Connect with us

DAKSHINA KANNADA

Kadaba: ಸುಳ್ಯ ಕ್ಷೇತ್ರದ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಮಾರಾಮಾರಿ

Published

on

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಮತ್ತೆ ಸ್ಪೋಟಗೊಂಡು, ಬಡಿದಾಟ ಮಾರಾಮಾರಿ ನಡೆದಿದೆ.

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಮತ್ತೆ ಸ್ಪೋಟಗೊಂಡು, ಬಡಿದಾಟ ಮಾರಾಮಾರಿ ನಡೆದಿದೆ.

ಶುಕ್ರವಾರದಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಾಯಕರ ಕಾರ್ಯಕರ್ತರ ವಾಕ್ಸಮರ, ಕೈ, ಕೈ ಮಿಲಾಯಿಸಿಕೊಳ್ಳವ ರಣರಂಗಕ್ಕೆ ವೇದಿಕೆಯಾಯಿತು.

ರಾಜ್ಯದಲ್ಲಿ ಕಾಂಗ್ರೇಸ್ ಅಭೂತಪೂರ್ವ ಗೆಲವು ಸಾಧಿಸಿದರೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಹೀನಾಯ ಸೋಲು ಅರಗಿಸಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷ ಒದ್ದಾಡುತ್ತಿರುವಾಗ ಎರಡು ಬಣಗಳ ಮಧ್ಯೆ ಉಂಟಾದ ಬಹಿರಂಗ ಗುದ್ದಾಟ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಸೋಲಿನ ಪರಾಮರ್ಶೆ ಅವಲೋಕನ ಮಾಡಲು ಆಗಮಿಸಿದ ಕಾಂಗ್ರೆಸ್ ನಾಯಕರು ಬಣ ರಾಜಕೀಯದ ಒಳಬೇಗುದಿ ಹೊರಹಾಕಿದ್ದಾರೆ. ಕಾಂಗ್ರೆಸ್ ಉಸ್ತುವಾರಿಯಾಗಿದ್ದ ನಂದಕುಮಾರ್ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೇಟ್ ಪಡೆದು ಸ್ಪರ್ಧಿಸುವ ಆಕಾಂಕ್ಷೆ ಇಟ್ಟುಕೊಂಡಿದ್ದರು, ಇದರ ಪೂರ್ವಬಾವಿ ಎಂಬಂತೆ ಕ್ಷೇತ್ರದಾದ್ಯಂತ ಓಡಾಡುತ್ತಾ ಹಣ ಖರ್ಚ ಮಾಡಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಒಡನಾಟ ಸಂಪಾದಿಸಿದ್ದರು.

ಕೃಷ್ಣ ಅವರು ಕೂಡಾ ಉಸ್ತುವಾರಿಯಾಗುದ್ದುಕೊಂಡು ತನ್ನದೇ ರೀತಿಯಲ್ಲಿ ಕ್ಷೇತ್ರದಲ್ಲಿ ಓಡಾಟ ನಡೆಸಿಕೊಂಡು ಮಿಂಚುತ್ತಿದ್ದರು.

ಕೊನೆಗಳಿಗೆಯಲ್ಲಿ ಕೃಷ್ಣಪ್ಪ ಅವರಿಗೆ ಟಿಕೇಟು ಗೋಷಣೆಯಾದ ಬಳಿಕ ನಂದಕುಮಾರ್ ಅಭಿಮಾನಿಗಳು ತಮ್ಮದೇ ತಂಡ ಕಟ್ಟಿಕೊಂಡು ಕೃಷ್ಣಪ್ಪ ಅವರ ಬದಲಿಗೆ ನಂದಕುಮಾರ್ ಅವರಿಗೆ ಬಿಫಾರಂ ನೀಡುವಂತೆ ನಾನಾ ರೀತಿಯ ಒತ್ತಡ ಹಾಕಿದ್ದರೂ ಕೃಷ್ಣಪ್ಪ ಅವರೇ ಅಭ್ಯರ್ಥಿಯಾಗಿ ಉಳಿದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ಪಕ್ಷದ ಮುಖಂಡರು ಎರಡೂ ಬಣಗಳನ್ನು ಸೇರಿಸಿ ತೇಪೆ ಹಚ್ಚುವ ಕಾರ್ಯ ಮಾಡಿದರೂ ಮುಖಂಡರು ತಿರುಗಿ ಹೋದ ಬಳಿಕ ತೇಪೆ ಹರಿದು ಹಂಚಿ ಹೋಗಿತ್ತು.

