FILM
‘ಕೋಪ ಬಂದ್ರೆ ಬೀಪ್ ಪದಗಳು ಬರುತ್ತೆ’- ರಕ್ಷಕ್ ಬುಲೆಟ್ ಪ್ರಕಾಶ್
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಸದ್ಯ ಬಿಗ್ ಬಾಸ್ ಸೀಸನ್ 10ಕ್ಕೆ ಆಯ್ಕೆ ಆಗಿದ್ದು ವೇಟಿಂಗ್ ಲಿಸ್ಟಲ್ಲಿ ಇದ್ದು ಬಳಿಕ ಮನೆಯೊಳಗೆ ಎಂಟ್ರಿ ಪಡೆದಿದ್ದಾರೆ.
ಬೆಂಗಳೂರು:ಬುಲೆಟ್ ಪ್ರಕಾಶ್ ಮಗ ರಕ್ಷಕ್ ಸದ್ಯ ಬಿಗ್ ಬಾಸ್ ಸೀಸನ್ 10ಕ್ಕೆ ಆಯ್ಕೆ ಆಗಿದ್ದು ವೇಟಿಂಗ್ ಲಿಸ್ಟಲ್ಲಿ ಇದ್ದು ಬಳಿಕ ಮನೆಯೊಳಗೆ ಎಂಟ್ರಿ ಪಡೆದಿದ್ದಾರೆ.
ಬುಲೆಟ್ ಪ್ರಕಾಶ್ ಮಗ ಎನ್ನುವ ಕಾರಣಕ್ಕೆ ಜನಪ್ರಿಯತೆ ಪಡೆದುಕೊಂಡಿದ್ದ ರಕ್ಷಕ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ರು.
ಈಗ ರಕ್ಷಕ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಮನೆ ಒಳಗೆ ಹೋಗುವುದಕ್ಕೂ ಮೊದಲು ಸುದೀಪ್ ಜೊತೆ ಮಾತನಾಡಿದ್ರು.
‘ನನ್ನ ನಿಜವಾದ ಮಖ ತೋರಿಸಬೇಕು. ನನ್ನ ಬಗ್ಗೆ ನೆಗೆಟಿವ್ ವಿಚಾರಗಳನ್ನು ಹರಡಿದರು.
ನೆಗೆಟಿವ್ ಹಾಗೂ ಪಾಸಿಟಿವಿಟಿ ಇದ್ದಾಗ ಮಾತ್ರ ಜೀವನ ನಡೆಸೋಕೆ ಸಾಧ್ಯ. ಜೀವನದಲ್ಲಿ ಏನೇ ಬಂದರೂ ಮುಂದಕ್ಕೆ ಹೋಗುತ್ತೇನೆ. ರಕ್ಷಕ್ ಹೇಗಿರ್ತಾನೆ ಅನ್ನೋದು ಜನಕ್ಕೆ ಗೊತ್ತಾಗಬೇಕು’ ಎಂದಿದ್ದಾರೆ.
ಬಳಿಕ ಸುದೀಪ್ ಒಂದು ಪ್ರಶ್ನೆ ಕೇಳ್ತಾರೆ ಯಾಕೆ ನಿಮ್ಮ ಮೇಲೆ ಇಷ್ಟು ನೆಗೆಟಿವಿಟಿ ಎಂದು.ಆಗ ರಕ್ಷಕ್ ನೆಗೆಟಿವ್ ಯಾಕೆ ಅನ್ನೋದು ಗೊತ್ತಿಲ್ಲ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಪಬ್ಲಿಸಿಟಿಯಲ್ಲಿರಬೇಕು.
ನನಗೆ ಬೇಗ ಕೋಪ ಬರುತ್ತದೆ. ಕೋಪ ಬಂದ್ರೆ ಬೀಪ್ ಪದಗಳು ಬಾಯಲ್ಲಿ ಬರುತ್ತೆ ಎಂದಿದ್ದಾರೆ.
‘ನಿಮ್ಮ ಸುತ್ತ ಒಂದು ಗ್ಯಾಂಗ್ ಇರುತ್ತದೆ ಎನ್ನುವ ಮಾತಿದೆಯಲ್ಲ’ ಎಂದು ಸುದೀಪ್ ಪ್ರಶ್ನೆ ಕೇಳಿದಾಗ “ಗ್ಯಾಂಗ್ ಅಂತ ಏನೂ ಇಲ್ಲ. ಓರ್ವ ಹುಡುಗ ಕಾರು ಓಡಿಸ್ತಾನೆ. ಮತ್ತೋರ್ವ ಜೊತೆಗಿರ್ತಾನೆ ಅಷ್ಟೇ.
ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಜನರು ಮುತ್ತಿಕೊಳ್ತಾರೆ. ಅಪ್ಪನ ಪ್ರೀತಿಸುವ ವರ್ಗ ನನಗೂ ಪ್ರೀತಿ ತೋರಿಸುತ್ತಿದೆ ಎಂದಿದ್ದಾರೆ.
bengaluru
ಮನ್ಸಿಂದ ಯಾರೂನು ಕೆಟ್ಟೋರಲ್ಲ..ಬಿಗ್ ಬಾಸ್ ವಿನಯ್ ಕಣ್ಣೀರು
ಬೆಂಗಳೂರು : ಬಿಗ್ಬಾಸ್ ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮಂಗಳವಾರ ಪ್ರಸಾರವಾದ ಎಪಿಸೋಡ್ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.
ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಜೊತೆ ಮಾತನಾಡುತ್ತಿದ್ದಾಗ ಸ್ನೇಹಿತ್ ಬಿಗ್ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗಿರುವ ಅಭಿಪ್ರಯಾದ ಬಗ್ಗೆ ತಿಳಿಸುವಂತೆ ಹೇಳ್ತಾರೆ.ಆಗ ಪವಿ ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು.ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.
ಇದರಿಂದಾಗಿ ವಿನಯ್ ತೀರಾ ಡಲ್ ಆಗ್ಬಿಟ್ಟರು. ಬಾತ್‌ರೂಮ್ ಒಳಗೆ ಹೋಗಿ ವಿನಯ್ ಗಳಗಳನೆ ಅತ್ತುಬಿಟ್ಟರು. ಬಳಿಕ ‘ಬಿಗ್ ಬಾಸ್’ ಬಳಿ ಮಾತನಾಡಿದ್ಮೇಲೆ ವಿನಯ್ ಸಮಾಧಾನಗೊಂಡರು.
bangalore
ಕ್ಷೀಣಿಸುತ್ತಿದೆ ಹಿರಿಯ ನಟಿ ಲೀಲಾವತಿ ಆರೋಗ್ಯ-ಡಿಕೆಶಿ, ನಟ ಶಿವಣ್ಣ ಆರೋಗ್ಯ ವಿಚಾರಣೆ
ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದು ಅವರ ಆರೋಗ್ಯ ವಿಚಾರಿಸುವುದಕ್ಕಾಗಿ ಅನೇಕ ನಟ ನಟಿಯರು ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.ಜೊತೆಗೆ ನಿನ್ನೆ ನಟ ಶಿವಣ್ಣ ದಂಪತಿ ಕೂಡ ಮನೆಗೆ ಭೆಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮನೆಗೆ ಆಗಮಿಸಿದ ಶಿವಣ್ಣ ಅವರನ್ನು ವಿನೋದ್ ರಾಜ್‌ಕುಮಾರ್ ಹೆಚ್ಚು ಆತ್ಮೀಯವಾಗಿ ಬರಮಾಡಿಕೊಂಡು ತಾಯಿಯ ಆರೋಗ್ಯದ ಕುರಿತು ವಿವರಣೆ ನೀಡಿದ್ದಾರೆ..
ಇನ್ನು ಮೊನ್ನೆಯಷ್ಟೇ ನಟ ಅರ್ಜುನ್ ಸರ್ಜಾ ಲೀಲಾವತಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಸಿದ್ದರು.. ಅಲ್ಲದೇ ದರ್ಶನ್ ಸಹ ಅವರ ಮನೆಗೆ ಭೇಟಿ ನೀಡಿದ್ದರು.. ಡಿಕೆಶಿ ಕೂಡ ಆರೋಗ್ಯ ವಿಚಾರಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಯಲ್ಲಿನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ..
