Connect with us

LATEST NEWS

ನಾಡೋಜ ಚೆನ್ನವೀರ ಕಣವಿ ನಿಧನ

Published

on

ಧಾರವಾಡ: ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ(93) ಅಸ್ತಂಗತರಾಗಿದ್ದಾರೆ. ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಡೋಜ ಚೆನ್ನವೀರ ಕಣವಿ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿತ್ತು. ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿತ್ತು. ಸುಮಾರು ಒಂದು ತಿಂಗಳಿನಿಂದ ಎಸ್​ಡಿಎಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದ್ದರು. ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಡಾ. ಚೆನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಕೂಡ ಮಾಡಿದ್ದರು.

Click to comment

Leave a Reply

Your email address will not be published. Required fields are marked *

FILM

ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

Published

on

ತಿರುವನಂತಪುರಂ/ಮಂಗಳೂರು: ಮಲಯಾಳಂ ನಟಿ ಕನಕಲತಾ(63 ವ)  ತಿರುವನಂತಪುರಂ ಜಿಲ್ಲೆಯ ಮಲಯಿಂಕೀಝುನಲ್ಲಿರುವ ತಮ್ಮ ನಿವಾಸದಲ್ಲಿ ಎ.06ರಂದು ಅನಾರೋಗ್ಯದಿಂದಾಗಿ ನಿಧನರಾದರು. ಇವರು ಪಾರ್ಕಿನ್ಸನ್ ಮತ್ತು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದರು.

kanakalatha

300 ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ:

ಕಳೆದ ವರ್ಷ ಅವರ ಸಹೋದರಿ ವಿಜಯಮ್ಮ ಅವರು ಕನಕಲತಾ ಅವರ ಅನಾರೋಗ್ಯವನ್ನು ಬಹಿರಂಗಪಡಿಸಿದ್ದರು. ಆಗಸ್ಟ್ 2022 ರಲ್ಲಿ, ವೈದ್ಯರು MRI ಸ್ಕ್ಯಾನ್ ಮೂಲಕ ಬುದ್ಧಿಮಾಂದ್ಯತೆಯನ್ನು ಪತ್ತೆಹಚ್ಚಿದ್ದರು. ರಂಗಭೂಮಿಯಲ್ಲಿ ಹಿನ್ನೆಲೆ ಹೊಂದಿರುವ ಕನಕಲತಾ ಸುಮಾರು 300 ಚಲನಚಿತ್ರಗಳು ಮತ್ತು ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. “ಒರು ಯಾತ್ರಾಮೊಳಿ,” “ಗುರು,” “ಕಿಲುಕಿಲ್ ಪಂಬರಂ,” “ಪಾರ್ವತಿ ಪರಿಣಯಂ,” “ತುಂಪೋಲಿ ಕಡಪ್ಪುರಂ,” “ಆದ್ಯತೆ ಕಣ್ಮಣಿ,” “ಎಫ್.ಐ.ಆರ್.,” “ಆಕಾಶಗಂಗಾ,” “ಅನಿಯತಿಪ್ರವು,” “ಅಂಚರಕಲ್ಯಾಣಂ,” “ದೋಸ್ತ್,” ಮಾಯಿಲ್‌ಪೀಲಿಕ್ಕಾವು,” ಮತ್ತು “ಮಂತ್ರಮೋತಿರಂ”, ಇವುಗಳು ಅವರ ಜನಪ್ರಿಯ ಚಲನಚಿತ್ರಗಳಾಗಿದೆ.

ಮುಂದೆ ಓದಿ..; ಹೆಣ್ಣು ಮಕ್ಕಳು ಕನಿಷ್ಠ 25 ದಾಟಿದ ಮೇಲೆ ಮದುವೆಯಾಗಿ; ಮಿಲನಾ ನಾಗರಾಜ್

“ಪೂಕ್ಕಳಂ” ಚಿತ್ರ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.  ಆದರೆ, ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ ಸಿನಿಮಾ ಮತ್ತು ಧಾರಾವಾಹಿಗಳೆರಡರಿಂದಲೂ ಹಿಂದೆ ಸರಿಯಬೇಕಾಯಿತು. “ಅಮ್ಮ” ಸಂಸ್ಥೆಯ ಆರ್ಥಿಕ ನೆರವು ಮತ್ತು ಚಲನಚಿತ್ರ ಅಕಾಡೆಮಿಯ ಬೆಂಬಲವು ಅವರ ವೈದ್ಯಕೀಯ ಚಿಕಿತ್ಸೆಗೆ ಸಹಕಾರ ನೀಡಿತ್ತು ಎನ್ನಲಾಗಿದೆ.

Continue Reading

DAKSHINA KANNADA

ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

Published

on

ಮಂಗಳೂರು: ಮಂಗಳೂರು ಸಬ್ ಜೈಲಿನಲ್ಲಿದ್ದ ಕೇರಳ ಮೂಲದ ಖೈದಿಯೊಬ್ಬ ಆಸ್ಪತ್ರೆಯಲ್ಲೇ ಕುಣಿಕೆಗೆ ಕೊರಳೊಡ್ಡಿ ಜೀವಾಂತ್ಯಗೊಳಿಸಿದ್ದಾನೆ. ಕೊಣಾಜೆಯ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022 ರಲ್ಲಿ ಈತ ಬಂಧಿತನಾಗಿದ್ದ . ಕೇರಳ ಮೂಲದವನಾಗಿದ್ದ ಮಹಮ್ಮದ್ ನೌಫಲ್ ಜೀವಾಂತ್ಯಗೊಳಿಸಿದ ಖೈದಿಯಾಗಿದ್ದಾನೆ. ಕೆಲ ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 25 ರಂದು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯ ಸೆಲ್ ವಾರ್ಡ್ ಗೆ ದಾಖಲಿಸಲಾಗಿತ್ತು. ಸೆಲ್ ವಾರ್ಡನಲ್ಲಿ ಇರುವಾಗಲೇ ಈತ ಜೀವಾಂತ್ಯಗೊಳಿಸಿದ್ದಾನೆ. ಈತನನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳ ನಡೆಸಿದರಾದ್ರೂ ಸಾದ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

Continue Reading

LATEST NEWS

ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!

Published

on

ಮಂಗಳೂರು ( ಕನ್ಯಾಕುಮಾರಿ ) : ಮದುವೆ ಸಮಾರಂಭಕ್ಕೆಂದು ಕನ್ಯಾಕುಮಾರಿಗೆ ತೆರಳಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಅಸು ನೀಗಿದ್ದಾರೆ. ಮದುವೆಗೆ ತೆರಳಿದ್ದ ಸ್ನೇಹಿತರು ಲೇಮುರ್ ಬೀಚ್‌ನಲ್ಲಿ ಈಜಲು ಇಳಿದಾಗ ಈ ಧುರ್ಘಟನೆ ಸಂಭವಿಸಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಸಮುದ್ರಲ್ಲಿ ಈಜಲು ಹೋಗಿದ್ದು ಮೂವರನ್ನು ಸ್ಥಳಿಯರು ರಕ್ಷಣೆ ಮಾಡಿದ್ದಾರೆ. ಎಲ್ಲರೂ ತಿರುಚಿನಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ. ತಂಜಾವೂರಿನ ಚಾರುಕವಿ, ನೇಯ್ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಹಾಗೂ ಆಂದ್ರದ ವೆಂಕಟೇಶ್‌ ನೀರುಪಾಲದ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ

ನಿಶೇಧವಿದ್ರೂ ಸಮುದ್ರಕ್ಕೆ ಪ್ರವೇಶ ಮಾಡಿದ್ದರು

ಖಾಸಗಿ ಬೀಚ್‌ ಆಗಿರೋ ಲೆಮುರ್ ಬೀಚ್‌ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಲಾಗಿತ್ತು. ಇನ್ನು ಭಾನುವಾರದಂದು ಸಮುದ್ರದಲ್ಲಿ ಭಾರಿ ಅಲೆಗಳು ಇದ್ದ ಕಾರಣ ಯಾರೂ ಸಮುದ್ರಕ್ಕೆ ಇಳಿಯಬಾರದು ಅನ್ನೋ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ರೂ ಇವರು ಸಮುದ್ರಕ್ಕೆ ಹೇಗೆ ಹೋದ್ರು ಅನ್ನೋದು ತನಿಖೆ ನಡೆಸಲಾಗುತ್ತಿದೆ. ಮದುವೆಗೆ ಬಂದಿದ್ದ ಸ್ನೇಹಿತರೆಲ್ಲ ಬೇರೆ ಬೇರೆ ಗುಂಪುಗಳಾಗಿ ಚದುರಿ ಹೋಗಿದ್ದು, ಈ ಎಂಟು ಜನ ವಿದ್ಯಾರ್ಥಿಗಳು ಸಮುದ್ರ ಕಿನಾರೆ ಬಂದು ಸಮುದ್ರಕ್ಕೆ ಇಳಿದಿದ್ದಾರೆ.

ಕೋರ್ಸು ಮುಗಿಸುವ ಹಂತದಲ್ಲಿ ನಡೆಯಿತು ದುರ್ಘಟನೆ

ಈ ವಿದ್ಯಾರ್ಥಿಗಳ ಕೋರ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು. ಯಾವ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು, ಯಾವ ನಗರಕ್ಕೆ ಹೋದರೆ ಸೂಕ್ತ ಎಂಬ ಕುರಿತು ಅವರ ಮಧ್ಯೆಯೇ ಚರ್ಚೆ ನಡೆಯುತ್ತಿತ್ತು. ಅವರ ಪೋಷಕರು ಕೂಡ ನೂರಾರು ಕನಸು ಕಂಡಿದ್ದರು. ಆದರೆ, ಮದುವೆಗೆ ಹೋದವರು, ಮದುವೆ ಮುಗಿಸಿ ನೇರ ಮನೆಗೆ ಬಂದಿದ್ರೆ ಎಲ್ಲವೂ ಎನಿಸಿದಂತೆ ನಡೆಯುತ್ತಿತ್ತು. ಆದ್ರೆ ವಿಧಿ ಇವರ ಎಲ್ಲಾ ಕನಸುಗಳನ್ನ ಕಿತ್ತುಕೊಂಡಿದೆ.

Continue Reading

LATEST NEWS

Trending