Connect with us

LATEST NEWS

ಪುತ್ತೂರು: ರಸ್ತೆ ಅಗಲೀಕರಣ ನೆಪದಲ್ಲಿ ಬಸ್ ತಂಗುದಾಣದ ಟೈಲ್ಸ್ ತೆರವು-ಸಂಶಯಕ್ಕೆ ಆಸ್ಪದ

Published

on

ಪುತ್ತೂರು: ತಾಲ್ಲೂಕಿನ ಸ್ವರ್ಗದ ಪಾಣಾಜೆ ಪುತ್ತೂರು ರಸ್ತೆಯ ಆರ್ಲಪದವು ಸಮೀಪ ರಸ್ತೆ ಅಗಲೀಕರಣ ನೆಪದಲ್ಲಿ ನೆಲ್ಲಿತ್ತಿಮಾರು ಬಸ್ ತಂಗುದಾಣದಲ್ಲಿ ಹಾಸಲಾದ ಟೈಲ್ಸ್ ತೆರವುಗೊಳಿಸಿದ್ದರೂ ಯಾವುದೇ ಅಗಲೀಕರಣ ನಡೆಸದೆ ಕಾಮಗಾರಿ ಪೂರ್ಣಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಆರ್ಲಪದವು ಪೇಟೆಯಿಂದ ಒಂದು ಕಿ.ಮೀ.ದೂರದಲ್ಲಿ ಪಾಣಾಜೆ ಮೂಲಕ ಕೇರಳ ತೆರಳುವ ರಸ್ತೆಯಲ್ಲಿ ಭರಣ್ಯ ಮೂಲಕ ಜಾಂಬ್ರಿ ಗುಹೆಗೆ ತಿರುಗುವ ಮುಖ್ಯ ರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ವಾಹನ ಅಪಘಾತಗಳು ನಡೆದಿವೆ.

ಅಪಘಾತ ಸಾಧ್ಯತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು ಇಪ್ಪತ್ತು ಮೀ.ಉದ್ದಕ್ಕೆ ರಸ್ತೆ ಅಗಲೀಕರಣ ನಡೆಸಿದೆ. ರಸ್ತೆ ಮಧ್ಯಭಾಗದಲ್ಲಿ ಲೇನ್ ನಿಯಮ ಪಾಲಿಸುವಂತೆ, ಎಚ್ಚರಿಕೆಯಿಂದ ಓವರ್ ಟೇಕ್ ಮಾಡುವಂತೆ ಬಿಳಿ ಪಟ್ಟಿಗಳನ್ನು ಹಾಕಲಾಗಿದೆ.

ನೆಲ್ಲಿತ್ತಿಮಾರಿನಲ್ಲಿ ರಸ್ತೆ ಅಗಲೀಕರಣ ನಡೆಸಲು ಪಾಣಾಜೆ ಗ್ರಾ.ಪಂ. ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಉಪವಿಭಾಗ ಪುತ್ತೂರು ನಿರ್ಮಿಸಿದ್ದ ಬಸ್ ತಂಗುದಾಣಕ್ಕೆ ಹಾಸಲಾಗಿದ್ದ ಟೈಲ್ಸ್ ಪಿಡಬ್ಲ್ಯೂಡಿ ಗುತ್ತಿಗೆದಾರರು ತೆರವುಗೊಳಿಸಿದ್ದರೂ ಇಲ್ಲಿ ಯಾವುದೇ ಅಗಲೀಕರಣ ಕಾಮಗಾರಿ ನಡೆಸದೆ ಇಲ್ಲಿನ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಟೈಲ್ಸ್ ತೆರವುಗೊಳಿಸಿದ್ದನ್ನು ಎರಡು ದಿನ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಪ್ರಶ್ನಿಸಲಾದರೂ ಲೋಕೋಪಯೋಗಿ ಇಲಾಖೆ ಪಾಣಾಜೆ ವಿಭಾಗದ ಎಂಜಿನಿಯರ್ ಸಮರ್ಪಕ ಉತ್ತರ ನೀಡಿಲ್ಲ.

ರಸ್ತೆ ಅಗಲೀಕರಣಕ್ಕಾಗಿ ಟೈಲ್ಸ್ ತೆರವುಗೊಳಿಸಲಾಗಿದೆಯೇ ಅಥವಾ ಬಸ್ ತಂಗುದಾಣವನ್ನು ಸ್ಥಳಾಂತರಿಸುವ ಉದ್ದೇಶದಿಂದ ಟೈಲ್ಸ್ ತೆರವುಗೊಳಿಸಲಾಗಿದೆಯೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡಿದೆ.

