Connect with us

    DAKSHINA KANNADA

    ಕಡಬದಲ್ಲಿ ಹಲ್ಲೆಗೊಳಗಾದ ಯುವಕರಿಗೆ ಮುಸ್ಲಿಂ ಕಮಿಟಿ ಸಾಂತ್ವನ-ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

    Published

    on

    ಮಂಗಳೂರು: ‘Maಕಾಣಿಯೂರಿನಲ್ಲಿ ಬೆಡ್‌ಶೀಟ್‌ ಮಾರಾಟಕ್ಕೆ ಹೋಗಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿರುವುದು ಖಂಡನೀಯ’ ಎಂದು ಮುಸ್ಲಿಂ ಸೆಂಟ್ರಲ್‌ ಕಮಿಟಿ ಹೇಳಿದೆ.

    ಮಹಮ್ಮದ್ ರಫೀಕ್ ಮತ್ತು ರಮೀಜುದ್ದೀನ್ ಹಲ್ಲೆಗೊಳಗಾದ ಯುವಕರು.


    ಮಂಗಳೂರಿನ ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವಕರನ್ನು ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ನೇತೃತ್ವದ ನಿಯೋಗವು ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿತು.

    ಕಡಬದಲ್ಲಿ ಬೆಡ್‌ಶೀಟ್ ಮಾರಲು ಹೋಗಿದ್ದ ಯುವಕರನ್ನು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಿದ್ದಲ್ಲದೆ ಅವರ ಕಾರನ್ನು ಕೂಡಾ ಜಖಂಗೊಳಿಸಿದ್ದಾರೆ.

    ಅದರಲ್ಲಿದ್ದ ಬೆಡ್ ಶೀಟ್‌ಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದ ಯುವಕರಿಗೆ 2 ಲಕ್ಷ ನಷ್ಟ ಉಂಟಾಗಿದೆ’ ಎಂದೂ ಕಮಿಟಿ ಆರೋಪಿಸಿದೆ.

    ಅಷ್ಟೇ ಅಲ್ಲದೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕಮಿಟಿಯು ಒತ್ತಾಯಿಸಿದೆ.

    ಈ ಸಂದರ್ಭ ಮುಸ್ಲಿಂ ಸೆಂಟ್ರಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಅಹ್ಮದ್ ಬಾವ ಬಜಾಲ್, ಅಹ್ಮದ್ ಬಾವ ಪಡೀಲ್, ಡಿ.ಎಂ. ಅಸ್ಲಂ, ಮೊಯ್ದಿನ್ ಮೊನು, ಎಂ.ಎ. ಅಶ್ರಫ್, ಮೊಹಮ್ಮದ್ ಬಪ್ಪಳಿಗೆ, ಸಿ.ಎಂ ಹನೀಫ್, ರಿಯಾಜುದ್ದೀನ್, ಎನ್.ಕೆ. ಅಬೂಬಕ್ಕರ್ ಉಪಸ್ಥಿತರಿದ್ದರು.

    DAKSHINA KANNADA

    ಕಪ್ಪೆಗಳ ಅಕ್ರಮ ಸಾಗಾಟ..! ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ..!

    Published

    on

    ಮಂಗಳೂರು (ಕಾರವಾರ): ಬಸ್‌ನಲ್ಲಿ ಗೋವಾಕ್ಕೆ ಸಾಗಾಟ ಮಾಡುತ್ತಿದ್ದ 41 ಬುಲ್‌ ಫ್ರಾಗ್‌ಗಳನ್ನು ಕಾರವಾರದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಬುಲ್ ಫ್ರಾಗ್ ಸಾಗಾಟ ಮಾಡುತ್ತಿದ್ದ ಇಬ್ಬರು ಗೋವಾ ಮೂಲದ ವ್ಯಕ್ತಿಗಳನ್ನು ಬಂಧಿಸಿ ಬಸ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ಬ್ರಿಡ್ಜ್‌ ಬಳಿ ಕಪ್ಪೆಗಳ ರಕ್ಷಣೆ ಮಾಡಲಾಗಿದೆ. ಗೋವಾ ಮೂಲದ ಕಾಣಕೋಣ ನಿವಾಸಿ ಸಿದ್ದೇಶ್ ದೇಸಾಯಿ ಬಸ್ ಚಾಲಕನಾಗಿದ್ದು, ನಿರ್ವಾಹಕ ಜಾನ್‌ ಲೂಲಿಮ್‌ ಬಂಧಿತರು.

    ಕಪ್ಪೆ ಅಕ್ರಮ ಸಾಗಾಣಿಕೆ ಹಿಂದಿರುವ ರಹಸ್ಯ..!

