FILM
ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ
ಮಂಜು ಪಾವಗಡ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಂಜು ಪಾವಗಡ ಚಿರಪರಿಚಿತ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಬಿಗ್‌ಬಾಸ್ ಮೂಲಕ ಎಲ್ಲರ ಮನೆಮಾತಾಗಿರೋ ನಟ ಮಂಜು ಪಾವಗಡ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೌದು, ಬಿಗ್‌ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಹಾಸ್ಯ ನಟ ಮಂಜು ಪಾವಗಡ ಸದ್ಯ ಜಂಟಿಯಾಗಿದ್ದಾರೆ. ಸದ್ಯ ಪಾವಗಡದಲ್ಲಿ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ನವೆಂಬರ್ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಮಂಜು ಪಾವಗಡ ಅವರು ಕೈ ಹಿಡಿದ ಹುಡುಗಿ ಯಾರು ಅಂತ ಮಾಹಿತಿ ಸಿಕ್ಕಿಲ್ಲ. ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳು ನ್ಯೂಸ್ ಫಸ್ಟ್ಗೆ ಲಭ್ಯವಾಗಿವೆ.
ಇನ್ನು, ಮೊನ್ನೆಯಷ್ಟೇ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿಯೇ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದರು. ಹೊಸ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು ಮಂಜು ಪಾವಗಡ ಅವರ ಹೊಸ ಮನೆಗೆ ನಟ ರಾಜೀವ್, ಅಂಕಿತಾ ಜಯರಾಮ್ ಸೇರಿದಂತೆ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದರು.
FILM
ಹಸೆಮಣೆ ಏರಲು ಸಜ್ಜಾದ ‘ಲಕ್ಷ್ಮೀ ಬಾರಮ್ಮ’ ನಟಿ
ಮಂಗಳೂರು/ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ‘ಲಕ್ಷ್ಮೀ ಬಾರಮ್ಮ’ ಕೂಡ ಒಂದು. ಈ ಧಾರಾವಾಹಿ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿಯ ಪಾತ್ರಗಳೂ ಜನರಿಗೆ ಇಷ್ಟವಾಗಿವೆ.
ಧಾರಾವಾಹಿಯ ನಾಯಕನ ತಂಗಿ ಪಾತ್ರವೇ ‘ವಿಧಿ’. ಅತ್ತಿಗೆ ಎಂದರೆ ಸಾಕು ಸಿಡಿಮಿಡಿಗೊಳ್ಳುವ ಪಾತ್ರ.
ತಾನೂ ಫ್ಯಾಷನ್ ಆಗಿದ್ದೀನಿ ಅತ್ತಿಗೆ ಟ್ರೆಡೀಷನಲ್ ಆಗಿದ್ದಾಳೆ ಎಂದು ಸದಾ ಸಿಡಿಮಿಡಿಗೊಳ್ಳುವ ನಾದಿನಿಯಾಗಿ ವಿಧಿ ಕಾಣಿಸಿಕೊಂಡಿದ್ದಾಳೆ. ಈ ಪಾತ್ರದ ಮೂಲಕ ತನ್ನ ಉತ್ತಮ ಅಭಿನಯದ ಮೂಲಕ ಜನಪ್ರಿಯರಾಗಿರೋರು ಲಾವಣ್ಯ ಹಿರೇಮಠ್. ಸದ್ಯ ಇವರು ಮದುವೆಗೆ ಸಜ್ಜಾಗಿದೆ.
ಭಾವಿ ಪತಿಯೊಂದಿಗೆ ಫೋಸ್ :
ಲಾವಣ್ಯ ಹಿರೇಮಠ್ ಇತ್ತೀಚೆಗೆ ತಮ್ಮ ಮದುವೆ ವಿಚಾರ ಹೊರಹಾಕಿದ್ದಾರೆ. ಭಾವಿ ಪತಿ ಜೊತೆಗೆ ರೊಮ್ಯಾಂಟಿಕ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ. ಅದರ ಜೊತೆಗೆ ಮದುವೆಯಾಗುವ ಹುಡುಗ ಯಾರೆಂದು ಟ್ಯಾಗ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ : ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್ ಕುಮಾರಸ್ವಾಮಿ
ನಟಿ ಕಮ್ ಡೆಂಟಿಸ್ಟ್ ಆಗಿರುವ ಲಾವಣ್ಯ ಮದುವೆಯಾಗುತ್ತಿರುವ ಹುಡುಗನ ಹೆಸರು ಅಕ್ಷಯ್ ಆಚಾರ್ಯ. ಅವರು ಕೂಡ ಡೆಂಟಿಸ್ಟ್ ಅನ್ನೋದು ವಿಶೇಷ. ಅಂದ್ಹಾಗೆ ನವೆಂಬರ್ 11ರಂದು ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಲಾವಣ್ಯ ಹಸೆಮಣೆ ಏರಲಿದ್ದಾರೆ. ಈ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿರುವ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
FILM
ದೀಪಾವಳಿ ಹಬ್ಬದಂದೇ ಮಗಳಿಗೆ ನಾಮಕರಣ ಮಾಡಿದ ರಣವೀರ್-ದೀಪಿಕಾ!
ಬೆಳಕಿನ ಹಬ್ಬ ದೀಪಾವಳಿ ದಿನ ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವಳ ಸುಂದರವಾದ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.