ನೆಲ್ಲಿತ್ತಿಮಾರು ಬಸ್ ನಿಲ್ದಾಣದ ಸಮೀಪ ಸುಮಾರು ಹದಿನೈದರಿಂದ ಇಪ್ಪತ್ತು ಮೀ.ಉದ್ದಕ್ಕೆ ಮಳೆ ನೀರು ಹರಿಯಲು ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿದೆ.ಆದರೆ ಚರಂಡಿಯ ಆರಂಭ ಹಾಗೂ ಅಂತ್ಯ ಭಾಗಗಳಲ್ಲಿ ಸಮರ್ಪಕ ಕಾಮಗಾರಿ ನಡೆದಿಲ್ಲ.

ನೆಲ್ಲಿತ್ತಿಮಾರಿನಿಂದ ಅಪ್ಪಿನಿಮೂಲೆ ತೆರಳುವ ರಸ್ತೆಯಲ್ಲಿರುವ ಮೋರಿ ಎತ್ತರವಾಗಿರುವುದರಿಂದ ಈ ಚರಂಡಿಯನ್ನು ತಗ್ಗಿಸಲು ಸಾಧ್ಯವಾಗಿಲ್ಲ.ಇದರಿಂದಾಗಿ ಸಮೀಪದ ಮನೆ ಪರಿಸರದಿಂದ ಹರಿಯುವ ಮಳೆನೀರು ಈ ಚರಂಡಿ ಸೇರದೆ ಮನೆ ಅಂಗಳದಲ್ಲೇ ಸಂಗ್ರಹವಾಗುತ್ತಿದೆ.

ನೆಲ್ಲಿತ್ತಿಮಾರಿನಲ್ಲಿದ್ದ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ಚರಂಡಿ ನಿರ್ಮಿಸಲಾಗಿದೆ. ಸಾಕಷ್ಟು ಇಳಿಜಾರು ಇಲ್ಲದೆ ನಿರ್ಮಿಸಿದ ಚರಂಡಿಯಲ್ಲಿ ಮಣ್ಣು ಕಸ ತುಂಬಿದರೆ ನೀರಿನ ಹರಿಯುವಿಕೆಗೆ ತಡೆಯಾಗಲಿದೆ.

ರಸ್ತೆ ಹಾಗೂ ಚರಂಡಿ ನಡುವೆ ಕಾಂಕ್ರೀಟ್ ಹಾಸದಿರುವುದು ಅಥವಾ ಮಣ್ಣು ತುಂಬಿಸದಿರುವುದು ವಾಹನಗಳು ಎದುರು ಬದುರಾದಾಗ ಸಾಗಲು ಹಾಗೂ ಪಾದಚಾರಿಗಳಿಗೆ ನಡೆದಾಡಲೂ ಕಷ್ಟವಾಗಿದೆ.

ಬಸ್ ನಿಲ್ದಾಣದಿಂದ ತೆರವುಗೊಳಿಸಿದ ಟೈಲ್ಸ್ , ಹಾಗೂ ಚರಂಡಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

DAKSHINA KANNADA

ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

Published

on

ಮಂಗಳೂರು: ಮಂಗಳೂರು ಸಬ್ ಜೈಲಿನಲ್ಲಿದ್ದ ಕೇರಳ ಮೂಲದ ಖೈದಿಯೊಬ್ಬ ಆಸ್ಪತ್ರೆಯಲ್ಲೇ ಕುಣಿಕೆಗೆ ಕೊರಳೊಡ್ಡಿ ಜೀವಾಂತ್ಯಗೊಳಿಸಿದ್ದಾನೆ. ಕೊಣಾಜೆಯ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022 ರಲ್ಲಿ ಈತ ಬಂಧಿತನಾಗಿದ್ದ . ಕೇರಳ ಮೂಲದವನಾಗಿದ್ದ ಮಹಮ್ಮದ್ ನೌಫಲ್ ಜೀವಾಂತ್ಯಗೊಳಿಸಿದ ಖೈದಿಯಾಗಿದ್ದಾನೆ. ಕೆಲ ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 25 ರಂದು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯ ಸೆಲ್ ವಾರ್ಡ್ ಗೆ ದಾಖಲಿಸಲಾಗಿತ್ತು. ಸೆಲ್ ವಾರ್ಡನಲ್ಲಿ ಇರುವಾಗಲೇ ಈತ ಜೀವಾಂತ್ಯಗೊಳಿಸಿದ್ದಾನೆ. ಈತನನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳ ನಡೆಸಿದರಾದ್ರೂ ಸಾದ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

Continue Reading

LATEST NEWS

ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!

Published

on

ಮಂಗಳೂರು ( ಕನ್ಯಾಕುಮಾರಿ ) : ಮದುವೆ ಸಮಾರಂಭಕ್ಕೆಂದು ಕನ್ಯಾಕುಮಾರಿಗೆ ತೆರಳಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಅಸು ನೀಗಿದ್ದಾರೆ. ಮದುವೆಗೆ ತೆರಳಿದ್ದ ಸ್ನೇಹಿತರು ಲೇಮುರ್ ಬೀಚ್‌ನಲ್ಲಿ ಈಜಲು ಇಳಿದಾಗ ಈ ಧುರ್ಘಟನೆ ಸಂಭವಿಸಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಸಮುದ್ರಲ್ಲಿ ಈಜಲು ಹೋಗಿದ್ದು ಮೂವರನ್ನು ಸ್ಥಳಿಯರು ರಕ್ಷಣೆ ಮಾಡಿದ್ದಾರೆ. ಎಲ್ಲರೂ ತಿರುಚಿನಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ. ತಂಜಾವೂರಿನ ಚಾರುಕವಿ, ನೇಯ್ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಹಾಗೂ ಆಂದ್ರದ ವೆಂಕಟೇಶ್‌ ನೀರುಪಾಲದ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ

ನಿಶೇಧವಿದ್ರೂ ಸಮುದ್ರಕ್ಕೆ ಪ್ರವೇಶ ಮಾಡಿದ್ದರು

ಖಾಸಗಿ ಬೀಚ್‌ ಆಗಿರೋ ಲೆಮುರ್ ಬೀಚ್‌ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಲಾಗಿತ್ತು. ಇನ್ನು ಭಾನುವಾರದಂದು ಸಮುದ್ರದಲ್ಲಿ ಭಾರಿ ಅಲೆಗಳು ಇದ್ದ ಕಾರಣ ಯಾರೂ ಸಮುದ್ರಕ್ಕೆ ಇಳಿಯಬಾರದು ಅನ್ನೋ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ರೂ ಇವರು ಸಮುದ್ರಕ್ಕೆ ಹೇಗೆ ಹೋದ್ರು ಅನ್ನೋದು ತನಿಖೆ ನಡೆಸಲಾಗುತ್ತಿದೆ. ಮದುವೆಗೆ ಬಂದಿದ್ದ ಸ್ನೇಹಿತರೆಲ್ಲ ಬೇರೆ ಬೇರೆ ಗುಂಪುಗಳಾಗಿ ಚದುರಿ ಹೋಗಿದ್ದು, ಈ ಎಂಟು ಜನ ವಿದ್ಯಾರ್ಥಿಗಳು ಸಮುದ್ರ ಕಿನಾರೆ ಬಂದು ಸಮುದ್ರಕ್ಕೆ ಇಳಿದಿದ್ದಾರೆ.

ಕೋರ್ಸು ಮುಗಿಸುವ ಹಂತದಲ್ಲಿ ನಡೆಯಿತು ದುರ್ಘಟನೆ

ಈ ವಿದ್ಯಾರ್ಥಿಗಳ ಕೋರ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು. ಯಾವ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು, ಯಾವ ನಗರಕ್ಕೆ ಹೋದರೆ ಸೂಕ್ತ ಎಂಬ ಕುರಿತು ಅವರ ಮಧ್ಯೆಯೇ ಚರ್ಚೆ ನಡೆಯುತ್ತಿತ್ತು. ಅವರ ಪೋಷಕರು ಕೂಡ ನೂರಾರು ಕನಸು ಕಂಡಿದ್ದರು. ಆದರೆ, ಮದುವೆಗೆ ಹೋದವರು, ಮದುವೆ ಮುಗಿಸಿ ನೇರ ಮನೆಗೆ ಬಂದಿದ್ರೆ ಎಲ್ಲವೂ ಎನಿಸಿದಂತೆ ನಡೆಯುತ್ತಿತ್ತು. ಆದ್ರೆ ವಿಧಿ ಇವರ ಎಲ್ಲಾ ಕನಸುಗಳನ್ನ ಕಿತ್ತುಕೊಂಡಿದೆ.

Continue Reading

LATEST NEWS

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!

Published

on

ಬೆಂಗಳೂರು: ಹಾಸನದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರು ಬಳಸದಂತೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧ ಹೇರಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಎಚ್. ಡಿ ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಹೆಸರು ಬಳಸಂತೆ ಮಾಧ್ಯಮಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ‘ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ನಮ್ಮ ಹೆಸರು ಬಳಸುವುದರಿಂದ ತಮ್ಮ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.‌ ಮನವಿ ಆಲಿಸಿದ ನ್ಯಾಯಾಧೀಶರು ಮಾಧ್ಯಮಗಳು ಸತ್ಯಕ್ಕೆ ದೂರವಾದ, ಆಧಾರ ರಹಿತ ಸುದ್ದಿಗಳನ್ನು ಅರ್ಜಿದಾರರ ವಿರುದ್ಧ ಪ್ರಸಾರ ಮಾಡದಂತೆ ನಿರ್ಬಂಧ‌ ವಿಧಿಸಿ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.

 

Continue Reading

LATEST NEWS

Trending