ಕೆಲವು ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದರೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ದುಡಿದು ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾದರು.

ಬಳಿಕ ನಡೆದು ಬೆಳವಣಿಗೆಯಲ್ಲಿ ಕೆಲವು ನಾಯಕರಿಗೆ ಪಕ್ಷ ವಿರೋಧಿ ಚಟುವಟಿಕೆಯ ಪಟ್ಟ ಕಟ್ಟಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಉಚ್ಚಾಟಿತರು ಇದರಿಂದ ಕೆಂಡಾಮಂಡಲಾಗಿದ್ದರು. ಕೆಲವರು ಪತ್ರಿಕಾ ಹೇಳಿಕೆ ನೀಡಿ ಅಕ್ರೋಶ ವ್ಯಕ್ತಪಡಿಸಿದ್ದರೆ.

ಇನ್ನು ಕೆಲವು ನಾಯಕರು ನ್ಯಾಯಕ್ಕಾಗಿ ದೈವದ ಮೊರೆ ಹೋಗಿದ್ದರು.

ಬುಧವಾರ ರಾಹುಲ್ ಗಾಂಧಿಯವ ಅವರ ಸಂಸತ್ ಸದಸ್ಯತನ ಅನರ್ಹತೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಉಚ್ಚಾಟಿತ ನಾಯಕರು ಭಾಗವಹಿಸಿ ತಮ್ಮ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದರು.

ಇದು ಕೃಷ್ಣಪ್ಪ ಬಣದವರ ಪಿತ್ತ ನೆತ್ತಿಗೇರಸಿತ್ತು.

ಇದೇ ಬೇಗುದಿ ಕಡಬದ ಪರಾಮರ್ಶೆ ಸಭೆಯಲ್ಲಿ ಸ್ಪೋಟಗೊಂಡಿದೆ.

ಅಂಬೇಡ್ಕರ್ ಭವನದಲ್ಲಿ ಸಭೆ ಆರಂಭವಾಗಿ ಉಚ್ಚಾಟಿತ ಮುಖಂಡರು ಆಗಮಿಸತ್ತಿದ್ದಂತೆ ಕೃಷ್ಣಪ್ಪ ಅವರ ಬಣದ ಅಕ್ರೋಶಕ್ಕೆ ಕಾರಣವಾಯಿತು.

ಸಭೆ ಮಾತಿನ ಚಕಮುಖಿ ಮೂಲಕವೇ ಪ್ರಾರಂಭವಾಯಿತು.

ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಮುಖಂಡರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಛೇಡಿಸಿದ್ದಾರೆ ಎನ್ನಲಾಗಿದೆ.

ಬಳಿಕ ಮುಖಂಡರೋರ್ವರು ಸಭೆಯಲ್ಲಿ ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಭಾಗವಹಿಸಲು ಅವಕಾಶವಿದೆಯೇ ಎಂದು ಪ್ರಶಸ್ನಿಸಿದರು.

ಅಷ್ಟೇ ಸಾಕಾಯಿತು ಮಾತಿನಚಕಮುಖಿ, ಪರಸ್ಪರ ಹಲ್ಲೆ, ತಳ್ಳಾಟ ನಡೆಯುವ ತನಕ ಮುಟ್ಟಿತು.

ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದೆ.

ಮಾರಾಮಾರಿ ನಡೆದಿರುವ ವಿಡಿಯೋಗಳು ಲಭ್ಯವಾಗಿದೆ.

ನಂದಕುಮಾರ್ ಬಣದ ಸಾಮಾಜಿಕ ಜಾಲತಾಣ ನಿರ್ವಹಣ ಮಾಡಿದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಮಧ್ಯೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಆದರೂ ಇತ್ತಂಡಗಳ ಮಧ್ಯೆ ಅಸಮಾಧಾನ , ಸಿಟ್ಟು ಸೇಡು ಬೂದಿಮುಚ್ಚಿದ ಕೆಂಡದಂತಿದ್ದು ಕೊತಕೊತನೆ ಕುದಿಯುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಈ ಹಿಂದೆ ಕೂಡಾ ಒಮ್ಮೆ ಕಡಬದಲ್ಲಿ ಪಕ್ಷದ ಕಛೇರಿಯಲ್ಲಿಯೇ ಇತ್ತಂಡಗಳ ಮಧ್ಯೆ ವಾಕ್ಸಮರ ನಡೆದು ಕೈಮಿಲಾಯಿಸುವ ಹಂತಕ್ಕೆ ಹೋಗಿತ್ತು ಎಂದು ಕೆಲವು ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ನಿವೃತ್ತ ಶಿಕ್ಷಕ ರಸ್ತೆ ದುರಂತದಲ್ಲಿ ಸಾ*ವು

Published

on

ಪುತ್ತೂರು : ನಿವೃತ್ತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80) ಅವರು ರಸ್ತೆ ಅಪಘಾತಕ್ಕೆ ಬ*ಲಿಯಾಗಿದ್ದಾರೆ. ಪುತ್ತೂರಿನ ಸಂಪ್ಯ ಎಂಬಲ್ಲಿ ಗುರುವಾರ ರಸ್ತೆ ದಾಟುತ್ತಿದ್ದ ವೇಳೆ ಸೂರ್ಯನಾರಾಯಣ ಕಾರಂತ ಅವರಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದಿತ್ತು.

ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಮತ್ತೊಂದು ರಿಕ್ಷಾದಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ. ಸೂರ್ಯನಾರಾಯಣ ಕಾರಂತ ಅವರು ಗಣಿತ ಶಿಕ್ಷಕರಾಗಿ ಪ್ರಸಿದ್ಧರಾಗಿದ್ದರು.

ಇದನ್ನೂ ಓದಿ : ಕಣಗಿಲೆ ಹೂ ತಿಂದು ಇಹಲೋಕ ತ್ಯಜಿಸಿದ ಯುವತಿ!

Continue Reading

DAKSHINA KANNADA

ಅಯ್ಯೋ… ಟೀ ಕುಡಿದರೆ ಕಪ್ಪಗಾಗ್ತಾರಾ?

Published

on

ಮಂಗಳೂರು: ಸಾಮಾನ್ಯವಾಗಿ ಭಾರತ ದೇಶದಲ್ಲಿ ಜಾಸ್ತಿಯಾಗಿ ಟೀ ಕುಡಿಯುತ್ತಾರೆ. ಅದರಲ್ಲೂ ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿದರೆ ಇನ್ನು ಕೆಲವರು ತಿಂಡಿ ತಿನ್ನುವಾಗ ಟೀ ಕುಡಿಯುತ್ತಾರೆ. ಕೆಲವರಿಗೆ ಟೀ ಕುಡಿಯದೇ ಇದ್ದರೆ ತಲೆನೋವು ಶುರುವಾಗಿ ಬಿಡುತ್ತದೆ. ಆದರೆ ಈಗ ಟೀ ಅಲ್ಲೂ ಗ್ರೀನ್ ಟೀ, ಬ್ಲೂ ಟೀ, ಲೆಮನ್ ಟೀ ಹೀಗೆ ವೆರೈಟಿ ವೆರೈಟಿ ಟೀಗಳಿದೆ.
ಆದರೆ ಅನೇಕ ಕಡೆ ವಿಚಿತ್ರ ನಂಬಿಕೆ ಇದೆ. ಟೀ ಕುಡಿದ್ರೆ ಕಪ್ಪಾಗುತ್ತಾರೆ ಎನ್ನುವ ಒಂದು ಸಂಗತಿ. ಹೌದು, ಟೀ ಕುಡಿದರೆ ಕಪ್ಪಾಗುತ್ತೇವೆ ಎಂದು ಅನೇಕರು ಹೇಳುವುದನ್ನು ಕೇಳಿರುತ್ತೇವೆ. ಅಲ್ಲದೇ ಇದೇ ಕಾರಣಕ್ಕೆ ಅದೆಷ್ಟೋ ಜನರು ಟೀ ಅನ್ನು ಕುಡಿಯುವುದಿಲ್ಲ ಎಂದು ಹೇಳಬಹುದು. ಆದರೆ ನಿಜವಾಗಿಯೂ ಟೀ ಕುಡಿದರೆ ಕಪ್ಪಾಗುತ್ತಾರಾ? ಇದು ಸತ್ಯವೇ? ಇದೇ ಪ್ರಶ್ನೆಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ.

ಕೆಲ ಆಹಾರ ಚರ್ಮದ ಮೇಲೆ ಪರಿಣಾಮ ಬೀರುತ್ತದೆ:

ಆನುವಂಶಿಕ ಅಂಶಗಳ ಹೊರತಾಗಿ, ಚರ್ಮದ ಬಣ್ಣವು ನೀವು ಸೂರ್ಯನಲ್ಲಿ ಎಷ್ಟು ಹೊತ್ತು ಇರುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ತಿನ್ನುವುದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಆಹಾರವು ಚರ್ಮದ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಆದರೆ ನ್ಯಾಯೋಚಿತ ಬಣ್ಣವು ಅಂದರೆ ದೇಹದ ಹುಟ್ಟಿನ ಬಣ್ಣವು ಆಹಾರ ಸೇವನೆಯಿಂದ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ ಎನ್ನಲಾಗುತ್ತದೆ. ಹಾಲಿನ ಟೀ ಕುಡಿಯುವುದರಿಂದ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
ಕಡಿಮೆ ಸಕ್ಕರೆಯೊಂದಿಗೆ ಕಪ್ಪು ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಟೀ ಕುಡಿಯುವುದರಿಂದ ಚರ್ಮ ಕಪ್ಪಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಇದಕ್ಕೆ ವಿರುದ್ಧವಾಗಿ, ಚಹಾವು ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಂಶೋಧನೆ ತೋರಿಸಿದೆ.

ಅತಿಯಾದರೆ ಅಮೃತವೂ ವಿಷ :

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದರಂತೆ ಟೀ ಅಥವಾ ಚಹಾ ಸೇವನೆ ಸಹ ಅತಿಯಾದರೆ ಅದೂ ದೇಹದ ಆರೋಗ್ಯದ ಮೇಲೆ ನೇರ ಪರಿಣಾಮಬೀರುತ್ತದೆ. ಬಿಸಿ ಮಾಡಿದ್ದ ಟೀ ತಣ್ಣಗಾದ ಬಳಿಕ ಅದನ್ನು ಕುಡಿಯುವುದರಿಂದ ದೇಹಕ್ಕೆ ಹಾನಿಯುಂಟಾಗುತ್ತದೆ. ಮೂರ್ನಾಲ್ಕು ಗಂಟೆಗಳಿಗೂ ಮುನ್ನ ಬಿಸಿ ಮಾಡಿದ ಚಹಾವನ್ನು ಕುಡಿದರೆ, ನಿಮಗೆ ಗೊತ್ತಿಲ್ಲದ ರೀತಿ ಇದು ನಿಮ್ಮ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಚಹಾವನ್ನು ಪದೇ ಪದೇ ಬಿಸಿ ಮಾಡಬಾರದು:

ಚಹಾವನ್ನು ಪದೇ-ಪದೇ ಬಿಸಿ ಮಾಡುವುದರಿಂದ ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ಹೋಗುತ್ತವೆ. ಕೋಲ್ಡ್ ಟೀ ಬ್ಯಾಕ್ಟೀರಿಯಾವನ್ನು ಸೃಷ್ಟಿಸುತ್ತದೆ. ನೀವು ಚಹಾವನ್ನು ಎಷ್ಟು ಸಮಯ ಬೆಚ್ಚಗಾಗಿಸುತ್ತೀರೋ ಅಷ್ಟು ಹೆಚ್ಚು ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.

Continue Reading

Ancient Mangaluru

ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ

Published

on

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನಾ ಸಮಾರಂಭ ಮೇ 10 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿಯ ಲಘುವಿ ಕಾಂಪ್ಲೆಕ್ಸ್ ಮುಖ್ಯರಸ್ತೆ ಪಕ್ಷಿಕೆರೆಯಲ್ಲಿ ನಡೆಯಲಿದೆ.

ಮುಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರ ಧರ್ಮಗುರು ಅತಿ ವಂದನೀಯ ಗುರುಗಳು ಮೆಲ್ವಿನ್ ನೊರೊಹ್ನಾ ದ್ವೀಪ ಪ್ರಜ್ವಲಿಸಲಿದ್ದಾರೆ. ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀ ಕೆ.ಸೀತಾರಾಮ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಲಿದ್ದಾರೆ. ಪಕ್ಷಿಕೆರೆ, ಎಸ್ ಕೋಡಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ಎರಡನೇ ಸ್ಥಾನ

ಸಮಾಜಸೇವಕ ಧನಂಜಯ ಶೆಟ್ಟಿಗಾರ್ ಇ-ಮುದ್ರಾಂಕ ಸೇವೆಗೆ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಆವರ್ತನ ಠೇವಣಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ ಉಳಿತಾಯ ಖಾತೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟ್ಟಡದ ಮಾಲಕ ಶ್ರೀನಿವಾಸ ಕೋಟ್ಯಾನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

Continue Reading

LATEST NEWS

Trending