DAKSHINA KANNADA
ಕುಡುಕರ, ಅಬ್ಬೇಪಾರಿಗಳ ತಾಣವಾದ ಕದ್ರಿ ಮಲ್ಲಿಕಟ್ಟೆಯ ಗ್ರಂಥಾಲಯ…!
ಮಂಗಳೂರು : ‘ಪುಸ್ತಕಗಳಿರುವ ಕೋಣೆಯೇ ವಿಶ್ವವಿದ್ಯಾಲಯ’ ಎಂಬ ಮಾತಿದೆ. ಅದರಂತೆ ಗ್ರಂಥಾಲಯಗಳು ಅಂದರೆ ಅದು ಕೇವಲ ಪುಸ್ತಕ-ನಿಯತಕಾಲಿಕಗಳ ಕೇಂದ್ರವಲ್ಲ. ಅದು ಜ್ಞಾನದ ಭಂಡಾರ ಕೂಡ ಹೌದು.
ಗ್ರಂಥಾಲಯಗಳನ್ನೇ ಬಳಸಿಕೊಂಡು ತಮ್ಮ ಕಲಿಕೆಯ ಕೇಂದ್ರವನ್ನಾಗಿರಿಸಿ ಜ್ಞಾನ ವೃದ್ಧಿ ಮಾಡಿ ಮಹನೀಯರಾದ ಅನೇಕ ರೋಚಕ ಕಥೆಗಳು ನಮ್ಮ ಕಣ್ಣ ಮುಂದಿದೆ. ಇಂತಹ ಗ್ರಂಥಾಲಯಗಳು ಇಂದು ಸಮಾಜದ ಮತ್ತು ಅಧಿಕಾರಿಗಳ ಬೇಜಾವ್ದಾರಿಯಿಂದ ಕುಡುಕರ, ಅಬ್ಬೆಪಾರಿಗಳ, ಕಸದ ತಾಣವಾಗುತ್ತಿವೆ, ಇಂತಹುದೇ ಐತಿಹಾಸಿಕ ಗ್ರಂಥಾಯಲದ ದುರಂತ ಕಥೆ ಮಂಗಳೂರಿನಲ್ಲಿದೆ.
ಆಧುನಿಕವಾಗಿ ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ನಗರಗಳಲ್ಲಿ ಮಂಗಳೂರು ಕೂಡ ಒಂದು. ಆದರೆ ಬದಲಾವಣೆಯ ಹಪಹಪಿಕೆಯಲ್ಲಿ ಇದ್ದ ಸಂಪನ್ಮೂಲವನ್ನು ಹಾಳುಗೆಡಬಾರದಲ್ಲವೇ ?
ಸ್ಮಾರ್ಟ್ ಸಿಟಿ ಮಂಗಳೂರಿನ ಹೃದಯ ಭಾಗದಲ್ಲಿರುವ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇದೀಗ ಅನಾಥಾಲಯವಾಗಿದೆ. ಶತಮಾನದ ಇತಿಹಾಸವಿರುವ ಈ ಗ್ರಂಥಾಲಯ ಪರಿಸರದಲ್ಲಿ ಕುಡುಕರದ್ದೇ ರಾಜ್ಯಭಾರ.
ಸರಸ್ವತಿಯ ಮಕ್ಕಳು ಇರಬೇಕಾದ ಈ ಗ್ರಂಥಾಲಯದ ಪರಿಸರ ಕುಡುಕರ, ಪುಂಡು ಪೋಕರಿಗಳ, ನಿರ್ಗತಿಕ ತಂಗು ದಾಣವಾಗುತ್ತಿದೆ. ಈ ಲೈಬ್ರೇರಿಯ ಪರಿಸರ ಪೂರ್ತಿ ಮದ್ಯ ಬಾಟಲಿಗಳು , ಸೇದಿ ಬಿಸಾಕಿರುವ ಬೀಡಿ ಸಿಗರೇಟುಗಳ ಪ್ಯಾಕುಗಳು, ಅಗೆದು ಹಾಕಿದ ನಿರುಪಯುಕ್ತ ಸರಕುಗಳು, ನಗರದ ಎರಡು ಪ್ರಮುಖ ರಸ್ತೆಗಳ ಮಧ್ಯೆ ಹಂಚಿ ಹೋಗಿರುವ ಈ ಗ್ರಂಥಾಲಯ ಒಟ್ಠಾರೆಯಾಗಿ ಅವ್ಯವಸ್ಥೆಯ ಅಗರವಾಗಿ ಬಿಟ್ಟಿದೆ. ಸಭ್ಯರು, ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಇಲ್ಲಿ ಹಾದು ಹೋಗುವುದಕ್ಕೇ ಮುಜುಗರ ಪಡುವಂತಿದೆ.
