ಉಡುಪಿ : ಟಿಪ್ಪು ಸುಲ್ತಾನ್ ಹೆಸರಿನ ರೈಲಿನ ಹೆಸರು ಒಡೆಯರ್ ಬದಲಾವಣೆ ಆದ ಬಳಿಕ ಇದೀಗ ಹಿಂದೂ ಸಂಘಟನೆಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಉಡುಪಿ ಕುಂದಾಪುರದ ಬೈಂದೂರಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ‘ಸಲಾಂ ಆರತಿ’ ಬಗ್ಗೆ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಚರ್ಚೆ ಶುರುವಾಗಿದೆ.
ಉಡುಪಿ ಶಾಸಕರಾದ ರಘುಪತಿ ಭಟ್ ಆರತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಳದ ಸಲಾಂ ಆರತಿ ನಿಲ್ಲಿಸಬೇಕು ಅಂತ ನಾವು ಹೇಳ್ತಾ ಇಲ್ಲ. ಸಲಾಂ ತೆಗೆದು ನಮಸ್ತೆ ಆರತಿ ಅಂತ ಮಾಡ್ಬೋದು .
ಸಲಾಂ ಆರತಿ ಅನ್ನುವಂತಹ ಅವಶ್ಯಕತೆಯಿಲ್ಲ.ಪೂಜೆ ನಿಲ್ಲಿಸುವ ಅಗತ್ಯವಿಲ್ಲ.ಹೆಸರು ಚೇಂಜ್ ಮಾಡಿದರೆ ಸಾಕು ಎಂದಿದ್ದಾರೆ.
ಆದರೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮಾತಾಡಿದ್ದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ‘ಸಲಾಂ ಆರತಿ’ ಎಂಬ ಹೆಸರಿಲ್ಲಿ ಯಾವುದೇ ಪೂಜೆ ಗಳು ನಡೆಯುತ್ತಿಲ್ಲ.
ಸಲಾಂ ಮಂಗಳಾರತಿ ಎನ್ನುವುದಕ್ಕೆ ಯಾವುದೇ ದಾಖಲೆಗಳು ಲಿಖಿತ ರೂಪದಲ್ಲಿ ಇಲ್ಲ. ಸುಮಾರು ನಲವತ್ತು ವರ್ಷಗಳಿಂದ ನಾನು ಕೊಲ್ಲೂರು ದೇವಳದ ಭಕ್ತನಾಗಿದ್ದೇನೆ.
ಹತ್ತು ವರ್ಷಗಳ ಕಾಲ ದೇವಳ ಆಡಳಿತ ಮೊಕ್ತೇಸರನಾಗಿದ್ದೆ. ಹೀಗಾಗಿ ಕೊಲ್ಲೂರು ದೇವಿಯ ಮಹಾತ್ಮೆಯ ಬಗ್ಗೆ ತಿಳುವಳಿಕೆ ಇರುವಂತಹ ಒಬ್ಬ ವ್ಯಕ್ತಿ ಅಂತ ನಾನು ಅಂದುಕೊಂಡಿದ್ದೇನೆ.
ಸಂಜೆ ವೇಳೆ ಆಗುವ ಮಂಗಳಾರತಿ ಅದು ಪ್ರದೋಷ ಪೂಜೆ, ಸಲಾಂ ಹೆಸರಿನ ಪೂಜೆ ಅಲ್ಲ. ಅದನ್ನು ಯಾವ ರೀತಿಯಿಂದಲೂ ಸಲಾಂ ಅನ್ನುವ ಅರ್ಥದಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ .ಸಲಾಂ ಆಗುವುದಕ್ಕೆ ಅದು ಸಾಧ್ಯವೂ ಇಲ್ಲ ಎಂದಿದ್ದಾರೆ.