Connect with us

    LATEST NEWS

    ಚಿರ ನಿದ್ರೆಗೆ ಜಾರಿದ ನಾಡೋಜ ಕಮಲ ಹಂಪನಾ…!

    Published

    on

    ಮಂಗಳೂರು :  ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ಬೆಂಗಳೂರಿನ ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಪತಿ ಖ್ಯಾತ ಸಾಹಿತಿ ಹಂಪ‌ನಾಗರಾಜಯ್ಯ, ದೂರದರ್ಶನ ನಿರ್ದೇಶಕರಾದ ಎಚ್.ಎನ್.ಆರತಿ ಮತ್ತು ಬಂಧು ಮಿತ್ರರು ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳನ್ನು ಅವರು ಅಗಲಿದ್ದಾರೆ. ಇಂದು ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

    ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದ ಪ್ರೊ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಅವರ ಧೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರ ಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನ ಕೃತಿಗಳೂ ಸೇರಿವೆ.

    ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ. ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವ ಕಮಲಾ ಹಂಪನಾ ಕನ್ನಡದ ಹೆಮ್ಮೆ. ಕರ್ನಾಟಕ ಸರ್ಕಾರ ಅವರ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ.

    LATEST NEWS

    ಭೀಕರ ಪಟಾಕಿ ಸ್ಫೋ*ಟ; 3 ಮೃ*ತ್ಯು, 7 ಗಾ*ಯ

    Published

    on

    ಮಂಗಳೂರು/ಹರಿಯಾಣ: ಹರಿಯಾಣದ ಸೋನಿಪತ್‌ನಲ್ಲಿ ಇಂದು (ಸೆ.28) ಬೆಳಿಗ್ಗೆ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋ*ಟವು ಸಂಭವಿಸಿದ್ದು, 3 ಜನರ ಮೃ*ತ್ಯು ಹಾಗೂ 7 ಮಂದಿಗೆ ಗಂ*ಭೀರ ಗಾಯವಾಗಿದೆ.


    ವೇದ್ ಎಂಬುವವರ ಮನೆಯಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದು, ಮನೆಯಲ್ಲಿ ಸಂಗ್ರಹಿಸಿದ ರಾಸಯನಿಕಗಳಿಂದ ಬೆಂ*ಕಿ ಅವ*ಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
    ಮೂವರ ದೇಹವು ಛಿಧ್ರ*ವಾಗಿದ್ದು, ಉಳಿದ ಗಾ*ಯಾಳುಗಳನ್ನು ಆಸ್ಪತ್ರೆಗೆ ಚಿಕಿ*ತ್ಸೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
    ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ವೇದ್ ಪರಾರಿಯಾಗಿದ್ದಾನೆ.
    ಈ ಕುರಿತು ಸೋನಿಪತ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು : ಅರ್ಚನಾ ಕಾಮತ್ ತ್ಯಾಗ ಸಂಸ್ಮರಣಾ ರಕ್ತದಾನ ಶಿಬಿರ

    Published

    on

    ಮಂಗಳೂರು : ಬದುಕಿರುವಾಗಲೇ ದೇಹದ ಅಂಗವೊಂದನ್ನು ಆಪ್ತ ಸಂಬಂಧಿಗೆ ದಾನ ಮಾಡಿ ವಿಧಿಲೀಲೆಗೆ ಬಲಿಯಾದ ಉಪನ್ಯಾಸಕಿ ಅರ್ಚನಾ ಕಾಮತ್ ಅವರ ದಿವ್ಯಾತ್ಮಕ್ಕೆ ನುಡಿ ನಮನ ಕಾರ್ಯಕ್ರಮ ಮತ್ತು ರಕ್ತದಾ ನ ಶಿಬಿರ ಮಂಗಳೂರಿನ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.

    ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,  ಶಾಸಕ ಕಾಮತ್ ಬಾಲ್ಯದಿಂದಲೇ ಪರಿಚಯರಾಗಿದ್ದ ಅರ್ಚನಾ ಕಾಮತ್ ಅವರು ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಬದುಕು ನಮಗೆ ಆದರ್ಶವಾಗಿದೆ. ಅವರ ಇಡೀ ಕುಟುಂಬ ನಮಗೆ ಆತ್ಮೀಯವಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿ ಅರ್ಚನಾ ಅವರ ಆತ್ಮೀಯರನ್ನು ಒಂದುಗೂಡಿಸಿ ಮಾದರಿ ಕಾರ್ಯ ಮಾಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ ಅರ್ಚನಾ ‌ಕಾಮತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಮಾತನಾಡುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು.

    ಈ ಸಂದರ್ಭ ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಬೆಸೆಂಟ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಮಣೇಲ್ ಅಣ್ಣಪ್ಪ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಬಿಎನ್ ಐ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಕೆಎಂಸಿ ಆಸ್ಪತ್ರೆ, ಬೆಸೆಂಟ್ ಶಿಕ್ಷಣ ಸಂಸ್ಥೆ, ಯೂತ್ ಆಫ್ ಜಿಎಸ್ ಬಿ, ಸಿಎ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ರಕ್ತದಾನ ಶಿಬಿರದಲ್ಲಿ 98ಕ್ಕೂ ಅಧಿಕ ನಾಗರಿಕರು ರಕ್ತದಾನ ಮಾಡಿದರು.

    ಇದನ್ನೂ ಓದಿ : ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

    ಅರ್ಚನಾ ಕಾಮತ್ ಅವರ ಪತಿ, ಸಹೋದರಿ ಹಾಗೂ ಸಂಬಂಧಿಕರು ರಕ್ತದಾನ ಮಾಡಿ ನೋವಿನಲ್ಲಿಯೂ ಹೃದಯ ವೈಶಾಲ್ಯತೆ ಮೆರೆದು ಮಾದರಿಯಾದರು.

    Continue Reading

    FILM

    ಎರಡು ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿದ ಸಾಯಿ ಪಲ್ಲವಿ

    Published

    on

    ನಟನೆ, ಡ್ಯಾನ್ಸಿಂಗ್‌ ಅಪಾರ ಅಭಿಮಾನಿಗಳ ಮನಗೆದ್ದಿರುವ ಸಾಯಿ ಪಲ್ಲವಿ ಇದೀಗ ಎರಡು ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ್ದಾರೆ. ‘ಅಮರನ್’  ಚಿತ್ರದ ಮೂಲಕ ಮತ್ತೆ ನಟಿ ಸದ್ದು ಮಾಡುತ್ತಿದ್ದಾರೆ. ನಟಿಯ ಕ್ಯಾರೆಕ್ಟರ್ ಟೀಸರ್ ರಿವೀಲ್ ಚಿತ್ರತಂಡ ಸರ್ಪ್ರೈಸ್ ನೀಡಿದೆ.

    ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಿದ್ದಾರೆ. ವೀರಯೋಧ ಮೇಜರ್ ಮುಕುಂದ ವರದರಾಜನ್ ಬಯೋಪಿಕ್ ಆಗಿದೆ. ಇದರಲ್ಲಿ ವೀರಯೋಧನಾಗಿ ಶಿವಕಾರ್ತಿಕೇಯನ್ ನಟಿಸಿದ್ರೆ, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ.

    ಇನ್ನೂ ಚಿತ್ರದಲ್ಲಿ ನಟಿಯ ಕ್ಯಾರೆಕ್ಟರ್ ಟೀಸರ್ 1.22 ನಿಮಿಷವಿದ್ದು, ಸಾಯಿ ಪಲ್ಲವಿ ಗುಂಗುರು ಕೂದಲು ಬಿಟ್ಟು ನಯಾ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ‘ಅಮರನ್’ ಚಿತ್ರವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ಅ.11ಕ್ಕೆ ರಿಲೀಸ್ ಆಗಲಿದೆ.

    Continue Reading

    LATEST NEWS

    Trending