ರಸ್ತೆ ಅಗಲಿಕರಣ ಸಂದರ್ಭ ಈ ಗ್ರಂಥಾಲಯದ ಆವರಣ ಗೋಡೆಗಳನ್ನು ಕೆಲ ವರ್ಷಗಳಿಂದ ಕೆಡವಿ ಹಾಕಲಾಗಿತ್ತು. ಆ ಬಳಿಕ ಈ ಪರಿಸರ ಸಂಪೂರ್ಣ ಕೆಡಲು ಆರಂಭವಾಗಿ. ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಾಗ ನಮ್ಮ ಕುಡ್ಲ ವಾಹಿನಿ ಸುದ್ದಿ ಬಿತ್ತರಿಸಿ ಜನಪ್ರತಿನಿಧಿಗಳ ಕಣ್ಣು ತೆರೆಯುವಂತೆ ಮಾಡಿತ್ತು.
ಕೂಡಲೇ ಎಚ್ಚೆತ್ತ ಜನಪ್ರತಿನಿಧಿಗಳು ಇಲ್ಲಿನ ಕಸದ ರಾಶಿ ತೆರವು ಮಾಡಿ ಸುಂದರೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಯೋಚನೆ ಯೋಜನೆಗೆ ತಿರುಗಿದರೆ ತಾನೇ ಕೆಲಸಕ್ಕೆ ಬೆಲೆ.
.ಆದರೆ ಅದ್ಯಾಕೋ ಆರಂಭದಲ್ಲಿ ಶೂರತ್ವ ಎಂಬಂತೆ ಆರಂಭವಾದಷ್ಟೇ ವೇಗದಲ್ಲಿ ಅರ್ಧಕ್ಕೆ ನಿಂತು ಮತ್ತೆ ಹಿಂದಿಗಿಂತಲೂ ಅಧೋಗತಿಗೆ ಇಳಿಯಿತು ಇಲ್ಲಿನ ಪರಿಸರ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಇದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳುತ್ತೇವೆಂದಿದ್ದಾರೆ.
ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಮಂಗಳೂರು ನಗರ ಕಾಂಕ್ರಿಟ್ ಕಾಡಾಗುತ್ತಿದೆ, ಜೊತೆಗೆ ಹಸಿರೀಕರಣ ಮಾಯವಾಗಿ ಅನೇಕ ಪ್ರಮುಖ ಸ್ಥಳಗಳು, ಕಟ್ಟಡಗಳು, ಸ್ಮಾರಕಗಳು ಮತ್ತೆ ಇತಿಹಾಸದ ಪುಟಕ್ಕೆ ಸೇರುತ್ತಿದೆ.
ಒಂದು ಕಾಲದಲ್ಲಿ ಸ್ಥಳೀಯ ಜನರಿಗೆ ಜ್ಞಾನದ ಬೆಳಕನ್ನು ನೀಡಿದ್ದ ಈ ಮಲ್ಲಿಕಟ್ಟೆ ಲೈಬ್ರೇರಿ ಸ್ಥಳೀಯ ಜನರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನೇತೃತ್ವಲ್ಲಿ ಮತ್ತೆ ಗತ ಕಾಲದ ವೈಭವ ಮರಳುವಂತಾಗಲಿ ಎಂಬುವುದು ಅಭಿಲಾಷೆ.
