ಕಾಸರಗೋಡು: ಮೃಗಾಲಯದಿಂದ ತಪ್ಪಿಸಿಕೊಂಡ ವಿಷಕಾರಿ ಕಾಳಿಂಗ ಸರ್ಪ ಸೆರೆ ಹಿಡಿಯಲು ವಾವಾ ಸುರೇಶ್ ಸ್ವೀಡನ್‌ನ ಸ್ಟಾಕ್ ಹೋಮ್‌ಗೆ ತೆರಳಲಿದ್ದಾರೆ.
ವಾವಾ ಸುರೇಶ್ ಅವರನ್ನು ಕರೆದೊಯ್ಯಲು ಸ್ವೀಡನ್‌ನಿಂದ ವಿಶೇಷ ವಿಮಾನ ತಿರುವನಂತಪುರಕ್ಕೆ ಆಗಮಿಸಲಿದೆ. ಸ್ವೀಡನ್ ಪ್ರಯಾಣದ ಕುರಿತು ಶ್ವೇತಭವನವು ವಾವಾ ಸುರೇಶ್‌ಗೆ ಮಾಹಿತಿ ನೀಡಿದ್ದು ಸ್ವೀಡನ್‌ನ ಉನ್ನತ ಅಧಿಕಾರಿ ಶ್ವೇತಭವನದಲ್ಲಿರುವ ಕೇರಳದ ವ್ಯಕ್ತಿಯ ಮೂಲಕ ವಾವಾ ಸುರೇಶ್ ಅವರನ್ನು ಸಂಪರ್ಕಿಸಿದ್ದಾರೆ.
ವಾವಾ ಸುರೇಶ್ ಅವರಿಗೆ ಶ್ವೇತಭವನದಿಂದ ಬಂದ ಸಂದೇಶದಲ್ಲಿ ಮರಗಾಲಯದ ಪಂಜರದಿಂದ ವಿಷಕಾರಿ ಕಾಳಿಉಂಗ ಸರ್ಪ ತಪ್ಪಿಸಿಕೊಂಡಿದೆ.
ಅದನ್ನು ಸೆರೆ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹಾವು ಜನವಸತಿಪ್ರದೇಶವನ್ನು ತಲುಪಿದಾಗ ಸೂಚನೆ ಲಬಿಸಿದೆ.
ಹಾಗಿದ್ದಲ್ಲಿ ಇದು ತುಂಬಾ ಅಪಾಯಕಾರಿ. ಸದ್ಯ ಸ್ಟಾಕ್ ಹೋಮ್‌ನಲ್ಲಿ ಭಾರೀ ಚಳಿ ಇದೆ. ಈ ಪರಿಸ್ಥಿತಿಯಲ್ಲಿ ಹಾವು ಹಿಡಿಯುವ ಕಾರ್ಯ ತುಂಬಾ ಕಷ್ಟಕರವಾಗಿದೆ. ಸ್ಟಾಕ್ ಹೋಂ ಜನನಿಬಿಡ ಪ್ರದೇಶವಾಗಿದೆ. ಈ ಹಾವು ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸ್ವೀಡನ್‌ನ ಅಧಿಕಾರಿಗಳು ಹಾವನ್ನು ಹಿಡಿಯುವ ತಜ್ಞರಿಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ ವಾವಾ ಸುರೇಶ್ ಅವರ ಮಾಹಿತಿ ಲಭಿಸಿದೆ ಎಂದು ವಾವಾ ಅವರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಲಾಗಿದೆ.