Wednesday, October 20, 2021

ಆಗಸದಲ್ಲಿ ಹಾರುತ್ತಿದ್ದ ವಿಮಾನ ರೆಕ್ಕೆ ಬದಿ ಕುಳಿತಿದ್ದ ಮೂವರು ಭೂಮಿಗೆ ಬೀಳುವ ದೃಶ್ಯ ವೈರಲ್‌

ಇಸ್ಲಾಮಾಬಾದ್‌: ಅಘ್ಘಾನಿಸ್ತಾನದಲ್ಲಿ ಕ್ಷಣದಿಂದ ಕ್ಷಣಕ್ಕೆ ಪರಿಸ್ಥಿತಿ ಹದಗೆಡುತ್ತಿದ್ದು, ತಾಲಿಬಾನ್​ನಗಳ ಅಟ್ಟಹಾಸಕ್ಕೆ ಕಾಬೂಲ್​ ಅಕ್ಷರಶಃ ನರಕದಂತಾಗಿದೆ. ಇನ್ನು ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ಅಲ್ಲಿನ ಸಿರಿವಂತರು ಸೇರಿದಂತೆ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರೂ ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ.


ಅಲ್ಲದೆ ಟೇಕಾಫ್ ಆಗುತ್ತಿರುವ ಇತರ ದೇಶದ ವಿಮಾನಗಳನ್ನು ಹತ್ತಲು ಮುಗಿಬಿದ್ದಿದ್ದಾರೆ. ಕಾಬೂಲ್​ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನದಿಂದ ಮೂವರು ಕೆಳಗೆ ಬಿದ್ದಿದ್ದಾರೆ.

ವಿಮಾನ ಆಗಸಕ್ಕೆ ಚಿಮ್ಮಿದ ನಂತರ ಮಧ್ಯಭಾಗದಿಂದ ಇಬ್ಬರು ಕೆಳಗೆ ಬೀಳುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ.
ಇತ್ತ ಅಫ್ಘಾನ್​ನ ಸಂಸತ್​ನ ಮೇಲೂ ದಾಳಿ ನಡೆಸಿರುವ ತಾಲಿಬಾನ್ ಉಗ್ರರು, ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ತಮ್ಮ ವಶಕ್ಕೆ ಪಡೆದುಕೊಂಡು ಅವುಗಳ ಮೇಲೆ ತಮ್ಮ ಬಾವುಟ ನೆಡುತ್ತಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...