ದಂಪತಿ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ದಂಪತಿಗಳು ತಮ್ಮ ಸಂತೋಷ ಮತ್ತು ಕೃತಜ್ಞತೆಯನ್ನು Instagram ನಲ್ಲಿ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ದಂಪತಿ, “ದುವಾ ಪಡುಕೋಣೆ ಸಿಂಗ್ ಒಂದು ಪ್ರಾರ್ಥನೆ ಎಂದರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದ್ದಾಳೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ. ದೀಪಿಕಾ ಮತ್ತು ರಣವೀರ್,” ಎಂದು ಅವರು ಬರೆದಿದ್ದಾರೆ. ಈಗ ತಮ್ಮ ಹೆಣ್ಣು ಮಗುವಿನ ಪಾದಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ, ಮಗಳಿಗೆ ಎಥ್ನಿಕ್ ವೇರ್ ಡ್ರೆಸ್ ಹಾಕಿದ್ದರು.
ಸೆಪ್ಟೆಂಬರ್ 8 ರಂದು ಜನಿಸಿದ ಮಗುವಿನ ಮೊದಲ ಫೋಟೋ ಇದಾಗಿದೆ. ದೀಪಿಕಾ ಅವರ ಪೋಸ್ಟ್ ರಾಹಾ ಅವರ ತಾಯಿ ಆಲಿಯಾ ಭಟ್ ಅವರ ಗಮನವನ್ನು ಸೆಳೆಯಿತು , ಅವರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಹಾರ್ಟ್ ಹಾಕಿದ್ದಾರೆ. ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು “ಕ್ಯೂಟೆಸ್ಟ್” ಎಂದು ಕಾಮೆಂಟ್ ಮಾಡಿದ್ದಾರೆ.
2018 ರಲ್ಲಿ ವಿವಾಹವಾದ ದಂಪತಿಗಳು ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.ಮಗುವಿನ ಜನನದ ನಂತರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮೊದಲ ಚಿತ್ರ ಕೂಡ ಇಂದು ಬಿಡುಗಡೆಯಾಗಿದೆ. ರೋಹಿತ್ ಶೆಟ್ಟಿಯವರ ಬಹು ತಾರಾಗಣದ ಪೋಲೀಸ್ ನಾಟಕ ಸಿಂಘಂ ಎಗೇನ್‌ನಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಇದು ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್‌ನಲ್ಲಿ ದೀಪಿಕಾ ಅವರ ಚೊಚ್ಚಲ ಪ್ರವೇಶವಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್, ಅರ್ಜುನ್ ಕಪೂರ್ , ಅಕ್ಷಯ್ ಕುಮಾರ್ , ಕರೀನಾ ಕಪೂರ್ ಮತ್ತು ಟೈಗರ್ ಶ್ರಾಫ್ ಕೂಡ ನಟಿಸಿದ್ದಾರೆ.
FILM
ಕಾರು ಅಪಘಾ*ತದಲ್ಲಿ ಖ್ಯಾತ ಕಿರುತೆರೆ ನಟನ ಮಗ ಸಾ*ವು
ಮಂಗಳೂರು/ಚೆನ್ನೈ : ದೀಪಾವಳಿ ಹಬ್ಬ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಚೆನ್ನೈನ ಖ್ಯಾತ ಕಿರುತೆರೆ ನಟ ಕಾರ್ತಿಕ್ ಲಿತಿಶ್ ಕಾರು ಅಪಘಾ*ತದಲ್ಲಿ ಸಾ*ವನ್ನಪ್ಪಿದ್ದಾರೆ. ಅಪಘಾ*ತದಲ್ಲಿ ಇನ್ನಿಬ್ಬರು ಗಾ*ಯಗೊಂಡಿದ್ದಾರೆ.
ಲಿತಿಶ್ ದೀಪಾವಳಿ ಆಚರಣೆ ಮುಗಿಸಿ, ಸ್ನೇಹಿತರಾದ ಜಯಕೃಷ್ಣನ್ ಮತ್ತು ವೆಂಕಟ್ ಜೊತೆ ಕಾರಿನಲ್ಲಿ ಹಳೆ ಮಹಾಬಲಿಪುರಂ ರಸ್ತೆಯಲ್ಲಿರುವ ಆಟದ ಮೈದಾನಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ವೇಳಚೇರಿ – ತರಮಣಿ 100 ಅಡಿ ರಸ್ತೆಯ ವಿಜಯನಗರ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿ*ಕ್ಕಿ ಹೊಡೆದಿದೆ.
ಇದನ್ನೂ ಓದಿ : BBK11 : ಬಿಗ್‌ಬಾಸ್ ವೇದಿಕೆಯಲ್ಲಿ ತಾಯಿಯನ್ನು ನೆನೆದು ಕಣ್ಣಿರಿಟ್ಟ ಕಿಚ್ಚ
ಈ ಅಪಘಾ*ತದಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದ ಲಿತಿಶ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಜಯಕೃಷ್ಣನ್ ಮತ್ತು ವೆಂಕಟ್ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾ*ಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಲಿತಿಶ್ ಮೃತದೇಹವನ್ನು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- LATEST NEWS6 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- BIG BOSS7 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- LATEST NEWS6 days ago
ರೀಲ್ಸ್ ರಾಣಿ ಪತಿ ಕೊ*ಲೆಯಲ್ಲಿ ಮತ್ತೊಂದು ಟ್ವಿಸ್ಟ್ : ಪ್ರತಿಮಾ ಬಳಸಿದ್ದ ವಿಷ ಯಾವುದು ಗೊತ್ತಾ ?
- BIG BOSS7 days ago
BBK 11 : ಹನುಮಂತನ ನಿಜಬಣ್ಣ ಬಯಲು ಮಾಡಿದ ಭಟ್ರು !!