DAKSHINA KANNADA
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್ ಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.
ಮಂಗಳೂರು: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್ ಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸೆ.21ರ ಗುರುವಾರದಂದು ಚಾಲನೆ ನೀಡಿದರು.
ಮಂಗಳೂರಿನ ಡಾ ಟಿ ಎಂ ಎ ಪೈ ಸೆಂಟರ್‌ನ ಹವಾನಿಯಂತ್ರಿತ ಆಡಿಟೋರಿಯಂನಲ್ಲಿ ಮೊದಲ ಬಾರಿಗೆ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು, ಸೆ. 24ರವರೆಗೆ ರಾಂಬೋ ಸರ್ಕಸ್‌ನ ಬೆರಗುಗೊಳಿಸುವ ಪ್ರದರ್ಶನ ನಡೆಯಲಿದೆ.
ಸರ್ಕಸ್‌ನ ಮೊದಲ ಪ್ರದರ್ಶನ ಮಂಗಳೂರಿನ ಜನತೆಯ ಮನಸೂರೆಗೊಂಡಿದೆ.
ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ರಾಂಬೋ ಸರ್ಕಸ್ ಹೊಸ ಮಾದರಿಯಲ್ಲಿ ಮಂಗಳೂರಿನ ಜನತೆಯ ಹೃದಯಕ್ಕೆ ಲಗ್ಗೆ ಇಟ್ಟಿದೆ ಎಂದರು.
ಸರ್ಕಸ್ ತಂಡದ ಎಲ್ಲರಿಗೂ ಅವರು ಶುಭ ಹಾರೈಸಿದರು.
ಸರ್ಕಸ್‌ಗೆ ಮಂಗಳೂರಿನ ಜನತೆಯ ಬೆಂಬಲ ಖಂಡಿತಾ ನೀಡುತ್ತಾರೆ. ಕುಟುಂಬ ಸಮೇತ ಈ ಸರ್ಕಸ್ ವೀಕ್ಷಣೆ ಮಾಡಿರಿ ಎಂದರು.
ಜನತೆಯ ತಮ್ಮ ದಿನದ ಜಂಜಾಟಗಳನ್ನು ಮರೆತು ಈ ಸರ್ಕಸ್ ವೀಕ್ಷಣೆ ಮಾಡುವ ಮೂಲಕ ಅವರಿಗೆ ನಾವು ಸಹಕಾರ ನೀಡಬೇಕು ಎಂದರು.
ಮಂಗಳೂರು ಮೇಯರ್ ಸುಧೀರ್ ಶಟ್ಟಿ ಕಣ್ಣೂರು ಮಾತನಾಡಿ, 32 ವರ್ಷದ ಹಿಂದೆ ಆರಂಭಗೊಂಡ ರಾಂಬೋ ಸರ್ಕಸ್ ಇಂಡೋರ್ ಸರ್ಕಸ್ ಆಗಿ ಮೂಡಿ ಬಂದರೂ ಈ ಸಂಸ್ಥೆ ನಿತ್ಯನಿರಂತರವಾಗಿ ಪ್ರದರ್ಶನ ನೀಡುವ ಮೂಲಕ ಜನರ ಮನಗೆದ್ದಿದೆ.
60 ಸಿಬ್ಬಂದಿಗಳಿರುವ ಕಲಾವಿದರು ಈ ಪ್ರದರ್ಶನ ನೀಡುವುದು ಮಂಗಳೂರಿಗೆ ನಿಜವಾಗಲೂ ವೀಕ್ಷಣೆಗೆ ಸುವರ್ಣವಕಾಶ ಎಂದರು.
ರಾಂಬೋ ಸರ್ಕಸ್‌ನಲ್ಲಿ ಸೆ. 22ರಂದು 1, 4 ಮತ್ತು 7 ಗಂಟೆಗೆ ಮೂರು ಶೋ, ಸೆ. 23 ಮತ್ತು ಕೊನೆಯ ದಿನ 24ರಂದು ಬೆಳಿಗ್ಗೆ 11 ಗಂಟೆಗೆ, ಮಧ್ಯಾಹ್ನ 1, 4 ಮತ್ತು ಸಂಜೆ 7 ಗಂಟೆಗೆ ಹೀಗೆ 4 ಪ್ರದರ್ಶನಗಳು ಇರಲಿವೆ.
ಮೊದಲ ದಿನದ ಪ್ರದರ್ಶನ ಕಿಕ್ಕಿರಿದು ತುಂಬಿದ ಪ್ರೇಕ್ಷಕರಿಂದ ಪ್ರದರ್ಶಿಸಲ್ಪಟ್ಟಿದೆ.
ನಕ್ಕುನಗಿಸುವ ಜೋಕರ್‌ಗಳ ನಡುವೆ ಹಾಡು, ಮಿಮಿಕ್ರಿ, ಕಾಮಿಡಿ, ಪ್ರತಿಭಾನ್ವಿತ ಕಲಾವಿದರು ನೀಡುವ ರೋಮಾಂಚಕಾರಿ ಪ್ರದರ್ಶನ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುತ್ತಿದೆ.
ಪ್ರತಿಯೊಂದು ಒಂದಕ್ಕಿಂತ ಒಂದು ವಿಭಿನ್ನ ಪ್ರದರ್ಶನವಾಗಿದ್ದು, ಕುಡ್ಲ ನಗರಿಯಲ್ಲಿ ಮಾಯಾ ಲೋಕವನ್ನೇ ತೆರೆದಿಟ್ಟಿದೆ.
ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಶಶಿಕಲಾ ಕಾವ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉದ್ಯಮಿ ಗಂಗಾಧರ್ , ರಾಂಬೋ ಸರ್ಕಸ್ ನ ಮಾಲಕರು, ಪಾಲುದಾರರು ಉಪಸ್ಥಿತರಿದ್ದರು.
DAKSHINA KANNADA
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೆಪ್ಟಂಬರ್ 29 ರಂದು ಪಂಪ್‌ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.
ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಇದನ್ನೂ ಓದಿ : ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು
ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.
DAKSHINA KANNADA
ಮುಮ್ತಾಜ್ ಅಲಿ ಸಾ*ವಿನ ಹಿಂದೆ ಹನಿಟ್ರ್ಯಾಪ್ ಕೈವಾಡ! ಏನಂದ್ರು ಕಮಿಷನರ್?
ಮಂಗಳೂರು : ಮಂಗಳೂರು ಉತ್ತರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಆಲಿ ಆತ್ಮಹ*ತ್ಯೆ ಪ್ರಕರಣದಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಮ್ತಾಜ್ ಅಲಿ ಅವರನ್ನು ಕೆಲವೊಂದು ವ್ಯಕ್ತಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಈಗಾಗಲೇ 50 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದರು. ಈ ವಿಚಾರವನ್ನು ವಾಯ್ಸ್ ಮೆಸೇಜ್ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸಿದ್ದ ಮುಮ್ತಾಜ್ ಆಲಿ ನಾಪತ್ತೆಯಾಗಿದ್ದರು.
