ವಿಶ್ವದ ಬಲಾಢ್ಯ ಆರ್ಮ್ ರೆಸ್ಲರ್ ನ್ನು ಮಣಿಸಿ ಸಾಧನೆ ಮೆರೆದ ಭಾರತದ ರಾಹುಲ್ ಪಣಿಕ್ಕರ್..!
ದುಬೈ: 70 ಕೆಜಿ ತೂಕದ ಭಾರತದ ರಾಹುಲ್ ಪಣಿಕ್ಕರ್ ಬರೋಬ್ಬರಿ 116 ಕೆಜಿ ತೂಕದ ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ನನ್ನು ಆರ್ಮ್ ರಸ್ಲಿಂಗ್ ನಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮೆರೆದಿದ್ದಾರೆ.
ದುಬೈನಲ್ಲಿ ನಡೆದ ಆರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ರಾಹುಲ್ ಪಣಿಕ್ಕರ್, ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್, ಲ್ಯಾರಿ ವೀಲ್ಸ್ ರನ್ನು ಸೋಲಿಸಿದ್ದಾರೆ.
ಮೊದಲ ಎರಡು ಸುತ್ತುಗಳಲ್ಲಿ ಸೋಲು ಕಂಡಿದ್ದ ಪಣಿಕ್ಕರ್ ದೃತಿಗೆಡದೆ ಮುಂದಿನ ಮೂರು ಸುತ್ತುಗಳಲ್ಲೂ ಗೆದ್ದು ಲ್ಯಾರಿ ವೀಲ್ಸ್ ಗೆ ಆಘಾತ ನೀಡಿದರು.
116ಕೆಜಿ ತೂಕದ ಮುಂದೆ 70ಕೆ.ಜಿ ತೂಕದ ರಾಹುಲ್ ಪಣಿಕ್ಕರ್ ಮೊದಲ ಎರಡು ಸುತ್ತುಗಳಲ್ಲಿ ಸೋತಾಗ ಅಲ್ಲಿ ನೆರದಿದ್ದವರಿಗೆ ಅಚ್ಚರಿ ಎನಿಸಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ಗೆದ್ದ ಬಳಿಕ ಅಲ್ಲಿದ್ದವರು ಆಶ್ಚರ್ಯದ ಕಣ್ಣುಗಳಿಂದ ನೋಡಲು ಆರಂಭಿಸಿದ್ದಾರೆ.
ನಾಲ್ಕನೇ ಸುತ್ತಿನಲ್ಲೂ ರಾಹುಲ್ ಗೆಲುವು ಸಾಧಿಸುತ್ತಿದ್ದಂತೆ ಅಲ್ಲಿದ್ದವರು ಬಾಯಿ ಮೇಲೆ ಕೈಯಿಟ್ಟರು. ಇನ್ನು ಕೊನೆಯ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಮತ್ತೆ ರಾಹುಲ್ ಲ್ಯಾರಿಯನ್ನು ಮಣಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.