ಮಂಗಳೂರು: ಮಂಗಳೂರು ನಗರದಲ್ಲಿ ಮತ್ತೊಂದು ಮಾನವ ಅಸ್ಥಿ ಪಂಜರ ಪತ್ತೆಯಾಗಿದೆ. ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಸ್ಥಿಪಂಜರ ಶುಕ್ರವಾರ ಪತ್ತೆಯಾಗಿದೆ.
ನಗರದ ಮಣ್ಣಗುಡ್ಡೆ ಹೋಟೆಲ್ ದುರ್ಗಮಹಲ್ ಸಮೀಪದ ಪಾಳು ಬಿದ್ದ ಮನೆಯ ಅಂಗಳದಲ್ಲಿ ಈ ಮಾನವ ಅಸ್ಥಿಪಂಜರ ಪತ್ತೆಯಾಗಿದೆ,
ಮಾಹಿತಿ ತಿಳಿದ ತಕ್ಷಣ ಬರ್ಕೆ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
ವಾರದ ಹಿಂದೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಮಾಲಾಡಿ ಕೋರ್ಟ್ ಬಳಿ ಅಸ್ಥಿಪಂಜರದ ಮೂಳೆಗಳು ಸಿಕ್ಕಿ ಬಳಿಕ ಆ ಪ್ರಕರಣ ಕೊಲೆಯಾಗಿ ಮಾರ್ಪಟ್ಟಿತ್ತು.