ಇದೀಗ ಅವರ ಮೃತ ದೇಹ ಪತ್ತೆಯಾಗಿದ್ದು, ಅವರ ಆತ್ಮಹತ್ಯೆಗೆ ಬ್ಲ್ಯಾಕ್ ಮೇಲ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುಮ್ತಾಜ್ ಆಲಿ ಅವರ ವಾಯ್ಸ್ ಮೆಸೇಜ್ ಆಧಾರದಲ್ಲಿ ಆರು ಜನರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಪಾಪಿ ತಾಯಿ
ರೆಹಮತ್ ಎಂಬಾಕೆ ಮುಮ್ತಾಜ್ ಆಲಿ ಅವರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿದ್ದು, ಅಬ್ದುಲ್ ಸತ್ತಾರ್, ಶಾಫೀ, ಮುಸ್ತಾಫ, ಶೋಯಿಬ್ ಹಾಗೂ ಸಿರಾಜ್ ಎಂಬವರು ಮುಮ್ತಾಜ್ ಆಲಿ ಅವರನ್ನು ಹಣಕ್ಕಾಗಿ ಪೀಡಿಸಿದ್ದಾರೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮುಮ್ತಾಜ್ ಅಲಿ ಅವರು ಮರ್ಯಾದೆಗೆ ಅಂಜಿ ಈ ಆತ್ಮಹ*ತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಇಲಾಖೆ ಹೆಚ್ಚಿನ ತನಿಖೆ ನಡೆಸಲಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
DAKSHINA KANNADA
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
ಮಂಗಳೂರು : ಕಾಮು*ಕ ಉಮೇಶ್ ರೆಡ್ಡಿಯ ಅವತಾರವೊಂದು ಮಂಗಳೂರಿನ ಕದ್ರಿಯಲ್ಲಿ ಕಾಣಿಸಿಕೊಂಡಿದ್ದು ಹಾಸ್ಟೆಲ್ ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ. ಮಂಗಳೂರಿನ ಕೆಪಿಟಿ ಬಳಿ ಇರುವ ದೇವರಾಜ ಅರಸು ಮಹಿಳಾ ವಿದ್ಯಾರ್ಥಿನಿ ನಿಲಯದ ಬಳಿ ಈತನ ಓಡಾಟ ಕಂಡು ಬಂದಿದೆ. ರಾತ್ರಿಯಾಗುತ್ತಿದ್ದಂತೆ ಹಾಸ್ಟೆಲ್ ಆವರಣದಲ್ಲಿ ಬೆತ್ತಲಾಗಿ ಓಡಾಡುವ ಈತ ವಿದ್ಯಾರ್ಥಿನಿಯರು ಗಮನಿಸಿದ್ರೆ ಅವರ ಮುಂದೆ ಅಸಭ್ಯವಾಗಿ ವರ್ತಿಸುತ್ತಾನಂತೆ.
ಭಯದಲ್ಲಿ ವಿದ್ಯಾರ್ಥಿನಿಯರು :
ಕಳೆದ ಸೆಪ್ಟಂಬರ್ 16 ರಂದು ಮೊದಲ ಬಾರಿಗೆ ಈತ ಹಾಸ್ಟೆಲ್ ಆವರಣಕ್ಕೆ ರಾತ್ರಿ ಸರಿ ಸುಮಾರು 10.30ಕ್ಕೆ ಎಂಟ್ರಿ ಕೊಟ್ಟು ವಿದ್ಯಾರ್ಥಿನಿಯರಿಗೆ ಭಯ ಹುಟ್ಟಿಸಿದ್ದ. ನಸುಕಿನ ಜಾವ ಸುಮಾರು 4.30 ರ ತನಕವೂ ಹಾಸ್ಟೆಲ್ ಸುತ್ತಮುತ್ತ ಓಡಾಡಿ ಕಿಟಕಿಗೆ ಕಲ್ಲೆಸೆದು , ಕಿಟಿಕಿ ಬಾಗಿಲು ಬಡಿದು ಕೀಟಲೆ ಮಾಡಿದ್ದ. ಈ ಬಗ್ಗೆ ಮರುದಿನ ಸಿಸಿ ಟಿವಿ ಫೂಟೇಜ್ ಸಹಿತವಾಗಿ ಕದ್ರಿ ಪೊಲೀಸರಿಗೆ ನಿಲಯ ಪಾಲಕರು ದೂರು ಕೂಡ ನೀಡಿದ್ದಾರೆ. ಇದಾಗಿ ವಾರಗಳ ಬಳಿಕ ಈತ ಮತ್ತೆ ಹಾಸ್ಟೆಲ್ ಬಳಿ ಪ್ರತ್ಯಕ್ಷವಾಗಿ ಮತ್ತದೇ ತನ್ನ ಹಳೇ ಆಟ ತೋರಿಸಿದ್ದಾನೆ. ಇದೀಗ ಈ ಕಾಮುಕ ಕ್ರಿಮಿಯಿಂದ ಹಾಸ್ಟೆಲ್ ವಿದ್ಯಾರ್ಥಿನಿಯರು ಭಯಗೊಂಡಿದ್ದು ಸಂಜೆಯಾಗುತ್ತಿದ್ದಂತೆ ಕೋಣೆ ಬಾಗಿಲು ಭದ್ರಪಡಿಸಿಕೊಳ್ಳುತ್ತಿದ್ದಾರೆ.
ವಾರ್ಡನ್ ಇರೋಲ್ಲ…ಸೆಕ್ಯೂರಿಟಿ ಗಾರ್ಡ್ ಇಲ್ಲ:
ಅಸಲಿಗೆ ವಿದ್ಯಾರ್ಥಿನಿಯರ ಈ ಹಾಸ್ಟೆಲ್ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ವಿದ್ಯಾರ್ಥಿನಿಯರಿಗೆ ಕಟ್ಟು ನಿಟ್ಟಿನ ಕ್ರಮ ಇದೆಯಾದ್ರೂ ಸಿಬಂದಿಯನ್ನು ಕೇಳೋರಿಲ್ಲ. ಹಾಸ್ಟೆಲ್ ವಾರ್ಡನ್ ರಾತ್ರಿ ಹೊತ್ತು ಹಾಸ್ಟೆಲ್‌ನಲ್ಲೇ ತಂಗಬೇಕಾಗಿದ್ರೂ ಸಂಜೆಯಾಗುತ್ತಿದ್ದಂತೆ ವಾರ್ಡನ್ ನಾಪತ್ತೆಯಾಗುತ್ತಾರೆ. ಇನ್ನು ವಾರ್ಡನ್ ಇಲ್ಲದ ಈ ಹಾಸ್ಟೆಲ್‌ನಲ್ಲಿ ಕನಿಷ್ಟ ಸೆಕ್ಯುರಿಟಿ ಗಾರ್ಡ್ ಇದ್ದಾರಾ ಅಂದ್ರೆ ಅವರು ಕೂಡ ಇಲ್ಲ.
ಇದನ್ನೂ ಓದಿ : ಪುಣ್ಯ ಕ್ಷೇತ್ರದ ಕಲ್ಯಾಣ ಮಂಟಪ ಬಳಿ ದನದ ಮಾಂಸ ಮಾರಾಟ; ಆರೋಪಿ ನವೀನ್ ಅರೆಸ್ಟ್.!
ಟೋಟಲ್ ಆಗಿ ಹೇಳೋದಾದ್ರೆ ಈ ಹಾಸ್ಟೆಲ್‌ನಲ್ಲಿರೋ ನೂರಾರು ವಿದ್ಯಾರ್ಥಿನಿಯರಿಗೆ ಇಲ್ಲಿ ಭದ್ರತೆಯೇ ಇಲ್ಲ. ಹೀಗಿರುವಾಗ ಮರಿ ಉಮೇಶ್ ರೆಡ್ಡಿ ಇಲ್ಲಿ ಸುತ್ತಾಡ್ತಾ ಇದ್ದಾನೆ ಅನ್ನೋ ವಿಚಾರ ತಿಳಿದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರಾ ಅಂದ್ರೆ ಅದೂ ಕೂಡಾ ಇಲ್ಲ. ಸದ್ಯಕ್ಕೆ ಆತ ಹಾಸ್ಟೆಲ್ ಒಳಗೆ ಎಂಟ್ರಿಕೊಡುವ ಪ್ರಯತ್ನ ಮಾಡಿಲ್ಲ. ಅಂತಹ ಒಂದು ಅಚಾತುರ್ಯ ನಡೆಯುವ ಮೊದಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಾಗಿದೆ.
ವಿಡಿಯೋ ನೋಡಿ:
- BIG BOSS4 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS7 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS5 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS6 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