Wednesday, September 28, 2022

ಸುದ್ದಿವಾಹಿನಿಯಲ್ಲಿ ದ್ವೇಷಭಾಷಣ ನಡೆಯದಂತೆ ನೋಡುವುದು ಆ್ಯಂಕರ್‌ಗಳ ಹೊಣೆ-ಸುಪ್ರೀಂ

ನವದೆಹಲಿ: ಸುದ್ದಿ ವಾಹಿನಿಗಳಲ್ಲಿ ದ್ವೇಷಪೂರಿತ ಚರ್ಚೆಗಳು ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ಆ್ಯಂಕರ್‌ಗಳ ಪಾತ್ರ ಬಹಳ ಮುಖ್ಯವಾದದ್ದು. ಇಂತಹ ದ್ವೇಷಭಾಷಣ ನಿಯಂತ್ರಿಸಲು ಕ್ರಮ ಕೈಗೊಳ್ಳುವುದರ ಬದಲು ಕೇಂದ್ರ ಸರ್ಕಾರ ಕೂಡಾ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.


ಅಲ್ಲದೆ ಈ ಬಗ್ಗೆ ಕಾನೂನು ಆಯೋಗ ಮಾಡಿರುವ ಶಿಫಾರಸ್ಸಿನ ಅನ್ವಯ ಯಾವುದೇ ಕಾನೂನು ಜಾರಿಯ ಉದ್ದೇಶವನ್ನು ಸರ್ಕಾರ ಹೊಂದಿದೆಯೇ ಎಂದು ಪ್ರಶ್ನಿಸಿರುವ ನ್ಯಾಯಾಲಯ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದೆ.

ಸುದ್ದಿವಾಹಿನಿಗಳಲ್ಲಿ ದ್ವೇಷದ ಭಾಷಣಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಈ ಬಗ್ಗೆ ಉಲ್ಲೇಖಿಸಿ ಮುಖ್ಯ ವಾಹಿನಿ ಸುದ್ದಿ ವಾಹಿನಿಗಳು ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ.

ಅಲ್ಲಿ ದ್ವೇಷ ಭಾಷಣ ನಡೆಯದಂತೆ ನೋಡಿಕೊಳ್ಳುವ ಹೊಣೆ ಆ್ಯಂಕರ್‌ಗಳದ್ದು, ಯಾರಾದರೂ ದ್ವೇಷ ಭಾಷಣ ಆರಂಭಿಸಿದರೆ ತಕ್ಷಣ ಅದನ್ನು ತಡೆಯಬೇಕು.

ನಮ್ಮಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದೆ, ಆದರೆ ಅಮೇರಿಕಾದಲ್ಲಿ ಇರುವಷ್ಟು ಇಲ್ಲಿಲ್ಲ. ದ್ವೇಷಭಾಷಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಉದ್ದೇಶ ಸರ್ಕಾರಕ್ಕಿದೆಯೇ? ಎಂದು ಕೋರ್ಟ್ ಪ್ರಶ್ನಿಸಿದೆ.
ಇನ್ನು ಈ ಬಗ್ಗೆ ವಿಚಾರಣೆಯನ್ನು ನ.23ಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here

Hot Topics

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...

ಬ್ರೇಕಿಂಗ್ ನ್ಯೂಸ್: PFI ಸಂಘಟನೆ ಇನ್ನು 5ವರ್ಷ ಬ್ಯಾನ್-ಕೇಂದ್ರದ ಮಹತ್ವದ ಆದೇಶ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳನ್ನು ಮುಂದಿನ 5 ವರ್ಷಗಳ ಕಾಲ ನಿಷೇಧ ಮಾಡಿ ಮಹತ್ವದ ಆದೇಶ ಹೊರಡಿಸಿದೆ.ಈ ಸಂಘಟನೆಗಳು ಕಾನೂನುಬಾಹಿರ ಎಂದು ತಕ್ಷಣದಿಂದಲೇ...

ದ್ವೇಷದ ಕಿಚ್ಚು ಹಚ್ಚುವ ಸಂಘಟನೆಗಳ ವಿರುದ್ಧ ತಾರತಮ್ಯವಿಲ್ಲದೇ ಕ್ರಮ ಕೈಗೊಳ್ಳಿ: ಖಾದರ್‌ ಕಿಡಿ

ಮಂಗಳೂರು: ಸರ್ಕಾರ ಕೆಲವು ನೀತಿಗಳಲ್ಲಿ ತಾರತಮ್ಯ ಮಾಡುತ್ತದೆ. ಪರಿಹಾರ ಕೊಡುವುದರಲ್ಲಿ ಕೂಡಾ ಸರ್ಕಾರ ಭೇಧಭಾವ ಮಾಡಿದೆ. ಈ ರೀತಿಯ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಪಿಎಫ್‌ಐ ಬ್ಯಾನ್ ಮಾಡಿದಂತೆ ಯಾವ ಸಂಘಟನೆಗಳು ದೇಶದಲ್ಲಿ...