ನಾರಾವಿ: ಯುವತಿಯೊರ್ವರು ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯಲ್ಲಿ ಅ.7 ರಂದು ಸಂಜೆ ನಡೆದಿದೆ.
ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸಿಕಟ್ಟೆ ಗುಮಡ ಬಂಗರ ಮನೆಯ, ನಾರಾವಿ ಗ್ರಾ.ಪಂ ಸದಸ್ಯ ರಾಜವರ್ಮ ಜೈನ್ ಅವರ ಪುತ್ರಿ ಸುರಕ್ಷಾ ಜೈನ್ (23ವ) ಮೃತ ದುರ್ದೈವಿ.
ಈ ಘಟನೆಯಿಂದ ಮೃತ ಯುವತಿಯ ತಂದೆ ರಾಜವರ್ಮ ಜೈನ್ ಕುಸಿದ್ದು ಬಿದ್ದು ತೀವ್ರಪ್ರಮಾಣದ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಸ್ಥಳಕ್ಕೆ ವೇಣೂರು ಪೋಲಿಸ್ ಠಾಣೆಯ ಉಪನಿರೀಕ್ಷಕಿ ಸೌಮ್ಯ ಜೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.