LATEST NEWS
ಕಾರ್ಕಳ: ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ತಂಗಿ ವಿದ್ಯುತ್ ಆಘಾ*ತಕ್ಕೊಳಗಾಗಿ ದಾರುಣ ಸಾ*ವು
Published
3 hours agoon
By
NEWS DESK2ಕಾರ್ಕಳ: ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ತಂಗಿ ವಿದ್ಯುತ್ ಆಘಾತಕ್ಕೊಳಗಾಗಿ ದಾರುಣ ರೀತಿಯಲ್ಲಿ ಮೃ*ತಪಟ್ಟ ಘಟನೆ ನಿಟ್ಟೆ ಪರಪ್ಪಾಡಿ ಎಂಬಲ್ಲಿ ಸಂಭವಿಸಿದೆ. ಗುರುವಾರ ರಾತ್ರಿ ಈ ಘಟನೆಯಲ್ಲಿ ಲಲಿತಾ ಬೋಂಡ್ರ ಮೃ*ತಪಟ್ಟ ಮಹಿಳೆ.
ನಿಟ್ಟೆ ಪರಪ್ಪಾಡಿಯ ರಾಘು ಬೋಂಡ್ರ ಎಂಬವರು ಕೆಲ ದಿನಳ ಹಿಂದೆ ಮೃ*ತಪಟ್ಟಿದ್ದರು. ಅಣ್ಣನ ತಿಥಿಯ ಪೂರ್ವ ಸಿದ್ಧತೆಗಾಗಿ ಬಂದಿದ್ದ ತಂಗಿ ಲಲಿತಾ ಬೋಂಡ್ರ ಅವರು ಗುರುವಾರ ರಾತ್ರಿ ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್ ಅಘಾ*ತಕ್ಕೊಳಗಾಗಿ ಘಟನಾ ಸ್ಥಳದಲ್ಲಿ ಕುಸಿದು ಬಿದ್ದು ದಾರು*ಣ ಅಂ*ತ್ಯ ಕಂಡಿದ್ದಾರೆ.
ಶಾಮೀಯನ ಅಳವಡಿಸಿದಾಗ ಅದರ ಕಬ್ಬಣದ ಕಂಬಕ್ಕೆ ಟ್ಯೂಬ್ ಲೈಟ್ ಅಳವಡಿಸಲಾಗಿ ಅದರ ಮೂಲ ವಿದ್ಯುತ್ ಸೋರಿಕೆಯಾಗಿ ಈ ಘಟನೆ ಸಂಭವಿಸಿಎಬಹುದೆಂಬ ಮಾಹಿತಿ ತಿಳಿದು ಬಂದಿದೆ.
LATEST NEWS
‘ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು’ ಜಾಥಾಕ್ಕೆ ಚಾಲನೆ
Published
16 minutes agoon
15/11/2024By
NEWS DESK4ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ “ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು” ಕಾರ್ಯಕ್ರಮದ ಉದ್ಘಾಟನೆ ಗುರುವಾರ(ನ.14) ಸಂಜೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗುವುದು ಸುಲಭದ ಮಾತಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಆದ್ದರಿಂದ ಇದನ್ನು ತಡೆಯಲು ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಹೆತ್ತವರು, ಮನೆಯವರು ಮಕ್ಕಳ ಮೇಲೆ ನಿಗಾ ಇರಿಸಬೇಕು. ಪೊಲೀಸ್ ಇಲಾಖೆಯಲ್ಲಿ ಟೆಸ್ಟಿಂಗ್ ಕಿಟ್ ಸಿಗುತ್ತದೆ ಅದನ್ನು ಮನೆಯಲ್ಲಿಟ್ಟು ತಿಂಗಳಿಗೊಮ್ಮೆ ಪರೀಕ್ಷೆ ಮಾಡುವುದು ಯಾಕೆ ಕಷ್ಟ? ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಪ್ರತೀ ಕಾಲೇಜಿನಲ್ಲಿ ಇಂತಹ ಟೆಸ್ಟಿಂಗ್ ನಡೆದಾಗ ಮಕ್ಕಳು ಮಾದಕ ದ್ರವ್ಯ ಸೇವಿಸಲು ಭಯ ಪಡುತ್ತಾರೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ಕೊಡಿ ಇದರಿಂದ ಸ್ವಸ್ಥ ಸಮಾಜವನ್ನು ಕಟ್ಟಬಹುದು’’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತಾಡಿ, “ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಬೇಡಿಕೆಯೂ ಹೌದು. ನಾನು ಮೊದಲ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೆ. ಇಂದು ಪಂಜಾಬ್ ರಾಜ್ಯವನ್ನು ಡ್ರಗ್ಸ್ ದಂಧೆ ಬೆಂಬಿಡದೆ ಕಾಡುತ್ತಿದೆ. ಅಷ್ಟು ಭೀಕರವಾಗಿ ದಂಧೆ ಎಲ್ಲೆಡೆ ಹರಡಿದೆ. ಗಡಿಯಲ್ಲಿರುವ ಸೈನಿಕನಷ್ಟೇ ದೇಶವನ್ನು ಉಳಿಸುವ ಜವಾಬ್ದಾರಿ ಈ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಡುವವರದ್ದು. ಇದು ದೇವರು ಮೆಚ್ಚುವ ಕೆಲಸ. ಇಂತಹ ಕಾರ್ಯಕ್ರಮಕ್ಕೆ ಮಂಗಳೂರು ಮಾದರಿಯಾಗಬೇಕು“ ಎಂದರು.
ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ನಮ್ಮ ದೇಶವನ್ನು ನಾಶ ಮಾಡುವ ದುಷ್ಟ ಷಡ್ಯಂತ್ರ ಮಾದಕ ದ್ರವ್ಯ ವ್ಯಸನದಿಂದ ನಡೆಯುತ್ತಿದೆ. ಇದನ್ನು ತಡೆಯಲು ಮನೆಯಲ್ಲಿ ಸಮಾಜದಲ್ಲಿ ಜಾಗೃತಿಯಾಗಬೇಕು. ಮಾದಕ ದ್ರವ್ಯ ಸೇವನೆ, ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು’’ ಎಂದರು.
ಮಂಗಳೂರು ಮೇಯರ್ ಮನೋಜ್ ಕುಮಾರ್ ಮಾತನಾಡಿ, “ಯುವಜನತೆಯನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಟ ನಿರಂತರವಾಗಿರಬೇಕು” ಎಂದರು.
ಇದನ್ನೂ ಓದಿ : ಕಾರ್ಕಳ : ಪತಿ ತೀ*ರಿದ ನೋ*ವಿನಿಂದ ಆತ್ಮಹ*ತ್ಯೆ ಮಾಡಿಕೊಂಡ ಪತ್ನಿ
ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಮಂಗಳೂರು ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಆಶಾಜ್ಯೋತಿ ರೈ, ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ, ಎಸ್.ಡಿ.ಎಂ. ಕಾನೂನು ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ, ತಪಸ್ಯ ಫೌಂಡೇಶನ್ ಅಧ್ಯಕ್ಷೆ ಸಬಿತಾ ಆರ್. ಶೆಟ್ಟಿ, ಎಕ್ಕಾರ್ ರತ್ನಾಕರ್ ಶೆಟ್ಟಿ , ಸಬಿತ ಆರ್ ಶೆಟ್ಟಿ, ಅಧ್ಯಕ್ಷರು, ಎಕ್ಕಾರು ರತ್ನಾಕರ್ ಶೆಟ್ಟಿ, ವೃಂದಾ ಹೆಗ್ಡೆ ಕಾರ್ಯದರ್ಶಿ, ಮಾನಸ ರೈ ಜೊತೆ ಕಾರ್ಯದರ್ಶಿ, ಭಾರತಿ ಶೆಟ್ಟಿ ಖಜಾಂಚಿ ಮತ್ತಿತರರು ಉಪಸ್ಥಿತರಿದ್ದರು. ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪುಷ್ಪರಾಜ್ ವಂದಿಸಿದರು.
LATEST NEWS
ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್ ಪ್ರಯಾಣ ಭಾಗ್ಯ? – ಸುಳಿವು ಕೊಟ್ಟ ಡಿಕೆಶಿ
Published
26 minutes agoon
15/11/2024By
NEWS DESK2ಬೆಂಗಳೂರು/ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡಸರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಆ ಮೂಲಕ ಗಂಡಸರಿಗೂ ಫ್ರೀ ಬಸ್ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ.
ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ 135ನೇ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದರು.
ಶಕ್ತಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡುಮಕ್ಕಳಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು.
ಡಿಕೆಶಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಡಿಸಿಎಂ ಶಿವಕುಮಾರ್ ಮಕ್ಕಳ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ಅವರ ಜೊತೆಗೆ ಮಾತನಾಡಿ ಹೇಳುವೆ ಎಂದು ತಿಳಿಸಿದ್ದಾರೆ.
