Connect with us

LATEST NEWS

ಹೃದಯಘಾತದಿಂದ ಧರ್ಮಗುರು ನಿಧನ: ನಾಳೆ ಕಾಟಿಪಳ್ಳ ಚರ್ಚ್‌ನಲ್ಲಿ ಅಂತಿಮ ವಿದಾಯ

Published

on

ಮಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ಕಾಟಿಪಳ್ಳ ಚರ್ಚ್‌ನ ಧರ್ಮಗುರು ವಂದನೀಯ ಫಾದರ್‌ ವಲೇರಿಯನ್‌ ಲೇವಿಸ್‌(55) ಅಂತ್ಯಸಂಸ್ಕಾರ ಕಾಟಿಪಳ್ಳ ಚರ್ಚ್‌ನಲ್ಲಿ ನಾಳೆ ನಡೆಯಲಿದೆ.


ನಾಳೆ ಬೆಳಗ್ಗೆ 10 ಗಂಟೆಗೆ ಕಾಟಿಪಳ್ಳದ ಇನ್‌ಫ್ಯಾಂಟ್‌ ಮೇರಿ ಚರ್ಚ್‌ನಲ್ಲಿ ನಡೆಯುವ ಅಂತಿಮ ಸಂಸ್ಕಾರದ ಬಲಿಪೂಜೆ ನಡೆಯಲಿದೆ. ಬೆಳಿಗ್ಗೆ 7.45 ಗಂಟೆಗೆ ಪಾರ್ಥಿವ ಶರೀರ ಚರ್ಚ್‌ಗೆ ಬರಲಿದ್ದು, ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು.

10 ಗಂಟೆಗೆ ಅಂತ್ಯಸಂಸ್ಕಾರದ ಬಲಿಪೂಜೆ ನಡೆದು ಅದೇ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್‌ ಪಾವ್ಲ್‌ ಸಲ್ಡಾನ ಸೇರಿ ಹಲವರು ಭಾಗಿಯಾಗುವ ಸಾಧ್ಯತೆ ಇದೆ.
ನಿನ್ನೆ ಕಾಟಿಪಳ್ಳದ ವಾರ್ಷಿಕ ಮಹಾಹಬ್ಬದ ಪೂರ್ವ ತಯಾರಿಯಾಗಿ ಪರಮ ಪ್ರಸಾದದ ಆರಾಧನೆ ನಡೆಯುವ ವೇಳೆ ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.

DAKSHINA KANNADA

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

Published

on

ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ.

accident

accident

ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

accident

Continue Reading

FILM

ಟಿ ಆರ್ ಪಿ ಪಟ್ಟಿಯಲ್ಲಿ ಯಾವ ಧಾರಾವಾಹಿಗೆ ಸಿಕ್ಕಿದೆ ಮೊದಲ ಸ್ಥಾನ?

Published

on

ಬೆಂಗಳೂರು : ‘ಕಿರುತೆರೆ’ ಜನರ ನೆಚ್ಚಿನ ಮನರಂಜನಾ ತಾಣ. ಇಲ್ಲಿ ಸಾವಿರಾರು ಧಾರಾವಾಹಿಗಳು, ರಿಯಾಲಿಟಿ ಶೋ ಗಳದೇ ದರ್ಬಾರು. ಮನೆಮಂದಿಯೆಲ್ಲಾ ಕಿರುತೆರೆಯನ್ನು ನೆಚ್ಚಿಕೊಂಡಿದ್ದಾರೆ. ದೈನಂದಿನ ದಿನಚರಿಯಲ್ಲಿ ಧಾರಾವಾಹಿಗಳೂ ಸೇರಿಕೊಂಡಿವೆ. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡಲು ಕಾಯುತ್ತಿರುತ್ತಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಧಾರಾವಾಹಿ ಪ್ರಿಯರು. ಮಧ್ಯಾಹ್ನ, ರಾತ್ರಿ ಪ್ರಸಾರವಾಗುವ ಧಾರಾವಾಹಿಗಳನ್ನು ಬಿಡದೆ ನೋಡುವ ವರ್ಗವಿದೆ. ಆಯಾ ಧಾರಾವಾಹಿಗೆ ಆಯಾ ವೀಕ್ಷಕ ವರ್ಗವಿದೆ. ಹೀಗಿರುವ ಯಾವ ಧಾರಾವಾಹಿ ಎಷ್ಟು ಟಿ ಆರ್ ಪಿ ಹೊಂದಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ಟಾಪ್ 5 ಧಾರಾವಾಹಿಗಳು :

ಪುಟ್ಟಕ್ಕನ ಮಕ್ಕಳು


ಮೂವರು ಹೆಣ್ಣುಮಕ್ಕಳ ತಾಯಿಯಾಗಿ ಕಷ್ಟ ಕಾರ್ಪಣ್ಯಗಳಿಂದ ಬೆಂದಿರುವ ಮಹಿಳೆಯ ಪ್ರಧಾನ ಕಥೆ ಒಳಗೊಂಡಿರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಟ ರಮೇಶ್‌ ಪಂಡಿತ್‌, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಪಾತ್ರವಾಗಿದೆ.

