Connect with us

LATEST NEWS

ಚಿತೆಯೇರುವ ಮುನ್ನ ಕಣ್ಬಿಟ್ಟ ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲು…!

Published

on

ಮಂಗಳೂರು: ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಆ್ಯಂಬುಲೆನ್ಸ್​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕಣ್ಣು ಬಿಟ್ಟು ಉಸಿರಾಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವಾಂತಿಚ್ಚಾಲ್ ನಿವಾಸಿ ಗುರುವ (60) ಎಂಬವರನ್ನು ವಯೋಸಹಜ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರೋಗಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರೋಗಿಯು ಆಕ್ಸಿಜನ್ ಸಹಾಯದಿಂದ ಉಸಿರಾಟ ನಡೆಯುತ್ತಿರುವುದರಿಂದ ಆಕ್ಸಿಜನ್ ತೆಗೆದರೆ ಅವರು ಸಾವನ್ನಪ್ಪುತ್ತಾರೆ ಎಂದು ಸಂಬಂಧಿಕರಿಗೆ ‌ತಿಳಿಸಲಾಗಿತ್ತು.

ಅವರು ಬದುಕುವ ಸಾಧ್ಯತೆ ಇಲ್ಲದಿರುವುದರಿಂದ ಆಕ್ಸಿಜನ್ ತೆರವು ಮಾಡಲು ಸಂಬಂಧಿಕರು ತಿಳಿಸಿದಂತೆ ಆಕ್ಸಿಜನ್ ತೆರವು ಮಾಡಿ ಅವರನ್ನು ಆ್ಯಂಬುಲೆನ್ಸ್​ನಲ್ಲಿ ಮನೆಗೆ ಕೊಂಡೊಯ್ಯಲಾಗಿತ್ತು.

ಅಂತ್ಯಸಂಸ್ಕಾರಕ್ಕೆ ಚಿತೆ ಸಿದ್ಧ ಮಾಡಲು ಕೂಡ ಸೂಚಿಸಲಾಗಿತ್ತು.

ಆದರೆ, ಆ್ಯಂಬುಲೆನ್ಸ್​ನಲ್ಲಿ ಹೋಗುತ್ತಿರುವಾಗ ಕಾಸರಗೋಡು ಜಿಲ್ಲೆಯ ಉಪ್ಪಳ ಎಂಬಲ್ಲಿ ಗುರುವ ಅವರ ದೇಹದಲ್ಲಿ ಚಲನೆ ಕಂಡು ಬಂದಿದ್ದು, ಕಣ್ಣುಬಿಟ್ಟ ಅವರು ಉಸಿರಾಟ ಆರಂಭಿಸಿದ್ದರು. ಕೂಡಲೇ ಅವರನ್ನು ಬದಿಯಡ್ಕದ ಕ್ಲಿನಿಕ್​​ಗೆ ಕರೆದೊಯ್ದಾಗ ಆತ ಜೀವಂತವಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದರು.

ತಕ್ಷಣ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

FILM

ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

Published

on

ದೆಹಲಿ: ಆಗ್ರಾದ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಶಿಕ್ಷಕಿ ನಡುವೆ ಮಾತಿನ ಚಕಾಮಕಿ ನಡೆದು ಬಳಿಕ ದೈಹಿಕವಾಗಿ ಹೊಡೆದಾಡಿಕೊಂಡಿರುವ ಘಟನೆ ಮೇ.3ರಂದು ನಡೆದಿದೆ.

fight

ಮುಂದೆ ಓದಿ..; ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

ಪ್ರಾಂಶುಪಾಲರು ಶಿಕ್ಷಕಿ ಶಾಲೆಗೆ ತಡವಾಗಿ ಬರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಶಿಕ್ಷಕಿ ಪ್ರಾಂಶುಪಾಲೆಗೆ ನೀವು ಕೂಡ ನಾಲ್ಕು  ದಿನಗಳಿಂದ ತಡವಾಗಿ ಬರುತ್ತಿದ್ದೀರಲ್ವಾ ಎಂದು ಮರುತ್ತರಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಹೆಚ್‌ಎಮ್ ಶಿಕ್ಷಕಿ ಜೊತೆ ವಾಗ್ವಾದಕ್ಕಿಳಿದು ಕೊನೆಗೆ ಹೊಡೆದಾಡಿಕೊಂಡಿದ್ದಾರೆ. ಶಿಕ್ಷಕಿ ಗುಂಜಾ ಚೌಧರಿ ಹಾಗೂ ಪ್ರಾಂಶುಪಾಲೆ ಇಬ್ಬರೂ  ಹಿಡಿದು ಎಳೆದಾಡಿದ್ದಾರೆ.  ಈ ವೇಳೆ ಶಿಕ್ಷಕಿಯ ಕಣ್ಣಿಗೆ ಗಾಯಗಳಾಗಿದೆ. ಇನ್ನು ಶಿಕ್ಷಕಿ ಪ್ರಾಂಶುಪಾಲರ ಬಟ್ಟೆಯನ್ನು ಹರಿದು ಹಾಕಿದ್ದಾರೆ. ಈ ಮಧ್ಯೆ ಅಲ್ಲೇ ಇದ್ದ ಸಿಬಂದಿಗಳು ಗಲಾಟೆಯನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆ ಒಳಗಾಗಿದೆ.

Continue Reading

DAKSHINA KANNADA

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!

Published

on

ಮಂಗಳೂರು: ನಾವು ಯಾವುದೇ ಹಿಂದೂ ಧರ್ಮದವರ ಮನೆಗೆ ಹೋದಾಗ ಅಲ್ಲಿ ಏನು ನೋಡುತ್ತೇವೊ ಗೊತ್ತಿಲ್ಲ ಆದರೆ ಮನೆಯ ಎದುರೊಂದು ತುಳಸಿ ಗಿಡ ಇದ್ದೇ ಇರುತ್ತದೆ. ಯಾಕೆಂದರೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನ ಕೊಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮಹಿಳೆಯರು ದೇವರಿಗೆ ದೀಪ ಇಟ್ಟು ಬಳಿಕ ತುಳಸಿ ಗಿಡಕ್ಕೆ ಕಲಶದಲ್ಲಿ ನೀರನ್ನು ಹಾಕುತ್ತಾರೆ.

ಕೆಲವರ ಮನೆಯಲ್ಲಿ ಒಂದೇ ತುಳಸಿ ಗಿಡವನ್ನು ನೋಡಿದರೆ ಇನ್ನು ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಇರುತ್ತದೆ. ಆರೋಗ್ಯದ ಪ್ರಯೋಜನವಾಗಿಯೂ ಇದನ್ನು ಬಳಸುತ್ತಾರೆ. ಆದರೆ ಕೆಲವೊಂದು ನಿಯಮವನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತುಳಸಿ ಗಿಡವನ್ನು ಇಟ್ಟು ಕೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ತುಳಸಿ ಗಿಡ ಬೆಸ ಸಂಖ್ಯೆಯಲ್ಲಿ ಇರಬೇಕು:

ಕೆಲವೊಂದು ಮನೆಯಲ್ಲಿ ತುಳಸಿ ಗಿಡ ಎಲ್ಲಾ ಕಡೆಯಲ್ಲಿ ಬೆಳೆಯುತ್ತದೆ. ಇನ್ನು ಕೆಲವು ಮನೆಯಲ್ಲಿ ನೆಟ್ಟ ಒಂದು ಗಿಡವೂ ಸರಿಯಾಗಿ ಉಳಿಯುವುದು ಕಷ್ಟ. ಆದರೆ ತುಳಸಿ ಗಿಡದ ಸಂಖ್ಯೆ ಬೆಸಸಂಖ್ಯೆಯಲ್ಲಿರಬೇಕು. 1, 3, 5, 7 ಹೀಗೆ ಬೆಸಸಂಖ್ಯೆಯಲ್ಲಿ ತುಳಸಿ ಗಿಡವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗಿ ಇದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡವನ್ನು ಹೀಗೆ ನೆಡಬೇಕು:

ತುಳಸಿ ಗಿಡವನ್ನು ನೇರವಾಗಿ ನೆಲದ ಮೇಲೆ ನೆಡಬಾರದು. ಇಂತಹ ತಪ್ಪನ್ನು ಎಂದಿಗೂ ಮಾಡಬಾರದು. ಈ ಸಸಿಯನ್ನು ಕುಂಡದಲ್ಲಿ ಅಥವಾ ತೊಟ್ಟೆಯಲ್ಲಿ ಪ್ರತ್ಯೇಕವಾಗಿ ನೆಡಬೇಕು. ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಯಾವೂದೇ ರೀತಿಯ ಅಶುದ್ಧತೆಗಳು ತುಳಸಿ ಗಿಡವನ್ನು ಮುಟ್ಟುವುದಿಲ್ಲ.

ಈ ದಿನದಂದು ತುಳಸಿಯನ್ನು ಕೀಳಬಾರದು:

ತುಳಸಿ ಗಿಡವನ್ನು ಎಲ್ಲಾ ದಿನ ನೆಡಬಾರದು. ತುಳಸಿಯನ್ನು ಭಾನುವಾರದಂದು ಮತ್ತು ಏಕಾದಶಿಯ ದಿನದಂದು ನೆಡಬಾರದು ಮತ್ತು ಅದರ ಎಲೆಗಳನ್ನು ತೆಗೆಯಬಾರದು. ಈ ಎರಡು ದಿನ ತುಳಸಿಯನ್ನು ಕೀಳುವುದು ಮತ್ತು ಮುಟ್ಟುವುದು ಮಾಡಿದರೆ ಅಶುಭವೆಂದು ಹೇಳುತ್ತಾರೆ.