LATEST NEWS
ತೆಂಗಿನಕಾಯಿ ತುರಿಯುವಾಗ ಮೈಮೇಲಿನ ಶಾಲು ಗ್ರೈಂಡರ್‌ಗೆ ಸಿಲುಕಿ ಮೈಮುನಾ ಮೃ*ತ್ಯು
Published
35 minutes agoon
15/11/2024By
NEWS DESK2ಕಾಸರಗೋಡು: ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಮೈಮೇಲಿನ ಸಾಲು ಗ್ರೈಂಡರ್‌ಗೆ ಸಿಲುಕಿ ಕತ್ತು ಬಿಗಿದು ಗೃಹಿಣಿ ಮೃ*ತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳಗೇಟ್ ಅಪ್ಪಾಗಲ್ಲಿ ನಿವಾಸಿ ಇಬ್ರಾಹಿಂ ಎಂಬುವವರ ಪತ್ನಿ ಮೈಮುನಾ (17) ಮೃ*ತಪಟ್ಟ ಮಹಿಳೆ.
ಗ್ರೈಂಡರ್‌ನ ಟಾಪ್ ನಲ್ಲಿ ತೆಂಗಿನಕಾಯಿ ತುರಿಯುವ ಉಪಕರಣವಿದ್ದು, ಅದರಲ್ಲಿ ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಕುತ್ತಿಗೆಯಲ್ಲಿ ಧರಿಸಿದ್ದ ಶಾಲು ಗ್ರೈಂಡರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಗ್ರೈಂಡರ್ ಶಾಲನ್ನು ಎಳೆದುಕೊಂಡಿದ್ದು, ಮಹಿಳೆಯ ಕುತ್ತಿಗೆಯನ್ನು ಗಟ್ಟಿಯಾಗಿ ಬಿಗಿದುಕೊಂಡಿದ್ದು ಅವರು ಜೋರಾಗಿ ಕಿರುಚಿಕೊಂಡಿದ್ದಾರೆ.
ತಕ್ಷಣ ಅವರ ನೆರವಿಗೆ ಧಾವಿಸಿದ ಮನೆಯವರು ಕೂಡಲೇ ಅವರನ್ನು ಉಪ್ಪಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಬಳಿಕ ಮೃ*ತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರ*ಣೋ*ತ್ತರ ಪರೀಕ್ಷೆ ನಡೆಸಲಾಯಿತು.
ಮೃ*ತರ ಪತಿ ಇಬ್ರಾಹಿಂ ಪೂಣದಲ್ಲಿ ವ್ಯಾಪಾರಿಯಾಗಿದ್ದಾರೆ. ಮೃ*ತರು ಪತಿ, ಮಕ್ಕಳಾದ ಸಾಬಿತ್, ಸಫ, ಸಾವಿಲ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗ*ಲಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
LATEST NEWS
ಕಾರ್ಕಳ : ಪತಿ ತೀ*ರಿದ ನೋ*ವಿನಿಂದ ಆತ್ಮಹ*ತ್ಯೆ ಮಾಡಿಕೊಂಡ ಪತ್ನಿ
ಮದುವೆಯಾಗಿ ಉಳಿದ ಹಣದಿಂದ ಶಾಲೆಗೆ ಶುದ್ಧ ನೀರಿನ ಯಂತ್ರ ವಿತರಣೆ !!
ನೋಟದಾಗೆ ನಗೆಯ ಮೀಟಿದ ‘ಪರಸಂಗದ ಗೆಂಡೆತಿಮ್ಮ’ನ ನಾಯಕಿ ಇನ್ನಿಲ್ಲ
Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!
ಬಹುಕಾಲದ ಗೆಳತಿಯೊಂದಿಗೆ ‘ದಿ ಗ್ರೇಟ್’ ಅಮೆಜಾನ್ ಸಿಇಒ ಮದುವೆ ಫಿಕ್ಸ್..!
ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಮುಡಿಪು: ಮಕ್ಕಳ ದಿನಾಚರಣೆ
Trending
- LATEST NEWS2 days ago
ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್ ಆಹಾರದಿಂದಲೇ 32 ಕೆಜಿ ಸ್ಲಿಮ್ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್!
- FILM2 days ago
ಅಭಿಷೇಕ್-ಅವಿವಾ ಪುತ್ರನಿಗೆ ಅಂಬರೀಷ್ ಹೆಸರು
- DAKSHINA KANNADA2 days ago
ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್ಪೋರ್ಟ್ ಪಡೆದ ಮಗ .. !
- DAKSHINA KANNADA2 days ago
ಅ*ಪ್ರಾಪ್ತ ವಯಸ್ಕನ ಮೇಲೆ ಅ*ಸ್ವಾಭವಿಕ ಲೈಂ*ಗಿಕ ಕ್ರಿಯೆ ಆರೋಪ; ಶಿಕ್ಷಕ ದೋಷಮುಕ್ತ