Friday, February 3, 2023

ಎಲೆಕ್ಷನ್ ವಾರ್: ಕಾಂಗ್ರೆಸ್‌ MLA ಟಿಕೆಟ್‌ಗೆ 41 ಅರ್ಜಿ ಸಲ್ಲಿಕೆ-ದ.ಕದಿಂದ KPCCಗೆ 77 ಲಕ್ಷ ಡೊನೇಶನ್

ಮಂಗಳೂರು: ಮುಂದಿನ ವಿಧಾನ ಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಲು ಸಾಲು ಅರ್ಜಿ ಸಲ್ಲಿಕೆಯಾಗಿದೆ. ಜಿಲ್ಲೆಯ ಒಟ್ಟು 8 ಕ್ಷೇತ್ರಗಳಿಂದ ಒಟ್ಟು 41 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಕೆಪಿಸಿಸಿಗೆ 77 ಲಕ್ಷ ರೂಪಾಯಿ ದೇಣಿಗೆ ಸಂದಾಯ ಮಾಡಿದ್ದಾರೆ.


ಸಾಮಾನ್ಯ ಕ್ಷೇತ್ರಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಸುಳ್ಯ ಮೀಸಲು ಕ್ಷೇತ್ರದಿಂದ ಪರಿಶಿಷ್ಟ ಜಾತಿಯ ಆಕಾಂಕ್ಷಿಗಳು ತಲಾ 1 ಲಕ್ಷ ರೂಪಾಯಿಯಂತೆ ಅರ್ಜಿ ಜೊತೆ ಮೊತ್ತ ಪಾವತಿ ಮಾಡಿದ್ದಾರೆ. 36 ಅಭ್ಯರ್ಥಿಗಳು 72 ಲಕ್ಷ ರೂಪಾಯಿ ಮತ್ತು ಮೀಸಲು ಕ್ಷೇತ್ರದಿಂದ ಐದು ಸೇರಿ ಒಟ್ಟು 77 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನವಾಗಿರುವ ನವೆಂಬರ್ 21ರ ಸಂಜೆ ತನಕ ರಾಜ್ಯದಲ್ಲಿ 1,200ಕ್ಕಿಂತ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, 25 ಕೋಟಿ ರೂಪಾಯಿ ಡಿಡಿ ಪಾವತಿಯಾಗಿದೆ. ಇನ್ನೂ ಹೆಚ್ಚು ಆಕಾಂಕ್ಷಿಗಳಿದ್ದರೂ ಇಷ್ಟರಲ್ಲೇ ಅವಧಿ ಮುಗಿದಿತ್ತು. ಅರ್ಜಿಗೆ ಕೂಡಾ ತಲಾ 5 ಸಾವಿರ ರೂಪಾಯಿ ಡಿಡಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಅತೀ ಹೆಚ್ಚು ಅಂದರೆ 10 ಅರ್ಜಿ ಸಲ್ಲಿಕೆಯಾಗಿದ್ದರೆ, ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರದಿಂದ ತಲಾ 8 ಅರ್ಜಿ ಸಲ್ಲಿಸಲಾಗಿದೆ. ಸುಳ್ಯದಿಂದ 5, ಬಂಟ್ವಾಳ ಮತ್ತು ಬೆಳ್ತಂಗಡಿ ಕ್ಷೇತ್ರದಿಂದ ತಲಾ 3 ಹಾಗೂ ಮಂಗಳೂರು ಕ್ಷೇತ್ರದಿಂದ ಕೇವಲ 1 ಅರ್ಜಿ ಸಲ್ಲಿಸಲಾಗಿದೆ.

ಮಂಗಳೂರು ದಕ್ಷಿಣ ಕ್ಷೇತ್ರದಿಂದ ಮಾಜಿ ಶಾಸಕ ಜೆ ಆರ್ ಲೋಬೋ, ಐವನ್ ಡಿ ಸೋಜಾ, ಶಾಲೆಟ್ ಪಿಂಟೋ, ಎ ಸಿ ವಿನಯರಾಜ್‌, ಲಾರೆನ್ಸ್ ಡಿ ಸೋಜ, ಮೆರಿಲ್ ರೇಗೋ, ವಿಶ್ವಾಸ್ ಕುಮಾರ್ ದಾಸ್‌, ಆಶಿತ್‌ ಪಿರೇರಾ, ಮಂಗಳೂರು ಉತ್ತರ ಕ್ಷೇತ್ರದಿಂದ ಬಿ ಎ ಮೊಯ್ದಿನ್‌ ಬಾವ, ಇನಾಯತ್‌ ಅಲಿ, ಅಲ್ತಾಫ್ ಸುರತ್ಕಲ್‌, ಲುಕ್ಮಾನ್ ಬಂಟ್ವಾಳ, ಕವಿತಾ ಸನಿಲ್, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ,

ಪದ್ಮನಾಭ ಕೋಟ್ಯಾನ್‌, ಮಂಗಳೂರು ಕ್ಷೇತ್ರದಿಂದ ಯು ಟಿ ಖಾದರ್‌, ಮೂಡುಬಿದಿರೆಯಿಂದ ಮಿಥುನ್ ರೈ, ರಾಜಶೇಖರ ಕೋಟ್ಯಾನ್‌, ಪ್ರತಿಭಾ ಕುಳಾಯಿ, ಬಂಟ್ವಾಳದಿಂದ ಬಿ ರಮಾನಾಥ ರೈ, ರಾಕೇಶ್ ಮಲ್ಲಿ, ಅಶ್ವನಿ ಕುಮಾರ್ ರೈ, ಬೆಳ್ತಂಗಡಿ ಕ್ಷೇತ್ರದಿಂದ ವಸಂತ ಬಂಗೇರ, ಗಂಗಾಧರ ಗೌಡ, ರಕ್ಷಿತಾ ಶಿವರಾಮ್‌, ಪುತ್ತೂರಿನಿಂದ ಶಕುಂತಲಾ ಶೆಟ್ಟಿ, ಹೇಮನಾಥ ಶೆಟ್ಟಿ,

ವಿಶ್ವನಾಥ ರೈ, ಚಂದ್ರಹಾಸ ಶೆಟ್ಟಿ, ಎಂ ಎಸ್‌ ಮೊಹಮ್ಮದ್‌, ಭರತ್‌ ಮುಂಡೋಡಿ, ಸತೀಶ್ ಕೆಡೆಂಜಿ, ದಿವ್ಯಪ್ರಭಾ ಚಿಲ್ತಡ್ಕ, ಮಮತಾ ಡಿ ಎಸ್ ಗಟ್ಟಿ, ಕೃಪಾ ಆಳ್ವ, ಡಾ ರಾಜಾರಾಮ್‌, ಸುಳ್ಯದಿಂದ ಅಭಿಷೇಕ ಬೆಳ್ಳಿಪ್ಪಾಡಿ, ಪ್ರಹ್ಲಾದ್‌ ಬೆಳ್ಳಿಪ್ಪಾಡಿ, ನಂದುಕುಮಾರ್‌, ಕೃಷ್ಣಪ್ಪ, ಅಪ್ಪಿ ಅರ್ಜಿ ಸಲ್ಲಿಸಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ : ಕೆಲಿಂಜ ಕಲ್ಮಲೆ ವೀರಕಂಭ ರಕ್ಷಿತಾ ಅರಣ್ಯದಲ್ಲಿ ಅಗ್ನಿ ಅವಘಡಕ್ಕೆ ಮರ, ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿ..!   

ಬಂಟ್ವಾಳ : ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗುಲಿ ಅಪಾರ ನಷ್ಡ ಸಂಭವಿಸಿದ ಘಟನೆ ದಕ್ಷಿನ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲಿಂಜ ಕಲ್ಮಲೆ  ವೀರಕಂಭ ರಕ್ಷಿತಾ ಅರಣ್ಯದಲ್ಲಿ ನಡೆದಿದೆ.ಬೆಂಕಿ ಬೀಳಲು ಸ್ಪಷ್ಟವಾದ ಕಾರಣ...

ಉಡುಪಿ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ – ಅಪಾರ ನಷ್ಟ..!

ಉಡುಪಿ : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೋಮದು ಹೊತ್ತಿ ಉರಿದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಎಂಬಲ್ಲಿ ನಡೆದಿದೆ.ವನಜ ಎನ್‌.ಕೆ ಎಂಬರಿಗೆ ಸೇರಿದ ಮನೆ ಇದಾಗಿದ್ದು ಆಕಸ್ಮಿಕವಾಗಿ ಬೆಂಕಿ...

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯನ ಪೀಡನೆಗೆ ಬೇಸತ್ತು ವೈದ್ಯೆ ಜೀವಾಂತ್ಯ..!

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು ಜೀವಾಂತ್ಯ ಮಾಡಿದ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.ಬೆಂಗಳೂರು: ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು...