಕರು ದೂರ ಉಳಿದಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲೇ ವ್ಯಂಗ್ಯವಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಟ, ಸರ್ಕಾರಿ ಕಾರ್ಯಕ್ರಮವನ್ನು ಸಿಎಂ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತಿಸಿದ್ದರು. ಈ ಕಾರಣಕ್ಕಾಗಿ ಬಿಜೆಪಿ ಶಾಸಕರು ಕಾರ್ಯಕ್ರಮ ಬಹಿಷ್ಕರಿಸಿರಬಹುದು. ಸರಕಾರಿ ಕಾರ್ಯಕ್ರಮಕ್ಕೆ ಅದರದ್ದೇ ಆದ ಗೌರವ ಬೇಕು. ಶಾಲಾ ಮಕ್ಕಳನ್ನು ಕೂರಿಸಿ ಸಮಾವೇಶ ಮಾಡಿದರೆ ಗೌರವ ಬರಲ್ಲ. ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರೆ ಯಾವುದೇ ತಪ್ಪು ಇಲ್ಲ. ಸರ್ಕಾರದ ಖರ್ಚಿನಲ್ಲಿ ಚುನಾವಣಾ ಭಾಗವಾಗಿ ಸಮಾವೇಶ ಮಾಡಿದ್ದೀರಿ. ಇಲ್ಲಸಲ್ಲದ ಆರೋಪ ಮಾಡುವ ಕೆಟ್ಟ ಸಂಪ್ರದಾಯವನ್ನು ಸಿಎಂ ಅನುಸರಿಸಿದ್ದಾರೆ. ಬಿಜೆಪಿಯನ್ನು ಸಿದ್ದರಾಮಯ್ಯ ಬಹಳ ಲಾಭವಾಗಿ ಟೀಕೆ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿದರೆ ನಿಮ್ಮ ಗೌರವ ಹೆಚ್ಚಲ್ಲ.

ಅಂಬೇಡ್ಕರ್ ಸಂವಿಧಾನದ ಬಗ್ಗೆ ಎಲ್ಲ ಮಾತನಾಡಿದ್ದೀರಿ. ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಜಾಗ ಕೊಡಲಿಲ್ಲ. ಅಂಬೇಡ್ಕರ್ ರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಜನಸಂಘ ಅಂಬೇಡ್ಕರ್ ಅವರ ಏಜಂಟ್ ಆಗಿ ಕೆಲಸ ಮಾಡಿತ್ತು. ಪ.ಜಾತಿ ಪಂಗಡದ ಹಣ ಗ್ಯಾರೆಂಟಿಗೆ ಬಳಕೆ ಮಾಡಿದ್ದು ಮೋಸ ಅಲ್ವಾ? ಎಂದು ಅವರು ತಿರುಗೇಟು ನೀಡಿದ್ದಾರೆ.

FILM

ಅಬ್ಬಬ್ಬಾ! ಸೆಲೆಬ್ರಿಟಿ ಫೇವರೇಟ್ ‘ಒರ್ರಿ’ ಬಿಚ್ಚಿಟ್ರು ಸತ್ಯ.. ಫೋಟೋಗೂ ಲಕ್ಷ..ಟಚ್ ಗೂ ಲಕ್ಷ!

Published

on

ಮಂಗಳೂರು/ ಮುಂಬೈ: ಒರ್ರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಹೆಸರು. ಯಾವುದೇ ಸಿನಿಮಾ ನಟ, ನಟಿಯರಿರಲಿ ಅವರೊಂದಿಗೆ ಹೆಚ್ಚಾಗಿ ಒರ್ರಿ ಕಾಣಿಸಿಕೊಳ್ಳುತ್ತಾರೆ. ಸಾರ್ವಜನಿಕ ಕಾರ್ಯಕ್ರಮ ಇರಲಿ, ಖಾಸಗಿ ಕಾರ್ಯಕ್ರಮ ಇರಲಿ ಭಾಗಿ ಆದರೆ ಒರ್ರಿ ಲಕ್ಷಗಟ್ಟಲೆ ಪಡೆಯುತ್ತಾರೆ ಎಂದು ಹೇಳಿದ್ದರು. ಹಾಗಾಗಿ ಅವರು ಯಾವುದೇ ಕೆಲಸ ಮಾಡುತ್ತಿಲ್ಲ. ಈಗ ಅವರಿಗೆ ಇರೋ ಬೇಡಿಕೆ ಇನ್ನೂ ಹೆಚ್ಚಿದೆಯಂತೆ. ಕರಣ್ ಜೋಹರ್ ಅವರ ಧರ್ಮ ಕೋರ್​ಸ್ಟೋನ್ ಏಜೆನ್ಸಿ ಈಗ ಇವರ ಈವೆಂಟ್​ಗಳನ್ನು ಮ್ಯಾನೇಜ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೆಲಸ ಮಾಡದೇ ಇರದ ಕಾರಣ ಬಿಚ್ಚಿಟ್ಟ ಒರ್ರಿ :

ಇತ್ತೀಚೆಗೆ ಒರಿ ಅವರು ಕಾರ್ಯಕ್ರಮ ಒಂದರಲ್ಲಿ ತಮ್ಮ ಕೆಲಸದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಈ ವೇಳೆ ಕೆಲಸ ಮಾಡದೆ ಇರಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.ಸಿನಿಮಾ ಅಥವಾ ಶೋಗಳನ್ನು ಮಾಡಲು ನನಗೆ ಇಷ್ಟ ಇಲ್ಲ. ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ಯಾರು ಯೋಚಿಸುತ್ತಾರೆ ಹೇಳಿ. ಯಾರೂ ಯೋಚಿಸುವುದಿಲ್ಲ. ನನಗೆ ಕೆಲಸ ಅಂದರೆ ಬೇಸರ, ಟಿವಿ, ಸಿನಿಮಾಗಳಲ್ಲಿ ತುಂಬಾನೇ ಕೆಲಸ ಇರುತ್ತದೆ.

ಈ ಕ್ಷೇತ್ರದಲ್ಲಿ ಕೆಲಸ ಅನ್ನೋದು ಮುಗಿಯೋದೆ ಇಲ್ಲ. ಮನೆಗೂ ನೀವು ಕೆಲಸವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ನಮ್ಮ ಜೀವನ ಕೆಲಸದ ಜೊತೆಯೇ ಸಾಗುತ್ತದೆ. ಇದು ಸುಲಭ ಎಂದು ಜನರಿಗೆ ಅನಿಸುತ್ತದೆ. ಆದರೆ, ಸುಲಭ ಇಲ್ಲ ಎಂದು ಅವರು ತಿಳಿಸಿದ್ದರು.

ಫೋಟೋಗೂ ಲಕ್ಷ..ಟಚ್ ಗೂ ಲಕ್ಷ :


ಒರ್ರಿ ಅವರು ಸುಮ್ಮ ಸುಮ್ಮನೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಿಲ್ಲ. ಚಾರ್ಜ್ ಮಾಡ್ತಾರೆ. ಲಕ್ಷಗಟ್ಟಲೆ ಹಣ ಸಿಗುತ್ತಂತೆ ಅವರಿಗೆ. ಈ ಬಗ್ಗೆ ಶಾಕಿಂಗ್ ಹೇಳಿಕೆಯನ್ನೂ ನೀಡಿದ್ದಾರೆ ಅವರು. ನೀವೇ ಒಂದು ಫೋಟೋ ಕೇಳಿದರೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ನಾನಾಗೇ ಬಂದು ಫೋಟೋ ಕ್ಲಿಕ್ಕಿಸಿಕೊಂಡರೆ ಹಣ ಇಲ್ಲ. ಯಾರಾದರೂ ಬಂದು ಟಚ್ ಮಾಡುವಂತೆ ಕೇಳಿದರೆ 20 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ ಎಂದು ಒರ್ರಿ ಹೇಳಿದ್ದಾರೆ.

ಇದನ್ನೂ ಓದಿ : ‘ಎ’oತಹ ಖುಷಿ ಸುದ್ದಿ ಕೊಟ್ರು ಗೊತ್ತಾ ರಿಯಲ್ ಸ್ಟಾರ್ ಉಪೇಂದ್ರ?

ಒರ್ರಿ ಅವರು ತಮ್ಮದೇ ಆದ ತಂಡ ಹೊಂದಿದ್ದಾರೆ. ‘ಎಲ್ಲರೂ ಫಾರ್ಮ್​ಹೌಸ್​ಗೆ ಕರೆಯುತ್ತಾರೆ. ಅಲ್ಲಿ ನನ್ನನ್ನು ಟಚ್ ಮಾಡುತ್ತಾರೆ. ದಿನಕ್ಕೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ’ ಎಂದು ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ.

ಒರ್ರಿ ಸೆಲೆಬ್ರಿಟಿಗಳೊಂದಿಗೆ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ. ಪಾರ್ಟಿ ಇದ್ದಲ್ಲಿ ಒರ್ರಿ ಹಾಜರ್. ಯಾರೀತ? ಅನ್ನೋ ಕುತೂಹಲ, ಚರ್ಚೆ ಇತ್ತೀಚೆಗೆ ಭಾರೀ ನಡೆದಿತ್ತು. ಓರ್ಹಾನ್ ಅವತ್ರಾಮಣಿ ಓರ್ರಿ ಆಗಿಯೇ ಫೇಮಸ್ ಆಗಿದ್ದು, ಕಾಫಿ ವಿತ್ ಕರಣ್ ಶೋ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಹಿಂದಿ ಬಿಗ್ ಬಾಸ್ 17 ರಲ್ಲಿ ಅತಿಥಿಯಾಗಿ ಅವರು ಭಾಗವಹಿಸಿದ್ದರು.

Continue Reading

LATEST NEWS

ಈ ನಂಬರ್‌ನಿಂದ ಫೋನ್ ಬಂದ್ರೆ ರಿಸೀವ್ ಮಾಡಬೇಡಿ.. ನಿಮ್ಮ ಹಣ ಮಂಗಮಾಯ

Published

on

ಮಂಗಳೂರು: ಫೋನ್‌ನಲ್ಲಿ ಕರೆ ಮಾಡಿ ಹಣ ಕಳೆದುಕೊಂಡ ಅದೆಷ್ಟೋ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಮೋಸ ಮಾಡುವ ವಂಚಕರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಕೇವಲ ಫೋನ್ ಕಾಲ್ ಮೂಲಕ ಮಂಗ ಮಾಡುವ ವಿಧಾನವನ್ನು ಕಂಡುಕೊಂಡಿದ್ದಾರೆ.

+29 ನಿಂದ ಆರಂಭವಾಗುವ ಸಂಖ್ಯೆ:

ನಿಮಗೆ +29 ರಿಂದ ಆರಂಭವಾಗುವ ಸಂಖ್ಯೆಗಳಿಂದ ಫೋನ್ ಕಾಲ್ ಬಂದರೆ ಎಚ್ಚರದಿಂದಿರಿ. ಈ ಸಂಖ್ಯೆಯಿಂದ ಬರುವ ಫೋನ್ ಕಾಲ್‌ನಲ್ಲಿ ನಿಮ್ಮದೇ ಕುಟುಂಬದ ಸದಸ್ಯರು ಅಥವಾ ಸಂಬಂಧಿ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೊಂಡು ಹಣಕ್ಕಾಗಿ ಬೇಡಿಕೆ ಇಡುವ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸ್ ಕೇಸ್‌ನ ಹೆಸರು ಕೇಳಿದ ತಕ್ಷಣ ಜನರು ಅವರನ್ನು ನಂಬಿ ಕೇಳಿದಷ್ಟು ಹಣ ಕಳುಹಿಸಿ ಮೋಸ ಹೋದ ಉದಾಹರಣೆಗಳಿವೆ.

ಆದರೆ ಫೋನ್ ಇಟ್ಟ ಮೇಲೆ ನಿಮ್ಮ ಕುಟುಂಬದ ವ್ಯಕ್ತಿ ಅಥವಾ ಸಂಬಂಧಿಕರಿಗೆ ಹಾಗೆ ಏನೂ ಆಗೇ ಇರುವುದಿಲ್ಲ ಎನ್ನುವ ವಿಚಾರ ತಿಳಿಯುತ್ತದೆ. ಆದರೆ ಅಷ್ಟರೊಳಗೆ ಸೈಬರ್ ವಂಚನೆಗೆ ಬಲಿಯಾಗಿರುತ್ತಾರೆ. ಇದರಿಂದ ತಪ್ಪಿಸಿಕೊಳ್ಳಲು ಇಂತಹ ಫೋನ್ ನಂಬರ್‌ನಿಂದ ಕಾಲ್ ಬಂದರೆ ಅದನ್ನು ರೀಸಿವ್ ಮಾಡಬಾರದು.