ತುಳಸಿಯನ್ನು ನಾವು ಮನೆಯಲ್ಲಿ ನೆಡುವಾಗ ಈ ಮೇಲಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನೆಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಸಮ ಸಂಖ್ಯೆಯಲ್ಲಿ ತುಳಸಿ ಗಿಡವಿದ್ದರೆ ಯಾವೂದಾದರು ಒಂದನ್ನು ಬೇರೆಯವರಿಗೆ ದಾನ ಮಾಡಿ. ಇದರಿಂದ ಯಾವೂದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Continue Reading

LATEST NEWS

ಕೂಲಿ ಕೆಲಸಕ್ಕಿಳಿದ ಪದ್ಮಶ್ರೀ ಪುರಸ್ಕೃತ!

Published

on

ಹೈದರಾಬಾದ್ : ‘ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಎಂಬಂತೆ ಅನೇಕ ಕಲಾವಿದರು ಕಲಾಪೋಷಣೆಯಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ಕಲಾವಿದರಲ್ಲಿ ಕೆಲವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಕೆಲಸಗಳೂ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಎಲೆ ಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿಯೇನೋ ಸಿಗುತ್ತದೆ. ಒಂದಷ್ಟು ಜನ ಮನ್ನಣೆಯೂ ಸಿಗುತ್ತದೆ. ಆದರೆ, ಬದುಕು? ಹಾಗೇ  ಉಳಿದಿರುತ್ತೆ. ಅದಕ್ಕೆ ಸಾಕ್ಷಿ ಈ ಸಾಧಕ.

ಹೌದು, ಇವರು ಎರಡು ವರ್ಷಗಳ ಹಿಂದೆಯಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಆದ್ರೆ, ಈಗ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಂಗೀತ ಸಾಧಕ ತೆಲಂಗಾಣದ ಸಾಧಕ ದರ್ಶನಂ ಮೊಗುಳಯ್ಯ. ಅವರು ಕೆಲಸ ಮಾಡುತ್ತಿರುವ ಫೋಟೋ, ವೀಡಿಯೋ ವೈರಲ್ ಆಗಿವೆ.


ದರ್ಶನಂ ಮೊಗುಳಯ್ಯ ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ ಖ್ಯಾತರು, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ಹಿರಿದು. ಹೀಗಾಗಿಯೇ ಕೇಂದ್ರ ಸರ್ಕಾರವು 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ ಅವರು ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದಾದ ಬಳಿಕ ದರ್ಶನಂ ಮೊಗುಳಯ್ಯ ಅವರನ್ನು ಇಡೀ ದೇಶವೇ ಮೆಚ್ಚಿಕೊಂಡಿತ್ತು. ‘ವ್ಹಾ’ ಎಂದಿತ್ತು. ಆದರೆ, ಈಗಿನ ಪರಿಸ್ಥಿತಿ ಕೇಳಿದ್ರೆ ‘ಅಯ್ಯೋ’ ಎನ್ನುವಂತಿದೆ.

ಕೂಲಿ ಕೆಲಸ ಮಾಡ್ತಿದ್ದಾರೆ ಪದ್ಮಶ್ರೀ ಪುರಸ್ಕೃತ :


ದರ್ಶನಂ ಮೊಗುಳಯ್ಯ ತಮ್ಮ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಈಗ ತಮ್ಮ 73ನೇ ವಯಸ್ಸಿನಲ್ಲಿ ಹೈದರಾಬಾದ್ ಬಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕುಟುಂಬಕ್ಕೆ ಇವರೇ ಆಧಾರ ಸ್ತಂಭ. ಹಾಗಾಗಿ ಮೂರು ಹೊತ್ತಿನ ಊಟಕ್ಕಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇವರ ದುಸ್ಥಿತಿ ಕಂಡು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

ಒಂದು ಕೋಟಿ ರೂ. ಎಲ್ಲಿ ಹೋಯ್ತು ?

ದರ್ಶನಂ ಮೊಗುಳಯ್ಯ ಸಾಧನೆಗೆ ಸರ್ಕಾರವೇನೋ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಅವರಿಗೆ ಒಂದು ಕೋಟಿ ರೂ. ಪ್ರೋತ್ಸಾಹ ಧನವನ್ನೂ ನೀಡಿತ್ತು. ಅಂದಿನ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಒಂದು ನಿವೇಶನವನ್ನೂ ಮಂಜೂರು ಮಾಡಿದ್ದರು.

ಆದರೆ, ಸರ್ಕಾರ ಕೊಟ್ಟ ಪ್ರೋತ್ಸಾಹಧನದಲ್ಲಿ ಒಂದಷ್ಟು ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಅವರು, ಉಳಿದ ಹಣವನ್ನು ಸಾಲ ತೀರಿಸಲು, ಕುಟುಂಬದ ತುರ್ತು ಸಂದರ್ಭಗಳಿಗೆ ಬಳಸಿದ್ದಾರಂತೆ. ಹಾಗಾಗಿ, ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

Continue Reading

LATEST NEWS

Trending