    ಬುಲ್‌ ಫ್ರಾಗ್‌ಗಳು ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇದರಿಂದ ತಯಾರಾಗುವ ಖಾದ್ಯಕ್ಕೆ ಗೋವಾದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಪ್ಪೆಗಳ ಕಾಲುಗಳನ್ನು ಕಡಿದು ಮಾಡುವ ಫ್ರೈ ಹಾಗೂ ಕಪ್ಪೆಗಳ ಚರ್ಮ ತೆಗೆದು ಮಾಡುವ ಫ್ರೈಗೆ ಇಲ್ಲಿ ಜಂಪಿಂಗ್ ಚಿಕನ್ ಎಂದು ಹೆಸರಿದೆ. ಗೋವಾದ ಜನರು ಹಾಗೂ ವಿದೇಶಿಗರು ಈ ಜಂಪಿಂಗ್ ಚಿಕನ್ ಗಿರಾಕಿಗಳಾಗಿದ್ದು, ಒಂದು ಪ್ಲೇಟ್‌ಗೆ 1500 ರೂಪಾಯಿಗೆ ಮಾರಾಟವಾಗುತ್ತದೆ. ಗೋವಾದಲ್ಲಿ ಈ ಕಪ್ಪೆಗಳು ಸಿಗದ ಕಾರಣ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಅಕ್ರಮ ರವಾನೆಯಾಗುತ್ತಿದೆ. ಕಾರಾವಾರ, ಅಂಕೋಲ ಸೇರಿದಂತೆ ಹಲವು ಜಾಗದಿಂದ ಈ ಕಪ್ಪೆಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಒಂದು ಕಪ್ಪೆಗೆ 500 ರೂಪಾಯಿಗಳ ಬೆಲೆ ಇದ್ದು, ಜೀವಂತವಾಗಿ ಈ ಕಪ್ಪೆಗಳ ಸಾಗಾಟ ಮಾಡಲಾಗುತ್ತದೆ.

    Continue Reading

    DAKSHINA KANNADA

    ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ : ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

    Published

    on

    ಮಂಗಳೂರು : ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಮಂಗಳವಾರ(ಜೂ.18) ಕೆಎಸ್ ರಾವ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.


    ಈ ಸಂದರ್ಭ ಸರ್ವೋತ್ತಮ ಅಂಚನ್, ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಹಿಂದುಸ್ತಾನ್ ಪೆಟ್ರೋಲಿಯಂನ ರವಿ ಎಸ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ದಿನೇಶ್ ಕೆ, ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

    ಇದನ್ನೂ ಓದಿ : ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

    Continue Reading

    DAKSHINA KANNADA

    ಚಿಕ್ಕಮೇಳದ ಹೆಸರಿನಲ್ಲಿ ಯಕ್ಷಗಾನ ಕಲೆಗೆ ಅಪಚಾರ ಮಾಡದಿರಿ; ಒಕ್ಕೂಟ ಮನವಿ

    Published

    on

    ಮಂಗಳೂರು: ಇಂದು ದೇಶ, ವಿದೇಶಗಳಲ್ಲಿ ಯಕ್ಷಗಾನದ ಹಿರಿಮೆ ಸಾರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಹೆಸರಿನಲ್ಲಿ ಕಲೆಯ ಗಂಧಗಾಳಿ ಇಲ್ಲದವರು ಕೂಡಾ ಯಕ್ಷ ಕಲೆಯನ್ನು ವಿರೂಪಗೊಳಿಸುತ್ತಿವುದು ವಿಷಾದನೀಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ತಿರುಗಾಟದ ಇಲ್ಲದ ಸಂದರ್ಭದಲ್ಲಿ ಮನೆ ಮನೆಗೆ ಚಿಕ್ಕ ಮೇಳಗಳು ಹೊರಡುತ್ತವೆ. ಆದರೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಅದೊಂದು ದಂಧೆಯಾಗಿ ವ್ಯಾಪಕವಾಗಿರುವುದು ನೋವಿನ ಸಂಗತಿ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಮಿತಿ ದೂರಿದೆ.

    ಸಂಪ್ರದಾಯಕ್ಕೆ ಬದ್ಧವಾಗಿ, ಶಿಸ್ತುಬದ್ಧವಾಗಿ ಯಕ್ಷಗಾನ ಮಾಡಲು ಕಲಾವಿದರಲ್ಲಿ ಒಟ್ಟು ಮಾಡಿಕೊಂಡು ತೆಂಕುತಿಟ್ಟು ಚಿಕ್ಕಮೇಳ ಹೆಸರಿನಲ್ಲಿ ತಿರುಗಾಟವನ್ನು ಆರಂಭಿಸಲಾಗಿದೆ. ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಮನೆಯಲ್ಲಿ ಆಟವಾಡಿಸಲು ಜನತೆ ಅನುವು ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಒಕ್ಕೂಟದ ಅಧಿಕೃತ ಪರವಾಣಿಗೆ ಪಡೆದು ತಿರುಗಾಟ ಮಾಡುವವರು ಸಂಜೆ 6ರಿಂದ ರಾತ್ರಿ 10.30ರವರೆಗೆ ಕನ್ನಡ ಇಲ್ಲವೇ ತುಳುಭಾಷೆಗಳ ಗರಿಷ್ಠ 20 ನಿಮಿಷಗಳ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಮಾಡಲಿರುವರು ಎಂದರು.

    ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮೇಶ ಕುಲಶೇಖರ, ಕುಮಾರ್ ಮಾಲೆಮಾರ್‌, ದಿವಾಕರ ದಾಸ್, ಕಡಬ ದಿನೇಶ ರೈ ಮೊದಲಾದವರಿದ್ದರು.

    Continue Reading

    LATEST NEWS

    Trending