DAKSHINA KANNADA
ಮಂಗಳೂರಿನಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಭಾರೀ ಸ್ಪೋಟಕ ವಶ: ಓರ್ವ ವಶಕ್ಕೆ
ಮಂಗಳೂರು: ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದ್ದು, ಓರ್ವನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತನನ್ನು ಆನಂದ ಗಟ್ಟಿ ಎಂದು ಗುರುತಿಸಲಾಗಿದೆ. ನಗರದ ಬಂದರು ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ 1,725 ಕೆ.ಜಿಗೂ ಹೆಚ್ಚು ಸ್ಫೋಟಕ ವಶಕ್ಕೆ ಪಡೆದಿದ್ದಾರೆ. ಪರವಾನಗಿ ಇಲ್ಲದೇ ಸಲ್ಫರ್ ಪೌಡರ್ 400 k.g, ಪೊಟ್ಯಾಸಿಯಮ್ ನೈಟ್ರೇಟ್ 350 k.g, ಬೇರಿಯಂ ನೈಟ್ರೇಟ್ 50 k.g, ಪೊಟ್ಯಾಸಿಯಮ್ ಕ್ಲೋರೈಟ್ 395 k.g, ಅಲ್ಯೂಮಿನಿಯಂ ಪೌಡರ್- 260 k.g, ಚಾರ್ ಕೋಲ್- 240 k.g, ಲೀಡ್ ಬಾಲ್ಸ್ 30 k.g, ಆ್ಯರ್ ಪಿಸ್ತೂಲ್ ಪೆಲೆಟ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ಇದರ ಒಟ್ಟು 1ಲಕ್ಷದ 11 ಸಾವಿರ ಮೌಲ್ಯದ್ದಾಗಿ ಎಂದು ಪೊಲೀಸರು ಅಂದಾಜಿಸಿದ್ದು, ಈತ ನಗರದ ಬಂದರು ಏರಿಯಾದಲ್ಲೇ ಗನ್ ಶಾಪ್ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
DAKSHINA KANNADA
ಪತಿ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗಿ ಮತದಾನದ ಕೊನೆ ಆಸೆ ತೀರಿಸಿದ ಪತ್ನಿ..!
ಮಂಗಳೂರು : ಅವರ ಪತಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಅದೇ ದಿನ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಕೂಡಾ ನಡೆದಿದೆ. ಆಕೆಗೆ ಪತಿ ಇನ್ನಿಲ್ಲ ಅನ್ನೋ ವಿಚಾರವನ್ನು ಯಾರೋ ತಿಳಿಸಿದ್ದಾರೆ. ಆದ್ರೆ ಆಕೆ ಪತಿಯ ಕೊನೆ ಆಸೆ ಈಡೇರಿಸಿದ ಬಳಿಕ ಪತಿಯ ಅಂತಿಮ ದರ್ಶನ ಪಡೆದಿದ್ದಾರೆ.
ಇದು ಮತದಾನ ಮಾಡದೇ ಇರುವವರಿಗೆ ಇವರೊಂದು ಪಾಠವಾಗಿದೆ. ಮಂಗಳವಾರ ರಾಜ್ಯದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ನಡೆದ ಘಟನೆ ಇದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಪಂಚಾಯತ್ ವ್ಯಾಪ್ತಿಯಲ್ಲಿ ಇದು ನಡೆದಿದೆ. ಇಲ್ಲಿನ ಆಡುಗೋಡಿನ ಕಲಾವತಿ ವೆಂಕಟೇಶ್ ಇವರ ಪತಿ ವೆಂಕಟೇಶ್ ಚುನಾವಣೆಯ ದಿನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇನ್ನೇನು ಓಟು ಹಾಕಲು ಹೋಗಬೇಕು ಅನ್ನೋ ಅಷ್ಟರಲ್ಲಿ ಪತಿ ಇಹಲೋಕ ತ್ಯಜಿಸಿದ ಮಾಹಿತಿ ಪತ್ನಿ ಕಲಾವತಿಗೆ ಬಂದಿದೆ. ಆದ್ರೆ ಕಲಾವತಿ ಅವರು ಈ ವೇಳೆ ತಮ್ಮ ಅಮೂಲ್ಯ ಮತ ಚಲಾಯಿಸಿ, ಬಳಿಕ ಪತಿಯ ದೇಹವನ್ನು ನೋಡಲು ತೆರಳಿದ್ದಾರೆ.
ಪತಿ ಒಂದು ಪಕ್ಷದ ಅಭಿಮಾನಿಯಾಗಿದ್ದು ,ಆ ಪಕ್ಷದ ನಾಯಕನನ್ನು ಯಾವಾಗಲು ಜಪಿಸ್ತಾ ಇದ್ರು ಹಾಗಾಗಿ ಪತಿಯ ಕೊನೆಯ ಆಸೆಯಾಗಿ ಅವರ ಪ್ರೀಯಪಟ್ಟವರಿಗೆ ಮತ ಚಲಾಯಿಸಿದೆ ಅಂತ ಕಲಾವತಿ ಹೇಳಿಕೊಂಡಿದ್ದಾರೆ.
DAKSHINA KANNADA
ಪ್ರಜ್ವಲ್ ಅಶ್ಲೀಲ್ ವಿಡಿಯೋ ಡಿಲೀಟ್ ಮಾಡಿ..! ಎಸ್ಐಟಿ ವಾರ್ನಿಂಗ್..!
ಮಂಗಳೂರು : ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣ ಬೆಂಬತ್ತಿರುವ ಎಸ್ ಐ ಟಿ ಖಡಕ್ ವಾರ್ನ್ ಮಾಡಿದೆ. ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡದಂತೆ ಹೇಳಿದೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿದ್ದರೆ, ಒಂದು ವೇಳೆ ಡಿಲೀಟ್ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಯಾವುದೇ ಅಶ್ಲೀಲ ವೀಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಇದ್ದರೆ ಅದರ ರಚನಕಾರರು ನೀವು ಎಂದು ಪರಿಗಣಿಸಿ ಕ್ರಿಮಿನಲ್ ಕೇಸ್ ಬೀಳುತ್ತದೆ. ಆದ್ದರಿಂದ, ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BANTWAL
ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!
ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.
ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- DAKSHINA KANNADA5 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM6 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali5 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY6 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು