DAKSHINA KANNADA
ಇಂದು ಕರ್ನಾಟಕ ಬಂದ್: ಕರಾವಳಿಗರಿಂದ ನೈತಿಕ ಬೆಂಬಲ-ಬಸ್, ಹೊಟೇಲ್, ಶಾಲೆಗಳು ಎಂದಿನಂತೆ
ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.
ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.
ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.
ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
DAKSHINA KANNADA
ನ.30ರಂದು ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ
ಮಂಗಳೂರು: ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಖ್ಯಾತ ವಾಸ್ತು ತಜ್ಞಮಹೇಶ್ ಮುನಿಯಂಗಳ ಇವರ ವಾಸ್ತು ವಿನ್ಯಾಸದೊಂದಿಗೆ ಸುಮಾರು 12 ರಿಂದ 15 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕ್ಷೇತ್ರ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ನವೆಂಬರ್ 11ರಂದು ಜಾರಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ ಬಂಟ ಮಾಯಾಂದಾಲ್ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ನವೆಂಬರ್ 30ರಂದು
ಬೆಳಿಗ್ಗೆ 9.00 ಗಂಟೆಗೆ ಸರಳ ಜುಮಾದಿ ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ 11.00 ಗಂಟೆಗೆ ಶ್ರೀ ಜಾರ ಆದಿ ಕ್ಷೇತ್ರದ ಗಿರಿಯಲ್ಲಿ ಗ್ರಾಮ ದೈವ ಶ್ರೀ ಬಂಟ ಸರಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ನಿಧಿ ಕುಂಬ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ತನು ಮನ ಧನಗಳಿಂದ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ ಅವರು, “ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯ ಪ್ರಧಾನ ದೈವಗಳಾಗಿ ಶ್ರೀ ಉಳ್ಳಾಯ, ಶ್ರೀ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಾಂದಾಲ್ ದೈವ, ಪಿಲಿ ಚಾಮುಂಡಿ, ಬಬ್ಬರ್ಯ ದೈವಗಳು ಕ್ಷೇತ್ರ ಹಾಗೂ ಗ್ರಾಮದ ಮಾಗಣೆಯ ದೈವಗಳಾಗಿವೆ. ಕ್ಷೇತ್ರದ ಆದಿ ದೈವಗಳಾಗಿ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ, ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ” ಎಂದರು. ಸುದ್ದಿಗೋಷ್ಠಿಯಲ್ಲಿ ದೈವಜ್ಞ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ, ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ , ಕ್ಷೇತ್ರದ ಗಡಿ ಪ್ರಧಾನರಾದ ಜತ್ತಿ ಪೂಜಾರಿ ಜಾರ, ಅಧ್ಯಕ್ಷರಾದ ಉದಯಶಂಕರ ಜಾರಮನೆ, ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ಕೋಶಾಧಿಕಾರಿ ಜೀವನ್ ದಾಸ್ ಜಾರ ಮತ್ತಿತರರು ಉಪಸ್ಥಿತರಿದ್ದರು.
DAKSHINA KANNADA
Mangaluru: ಬೆಳ್ಮ ಬೋಲ್ದನ್ ಕುಟುಂಬಿಕರು ತರವಾಡು ಮನೆಯಲ್ಲಿ ಕೋಲೋತ್ಸವ
ಮಂಗಳೂರು: ಕೊಣಾಜೆ ಬೆಳ್ಮದಲ್ಲಿರುವ ಬೋಲ್ದನ್ ಕುಟುಂಬಿಕರ ತರವಾಡು ಮನೆಯಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಮೂರನೇ ವರ್ಷದ ಕೋಲೋತ್ಸವ ಭಾನುವಾರ ರಾತ್ರಿ ಸಂಭ್ರಮದಿಂದ ಜರುಗಿತು.
ಭಾನುವಾರ ಬೆಳಿಗ್ಗೆ ಪ್ರಶಾಂತ್ ಉಡುಪ ಪೌರೋಹಿತ್ಯದಲ್ಲಿ ನಾಗತಂಬಿಲ, ಗಣಹೋಮ ನಡೆದ ಬಳಿಕ ಶ್ರೀ ವೆಂಕಟ್ರಮಣ ದೇವರ ಮುಡಿಪು ಕಟ್ಟುವಿಕೆಯಲ್ಲಿ ಸರ್ವ ಕುಟುಂಬಿಕರು ಪಾಲ್ಗೊಂಡು ದೇವತಾ ಕಾರ್ಯದಲ್ಲಿ ಭಾಗವಹಿಸಿದರು. ಮಧ್ಯಾಹ್ನ ಅನ್ನಸಂಪರ್ತಣೆ ನಡೆಯಿತು.
ಅದೇ ದಿನ ರಾತ್ರಿ 7.30ಕ್ಕೆ ದೈವದ ಭಂಡಾರ ಏರಿ ಬಳಿಕ ಕಲ್ಲುರ್ಟಿ , ಪಂಜುರ್ಲಿ, ಗುಳಿಗ ಕೋಲ ಉತ್ಸವ ಜರುಗಿತು. ಮರುದಿನ ಅಗೇಲು ಸೇವೆ ನಡೆಯಿತು.
ತರವಾಡು ಮನೆಯ ಮೋಹಿಣಿ ಬೆಳ್ಮ, ಐತಪ್ಪ ಬೆಳ್ತಂಗಡಿ, ಧರ್ಣಪ್ಪ ಧರ್ಮಸ್ಥಳ, ವಿಶ್ವನಾಥ ಕಡಬ, ದಯಾನಂದ್ ಹುಬ್ಬಳ್ಳಿ, ದೇವದಾಸ ಬೆಳ್ಮ, ಆನಂದ ಕಡಬ, ಚಂದ್ರಶೇಖರ ಎಕ್ಕೂರು, ಹರೀಶ ವರ್ಕಾಡಿ ಮೊದಲಾದವರು ಭಾಗವಹಿಸಿದ್ದರು.
ರಾತ್ರಿ ತರವಾಡಿನ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆ ನಡೆದು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಆನಂದ ಕಡಬ ಮಂಡಿಸಿದರು.
ಕ್ಷೇತ್ರದ ಅಂಗಣಕ್ಕೆ ಇಂಟರ್‌ಲಾಕ್ ಅಳವಡಿಸಿದ ದಯಾನಂದ ಹುಬ್ಬಳ್ಳಿ, ತರವಾಡು ಮನೆಗೆ ಗ್ರೈಂಡರ್ ನೀಡಿದ ಶೋಭಾ ವಾಮಂಜೂರು, ತರವಾಡು ಮನೆಗೆ ಕೊಡುಗೆಯಾಗಿ ನೀಡಿದ ಕುರ್ಚಿಗಳಿಗೆ ಆರ್ಥಿಕ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಲಾಯಿತು.
ದಿನಕರ ಕಯ್ಯಾರ, ವಿಕ್ರಾಂತ್ ಜಪ್ಪಿನಮೊಗರು , ಧನ್‌ರಾಜ್ ತಲಪಾಡಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರೂ ಉಪಸ್ಥಿತರಿದ್ದರು.
DAKSHINA KANNADA
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ-ಇಬ್ಬರು ಅರೆಸ್ಟ್..!
ಮಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅಂಗಡಿಯೊಂದರ ಇಬ್ಬರು ಉದ್ಯೋಗಿಗಳ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಎಸಗಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾತ್ರಿ ಸುಮಾರು 8 ಗಂಟೆಗೆ ನಗರದ ಮುಳಿಹಿತ್ಲು ಎಂಬಲ್ಲಿನ ಸ್ಪೋರ್ಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯಧರ್ಮದ ಇಬ್ಬರು ಮೊಬೈಲ್ ರಿಪೇರಿ ಮಾಡಿಸಿಕೊಂಡು ನಗರದ ಮಿಲಾಗ್ರಿಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜದ ಕಡೆಗೆ ಬೈಕ್ ನಲ್ಲಿ ತೆರಳುವಾಗ ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಮೊರ್ಗನ್ಸ್‌ಗೇಟ್ ಬಳಿ ಉದ್ಯೋಗಿಗಳನ್ನು ತಡೆದು ನೀವು ಹಿಂದೂ -ಮುಸ್ಲಿಂ ಎಲ್ಲಿಗೆ ಹೋಗುತ್ತಿದ್ದೀರಿ ? ಎಂದು ಪ್ರಶ್ನಿಸಿ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿ ಸಾಕಷ್ಟು ಮಂದಿ ಜಮಾಯಿಸಿದ್ದು, ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅಷ್ಟರಲ್ಲಿ ಹೊಯ್ಸಳ ವಾಹನದ ಪೊಲೀಸರು ಇಬ್ಬರು ಉದ್ಯೋಗಿಗಳನ್ನು ರಕ್ಷಣೆ ಮಾಡಿ ಠಾಣೆಗೆ ಕರೆ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಎಂಬ ಇಬ್ಬರು ಆರೋಪಿಗಳನ್ನು ತ್ವರಿತ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
- FILM6 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- DAKSHINA KANNADA7 days ago
ಅಡ್ಡೂರು ಹೊಳೆಗೆ ಹಾರಿ ನಾಪತ್ತೆಯಾದ ಪ್ರಶಾಂತ್ – ಪತ್ತೆಗಾಗಿ ಶೋಧ ಕಾರ್ಯ
- bengaluru5 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- DAKSHINA KANNADA5 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು