Thursday, March 23, 2023

ತನ್ನ ಪಲ್ಲಂಗದಾಟಕ್ಕೆ ಮುದ್ದು ಮಕ್ಕಳನ್ನು ಬಲಿಕೊಟ್ಟ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹುಬ್ಬಳ್ಳಿ ಕೋರ್ಟ್..!

ಹುಬ್ಬಳ್ಳಿ : ತನ್ನ ಪಲ್ಲಂಗದ ಆಟಕ್ಕೆ ಮುದ್ದು ಎರಡು ಮಕ್ಕಳನ್ನು ಬಲಿಕೊಟ್ಟ ಪಾಪಿ ತಾಯಿಗೆ ಹುಬ್ಬಳ್ಳಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಕ್ರಮ ಸಂಬಂಧಕ್ಕಾಗಿ ಹೆತ್ತ ಮಕ್ಕಳನ್ನು ಕೊಲೆಗೈದಿದ್ದ ತಾಯಿಗೆ ಹುಬ್ಬಳ್ಳಿಯ 5ನೇ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 5 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಹುಬ್ಬಳ್ಳಿಯ ನವ ಅಯೋಧ್ಯಾನಗರದಲ್ಲಿ ಮಹಿಳೆ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ್ದಳು.

ಈ ಘಟನೆ 2018ರಲ್ಲಿ ನಡೆದಿತ್ತು. ಇದೀಗ ಪ್ರಕರಣದ ತೀರ್ಪು ಹೊರಬಂದಿದ್ದು, ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮದುವೆಯಾಗಿ ಮಕ್ಕಳಿದ್ದರೂ ಪರಪುರುಷನ ಸಂಬಂಧ ಬೆಳೆಸಿದ್ದ ಮಹಿಳೆ ತನ್ನ ಪಲ್ಲಂಗದಾಟಕ್ಕೆ ಹೆತ್ತ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಎರಡು ಮಕ್ಕಳನ್ನು ಕೊಂದಿದ್ದಳು.

ಏನಿದು ಪ್ರಕರಣ..!!? : ಎರಡು ವರ್ಷಗಳ ಹಿಂದೆ ತನ್ನಿಬ್ಬರು ಮುದ್ದಾದ ಕಂದಮ್ಮಗಳನ್ನು ಆ ಪಾಪಿ ತಾಯಿ ಕೊಂದಿದ್ದಳು.

ಆ ರಾತ್ರಿ ಎರಡೂ ಮಕ್ಕಳಿಗೂ ಶಾಲೆಯ ಐಡೆಂಟಿ ಕಾರ್ಡ್ ಟ್ಯಾಗ್‌ನಿಂದ ನೇಣು ಬಿಗಿದಿದ್ದ ಈ ಪಾಪಿ ತಾಯಿ ತಾನೇನು ಮಾಡೇ ಇಲ್ಲ ಎಂದು ನಾಟಕ ಕೂಡ ಆಡಿದ್ದಳು.

ಆದರೆ, ಅನುಮಾನ ಬಂದ ಆಕೆಯ ಪತಿ ಪರಶುರಾಮ ಪೊಲೀಸರಿಗೆ ಪತ್ನಿ ಪ್ರೇಮಾ ಅಲಿಯಾಸ್ ಚೈತ್ರಾ ಹುಲಕೋಟಿ ಮೇಲೆ ದೂರು ದಾಖಲಿಸಿದ್ದ.

ಕೊನೆಗೂ ಪೊಲೀಸರ ತನಿಖೆಯ ವೇಳೆ ಹಾಗೂ ಸ್ಥಳೀಯರ ಸಾಕ್ಷಿಯಿಂದ ಆಕೆಯೇ ಮಕ್ಕಳನ್ನು ಕೊಂದಿದ್ದಳು ಎನ್ನುವುದು ಬಯಲಾಗಿತ್ತು. ಆದರೆ, ಅಷ್ಟೇ ಅಲ್ಲ, ಪೊಲೀಸ್ ತನಿಖೆ ವೇಳೆ ಮತ್ತೊಂದು ಭಯಾನಕ ಮಾಹಿತಿಯನ್ನು ಆಕೆ ಹೊರ ಹಾಕಿದ್ದಳು.

ಅಷ್ಟಕ್ಕೂ ಆಕೆ ಮಕ್ಕಳನ್ನು ಕೊಂದಿದ್ದು ತನ್ನ ಅನೈತಿಕ ಸಂಬಂಧಕ್ಕಾಗಿಯಂತೆ. ಅಲ್ಲದೆ ತನ್ನ ಪಲ್ಲಂಗದಾಟಕ್ಕೆ ಮಕ್ಕಳು ಅಡ್ಡಿ ಬರುತ್ತಿದ್ದವು ಎಂದು ಅವುಗಳನ್ನು ಸಾಯಿಸಿ ನಾಟಕವಾಡಿದ್ದಳು.

ಕೊನೆಗೂ ಹಳೇ ಹುಬ್ಬಳ್ಳಿ ಪೊಲೀಸರ ತನಿಖೆಯಿಂದ ಆಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ.

ಕೆಲಸ ಮಾಡಿಕೊಂಡಿದ್ದ ಪರಶುರಾಮ ತನ್ನ ಸಂಬಂಧಿಕರ ಮಗಳೇ ಆಗಿದ್ದ ಅಪರಾಧಿ ಪ್ರೇಮಾಳನ್ನು ಮದುವೆಯಾಗಿದ್ದ. ಇಬ್ಬರಿಗೆ ನಾಲ್ಕು ವರ್ಷದ ಹೆಣ್ಣು ಮಗು ರೋಹಿಣಿ ಮತ್ತು ಐದು ವರ್ಷ ಮಗ ರೋಹಿತ್‌ ಎಂಬ ಮುದ್ದಾದ ಮಕ್ಕಳು ಜನಿಸಿದ್ದರು.

ಆದರೆ, ಗಂಡ ಕೆಲಸಕ್ಕೆ ಹೋದರೆ, ಇತ್ತ ಪತ್ನಿ ಅದೇ ಏರಿಯಾದವನ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು.

ಅಲ್ಲದೆ ಕದ್ದುಮುಚ್ಚಿ ಚೆಲ್ಲಾಟವಾಡುತ್ತಿದ್ದ ಪ್ರೇಮಾಗೆ ಅದೆಷ್ಟು ಬಾರಿ ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ.

ಕೊನೆಗೆ ಹೆತ್ತ ಮಕ್ಕಳನ್ನ ಕೊಂದು ಜೈಲು ಪಾಲಾಗಿದ್ದ ಈಕೆಗೆ ಸದ್ಯ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪಾಪಿ ತಾಯಿಯ ವಿರುದ್ಧ ಸೂಕ್ತ ಸಾಕ್ಷಾಧಾರ ಸಂಗ್ರಹಿಸಿ ಕೊನೆಗೂ ಅಕೆಗೆ ಶಿಕ್ಷೆ ಕೊಡಿಸುವಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕಲಬುರಗಿಯಲ್ಲಿ ಹಾಡು ಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ..!

ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ ಮಾಡಲಾದ ಘಟನೆ ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಲಬುರಗಿ : ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ...

ಚಿಕ್ಕಮಗಳೂರು : ಬೈಕಿಗೆ ಬಸ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು..!

ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು: ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು...

ಉಡುಪಿ : ಕಳವಾದ 74 ಲಕ್ಷ ರೂಪಾಯಿ ಸೊತ್ತುಗಳು ಮರಳಿ ಮಾಲಕರಿಗೆ ಹಸ್ತಾಂತರಿಸಿದ ಪೊಲೀಸರು.!

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್...