Connect with us

    LATEST NEWS

    ಹಿಜಾಬ್‌ ಬೆಂಬಲಿಸಿ ಗಲ್ಫ್‌ನಲ್ಲೂ ಆರಂಭವಾಗಿದೆ ಪ್ರತಿಭಟನೆಗಳು

    Published

    on

    ಕುವೈಟ್‌: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದದ ಮಧ್ಯೆ, ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಕುವೈಟ್‌ನಲ್ಲಿರುವ ಭಾರತೀಯ ದೂತವಾಸದ ಮುಂದೆ ಕುವೈಟ್‌ನ ನಾಗರಿಕರು ಪ್ರತಿಭಟಿಸಿದ್ದಾರೆ.


    ಇಸ್ಲಾಮಿಕ್‌ ಕಾನ್ಸ್ಟಿಟ್ಯೂಟ್‌ ಮೂವ್‌ಮೆಂಟ್‌ ಅದರ ಮಹಿಳಾ ಘಟಕದ ಪರವಾಗಿ ಇಂದು ನಡೆದ ಪ್ರತಿಭಟನೆಯಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವಿವಿಧ ರೀತಿಯ ಭಿತ್ತಿಚಿತ್ರವನ್ನು ಹಿಡಿದು ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಯನ್ನು ಖಂಡಿಸಿದರು.


    ಗಲ್ಫ್‌ ದೇಶದ ಹಲವು ನಾಗರೀಕರು ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಜೊತೆಗೆ ಗಲ್ಫ್‌ ರಾಷ್ಟ್ರಗಳಾದ ಯುಎಇ, ಕತ್ತಾರ್‌, ಸೇರಿದಂತೆ ಹಲವು ಗಲ್ಫ್‌ ದೇಶಗಳು ಖಂಡಿಸಿವೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್‌ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ.

    FILM

    ದುನಿಯಾ ವಿಜಯ್ ಡಿವೋರ್ಸ್ ಅರ್ಜಿ ವಜಾ..!

    Published

    on

    ಬೆಂಗಳೂರು/ಮಂಗಳೂರು: ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಹಾಗೂ ನಾಗರತ್ನಿ ದಂಪತಿ ಮಧ್ಯೆ ಬಿರುಕು ಕಂಡಿದ್ದು, ವರ್ಷಗಳ ಹಿಂದೆಯೇ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. 2018ರಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು ಇದೀಗ ಫ್ಯಾಮಿಲಿ ಕೋರ್ಟ್ ಅರ್ಜಿ ವಜಾಗೊಂಡಿದೆ.

    ನಟ ದುನಿಯಾ ವಿಜಯ್‌ಗೆ ನಾಗರತ್ನರವರೊಂದಿಗೆ ಬಾಳ್ವೆ ಮಾಡಲು ಇಷ್ಟವಿಲ್ಲದೇ ಇದ್ದು ವಿಚ್ಚೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಾಗರತ್ನ ಮಾತ್ರ ನನಗೆ ಗಂಡ ಬೇಕು ಎಂದು ಪಟ್ಟು ಹಿಡಿದ್ದಿದ್ದರು.  ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಹಲವು ವರ್ಷಗಳ ಹಿಂದೆಯೇ ಬಿರುಕು ಮೂಡಿತ್ತು. ಹಾಗಾಗಿ 2018ರಲ್ಲಿ ವಿಜಯ್ ಅವರು ಡಿವೋರ್ಸ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದ್ದರು. ಅಲ್ಲದೇ ಪತ್ನಿಗೆ ಜೀವನಾಂಶವನ್ನು ನೀಡುವುದಾಗಿಯೂ ಹೇಳಿದ್ದರು. ಆದರೆ ಪತ್ನಿ ನಾಗರತ್ನಿ ಪತಿಯನ್ನು ಬಿಡಲು ಸಿದ್ಧರಿರಲಿಲ್ಲ. ಹಾಗಾಗಿ ಪ್ರಕರಣ ಮುಂದೂಡುತ್ತಾ ಬಂದಿದೆ.

    Read More..; ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ನಿರ್ಮಾಪಕರಿಂದ ಹಗರಣ..! ನೋಟೀಸ್ ಜಾರಿ..!!

    ಜೂ.13ರಂದು ದುನಿಯಾ ವಿಜಯ್​ ಮತ್ತು ನಾಗರತ್ನ ಅವರು ವಿಚ್ಛೇನದ ಅಂತಿಮ ತೀರ್ಪು ಹೊರಬರಲಿದೆ ಎಂಬ ಕಾರಣಕ್ಕೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಕೌಟುಂಬಿಕ ನ್ಯಾಯಾಲಯವು ವಿಜಯ್​ಗೆ ವಿಚ್ಛೇನದ ನೀಡಿಲ್ಲ. ನಟನಾಗಿ, ನಿರ್ದೇಶಕನಾಗಿ ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಟಾಲಿವುಡ್​ನಲ್ಲೂ ಅವರಿಗೆ ಬೇಡಿಕೆ ಇದೆ.

    Continue Reading

    LATEST NEWS

    ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

    Published

    on

    ಮುಂಬೈ: ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಅವರು ಬಹಳ ಆಸಕ್ತಿಯಿಂದ ಐಸ್​ಕ್ರೀಂ ತೆಗೆದು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಆ ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಮೊದಲು ವಾಲ್ನಟ್​ ಎಂದುಕೊಂಡೆವು. ಬಳಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಬೆರಳು ಎಂಬುದು ಅರಿವಾಗಿದೆ ಎಂದಿದ್ದಾರೆ. ನಾನು ಮೂರು ಐಸ್​ಕ್ರೀಂಗಳನ್ನು ಆರ್ಡರ್​ ಮಾಡಿದ್ದೆ, ನಾನು ಬಟರ್​ಸ್ಕಾಚ್​ ಐಸ್​ ಕ್ರೀಮ್ ತಿನ್ನುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಲ್ಲಿಗೇನೋ ತಾಗಿದಂತಾಯಿತು. ನಾನು ವಾಲ್ನಟ್ ಅಥವಾ ಚಾಕೊಲೇಟ್​ ಇರಬೇಕು ಎಂದುಕೊಂಡೆ, ಬಳಿಕ ಉಗುಳಿದಾಗ ಅದು ವಾಲ್ನಟ್ ಆಗಿರಲಿಲ್ಲ, ಮನುಷ್ಯನ ಬೆರಳಾಗಿದ್ದು, ಅದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡೆ. ನಾನು ವೈದ್ಯನಾಗಿರುವ ಕಾರಣ ಇದು ಹೆಬ್ಬರಳಿನ ಭಾಗ ಎಂಬುದು ನಾನು ಅರ್ಥಮಾಡಿಕೊಂಡೆ ಅದರಲ್ಲಿ ಉಗುರು ಕೂಡ ಇದೆ ಎಂದರು. ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ವೈದ್ಯೆ ಹೇಳಿದ್ದಾರೆ.

    ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ, ಐಸ್​​ಕ್ರೀಂ ಬ್ರ್ಯಾಂಡ್​ ವಿರುದ್ಧ ಕಲಬೆರಕೆ ಮತ್ತು ಜನರ ಜೀವಕ್ಕೆ ಅಪಾಯ ತಂದಿರುವ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಐಸ್​ಕ್ರೀಂನಲ್ಲಿ ಬೆರಳು ಎಲ್ಲಿಂದ ಬಂತು ಎಂಬುದನ್ನೂ ಪತ್ತೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. Yummo ಐಸ್ ಕ್ರೀಮ್ ಒಂದು ಹೆಸರಾಂತ ಬ್ರ್ಯಾಂಡ್ ಎಂದು ಹೇಳಲಾಗುತ್ತಿದೆ. ಈಗ ಪೊಲೀಸರು ಮುಂದಿನ ಕ್ರಮ ಏನು ಎಂಬುದು ವರದಿ ಬಂದ ನಂತರವೇ ತಿಳಿದುಬರಲಿದೆ.

    Continue Reading

    LATEST NEWS

    ಇನ್ಮುಂದೆ ತಿರುಮಲ ಬೆಟ್ಟದಲ್ಲಿ ‘ಗೋವಿಂದ..ಗೋವಿಂದ’ ಘೋಷ ಮಾತ್ರ ಮೊಳಗಬೇಕು-ಸಿಎಂ ನಾಯ್ಡು

    Published

    on

    ಆಂಧ್ರಪ್ರದೇಶ/ಮಂಗಳೂರು: ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ತೆರಳಿ ದೇವರ ದರ್ಶನ ಪಡೆದಿದ್ದಾರೆ.

    ತಿರುಮಲ ಒಂದು ಪವಿತ್ರ ದೇವಸ್ಥಾನವಾಗಿದ್ದು ಇಲ್ಲಿನ ಪಾವಿತ್ರ್ಯತೆ ಕಾಪಾಡಬೇಕಾಗಿದೆ. ಹಾಗಾಗಿ ಇನ್ಮುಂದೆ ದೇವಸ್ಥಾನದಲ್ಲಿ ‘ಏಕಕುಂಡಲವಾಡ ಸ್ವಾಮಿ ಗೋವಿಂದ.. ಗೋವಿಂದ ‘ ಎಂಬ ಘೋಷ ಮಾತ್ರ ಮೊಳಗಬೇಕು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

    Read More.; ಮೊಣಕಾಲಿನಲ್ಲಿ ತಿರುಮಲ ಬೆಟ್ಟ ಏರಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್..!!

    ಅವರು ತಿರುಮಲ ಬೆಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಇನ್ನು ಮುಂದೆ ಬೆಟ್ಟದಲ್ಲಿ ರಾಜಕೀಯ ಹೇಳಿಕೆಗಳು, ಘೋಷಣೆಗಳು ಕೇಳಬಾರದು. ಕೇವಲ ‘ಗೋವಿಂದ.. ಗೋವಿಂದ’ ಎಂಬ ಘೋಷ ಮಾತ್ರ ಕೇಳಿಬರಬೇಕು. ಇದು ಹಿಂದೂಗಳ ಪವಿತ್ರ ದೇವಸ್ಥಾವಾಗಿದ್ದು ಇಲ್ಲಿನ ಪಾವಿತ್ರ್ಯತೆಯನ್ನು ನಾವು ಕಾಪಾಡಬೇಕು. ಇಲ್ಲಿಗೆ ಬರುವ ಭಕ್ತರಿಗೆ ದೇವರ ದರ್ಶನ ಹಾಗೂ ಶಾಂತಿಯುವಾದ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

    ಕಳೆದ ಐದು ವರ್ಷಗಳಲ್ಲಿ ಪವಿತ್ರ ದೇವಾಲಯದ ಪಾವಿತ್ರ್ಯತೆ ಹಾಳಾಗಿದೆ, ಶಕ್ತಿಶಾಲಿಗಳ ಮನೆ ಬಾಗಿಲಿಗೆ ದೇವರನ್ನು ಕೊಂಡೊಯ್ಯುವುದನ್ನು ಎಂದಾದರೂ ನೀವು ಕೇಳಿದ್ದೀರಾ. ಇಲ್ಲಿ ಡ್ರಗ್ಸ್​, ಮದ್ಯ ಮಾಂಸ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು, ಕಳೆದ ಐದು ವರ್ಷಗಳಲ್ಲಿ ಬೆಟ್ಟದಲ್ಲಿ ಆಹಾರದ ಗುಣಮಟ್ಟವೂ ಹದಗೆಟ್ಟಿದೆ, ತಿರುಮಲ ಬೆಟ್ಟದಲ್ಲಿ ಗೋವಿಂದ ಗೋವಿಂದ ಘೋಷ ಕೇಳಬೇಕೇ ಹೊರತು ರಾಜಕೀಯ ಘೋಷಣೆಗಳಲ್ಲ ಎಂದು ಹೇಳಿದ್ದಾರೆ.

    Continue Reading

    LATEST NEWS

    Trending