Connect with us

    bangalore

    ನಡು ರಾತ್ರಿಯಲ್ಲಿ ಹೆತ್ತ ತಾಯಿಯನ್ನೇ ರಸ್ತೆಗೆ ತಳ್ಳಿ ಎಸ್ಕೇಪ್ ಆದ ಪಾಪಿಗಳು..!

    Published

    on

    ಬೆಂಗಳೂರು: ಇತ್ತೀಚೀನ ದಿನಗಳಲ್ಲಿ ತಮ್ಮನ್ನು ಹೆತ್ತು, ಹೊತ್ತು ಸಾಕಿ ಬೆಳೆಸಿದ ತಂದೆ – ತಾಯಿಗಳನ್ನೇ ಆಶ್ರಮದಲ್ಲಿ ಹಾಕುತ್ತಿರುವುದು ಹೆಚ್ಚಾಗಿದೆ. ಆದರೆ ಅದಕ್ಕೂ ಮೀರಿ ಇಲ್ಲೊಂದು ಮಗಳು ಹಾಗೂ ಅಳಿಯ ಸೇರಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವೃದ್ಧೆಗೆ ಹಲ್ಲೆ ಮಾಡಿ ರಾತ್ರೋ ರಾತ್ರಿ ರಸ್ತೆಯಲ್ಲಿ ಬಿಟ್ಟು ಬಂದ ಅಮಾನವೀಯ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅರ್ಜಾಪುರ ಸಮೀಪದ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ.


    ಗ್ರೇಸಿ ಪೀಟರ್ (80) ಎಂಬ ವೃದ್ಧೆಯನ್ನು ಅವರ ಮಗಳು ಆಶಾ ರಾಣಿ ಹಾಗೂ ಅಳಿಯ ಅಳಿಯ ಮಂಜುನಾಥ್ ರಸ್ತೆ ಮಧ್ಯೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಗ್ರೇಸಿ ಪೀಟರ್ ವೃದ್ಧೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಮಗಳು, ಅಳಿಯ ಹಾಗೂ ಮೊಮ್ಮಕ್ಕಳ ಜೊತೆ ವೃದ್ಧೆ ದೊಮ್ಮಸಂದ್ರದಲ್ಲಿ ವಾಸವಾಗಿದ್ದರು. ಇದೀಗ ಹೆತ್ತ ತಾಯಿಯನ್ನೇ ಮಗಳು ಮತ್ತು ಅಳಿಯ ಸೇರಿ ಬೀದಿಗೆ ತಳ್ಳಿದ್ದಾರೆ. ಎಷ್ಟೇ ಕಷ್ಟವಾದರೂ ತಂದೆ ತಾಯಿಗಳು ಮಕ್ಕಳನ್ನು ಸಾಕಿ ಬೆಳೆಸಿ ದೇವರಂತೆ ನೋಡಿಕೊಳ್ಳುತ್ತಾರೆ. ಅದೇ ತಂದೆ ತಾಯಿಗೆ ವಯಸ್ಸಾದಾಗ ಮಕ್ಕಳು ತಂದೆ ತಾಯಿಯನ್ನು ದೇವರಂತೆ ಕಂಡು ಮಗುವಿನಂತೆ ಆರೈಕೆ ಮಾಡಬೇಕು. ಆದರೆ ಈ ಘಟನೆ ಕೇಳಿದರೆ ಅದೆಂತ ಪಾಪಿಗಳು ಎಂದು ಹೇಳಬಹುದು. ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ರಾತ್ರಿ ದಾರಿಯಲ್ಲಿ ಬಿಟ್ಟು ಬಂದಿದ್ದಾರೆ ಎಂದರೆ ಇದೆಂತಹ ನಾಚಿಗೇಡಿನ ಕೆಲಸ.

    ಇಷ್ಟು ಮಾತ್ರವಲ್ಲದೇ ಅಳಿಯ ಮಂಜುನಾಥ್ ದಿನನಿತ್ಯ ಕುಡಿದು ಬಂದು ವೃದ್ದೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡಾ ಮಾಡುತ್ತಿದ್ದ. ವೃದ್ಧೆಯ ಕಾಲು ಮುರಿದು ಈ ಪಾಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
    ವೃದ್ಧೆ ಗಾಳಿ, ಚಳಿಯಲ್ಲಿ ದೇವಾಲಯದ ಬಳಿ ಮಲಗಿದ್ದನ್ನು ನೋಡಿದ ಗ್ರಾಮಸ್ಥರು ಆಕೆಯನ್ನು ರಕ್ಷಣೆ ಮಾಡಿ ಆಶ್ರಮಕ್ಕೆ ಬಿಟ್ಟಿದ್ದಾರೆ. ಆ ವೃದ್ಧೆಯು ಮೈಮೇಲಿನ ಗಾಯಗಳಿಂದ ವೃದ್ಧೆ ನರಳಾಡುತ್ತಿದ್ದರು. ದೇವಾಲಯದ ಬಳಿ ಮಲಗಿದ್ದ ಈ ಹಿರಿ ಜೀವವನ್ನು ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟದ ಆಶ್ರಮಕ್ಕೆ ರವಾನಿಸಿದ್ದು, ವೈದ್ಯರ ಚಿಕಿತ್ಸೆಯೊಂದಿಗೆ ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಪಿ ಮಗಳು ಮತ್ತು ಅಳಿಯನ ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    bangalore

    ವರದಕ್ಷಿಣೆ ಕಿರುಕುಳ; ನೇ*ಣಿಗೆ ಶರಣಾದ ಟೆಕ್ಕಿ

    Published

    on

    ಮಂಗಳೂರು/ಬೆಂಗಳೂರು : ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ನಡೆದಿದೆ. ಪೂಜಾ (22) ಜೀವಾಂತ್ಯಗೊಳಿಸಿದ ವಿವಾಹಿತೆ. ಪೂಜಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ಸುನೀಲ್ ಎಂಬಾತನನ್ನು ಪೂಜಾ ಮದುವೆಯಾಗಿದ್ದರು. ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಪತಿ ಪೀಡಿಸುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಇದನ್ನೂ ಓದಿ : ಸೀಲ್ಡ್​ ತಂಪು ಪಾನೀಯ ಬಾಟಲ್ ಒಳಗಿತ್ತು ಜೇಡರ ಹುಳ!
    ಮಗಳ ಸಾವಿಗೆ ಪತಿ ಸುನೀಲ್ ಹಾಗೂ ಮೈದುನ ಅನಿಲ್ ಕಾರಣ ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಗಂಗಮ್ಮನಗುಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    bangalore

    ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!

    Published

    on

    ಬೆಂಗಳೂರು : ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಹಾಘೂ ಚಾರ್‌ಧಾಮ್‌ ಯಾತ್ರಿಗಳಿಗೆ ಅನುದಾನ ನೀಡುವ ಕುರಿತು ಮುಜರಾಯಿ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮಾನಸ ಸರೋವರ ಯಾತ್ರಿಗಳಿಗೆ ರೂ.30 ಸಾವಿರ, ಚಾರ್‌ಧಾಮ್‌ ಯಾತ್ರಿಗಳಿಗೆ ರೂ.20 ಸಾವಿರ , ಹಾಗೂ ಈಗಾಗಲೇ ಕಾಶಿ ಯಾತ್ರೆ ಕೈಗೊಂಡ 30 ಸಾವಿರ ಯಾತ್ರಿಗಳಿಗೆ ತಲಾ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.
    ಕೇವಲ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಈ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ. ಈಗಾಗಲೇ ಈ ತೀರ್ಥ ಕ್ಷೇತ್ರಗಳಿಗೆ ಹೋಗಿ ಬಂದಿರುವವರು ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದಾರೆ. ಇದಕ್ಕಾಗಿ ರೂ.25 ಪಾವತಿಸಿ ಸಂಬಂಧಿಸಿದ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

    ಚಾರ್‌ಧಾಮ್ ಯಾತ್ರೆಯ ಮಾರ್ಗಸೂಚಿಗಳು

    • ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡುವುದು.
    • 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೆ ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು.
    • ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ.

    ಕಾಶಿ ಯಾತ್ರೆಯ ಮಾರ್ಗಸೂಚಿಗಳು

    • ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು.
    • 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು.

     

    ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಯನ್ನು ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ

    Continue Reading

    bangalore

    ಗೋಬಿ ಮಂಚೂರಿ ಆಯ್ತು..! ಈಗ ಚಿಕನ್‌ ಕಬಾಬ್‌, ಫಿಶ್‌ ಫುಡ್‌ ಮೇಲೆ ಕಣ್ಣು…!

    Published

    on

    ಮಂಗಳೂರು : ಫಿಶ್ ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.


    ಇದೀಗ ಆರೋಗ್ಯ ಸಚಿವರ ಸೂಚನೆಯಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಚಿಕನ್ ಕಬಾಬ್ ಮತ್ತು ಫಿಶ್ ಫುಡ್ ನಲ್ಲಿ ಕಲರಿಂಗ್ ಇರುವುದು ಪತ್ತೆಯಾಗಿದೆ. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಾನೂನು ಉಲ್ಲಂಘಿಸಿದ್ರೆ 7 ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ವರೆಗಿನ ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಲಾಗಿದೆ.

    ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ.

    Continue Reading

    LATEST NEWS

    Trending