ಕೇರಳ: ಆಪರೇಷನ್ ಮಾಡುವ ಸಂದರ್ಭ ವೈದ್ಯರು ರೋಗಿಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟಿದ್ದು, ಮತ್ತೆ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರತೆಗೆದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.
5 ವರ್ಷಗಳ ಹಿಂದೆ ನಡೆದ ಆಪರೇಷನ್ ವೇಳೆ ಕೇರಳದ ಕೋಝಿಕ್ಕೋಡ್ನ ಹರ್ಷಿನಾ ಎಂಬವರು ಅನಾರೋಗ್ಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ನಂತರ ಚೇತರಿಸಿಕೊಂಡ ಬಳಿಕವೂ ಕ್ರಮೇಣ ಇವರಿಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು.
5 ವರ್ಷದಿಂದ ನೋವು ತಗ್ಗದ ಕಾರಣ ಮಹಿಳೆ ಸ್ಕ್ಯಾನ್ ಮಾಡಿಸಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಲೋಹದ ವಸ್ತುವೊಂದು ಕಂಡುಬಂದಿದೆ.
ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಪತ್ತೆಯಾಗಿದ್ದು, ಅದನ್ನು ಈಗ ಹೊರತೆಗೆಯಲಾಗಿದೆ.