ಲಕ್ಷ್ಮೀ ನಿವಾಸ

ಇತ್ತೀಚೆಗೆ ಆರಂಭಗೊಂಡ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರ ಕೆಲವೇ ಕೆಲವು ಪಾಯಿಂಟ್‌ ಅಂತರದಲ್ಲಿ ಎರಡನೇ ಸ್ಥಾನದದಲ್ಲಿದೆ. ಕೌಟುಂಬಿಕ ಕಥಾಹಂದರವುಳ್ಳ ಈ ಧಾರಾವಾಹಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನವಿರಾದ ಪ್ರೇಮಕಥೆ, ಸಂಸಾರದ ತಲ್ಲಣಗಳಿವೆ.

ಸೀತಾ ರಾಮ


ನವಿರಾದ ಪ್ರೇಮಕಥೆ ಇರುವ ಸೀತಾ ರಾಮ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಜನಮನ ಗೆದ್ದಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಸಿಹಿ ಎಲ್ಲರಿಗೂ ಅಚ್ಚುಮೆಚ್ಚು. ದಿನದಿಂದ ದಿನಕ್ಕೆ ಸೀತಾ ರಾಮ ಧಾರಾವಾಹಿ ಕುತೂಹಲ ಪೂರ್ಣವಾಗಿ ಸಾಗುತ್ತಿದೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

ಶ್ರಾವಣಿ ಸುಬ್ರಮಣ್ಯ


ಇತ್ತೀಚೆಗೆ ಆರಂಭಗೊಂಡ ವಿಭಿನ್ನ ಕಥಾ ಹಂದರ ಹೊಂದಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಿನಿಸ್ಟರ್‌ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್‌ ಬಲಗೈ ಬಂಟ ಸುಬ್ರಮಣ್ಯನ ಕಥೆ ಧಾರಾವಾಹಿಯಲ್ಲಿದೆ. ಮಗಳನ್ನು ದ್ವೇಷಿಸುವ ತಂದೆ, ತಂದೆಯನ್ನು ಪ್ರೀತಿಸುವ ಮಗಳು, ಒಂದಷ್ಟು ಸಸ್ಪೆನ್ಸ್ ಧಾರಾವಾಹಿಯ ಜೀವಾಳ.

ರಾಮಾಚಾರಿ :


ವಿಭಿನ್ನ ಕತೆಯನ್ನೊಳಗೊಂಡ ರಾಮಾಚಾರಿ ಆರಂಭದಿಂದಲೂ ಜನಮನ ಗೆದ್ದಿತ್ತು. ಟಿಆರ್​ಪಿ ಪಟ್ಟಿಯಲ್ಲಿ ರಾಮಾಚಾರಿ ಐದನೇ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿ ಬೇರೆಯೇ ಆದ ಆಯಾಮಕ್ಕೆ ಹೊರಳಿದೆ. ರಾಮಾಚಾರಿಗೊಬ್ಬ ತಮ್ಮನೂ ಎಂಟ್ರಿ ಕೊಟ್ಟಾಗಿದೆ. ಅಣ್ಣ-ತಮ್ಮ ಹಾಗೂ ಚಾರು ಒಂದಾಗಿ ಶತ್ರುಗಳ ವಿರುದ್ಧ ಗೆಲ್ಲುವ ಹೋರಾಟಕ್ಕೆ ಇಳಿದಿದ್ದಾರೆ.

Continue Reading

LATEST NEWS

ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

Published

on

ಕಿನ್ನಿಗೋಳಿ: ಮುಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ(ಎ.3) ಮದ್ಯಾಹ್ನ ಬುಡಸಹಿತ ಧರೆಗುರುಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ.

ಸುಮಾರು 800 ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢವಾಗಿದೆ. ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ  ಕಾಂತಬಾರೆ-ಬೂದಬಾರೆಯರು. ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ಬಟ್ಟೆಯ ತೊಟ್ಟಿಲು ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ ಕೊಂಬೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ದಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರೀ ಗಾಳಿಮಳೆಯ ಸಂದರ್ಭ ಬಿದ್ದಿತ್ತು.

kanthabare

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

ಸುಮಾರು 2ರಿಂದ 3 ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಗೆಲ್ಲು ಕೆಲ ದಿನಗಳ ಹಿಂದೆ ಬಿದ್ದಿತ್ತು. ಸುದೀರ್ಘ ಕಾಲಮಾನದಲ್ಲಿ ಅದರಷ್ಟೇ ಆದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಇದೀಗ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ. ಧಾರ್ಮಿಕ ಮಹತ್ವದ ಧರೆಗುರುಳಿದ ಮರದ ತೆರವಿಗೆ ಪೂರ್ವಭಾವಿಯಾಗಿ ಧಾರ್ಮಿಕ ಪ್ರಕ್ರಿಯೆ ಸಹಿತ ಪ್ರಶ್ನಾಚಿಂತನೆ ನಡೆಸಿ ಆ ಪ್ರಕಾರ ಮುಂದುವರಿಯಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಟ್ರಸ್ಟ್ ತೀರ್ಮಾನಿಸಿದೆ.

Continue Reading

LATEST NEWS

Trending