ಹೊಸದಿಲ್ಲಿ: ಬ್ರಿಟಿಷ್ ವಸಾಹತು ಕಾಲದ ‘ದೇಶದ್ರೋಹ ಕಾಯಿದೆ’ಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಇದೀಗ ಮುಂದಾಗಿದೆ.
ಈ ಸಂಬಂಧ ನಿನ್ನೆ ಸುಪ್ರೀಂಕೋರ್ಟ್‌ಗೆ ಅಟಾರ್ನಿ ಜನರಲ್ ಮಾಹಿತಿ ನೀಡಿದರು. ‘ಕಾಯಿದೆ ಮಾರ್ಪಾಟು ಮಾಡಲು ಕಾಲಾವಕಾಶ ಬೇಕಿದೆ.
ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕಾಯಿದೆಗೆ ಬದಲಾವಣೆ ತರಲಾಗುವುದು ಅಲ್ಲಿಯವರೆಗೆ ಕಾಲಾವಕಾಶ ಕೊಡಿ ಎಮದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಕೋರ್ಟ್‌ಗೆ ಮನವಿ ಮಾಡಿದರು.
ಮುಖ್ಯ ನ್ಯಾಯಮಮೂರ್ತಿ ಯು.ಯು ಲಲಿತ್, ನ್ಯಾ. ಎಸ್ ರವೀಂದ್ರ ಭಟ್, ನ್ಯಾ. ಬಿ.ಎಂ ತ್ರಿವೇದಿ ಅವರನ್ನು ಒಳಗೊಂಡ ಪೀಠ ಆದಷ್ಟು ಬೇಗ ಕಾಯಿದೆಗೆ ಬದಲಾವಣೆ ತರುವಂತೆ ನಿರ್ದೇಶನ ನೀಡಿತು. ಇದೇ ವೇಳೆ ವಿವಾದಿತ ಕಾಯಿದೆಯಡಿ ಎಫ್‌ಐಆರ್ ದಾಖಲಿಸುವುದಕ್ಕೆ ಪೀಠ ಮಧ್ಯಂತರ ತಡೆ ನೀಡಿದೆ.