Connect with us

    DAKSHINA KANNADA

    ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಮಣಿಪಾಲ್ comprehensive liver clinic ಪ್ರಾರಂಭ..

    Published

    on

    ಕರಾವಳಿ ಕರ್ನಾಟಕದ ಮುಂಚೂಣಿಯ ಆರೋಗ್ಯ ಸೇವೆ ಪೂರೈಕೆದಾರರಾದ ಕೆಎಂಸಿ ಆಸ್ಪತ್ರೆ, ದೀರ್ಘಕಾಲದ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಮಗ್ರ ಅಗತ್ಯಗಳನ್ನು ಪೂರೈಸಲು ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ (ಎಂಸಿಎಲ್ಸಿ) ಅನ್ನು ಪ್ರಾರಂಭಿಸಿದೆ.

    ಮಂಗಳೂರು : ಕರಾವಳಿ ಕರ್ನಾಟಕದ ಮುಂಚೂಣಿಯ ಆರೋಗ್ಯ ಸೇವೆ ಪೂರೈಕೆದಾರರಾದ ಕೆಎಂಸಿ ಆಸ್ಪತ್ರೆ, ದೀರ್ಘಕಾಲದ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಮಗ್ರ ಅಗತ್ಯಗಳನ್ನು ಪೂರೈಸಲು ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ (ಎಂಸಿಎಲ್ಸಿ) ಅನ್ನು ಪ್ರಾರಂಭಿಸಿದೆ. 

    ಲಿವರ್ ಮಾನವ ದೇಹದಲ್ಲಿನ ಅತಿದೊಡ್ಡ ಅಂಗವಾಗಿದೆ, ದುರದೃಷ್ಟವಶಾತ್, ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ ಮತ್ತು ದೀರ್ಘಕಾಲದ ಲಿವರ್ ಕಾಯಿಲೆಯಿಂದ ಕಾಲ ಕಳೆದಂತೆ ಹಂತಹoತವಾಗಿ ಲಿವರ್ ಕಾರ್ಯಗಳು ಕೆಡುವುದಕ್ಕೆ ದಾರಿಯಾಗಬಹುದು.

    ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್(ಪಚನಾoಗರೋಗಶಾಸ್ತ್ರ ಸಲಹಾತಜ್ಞರು) ಡಾ. ಅನುರಾಗ್ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ  ಮಾತನಾಡಿ, “1,000 ರೂ. +ಜಿಎಸ್ಟಿಗಳಷ್ಟು ಕಡಿಮೆ ಶುಲ್ಕ ಪಾವತಿಸುವ ಮೂಲಕ ಕ್ಲಿನಿಕ್ ಅಡಿಯಲ್ಲಿ ನೋಂದಾಯಿಸಲಾದ ರೋಗಿಗಳು ಹೊರರೋಗಿ(ಒಪಿ) ಸಲಹಾಸೇವೆ, ಹೊರರೋಗಿ(ಒಪಿ) ವೈದ್ಯಕೀಯ ಕಾರ್ಯವಿಧಾನಗಳು, ಪ್ರಯೋಗಾಲಯ ಮತ್ತು ವಿಕಿರಣಶಾಸ್ತ್ರದ ತನಿಖೆಗಳು, ವಿಶೇಷ ವಾರ್ಡ್ಗಳು ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ ರೋಗಿಗಳ ದಾಖಲಾತಿಗಳಲ್ಲಿ ರಿಯಾಯಿತಿಗಳು ಒಳಗೊಂಡಿರುವ ಬಹು ಲಾಭ ಒದಗಿಸುವ ಎಂಸಿಎಲ್ಸಿ ಕಾರ್ಡ್ ಸ್ವೀಕರಿಸುತ್ತಾರೆ” ಎಂದರು.

    ಕೆಎಂಸಿ ಇಡೀ ಜಿಲ್ಲೆಯಲ್ಲಿ ಪಿಒಇಎಂ, ಇಎಸ್‌ಡಿ ಮತ್ತು ಲಿವರ್ ಕಸಿ ಸೌಲಭ್ಯಗಳನ್ನು ಪೂರೈಸುವ ಏಕೈಕ ಆಸ್ಪತ್ರೆಯಾಗಿದೆ.

    ವಿಭಾಗವು ಅಂತರರಾಷ್ಟ್ರೀಯ ವೈದ್ಯಕೀಯ ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ನ್ಯಾಷನಲ್ ಬೋರ್ಡ್(ರಾಷ್ಟ್ರೀಯ ಮಂಡಳಿ), ನವದೆಹಲಿಯಿಂದ ಮಾನ್ಯತೆ ಪಡೆದ ಕರಾವಳಿ ಕರ್ನಾಟಕದ ಏಕೈಕ ಗ್ಯಾಸ್ಟ್ರೋಎಂಟರಾಲಜಿ ವಿಭಾಗವಾಗಿದೆ.

    ಕ್ಲಿನಿಕ್ ಆರಂಭ ಕುರಿತು ಮುಖ್ಯ ಲಿವರ್ ಕಸಿ ಶಸ್ತ್ರಚಿಕಿತ್ಸಕ ಡಾ. ರಾಜೀವ್ ಲೋಚನ್ ಪ್ರತಿಕ್ರಿಯಿಸಿ, “ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ನೆರೆಹೊರೆಯ ವಲಯದಲ್ಲಿನ ದೀರ್ಘಕಾಲದ ಲಿವರ್ ಕಾಯಿಲೆಗಳು ಮತ್ತು ನಿರ್ಣಾಯಕ ಪಿತ್ತಜನಕಾಂಗಕ್ಕೆ ಸಂಬoಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಾಥಮಿಕ ಉದ್ದೇಶದಿಂದ ಮಣಿಪಾಲ್ ಸಮಗ್ರ ಲಿವರ್ ಕ್ಲಿನಿಕ್ ಅನ್ನು ಸ್ಥಾಪಿಸಲಾಗಿದೆ” ಎಂದರು.

    ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಬಿ ವಿ ತಂತ್ರಿ ಅವರು ಮಾತನಾಡಿ, “ಈ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ ಪರಿಚಯಿಸುವುದರೊಂದಿಗೆ, ವಿವಿಧ ಲಿವರ್ ಕಾಯಿಲೆಗಳ ರೋಗಿಗಳಿಗೆ ನಮ್ಮ ಸೇವೆಗಳನ್ನು ಮತ್ತಷ್ಟು ಹೆಚ್ಚಿಸುವ ಗುರಿ ನಮ್ಮದು. ಇದು ನಮ್ಮ ಸಮುದಾಯದ ಆರೋಗ್ಯದ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದರು.

    ಮoಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, “ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ ನಮ್ಮ ಸಮುದಾಯದ ಅದರಲ್ಲೂ ವಿಶೇಷವಾಗಿ ದೀರ್ಘಕಾಲದ ಲಿವರ್ ಕಾಯಿಲೆಗಳು ಮತ್ತು ಗಂಭೀರವಾದ ಲಿವರ್ ಸಂಬoಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆರೋಗ್ಯದ ಫಲಿತಾಂಶ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ನಮಗಿದೆ” ಎಂದರು

    BIG BOSS

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್‌

    Published

    on

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.

    ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.

    ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .

    Continue Reading

    BIG BOSS

    ಕೊಣಾಜೆ: 3 ವರ್ಷದ ಬಾಲೆಗೆ ಕಿ*ರುಕುಳ ನೀಡಿದ 70ರ ಅಜ್ಜ ಅರೆಸ್ಟ್

    Published

    on

    ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ,‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

    ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    Continue Reading

    BIG BOSS

    ಮಂಗಳೂರು: ಮುಂಜಾನೆಯೇ ಸರಣಿ ಅ*ಪಘಾತ; ವಿದ್ಯಾರ್ಥಿಗಳಿದ್ದ ಬಸ್ ಪ*ಲ್ಟಿ

    Published

    on

    ಮಂಗಳೂರು: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅ*ಪಘಾತ ಸಂಭವಿಸಿದೆ. ಕುಂದಾಪುರ ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಉರುಳಿ ಬಿದ್ದಿದೆ.

    ಇಂದು (ನ.23) ಬೆಳಗಿನ ಜಾವ ಕಾರೊಂದು ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿ*ಕ್ಕಿ ಹೊಡೆದಿದೆ. ನಂತರ, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಗು*ದ್ದಿದೆ.

    ಟೂರಿಸ್ಟ್ ಬಸ್ ರಸ್ತೆಗೆ ಉರುಳಿದ್ದು, ವಿದ್ಯಾರ್ಥಿಗಳು ಗಾ*ಯಗೊಂಡಿದ್ದಾರೆ. ಗಾ*ಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending