Sunday, August 9, 2020

ಅಕ್ರಮ ಕಸಾಯಿಖಾನೆ ಹಾಗೂ ದನದ ಮಾಂಸ ಮಾರಾಟದ ಅಂಗಡಿಗೆ ಧಾಳಿ ಮಾಡಿದ ಕಡಬ ಪೊಲೀಸ್

Array

ಆಂಧ್ರ ಪ್ರದೇಶದಲ್ಲಿ ಕೋವಿಡ್ ಕೇರ್ ಹೊಟೇಲ್ ನಲ್ಲಿ ಅಗ್ನಿ ಅವಘಡ, 7 ಮಂದಿ ಸಜೀವ ದಹನ..!

ಆಂಧ್ರ ಪ್ರದೇಶದಲ್ಲಿ ಕೋವಿಡ್ ಕೇರ್ ಹೊಟೇಲ್ ನಲ್ಲಿ ಅಗ್ನಿ ಅವಘಡ, 7 ಮಂದಿ ಸಜೀವ ದಹನ..! ವಿಜಯವಾಡ : ದೇಶದಲ್ಲಿ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ಇಂದು ಬೆಳಗ್ಗಿನ ಜಾವಾ ಭೀಕರ...

ಹಿರಿಯ ಪತ್ರಕರ್ತ ಅಮ್ಮುಂಜ ನಾರಾಯಣ ನಾಯ್ಕ ಹೃದಯಾಘಾತಕ್ಕೆ ಬಲಿ..!

ಹಿರಿಯ ಪತ್ರಕರ್ತ ಅಮ್ಮುಂಜ ನಾರಾಯಣ ನಾಯ್ಕ ಹೃದಯಾಘಾತಕ್ಕೆ ಬಲಿ..! ಪುತ್ತೂರು : ಹಿರಿಯ ಪತ್ರಕರ್ತ ಅಮ್ಮುಂಜೆ ನಿವಾಸಿ ನಾರಾಯಣ ನಾಯ್ಕ (48ವ.) ಅವರು ಇಂದು ಮುಂಜಾನೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ನಾರಾಯಣ ಅವರು...

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ : ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಡಿಸಿ ಸೂಚನೆ..!

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ : ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಡಿಸಿ ಸೂಚನೆ..! ಮಂಗಳೂರು : ರಾಜ್ಯದ ಕರಾವಳಿ ಪ್ರದೇಶದಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಗಾಳಿ-ಮಳೆ ಬೀಳುವ ಸಾಧ್ಯತೆ...

ಕೃಷ್ಣ ನಗರಿಯಲ್ಲಿ ಕೊರೊನಾ ಮಹಾಸ್ಪೋಟ; 314 ಮಂದಿ ಪಾಸಿಟಿವ್-5 ಬಲಿ..!

ಕೃಷ್ಣ ನಗರಿಯಲ್ಲಿ ಕೊರೊನಾ ಮಹಾಸ್ಪೋಟ; 314 ಮಂದಿ ಪಾಸಿಟಿವ್-5 ಬಲಿ..! ಉಡುಪಿ : ಕೃಷ್ಣ ನಗರಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 300ಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುವ ಮೂಲಕ ಮಹಾ ಸ್ಪೋಟವಾಗಿದೆ....

ಮಳೆಗೆ ಗೋಶಾಲೆ ಮೇಲೆ ಕುಸಿದು ಬಿದ್ದ 30 ಲಕ್ಷ ವೆಚ್ಚದ ತಡೆಗೊಡೆ

ಪುತ್ತೂರು : ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ತಡೆಗೊಡೆಯೊಂದು ಕುಸಿದು ಬಿದ್ದಿದೆ. ಪುತ್ತೂರಿನ ಮುಂಡೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ವ್ಯಕ್ತಿಯೊಬ್ಬರು ಸುಮಾರು 30 ಲಕ್ಷ...

ಅಕ್ರಮ ಕಸಾಯಿಖಾನೆ ಹಾಗೂ ದನದ ಮಾಂಸ ಮಾರಾಟದ ಅಂಗಡಿಗೆ ಧಾಳಿ ಮಾಡಿದ ಕಡಬ ಪೊಲೀಸ್

ಕಡಬ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಿ ದನದ ಮಾಂಸ ಮಾರಾಟ ಮಾಡುತ್ತಿರುವುದು ಮತ್ತು

ಆತೂರು ಡಿಲೈಟ್ ಚಿಕನ್ ಸೆಂಟರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಡಬ ಪೋಲಿಸರು ಮಾಂಸವನ್ನು ವಶಪಡಿಸಿಕೊಂಡು ಓರ್ವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಓರ್ವ ಪರಾರಿಯಾಗಿದ್ದಾನೆ. ಎರಡು ಪ್ರಕರಣದಲ್ಲಿ 23 ಕೆಜಿ ಮಾಂಸ ವಶಪಡಿಸಿಕೊಂಡ ಪೋಲಿಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್ ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಕಡಬ ಪೋಲಿಸರು,

ಚಿಕನ್ ಸೆಂಟರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಮಾಲಕ ರಾಮಕುಂಜ ನಿವಾಸಿ ಮಹಮ್ಮದ್ ಎಂಬವರನ್ನು ವಶಕ್ಕೆ ಪಡೆದು, ಪ್ರಿಜ್ಜಲ್ಲಿರಿಸಿದ 9 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್ ಗೆ ಮಾಂಸ ಮಾರಾಟ ಮಾಡುತ್ತಿದ್ದ ನೀರಾಜೆ ಎಂಬಲ್ಲಿರುವ ಸಿರಾಜ್ ಎಂಬಾತನ ಮನೆಗೆ ದಾಳಿ ನಡೆಸಿದ ಪೋಲಿಸರು,

ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 14 ಕೆ.ಜಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ಈ ಸಂದರ್ಭದಲ್ಲಿ ಆರೋಪಿ ಸಿರಾಜ್ ಪರಾರಿಯಾಗಿದ್ದಾರೆ.

ಈ ಬಗ್ಗೆ ಸಿರಾಜ್ ವಿರುದ್ದ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಕಡಬ ಎಸ್.ಐ.ರುಕ್ಮಯ್ಯ ನಾಯ್ಕ್, ಸಿಬ್ಬಂದಿಗಳಾದ ಭವಿತ್ ರೈ, ಶ್ರೀಶೈಲ, ಮಹೇಶ್, ಸೋಮಯ್ಯ ಭಾಗವಹಿಸಿದ್ದರು.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.