DAKSHINA KANNADA
ಎಂ.ಆರ್.ಪಿ.ಎಲ್ ಮತ್ತು ಮಾಂಡೋವಿ ಮೋಟರ್ಸ್ ಸಂಯೋಜನೆಯಲ್ಲಿ ಎಂ.ಆರ್.ಪಿ.ಎಲ್ ಹೈಕ್ಯೂ ಮೈಲೇಜ್ ಚಾಲೆಂಜ್ ಕಾರ್ಯಕ್ರಮ
ಮಂಗಳೂರು; ಎಂ.ಆರ್.ಪಿ.ಎಲ್ ಮತ್ತು ಮಾಂಡೋವಿ ಮೋರ್ಸ್ನ ಸಂಯುಕ್ತ ಆಶ್ರಯದಲ್ಲಿ ಎಂ.ಆರ್.ಪಿ.ಎಲ್ ಹೈಕ್ಯೂ ಮೈಲೇಜ್ ಚಾಲೆಂಜ್ ಕಾರ್ಯಕ್ರಮ ಕದ್ರಿಯ ಪೆಟ್ರೋಲ್ ಪಂಪ್ ನಲ್ಲಿ ನಡೆಯಿತು. ಎಂ.ಆರ್.ಪಿ.ಎಲ್ ನ ಗ್ರೂಪ್ ಜನರಲ್ ಮ್ಯಾನೇಜರ್ ಸುಭಾಷ್ ಪೈ ಚಾಲನೆ ನೀಡಿ ಮಾತನಾಡಿ, ಒ.ಎನ್.ಜಿ.ಸಿ ಯ ಅಂಗ ಸಂಸ್ಥೆಯಾದ ಎಂ.ಆರ್.ಪಿ ಎಲ್ ಉತ್ತಮ ಗುಣಮಟ್ಟದ ಇಂಧನವನ್ನು ರಾಜ್ಯದಲ್ಲಿ ಮಾತ್ರವಲ್ಲ ದೇಶದ ಜನತೆಗೆ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿವೆ. ಕರ್ನಾಟಕದಲ್ಲಿ ಅತೀ ದೊಡ್ಡ ಸಂಸ್ಥೆ ಎಂ.ಆರ್.ಪಿ.ಎಲ್ ಆಗಿದ್ದು, ಒಂದು ಮಾದರಿ ಸಂಸ್ಥೆಯಾಗಿದೆ. ಈ ಕಾರ್ಯಕ್ರಮದಿಂದ ಜನರಲ್ಲಿ ಇಂಧನದ ಸಂರಕ್ಷಣೆ ಮತ್ತು ವಾಹನ ಚಾಲನೆಯಲ್ಲಿ ಜಾಗೃತಿ ಉಂಟಾಗುತ್ತದೆ, ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ” ಎಂದರು.
ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರಾದ ಸ್ವಾಮಿ ಪ್ರಸಾದ್ ಮಾತನಾಡಿ, “ದಕ್ಷಿಣ ಬಾರತದಲ್ಲಿ ಎಂ.ಆರ್.ಪಿ ಎಲ್ ನ 111 ಪೆಟೋಲ್ ಪಂಪ್ ಚಾಲನೆಯಲ್ಲಿದ್ದು ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಮುಂದಿನ ದಿನದಲ್ಲಿ ಅಂಧ್ರ ಪ್ರದೇಶಕ್ಕೆ ಕೂಡ ನಮ್ಮ ಪೆಟ್ರೋಲ್ ಪಂಪ್ ಗಳು ಕಾಲಿಡಲಿದೆ ಸಂಸ್ಥೆಯ ಇಂಧನ ಕ್ವಾಲಿಟಿಯನ್ನು ಗಮನಿಸಿದ ಗ್ರಾಹಕರು ಮತ್ತೆ ಮತ್ತೆ ನಮ್ಮ ಸಂಸ್ಥೆಯ ಇಂಧನವನ್ನು ಬಳಸುತ್ತಿದ್ದಾರೆ, ಗ್ರಾಹಕರು ನಮ್ಮ ಸೇವೆಯನ್ನು ಕೂಡ ಶ್ಲಾಘಿಸುತ್ತಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 4೦ ವಾಹನ ಮಾಲಕರು ಪಾಲ್ಗೊಂಡಿದ್ದರು. ಎಂ.ಆರ್.ಪಿ.ಎಲ್ ನ ಮ್ಯಾನೇಜರ್ ಕಾಶಿನಾಥ್, ಮಂಗಳೂರು ಸ್ಪೋರ್ಸ್ ಅಸೋಶಿಯೇಶನ್ ನ ಸುಧೀರ್, ಮಾಂಡೋವಿ ಮೋಟರ್ಸ್ ನ ಎ,ಜಿ.ಎಂ ಕೃಷ್ಣ ಶೆಟ್ಟಿ, ವರ್ಕ್ ಶಾಪ್ ಮ್ಯಾನೇಜರ್ ಗ್ರೇಷಿಯನ್ ಪಿಂಟೋ, ಸೇಲ್ಸ್ ಮ್ಯಾನೇಜರ್ ಮುರಳೀಧರ್, ಎಂ.ಆರ್.ಪಿ.ಎಲ್ ನ ಹೈಕ್ಯೂ ಡೀಲರ್ ರಾಘವೇಂದ್ರ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
DAKSHINA KANNADA
ಮಮ್ತಾಜ್ ಅಲಿ ಜೀವಂತವಿದ್ದಾರಾ ? ಮುಳುಗುತಜ್ಙ ಈಶ್ವರ ಮಲ್ಪೆ ತಂಡದವರು ದೇಹ ಪತ್ತೆ ಹಚ್ಚಿದ್ರಾ ? ಇಲ್ಲಿದೆ ಸಂಪೂರ್ಣ ಮಾಹಿತಿ… !
