DAKSHINA KANNADA
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನ & ಸಾಧನಾ ಸಂಭ್ರಮ-2023 ಉದ್ಘಾಟನೆ
Published
2 years agoon
By
Adminಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನ ಮತ್ತು ಸಾಧನಾ ಸಂಭ್ರಮ -2023 ಇಂದು ನಗರದಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ವಹಿಸಿದ್ದರು.
ಪತ್ರಕರ್ತರು ರಾತ್ರಿ ಹಗಲು ದುಡಿಯುತ್ತಿದ್ದು, ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಮ್ಮೇಳನ ಉದ್ಘಾಟಿಸಿದ ಪ್ರಕಾಶ್ ಶೆಟ್ಟಿ ಹೇಳಿದರು.
ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರ ‘ಭಾವ ಚಿತ್ರ ಯಾನ -2’ ಕೃತಿಯನ್ನು ಸಂಸದ ನಳಿನ್ ಕುಮಾರ್ ಬಿಡುಗಡೆ ಮಾಡಿ ಮಾತನಾಡಿದರು.
ಬಿಜೈ- ಕಾಪಿಕಾಡ್ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಪರಿಕರಗಳನ್ನು ಸಾಂಬ ಸದಾಶಿವ ಅವರು ವಿತರಿಸಿದರು. ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಯು. ಟಿ .ಖಾದರ್ ಹಾಗೂ ಜಿಲ್ಲಾ ಸಮ್ಮೇಳನದ ಕಿಟ್ ವಿತರಣೆಯನ್ನು ಶಾಸಕ ವೇದವ್ಯಾಸ್ ಕಾಮತ್ ನೆರವೇರಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಸ್ತಾವನೆಗೈದರು.
ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಲ ಪೌಂಡೇಶನ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉದ್ಘಾಟಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ। ಡಾ। ಪಿ.ಎಸ್. ಯಡಪಡಿತ್ತಾಯ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಗುರ್ಮೆ ಸುರೇಶ್ ಶೆಟ್ಟಿ, ರೋನ್ಸ್ ಬಂಟ್ವಾಳ್, ಬ್ಯಾಂಕ್ ಆಫ್ ಬರೋಡಾದ ಆಧಿಕಾರಿ ಗಾಯತ್ರಿ ಮುಂತಾದವರು ಉಪಸ್ಥಿತರಿದ್ದರು.
ಪತ್ರಕರ್ತ ವಿಕ್ರಂ ಕಾಂತಿಕೆರೆಯವರ ಕೃತಿ ‘ಕಾವೇರಿ ತೀರದ ಪಯಣ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಪತ್ರಕತರ್ರ ಸಂಘದ ಪ್ರಧಾನ ಕಾರ್ಯದ ರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್ ಕ್ಲಬ್ ಆಧ್ಯಕ್ಷ ಅನ್ನು ಮಂಗಳೂರು, ಮಹಮ್ಮದ್ ಆರಿಫ್. ಪತ್ರಿಕಾ ಭವನ ಟ್ರಸ್ಟ್ ನ ಆಧ್ಯಕ್ಷ ರಾಮಕೃಷ್ಣ, ಭಾಸ್ಕರ ರೈ ಕಟ್ಟ, ರವೀಂದ್ರ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.
DAKSHINA KANNADA
ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ವಾಹನ ಬೆಂ*ಕಿಗಾಹುತಿ !
Published
44 minutes agoon
28/11/2024ಮಂಗಳೂರು: ನಗರದ ಫಳ್ನೀರ್ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದು ಬೆಂ*ಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
‘ಫಲ್ಮೀರ್‌ನ ಅಥೆನಾ ಆಸ್ಪತ್ರೆ ಬಳಿ ಸಾಗುತ್ತಿದ್ದಾಗ ಬೊಲೆರೊ ವಾಹನದ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ವಾಹನವನ್ನು ನಿಲ್ಲಿಸಿದ ಚಾಲಕ ಅದರಲ್ಲಿದ್ದ ಆರು ಮಂದಿ ಪ್ರಯಾಣಿಕನನ್ನು ಕೆಳಗಿಳಿಸಿದ್ದ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ವಾಹನವನ್ನು ಆವರಿಸಿಕೊಂಡಿತು. ಸ್ಥಳೀಯರು ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅವರು ಬಂದು ಬೆಂಕಿ ನಂದಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
‘2015ನೇ ಸಾಲಿನಲ್ಲಿ ನೋಂದಣಿಯಾಗಿರುವ ಈ ವಾಹನವು ಬಾವುಟಗುಡ್ಡೆಯಲ್ಲಿರುವ ಜಾಸ್ ಆಲುಕ್ಕಾಸ್ ಜ್ಯುವೆಲ್ಲರಿ ಮಳಿಗೆಗೆ ಸೇರಿದ್ದಾಗಿದೆ. ಮಳಿಗೆಯ ಸಿಬ್ಬಂದಿಯನ್ನು ಕರೆದೊಯ್ಯುವಾಗ ಈ ಅವಘಡ ಸಂಭವಿಸಿದೆ’ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Ancient Mangaluru
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
Published
14 hours agoon
27/11/2024By
NEWS DESKಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಬಂಟ್ವಾಳ : ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಾಡುಮಠದ ಬಳಿ ಅಟೋ ಹಾಗೂ ಬೈಕ್ ಒಂದರ ನಡುವೆ ಅ*ಪಘಾತ ಸಂಭವಿಸಿ ಮೂವರು ಗಾ*ಯಗೊಂಡಿದ್ದಾರೆ.
ಸಾಲೆತ್ತೂರಿನ ಅಟೋ ಚಾಲಕ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಅವರು ಗಾ*ಯಗೊಂಡಿದ್ದಾರೆ. ಅ*ಪಘಾತದ ತೀವ್ರತೆಗೆ ಮೂವರಿಗೂ ಗಂಭೀರ ಗಾ*ಯಗಳಾಗಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಗಾ*ಯಾಳುಗಳ ನೆರವಿಗೆ ಧಾವಿಸಿ ಬಂದಿದ್ದಾರೆ.
ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಮೂವರು ಗಾ*ಯಾಳುಗಳು ಕೂಡಾ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವನ ಸ್ಥಿತಿ ಗಂ*ಭೀರವಾಗಿದೆ ಎಂದು ಮಾಹಿತಿ ಲಭಿಸಿದೆ. ಈ ಅ*ಪಘಾತದ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಸರಕಾರಿ ಕೆಲಸದ ಹುಡುಗನೇ ಬೇಕೆಂದು ಮಂಟಪದಲ್ಲೇ ವರನನ್ನು ತಿರಸ್ಕರಿಸಿದ ವಧು !!
ನಂಬಿದವರ ಕೈ ಬಿಡದ ಪದಾಳ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ನಿಮ್ಮ ನಾಯಿಗಳನ್ನು ಪಾರ್ಕ್ಗೆ ಕೊಂಡೊಯ್ಯುತ್ತೀರಾ? ಹೈಕೋರ್ಟ್ ಹೊಸಮಾರ್ಗಸೂಚಿ ಗಮನಿಸಿ!
ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?
ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು
ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!
Trending
- Baindooru6 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION7 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS5 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru5 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