Connect with us

    DAKSHINA KANNADA

    ಕದಳಿ ಜೋಗಿ ಮಠದಲ್ಲಿ ವಿಜಯ ನಗರ ಅರಸ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಬರೆದ ಅಪರೂಪದ ಶಾಸನ ಪತ್ತೆ..!

    Published

    on

    ಮಂಗಳೂರಿನ ಪುರಾಣ ಪ್ರಸಿದ್ದ ಕದಳಿ ಜೋಗಿ ಮಠದಲ್ಲಿ ವಿಜಯ ನಗರ ಅರಸ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಬರೆದ ಅಪರೂಪದ ಶಾಸನ ಪತ್ತೆಯಾಗಿದೆ. 

    ಮಂಗಳೂರು : ಮಂಗಳೂರಿನ ಪುರಾಣ ಪ್ರಸಿದ್ದ ಕದಳಿ ಜೋಗಿ ಮಠದಲ್ಲಿ ವಿಜಯ ನಗರ ಅರಸ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಬರೆದ ಅಪರೂಪದ ಶಾಸನ ಪತ್ತೆಯಾಗಿದೆ.

    ಮಂಗಳೂರಿನ ಕದ್ರಿ ದೇವಾಲಯದ ಹೆಡ್ ಕ್ಲರ್ಕ್ ಅರುಣ್ ಕುಮಾರ್ ಅವರ ಮಾಹಿತಿಯ ಮೇರೆಗೆ ಕದ್ರಿ ಶ್ರೀ ಜೋಗಿಮಠದ ಮತ್ಸ್ಯೇಂದ್ರನಾಥ ಗುಡಿಯ ಆವರಣದಲ್ಲಿರುವ ವಿಜಯನಗರ ದೊರೆ ವಿಜಯ ಭೂಪತಿರಾಯನ ಶಾಸನವನ್ನು ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್ ಇಲ್ಲಿನ ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮರು ಓದಿಗೆ ಒಳಪಡಿಸಿದ್ದಾರೆ.

    ಶಾಸನವು ಒಟ್ಟು 31 ಸಾಲುಗಳನ್ನು ಒಳಗೊಂಡಿದ್ದು, ಪ್ರಾರಂಭಿಕ ಅಧ್ಯಯನದ ಸಂದರ್ಭದಲ್ಲಿ ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದರಿಂದ ಪ್ರಾರಂಭಿಕ 10 ಸಾಲುಗಳನ್ನು ಮಾತ್ರ ‘ದಕ್ಷಿಣ ಭಾರತ ಶಾಸನ ಸಂಪುಟ-7, ಶಾಸನ ಸಂ- 192’ರಲ್ಲಿ ಪ್ರಕಟ ಮಾಡಲಾಗಿದೆ.

    ಇತ್ತೀಚೆಗೆ ಗುಡಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಈ ಶಾಸನವನ್ನು ಮೇಲೆತ್ತಿದ್ದು ಪ್ರಸ್ತುತ ಈ ಶಾಸನದ ಸಮಗ್ರ ಅಧ್ಯಯನವನ್ನು ಮಾಡಿ, ಹೆಚ್ಚಿನ ವಿವರವನ್ನು ದಾಖಲು ಮಾಡಲಾಗಿದೆ. ‘ಸ್ವಸ್ತಿಶ್ರೀ’ ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ದಾನಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದೆ.

    ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಹಾಗೂ ಇದರ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ನಂದಿ ಮತು ದೀಪಕಂಬದ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ.

    ವಿಜಯ ಭೂಪತಿರಾಯನ ಕಾಲಾವಧಿಯಲ್ಲಿ ಮನ್ಮಹಾ ಪ್ರಧಾನ ಬೈಚೆ ದಂಡನಾಯಕನ ನಿರೂಪದಿಂದ, ಮಂಗಳೂರು ರಾಜ್ಯವನ್ನು ಪಾಲಿಸುತ್ತಿದ್ದ ನಾಗಂಣನು, ದೊರೆ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಶಕವರುಷ 1345ನೆಯ ಶೋಭಕೃತ ಸಂವತ್ಸರದ ಚೈತ್ರ ಶುದ್ಧ 1 ಆದಿತ್ಯವಾರ (ಸಾ.ಶ. 21/02/1423) ದಂದು ಶ್ರೀ ತಿಮಿರೇಶ್ವರ ದೇವರಲ್ಲಿ ಶಾಲಂಕಾಯನ ಗೋತ್ರದ ರುಕ್ ಶಾಖೆಯ ನರಹರಿ ಭಟ್ಟರ ಪುತ್ರ ಕೃಷ್ಣ ಭಟ್ಟರು ಮತ್ತು ಆತ್ರೇಯ ಗೋತ್ರದ ಯರ್ಜು ಶಾಖೆಯ ಅನಂತ ಭಟ್ಟರ ಪುತ್ರ ಮಾಯಿ ಭಟ್ಟರಿಂದ ದುರ್ಗಾದೇವಿಯ ಜಪವ ಮಾಡಿಸುತ್ತಾನೆ.

    ಈ ಸಂದರ್ಭದಲ್ಲಿ ಆ ಇಬ್ಬರು ಬ್ರಾಹ್ಮಣರಿಗೆ 120 ಮೂಡೆ ಭತ್ತ ಬೆಳೆಯುವ ಭೂಮಿಯನ್ನು ದಾನವಾಗಿ ನೀಡಿದ್ದು, ಆ ಭೂಮಿಯ ಚತುಸ್ಸೀಮೆಯ ವಿವರವನ್ನು ಶಾಸನವು ತಿಳಿಸುತ್ತದೆ.

    ಹಾಗೆಯೇ ಶಾಸನದಲ್ಲಿ ಮಂಜುನಾಥ ದೇವರು, ಅರಸುತನದ ಶ್ರೀ ಚಕ್ರಪಾಣಿ ಗೋಪಿನಾಥ ದೇವರ ಉಲ್ಲೇಖಗಳಿದ್ದು, ಶಾಸನವು ಶಾಪಾಶಯ ವಾಕ್ಯದೊಂದಿಗೆ ಮುಕ್ತಾಯಗೊಂಡಿದೆ.

    ಈ ಕ್ಷೇತ್ರ ಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಮಾರ್ಗದರ್ಶನ ನೀಡಿದ್ದು, ಅನುಷ ಆಚಾರ್ಯ ಮತ್ತು ಶ್ರೀ ಜೋಗಿಮಠದ ಅರಸರು ಸಹಕಾರ ನೀಡಿದ್ದಾರೆ.

    Ancient Mangaluru

    ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು

    Published

    on

    ಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.


    ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.

    Continue Reading

    BANTWAL

    ಬಂಟ್ವಾಳ: ಅಟೋ ಮತ್ತು ಬೈಕ್ ನಡುವೆ ಅ*ಪಘಾತ; ಮೂವರು ಗಂ*ಭೀರ

    Published

    on

    ಬಂಟ್ವಾಳ : ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಾಡುಮಠದ ಬಳಿ ಅಟೋ ಹಾಗೂ ಬೈಕ್ ಒಂದರ ನಡುವೆ ಅ*ಪಘಾತ ಸಂಭವಿಸಿ ಮೂವರು ಗಾ*ಯಗೊಂಡಿದ್ದಾರೆ.

    ಸಾಲೆತ್ತೂರಿನ ಅಟೋ ಚಾಲಕ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಅವರು ಗಾ*ಯಗೊಂಡಿದ್ದಾರೆ. ಅ*ಪಘಾತದ ತೀವ್ರತೆಗೆ ಮೂವರಿಗೂ ಗಂಭೀರ ಗಾ*ಯಗಳಾಗಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಗಾ*ಯಾಳುಗಳ ನೆರವಿಗೆ ಧಾವಿಸಿ ಬಂದಿದ್ದಾರೆ.

    ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಮೂವರು ಗಾ*ಯಾಳುಗಳು ಕೂಡಾ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವನ ಸ್ಥಿತಿ ಗಂ*ಭೀರವಾಗಿದೆ ಎಂದು ಮಾಹಿತಿ ಲಭಿಸಿದೆ. ಈ ಅ*ಪಘಾತದ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ; ದಾಳಿಯಲ್ಲಿ ಮ*ಡಿದ ಯೋಧರಿಗೆ ಗೌರವಾರ್ಪಣೆ

    Published

    on

    ಮಂಗಳೂರು: ಮುಂಬೈ ನಗರದ ಮೇಲೆ ಭಯೋತ್ಪಾದಕರು ನಡೆಸಿದ ದಾ*ಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾ*ಣವನ್ನು ಬ*ಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸುವ ರಾಷ್ಟ್ರಜಾಗೃತಿಯ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮವು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಜರುಗಿತು.

    ಕದ್ರಿ ಯುದ್ಧ ಸ್ಮಾರಕದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ವಂದನೀಯ ಡಾ ಪ್ರವೀಣ ಮಾರ್ಟಿಸ್‌ ವಹಿಸಿದ್ದರು. ಡಾ ವಾದಿರಾಜ ಗೋಪಾಡಿ ದಿಕ್ಸೂಚಿ ಭಾಷಣ ಮಾಡಿದರು.

    ಈ ಸಂದರ್ಭದಲ್ಲಿ ಎನ್‌ಎಂ ಪಿಎ ಸಿಐಎಸ್ಎಫ್‌ನ ಡೆಪ್ಯುಟಿ ಕಮಾಂಡೆಂಟ್‌  ರಾಜೇಂದ್ರ ಪ್ರಸಾದ್ ಪಾಠಕ್, ಕಾರ್ಯಕ್ರಮ ಸಂಘಟಕ ಡಾ ಶೇಷಪ್ಪ, ಡಾ ನಿಶ್ಚಿತ್‌ ಡಿ ಸೋಜಾ,  ಹಿರಿಯ ಪೊಲೀಸ್ ಅಧಿಕಾರಿ ಅಜ್ಜತ್ ಆಲಿ, ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ನ್ಯಾಯವಾದಿ ಬಿ. ನಯನ ಪೈ. ವಿದುಷಿ ಗುರು ಶ್ರೀಮತಿ ಸೌಮ್ಯ ಸುಧೀಂದ್ರ ರಾವ್, ಕಾರ್ಪೋರೇಟರ್‌ ಶಕೀಲಾ ಕಾವ ಮೊದಲಾದವರಿದ್ದರು. ನೃತ್ಯಸುಧಾ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಿಂದ ಹುತಾತ್ಮ ಸೈನಿಕರಿಗೆ ನೃತ್ಯನಮನ ನಡೆಯಿತು.

    Continue Reading

    LATEST NEWS

    Trending