ಮಂಗಳೂರು: ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ. ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯಚರಣೆ ತೀವ್ರವಾಗಿ ಮುಂದುವರಿಯುತ್ತಿವೆ.
ಮುಳುಗುತಜ್ಙ ಈಶ್ವರ ಮಲ್ಪೆ ತಂಡ ಸಹಿತ ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತರವಾಗಿವೆ. ಮಾಜಿ ಶಾಸಕ ಮೋಯಿದ್ದೀನ್ ಬಾವ ಕೂಡ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿದ್ದಾರೆ.
ಒಂದು ಹಂತದ ಹುಡುಕಾಟ ನಡೆಸಿದ ತಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, “ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ, ಎಲ್ಲೂ ಕೂಡ ದೇಹ ಪತ್ತೆಯಾಗಿಲ್ಲ” ಎಮದರು.
“ಸದ್ಯಕ್ಕೆ 100 ಮೀ. ಸುತ್ತಾಟ ಹುಡುಕಾಟ ನಡೆಸಲಾಗಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಆಳದಲ್ಲಿ ಕತ್ತಲಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ” ಎಂದರು.
ಮುಂದುವರೆದು ಮಾತನಾಡಿ, “ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು. ಇಷ್ಡು ಬೇಗ ಸಮುದ್ರ ಸೇರುವುದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುತ್ತಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶಿಸುತ್ತೇವೆ” ಎಂದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ. ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.
DAKSHINA KANNADA
ಉಪನ್ಯಾಸಕನಿಂದ ದ್ವೇಷದ ಉಪನ್ಯಾಸ.!? ಅರುಣ್ ಉಳ್ಳಾಲ ವಿರುದ್ದ ಕೇಸ್.!
ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿಯುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ ವಿರುದ್ದ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಾಡಿದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಈ ದೂರು ದಾಖಲಾಗಿದೆ.
ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದ ಅರುಣ್ ಉಳ್ಳಾಲ ಅವರು ಕ್ರೈಸ್ತರು ಹಾಗೂ ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಹಿಂದೂಗಳು ಹಿಂದೂಗಳಿಗೆ ಸೇರಿದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಹಿಂದೂಗಳಿಗೆ ಸೇರಿದ ಹಾಲ್ಗಳಲ್ಲೇ ಮದುವೆ ಆಗಬೇಕು ಎಂಬಿತ್ಯಾದಿ ರೀತಿಯ ಮಾತುಗಳನ್ನು ಆಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕ್ರಿಶ್ಚಿಯನ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿ, ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಉಳ್ಳಾಲ ಅವರ ಈ ಹೇಳಿಕೆ ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು. ಅರುಣ್ ಉಳ್ಳಾಲ ಅವರು ಕೆಲಸ ಮಾಡುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂಬ ಒತ್ತಾಯ ಕೂಡ ಮಾಡಲಾಗಿದೆ. ಇದೀಗ ಅರುಣ್ ಉಳ್ಳಾಲರ ಭಾಷಣ ವಿವಾದವಾಗುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಸಂಸದ ಕೋಟ ಹೆಸರಿನಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು
ಅರುಣ್ ಉಳ್ಳಾಲ ಅವರ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಅರುಣ್ ಗೆ ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
- BIG BOSS3 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- BIG BOSS7 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS7 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- LATEST NEWS6 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್