ಸೈಬರ್ ವಂಚನೆ ಪ್ರಕರಣದಲ್ಲಿ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ವಿಷಯದಲ್ಲಿ ಹೊಸ ಟ್ರೆಂಡ್ಗಳು ಬರುತ್ತಿವೆ. ಪ್ರಸ್ತುತ ಭಾರತೀಯ ಸಂಖ್ಯೆಗಳಲ್ಲದ +29 ಶ್ರೇಣಿಯ ಸಂಖ್ಯೆಗಳಿಂದ ಕರೆಗಳು ಬರುತ್ತಿವೆ.

ಹೀಗೆ ಬಂದ ಫೋನ್‌ನಲ್ಲಿ ನಿಮ್ಮ ಮಗ/ಮಗಳು ಅಥವಾ ನಿಮ್ಮ ಸಂಬಂಧಿ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಕರೆ ಮಾಡುವವರು ತಮ್ಮ ಸಂಖ್ಯೆಯಲ್ಲಿ ಪೊಲೀಸ್ ಅಥವಾ ಅಪರಾಧ ವಿಭಾಗದ ಹೆಸರುಗಳನ್ನು ಬಳಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಕ್ಷಣ ಭಯಭೀತರಾಗುತ್ತಾರೆ.

ಅದರ ನಂತರ ಕರೆ ಮಾಡುವವರು ವ್ಯಕ್ತಿಗೆ ಬದಲಾಗಿ ಹಣವನ್ನು ಕೇಳುತ್ತಾರೆ. ಹಾಗಾಗಿ ನಿಮ್ಮ ಮಗ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅಥವಾ ನಿಮ್ಮ ಸಂಬಂಧಿ ಪ್ರಕರಣದಲ್ಲಿ ಭಾಗಿಯಾಗಿದ್ದರೆ ತಕ್ಷಣ ಹಣ ಕಳುಹಿಸಿ ಎಂಬ ಕರೆಗಳನ್ನು ನಂಬಬೇಡಿ.

ಪೊಲೀಸರ ಪ್ರಕಾರ ಯಾವುದೇ ಕಾನೂನು ಜಾರಿ ಸಂಸ್ಥೆ ಇಂತಹ ಫೋನ್ ಕರೆಗಳನ್ನು ಮಾಡುವುದಿಲ್ಲ. ಯಾರಾದರೂ ಈ ರೀತಿಯ ಕರೆಯನ್ನು ಸ್ವೀಕರಿಸಿದರೆ ಮೊದಲು ನಿಮ್ಮ ಪರಿಚಯಸ್ಥರಿಗೆ ಕರೆ ಮಾಡಿ. ಅವರ ಯೋಗಕ್ಷೇಮವನ್ನು ತಿಳಿದುಕೊಂಡು ನಂತರ ಸುಲಭವಾಗಿ ಸಂಖ್ಯೆ 1930, ಸೈಬರ್ ಸೆಲ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮತ್ತು ವರದಿಯನ್ನು ಸಲ್ಲಿಸಿ.

ಯಾವುದೇ ಕಾನೂನು ಜಾರಿ ಸಂಸ್ಥೆಯು ಇಂತಹ ಕರೆಗಳನ್ನು ಮಾಡುವುದಿಲ್ಲ ಅಥವಾ ಯಾವುದೇ ವ್ಯಕ್ತಿಗೆ ಹಣವನ್ನು ಬೇಡಿಕೆ ಮಾಡುವುದಿಲ್ಲ. ಹಣ ಕೇಳುವ ಈ ರೀತಿಯ ಫೋನ್ ಕರೆಗಳು ಬಂದರೆ ವಂಚಕರ ಫೋನ್ ಎಂದೇ ಭಾವಿಸಿ ಕರೆಯನ್ನು ಸ್ವೀಕರಿಸಬೇಡಿ.

Continue Reading

LATEST NEWS

OYO ರೂಮ್ ಬಂದ್ ಮಾಡಿಸಿದಕ್ಕೆ ಸಿಟ್ಟಿಗೆದ್ದ ಜೋಡಿ.. ಶಾಸಕರ ಕಛೇರಿ ಮುಂದೆಯೇ ಪ್ರೇಮಿಗಳ ರೊಮ್ಯಾನ್ಸ್..!

Published

on

ಛತ್ತೀಸ್‌ಗಡ್/ಮಂಗಳೂರು: ವೈಶಾಲಿನಗರದಲ್ಲಿ ಬಿಜೆಪಿ ಶಾಸಕರು ಓಯೋ ಹೋಟೆಲ್‌ಗಳನ್ನು ಓಯೋ ರೂಮ್‌ಗಳನ್ನು ಬಂದ್ ಮಾಡಿದ್ದು, ಇದೀಗ ಪ್ರೇಮಿಗಳು ರೊಚ್ಚಿಗೆದ್ದಿದ್ದಾರೆ. ಛತ್ತೀಸ್‌ಗಡ್‌ ನ ವೈಶಾಲಿನಗರದಲ್ಲಿ ಸ್ಥಳೀಯ ಬಿಜೆಪಿ ನಾಯಕ ಹಾಗೂ ಶಾಸಕ  ರಿಕೇಶ್ ಸೇನ್ ಅವರು ನಗರದಲ್ಲಿ ವೇಶ್ಯಾವಟಿಕೆ ಹೆಚ್ಚಾಗುತ್ತಿದೆ ಎಂದು ಓಯೋ ರೂಮ್‌ಗಳನ್ನು ಬಂದ್ ಮಾಡಿದ್ದರು. ಈ ಹಿನ್ನೆಲೆ ಸಿಟ್ಟಿಗೆದ್ದ ಜೋಡಿಯೊಂದು ಶಾಸಕರ ಕಛೇರಿ ಮುಂದೆ ಕಿಸ್ಸಿಂಗ್ ಮಾಡಿದ್ದಾರೆ. ಪ್ರತಿಭಟನಾ ರೂಪವಾಗಿ ಇವರಿಬ್ಬರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

romance video

ಇನ್ನು ನಗರದ ಬಿಜೆಪಿ ನಾಯಕ ಹಾಗೂ ಶಾಸಕ ಎಲ್ಲೆಲ್ಲಿ ವೇಶ್ಯಾವಾಟಿಕೆಗೆಳು ನಡೆಯುತ್ತದೆಯೋ ಅಲ್ಲಲ್ಲಿ ಪೊಲೀಸರೊಂದಿಗೆ ದಾಳಿ ನಡೆಸುವುದಾಗಿಯು ಸೂಚನೆ ನೀಡಿದ್ದರು. ಆದರೆ ಓಯೋ ರೂಮ್‌, ಹೋಟೆಲ್‌ಗಳನ್ನು ಬಂದ್ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಪ್ರೇಮಿಗಳು ಶಾಸಕರ ಕಛೇರಿ ಮುಂದೆಯೆ ರೊಮ್ಯಾನ್ಸ್ ಮಾಡಲು ಮುಂದಾಗಿರುವುದು ವಿಪರ್ಯಾಸವೇ ಸರಿ. ಈ ಹಿಂದೆಯೂ ಶಾಸಕರು ಪಾರ್ಕ್‌ವೊಂದರಲ್ಲಿ ರೊಮ್ಯಾನ್ಸ್‌ ಮಾಡುತ್ತಿದ್ದ ಜೋಡಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮರುತ್ತರಿಸಿದ ಜೋಡಿ ನೀವು ಓಯೋ ರೂಮ್‌ ಬ್ಯಾನ್ ಮಾಡಿದ್ದರಿಂದ ನಮಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಮೆಟ್ರೋದಲ್ಲೂ ರೊಮ್ಯಾನ್ಸ್:

ಈ ಹಿಂದೆ ಬೆಂಗಳೂರು ನಮ್ಮ ಮೆಟ್ರೋದ ಬಾಗಿಲಿನ ಬಳಿ ಯುವತಿ-ಯವಕರಿಬ್ಬರೂ ನಿಂತುಕೊಂಡಿದ್ದು ಒಬ್ಬರನೊಬ್ಬರು ತಬ್ಬಿಕೊಂಡಿದ್ದಾರೆ. ಯುವತಿ ಯುವಕನ ಕೆನ್ನೆಗೆ ಮುತ್ತು ನೀಡಿದ್ದಾಳೆ. ಈ ದೃಶ್ಯವನ್ನು ಮೆಟ್ರೋದಲ್ಲಿದ್ದ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇನ್ನು ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ರೋಮ್ಯಾನ್ಸ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ. ಇಂಥದ್ದೇ ಘಟನೆಯೊಂದು ದೆಹಲಿಯಲ್ಲೂ ನಡೆದಿದ್ದು ಪದೇ ಪದೇ ಜನರು ಮುಜುಗರಕ್ಕೆ ಒಳಪಡುವಂತಾಗಿದೆ.

 

Continue Reading

LATEST NEWS

Trending