Connect with us

    LATEST NEWS

    ದಾವಣಗೆರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಹಂದಿಗಳ ಅನುಮಾನಾಸ್ಪದ ಸಾವು : ಹಂದಿ ಜ್ವರದ ಶಂಕೆ- ಆತಂಕದಲ್ಲಿ ಜನತೆ..!

    Published

    on

    ದಾವಣಗೆರೆ: ದಾವಣಗೆರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಹಂದಿಗಳು ಅನುಮಾನಾಸ್ಪದವಾಗಿ ಸಾಯುತ್ತಿದ್ದು, ಹಂದಿ ಜ್ವರದ ಶಂಕೆ ವ್ಯಕ್ತವಾಗಿದೆ.

    ಪರೀಕ್ಷೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಜಿಲ್ಲಾಡಳಿತ ವರದಿಯನ್ನು ಎದುರು ನೋಡುತ್ತಿದೆಯಾದರೂ ಇದು ಆಫ್ರಿಕನ್ ಹಂದಿ ಜ್ವರ ಎಂದು ಶಂಕಿಶಲಾಗಿದೆ.

    ನಗರದ ರಾಮನಗರ, ಬೂದಾಳು ರೋಡ್, ಬೇತೂರು ರೋಡ್ ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲೂ ಪ್ರತಿ ದಿನ ಹತ್ತಾರು ಹಂದಿಗಳು ಸಾವನ್ನಪ್ಪಿದ್ದು ಎಲ್ಲೆಡೆ ದುರ್ನಾತ ಬೀರುತ್ತಿವೆ. ಸತ್ತ ಹಂದಿಗಳನ್ನ ಪಾಲಿಕೆ ಸಿಬ್ಬಂದಿ ವಿಲೇವಾರಿ ಮಾಡುತ್ತಿದ್ದಾರೆಯಾದರೂ ಸವಾಲಾಗಿ ಪರಿಣಮಿಸುತ್ತಿದೆ.

    ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ 15,000ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

    ಮೃತ ಹಂದಿಗಳ ಮರಣೋತ್ತರ ಪರೀಕ್ಷೆ ಮಾಡಿರುವ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಹಂದಿಗಳು ಲಿವರ್, ಹೃದಯ ಹಾಗೂ ಕರುಳಿನ ಭಾಗಗಳನ್ನು ಪರೀಕ್ಷೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ದಾವಣಗೆರೆಯ ಶಾಖೆಗೆ ನೀಡಿದ್ದು ಹೆಚ್ಚಿನ ಪರೀಕ್ಷೆಗಾಗಿ ಈ ಶಾಖೆ ಬೆಂಗಳೂರಿನ ಕೇಂದ್ರ ‌ಕಚೇರಿಗೆ ಕಳುಹಿಸಿದ್ದು ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ .

    DAKSHINA KANNADA

    ಲಾರಿಯ ಟಯರ್‌ ಬದಲಿಸುವಾಗ ಹೊರಚಿಮ್ಮಿದ ಡಿಸ್ಕ್; ವ್ಯಕ್ತಿಗೆ ಗಂಭೀ*ರ ಗಾ*ಯ

    Published

    on

    ಪುತ್ತೂರು : ಲಾರಿಯೊಂದರ ಟಯರ್‌ ಬದಲಿಸುವಾಗ ಡಿಸ್ಕ್ ಚಿಮ್ಮಿ ಟಯರ್‌ ಸಮೇತ ಕಾಂಪೌಂಡ್‌ ಗೆ ಎಸೆಯಲ್ಪಟ್ಟು, ವ್ಯಕ್ತಿಯೊಬ್ಬರು ಗಂಭೀ*ರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ(ಜು.22) ರಾತ್ರಿ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಗಂಭೀರವಾಗಿ ಗಾಯಗೊಂಡವರು. ತನ್ನ ಬಾವನಿಗೆ ಸೇರಿದ ಕಲ್ಲು ಸಾಗಾಟದ ಲಾರಿಯ ಟಯರ್‌ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.

    ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್‌ ತಂದಿದ್ದರು. ಟಯರ್‌ ಬದಲಿಸುವ ವೇಳೆ ಒಮ್ಮೆಲೇ ಟಯರ್‌ನ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್‌ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್ ಗೆ ಎಸೆಯಲ್ಪಟ್ಟಿದ್ದಾರೆ.

    ಇದನ್ನೂ ಓದಿ :‘ಕೊಹ್ಲಿ’ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ? ಎಂದು ಪ್ರಶ್ನಿಸಿದಕ್ಕೆ ‘ಗಂಭೀರ್’ ಖಡಕ್ ಉತ್ತರವೇನು ಗೊತ್ತಾ?
    ತೀವ್ರ ಗಾಯಗೊಂಡ ರಶೀದ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

    Continue Reading

    DAKSHINA KANNADA

    ಸೊಳ್ಳೆ ಉತ್ಪತ್ತಿ ತಾಣವಾಗಿರುವ ಹೃದಯಭಾಗದ ಕಟ್ಟಡ; ಕಟ್ಟಡ ಮಾಲಕರಿಗೆ ನೊಟೀಸ್‌.!!

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಡೆಂಗ್ಯೂ ನಿರ್ಮೂಲನೆಗೆ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದೆ. ಹಲವು ಜಾಗೃತಿ ಕಾರ್ಯಕ್ರಮದ ಮೂಲಕ ಲಾರ್ವಾ ಉತ್ಪತ್ತಿ ಸ್ಥಳಗಳನ್ನು ನಾಶ ಮಾಡುವ ಪ್ರಯತ್ನ ಕೂಡಾ ನಡೆಯುತ್ತಿದೆ. ಆದರೆ ನಗರದ ಹೃದಯಭಾಗದಲ್ಲೇ ಇರುವ ಬೃಹತ್ ವಾಣಿಜ್ಯ ಕಟ್ಟಡವೊಂದು ಸೊಳ್ಳೆ ಉತ್ಪತ್ತಿ ತಾಣವಾಗಿದೆ. ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಇರುವ ಸಹಕಾರಿ ಭವನ ಹೆಸರಿನ ಕಟ್ಟಡ ಇಡೀ ನಗರಕ್ಕೇ ಡೆಂಗ್ಯೂ ಮಲೇರಿಯ ಹರಡಿಸ್ತಾ ಇದೆ. ಬಾವಾ ಬಿಲ್ಡರ್ಸ್ ಗೆ ಸೇರಿರುವ ಈ ಕಟ್ಟಡ ಸದ್ಯ ಕಮಿಟಿಯೊಂದರ ಪಾಲಾಗಿದೆ ಎಂಬ ಮಾಹಿತಿ ಇದೆ.

    ಈ ಕಟ್ಟಡದ ಬೇಸ್ಮೆಂಟ್ ನಲ್ಲಿ ಏಳಡಿಯಷ್ಟು ಸೊಳ್ಳೆಗಳು ಸಂಗ್ರಹವಾಗಿ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಗಲೀಜು ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲಿ ಇರದ ಕಾರಣ ಡ್ರೈನೇಜ್ ನಲ್ಲಿ ಹರಿಯಬೇಕಾದ ನೀರು ಇಲ್ಲಿ ಸಂಗ್ರಹವಾಗಿದೆ. ಕಟ್ಟಡದ ಅಕ್ಕ ಪಕ್ಕದಲ್ಲಿ ಹೊಟೇಲ್ ಹಾಗೂ ಫಾಸ್ಟ್ ಫುಡ್ ಅಂಗಡಿಗಳ ಜೊತೆಗೆ ಸಾಕಷ್ಟು ಜನನಿಬಿಡ ಪ್ರದೇಶ ಇದಾಗಿದೆ. ಹೀಗಾಗಿ ಈ ಡ್ರೈನೇಜ್ ನೀರಿನ ಸಂಗ್ರಹದಿಂದ  ಜನರಿಗೆ ರೋಗ ಹರಡುವ ಆತಂಕ ಎದುರಾಗಿದೆ.  ವಾರಗಳ ಹಿಂದೆ  ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಎಚ್ಚರಿಕೆ ನೋಟಿಸ್ ನೀಡಿದ್ದರು.

    ಮಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸುತ್ತಿರುವ ಕಳ್ಳರ ಕಾಟ..!!

    ಡ್ರೈನೇಜ್ ನೀರು ನಿಲ್ಲದಂತೆ ಕ್ರಮಕ್ಕೆ ಸೂಚಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ವಿಚಾರಕ್ಕೆ ಫೈನ್ ಕೂಡಾ ವಿಧಿಸಿದ್ದರು. ಆದರೆ  ಎಚ್ಚರಿಕೆ ನೋಟಿಸಿಗೂ ಕ್ಯಾರೇ ಅನ್ನದ ಕಟ್ಟಡದ ಕಮಿಟಿ ಫೈನ್‌ ಕೂಡಾ ಕಟ್ಟಿಲ್ಲ. ಇನ್ನು ಇಲ್ಲಿ ಸಂಗ್ರಹವಾಗಿರೋ ಡ್ರೈನೇಜ್ ನೀರು ಖಾಲಿ ಮಾಡೋ ಕೆಲಸಕ್ಕೂ ಕೈ ಹಾಕಿಲ್ಲ. ಹೀಗಾಗಿ ಇಂದು ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಟ್ಟಡ ಮಾಲೀಕರಾದ ಬಾವ ಬಿಲ್ಡರ್ಸ್ ಹಾಗೂ ಕಟ್ಟಡದ ಸಮಿತಿಗೆ ನೋಟೀಸ್ ಜಾರಿ ಮಾಡಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾದಾಗ ಜಿಲ್ಲೆಯಿಂದಲೇ ಲಾರ್ವಾ ನಿರ್ಮೂಲನಾ ಕೇಂದ್ರಕ್ಕೆ ಆರೋಗ್ಯ ಸಚಿವರು ಚಾಲನೆ ನೀಡಿದ್ದರು. ಇದಾದ ಬಳಿಕ ಸಾಕಷ್ಟು ಕಡೆಯಲ್ಲಿ ಲಾರ್ವ ನಿರ್ಮೂಲನೆ ಮಾಡುವ ಕೆಲಸ ಕೂಡಾ ಆಗಿತ್ತು. ಆದ್ರೆ ಈ ಸಹಕಾರಿ ಭವನದ ಬೇಸ್ಮೆಂಟ್ ನಲ್ಲಿ ನಿಂತಿರೋ ಡ್ರೈನೇಜ್ ನೀರಿನಿಂದ ಇಡೀ ನಗರಕ್ಕೇ ಹಲವು ಕಾಯಿಲೆ ಹರಡುವ ಅಪಾಯ ಇದೆ. ಹೀಗಾಗಿ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    Continue Reading

    LATEST NEWS

    ಅಸಹಜ ಲೈಂ*ಗಿಕ ದೌರ್ಜನ್ಯ : ಸೂರಜ್ ರೇವಣ್ಣಗೆ ಜಾಮೀನು ಮಂಜೂರು

    Published

    on

    ಬೆಂಗಳೂರು : ಅಸಹಜ ಲೈಂ*ಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೋಮವಾರ(ಜು.22) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


    ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಸೂರಜ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, ಆದೇಶ ಕಾಯ್ದಿರಿಸಿತ್ತು. ಇಂದು ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

    ಇದನ್ನೂ ಓದಿ : ಗೀಸರ್‌ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
    ಆರೋಪಿ ಸೂರಜ್ ರೇವಣ್ಣ ಯಾವುದೇ ರೀತಿಯಲ್ಲೂ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು. ತನಿಖಾಧಿಕಾರಿ ಮುಂದೆ ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಹಾಜರಾಗಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ.

    Continue Reading

    LATEST NEWS

    Trending