FILM
ಯಾವತ್ತೂ ನಿನ್ನ ಕ್ಷಮಿಸೊಲ್ಲ ಡ್ರೋನ್…ನಮೃತಾ ಕಣ್ಣೀರು
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಈಗ ಎಂಟನೇ ವಾರದ ಟಾಸ್ಕ್‌ಗಳು ಹಾಗೂ ಕ್ಯಾಪ್ಟೆನ್ಸಿ ಆಯ್ಕೆಯ ಪ್ರಕ್ರಿಯೆ, ನಾಮಿನೇಷನ್ ಪ್ರಕ್ರಿಯೆ ಎಲ್ಲವೂ ಸಹ ಶುರುವಾಗಿದೆ. ನಾನಿಮಿನೇಷನ್ ಮುಗಿದಿದ್ದು, ಹೊಸದಾಗಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾರನ್ನು ಹೊರಗಡೆ ಇಡಬೇಕು ಎಂದು ಪ್ರತಾಪ್‌ರನ್ನು ಬಿಗ್ ಬಾಸ್ ಕೇಳಿದ್ದಾರೆ. ಇದಕ್ಕೆ ಪ್ರತಾಪ್, ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಆದರೆ, ಪ್ರತಾಪ್ ತಮ್ಮ ಹೆಸರನ್ನು ಹೇಳೋದಿಲ್ಲ ಎಂದು ನಮ್ರತಾ ನಿರೀಕ್ಷೆ ಮಾಡಿದ್ದರು. ಅನಿರೀಕ್ಷಿತವಾಗಿ ಪ್ರತಾಪ್, ನಮ್ರತಾ ಹೆಸರು ಹೇಳಿದ್ದು ಅವರಿಗೆ ಬೇಸರವನ್ನು ತರಿಸಿದೆ. ಪ್ರತಾಪ್ ತಗೆದುಕೊಂಡ ನಿರ್ಧಾರ ನಮ್ರತಾ ಕಣ್ಣಲ್ಲಿ ನೀರು ತರಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ನಮ್ರತಾ ಕಣ್ಣೀರನ್ನು ಹಾಕುತ್ತಾ ಇದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯ ವೇಳೆ ನಾನು ಪ್ರತಾಪ್ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ನಗುನಗುತ್ತಲೇ ನಮ್ರತಾ ಹೇಳಿದ್ದರು. ಈ ವೇಳೆಯಾದರೂ ಪ್ರತಾಪ್ ಹೇಳಬಹುದಾಗಿತ್ತು. ನನ್ನ ತಂಡವನ್ನು ಸೇರಿಸಿಕೊಳ್ಳಲು ನನಗೆ ಇಷ್ಟವಿಲ್ಲವೆಂದು. ಆಗ ಏನು ಮಾತನಾಡದ ಪ್ರತಾಪ್ ಬಿಗ್ ಬಾಸ್ ನೀವು ಯಾರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಇಡಲು ಇಚ್ಚಿಸುತ್ತೀರಾ ಎಂದು ಕೇಳಿದಾಗ. ನಾನು ನಮ್ರತಾ ಅವರನ್ನು ಹೊರಗಡೆ ಇಡಲು ಇಚ್ಚಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಆದರೆ, ಇದು ನಮ್ರತಾಗೆ ಇಷ್ಟವಾಗಲಿಲ್ಲ.
ಇದಕ್ಕೂ ಮೊದಲು ಪ್ರತಾಪ್, ನಮ್ರತಾರಲ್ಲಿ ನಿಮ್ಮೊಳಗೆ ಬೇರೆಯೊಬ್ಬ ನಮ್ರತಾ ಇದ್ದಾರೆ. ಅವರ ಶಕ್ತಿಯನ್ನು ಹೊರಗೆ ತಂದೆ ತರುತ್ತೇನೆ ಎಂಬ ಮಾತನ್ನು ಆಡಿದ್ದರು. ಇದೇ ಮಾತುಗಳು ನಮ್ರತಾಗೆ ನೋವನ್ನು ಮಾಡಿದೆ. ಪ್ರತಾಪ್ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಎಂಬ ಮಾತನ್ನು ನಮ್ರತಾ ಆಡಿದ್ದಾರೆ.
ಇನ್ಯಾಚತ್ತೂ ನಿನ್ನ ಕ್ಷಮಿಸೊಲ್ಲ ಡ್ರೋನ್ ಎಂದು ಗಳ ಗಳನೇ ಅತ್ತಿದ್ದಾರೆ.
- FILM7 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- bengaluru6 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- bengaluru6 days ago
ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ-ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಕೋಣಗಳ ಪ್ರಯಾಣ
- DAKSHINA KANNADA6 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು