Connect with us

    LATEST NEWS

    ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ : ಉಳ್ಳಾಲ ಪೊಲೀಸ್

    Published

    on

    ಉಳ್ಳಾಲ: ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರು ಠಾಣಾ ವ್ಯಾಪ್ತಿಯ ಕೆಲವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ಮನೆಗಳಿಗೆ ತೆರಳುತ್ತಿರುವ ಬಗ್ಗೆ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಠಾಣಾ ವ್ಯಾಪ್ತಿಯ ಜನರು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು ಎಂದು ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.

    ಈ ಪ್ರದೇಶದಲ್ಲಿ ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ. ಮನೆ ಬಳಿ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು. ಅಪರಿಚಿತರು ಎಂದು ಕಂಡು ಬಂದಲ್ಲಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    LATEST NEWS

    ಭೀಕರ ಪಟಾಕಿ ಸ್ಫೋ*ಟ; 3 ಮೃ*ತ್ಯು, 7 ಗಾ*ಯ

    Published

    on

    ಮಂಗಳೂರು/ಹರಿಯಾಣ: ಹರಿಯಾಣದ ಸೋನಿಪತ್‌ನಲ್ಲಿ ಇಂದು (ಸೆ.28) ಬೆಳಿಗ್ಗೆ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋ*ಟವು ಸಂಭವಿಸಿದ್ದು, 3 ಜನರ ಮೃ*ತ್ಯು ಹಾಗೂ 7 ಮಂದಿಗೆ ಗಂ*ಭೀರ ಗಾಯವಾಗಿದೆ.


    ವೇದ್ ಎಂಬುವವರ ಮನೆಯಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದು, ಮನೆಯಲ್ಲಿ ಸಂಗ್ರಹಿಸಿದ ರಾಸಯನಿಕಗಳಿಂದ ಬೆಂ*ಕಿ ಅವ*ಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
    ಮೂವರ ದೇಹವು ಛಿಧ್ರ*ವಾಗಿದ್ದು, ಉಳಿದ ಗಾ*ಯಾಳುಗಳನ್ನು ಆಸ್ಪತ್ರೆಗೆ ಚಿಕಿ*ತ್ಸೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
    ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ವೇದ್ ಪರಾರಿಯಾಗಿದ್ದಾನೆ.
    ಈ ಕುರಿತು ಸೋನಿಪತ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು : ಅರ್ಚನಾ ಕಾಮತ್ ತ್ಯಾಗ ಸಂಸ್ಮರಣಾ ರಕ್ತದಾನ ಶಿಬಿರ

    Published

    on

    ಮಂಗಳೂರು : ಬದುಕಿರುವಾಗಲೇ ದೇಹದ ಅಂಗವೊಂದನ್ನು ಆಪ್ತ ಸಂಬಂಧಿಗೆ ದಾನ ಮಾಡಿ ವಿಧಿಲೀಲೆಗೆ ಬಲಿಯಾದ ಉಪನ್ಯಾಸಕಿ ಅರ್ಚನಾ ಕಾಮತ್ ಅವರ ದಿವ್ಯಾತ್ಮಕ್ಕೆ ನುಡಿ ನಮನ ಕಾರ್ಯಕ್ರಮ ಮತ್ತು ರಕ್ತದಾ ನ ಶಿಬಿರ ಮಂಗಳೂರಿನ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.

    ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,  ಶಾಸಕ ಕಾಮತ್ ಬಾಲ್ಯದಿಂದಲೇ ಪರಿಚಯರಾಗಿದ್ದ ಅರ್ಚನಾ ಕಾಮತ್ ಅವರು ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಬದುಕು ನಮಗೆ ಆದರ್ಶವಾಗಿದೆ. ಅವರ ಇಡೀ ಕುಟುಂಬ ನಮಗೆ ಆತ್ಮೀಯವಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿ ಅರ್ಚನಾ ಅವರ ಆತ್ಮೀಯರನ್ನು ಒಂದುಗೂಡಿಸಿ ಮಾದರಿ ಕಾರ್ಯ ಮಾಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ ಅರ್ಚನಾ ‌ಕಾಮತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಮಾತನಾಡುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು.

    ಈ ಸಂದರ್ಭ ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಬೆಸೆಂಟ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಮಣೇಲ್ ಅಣ್ಣಪ್ಪ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಬಿಎನ್ ಐ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಕೆಎಂಸಿ ಆಸ್ಪತ್ರೆ, ಬೆಸೆಂಟ್ ಶಿಕ್ಷಣ ಸಂಸ್ಥೆ, ಯೂತ್ ಆಫ್ ಜಿಎಸ್ ಬಿ, ಸಿಎ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ರಕ್ತದಾನ ಶಿಬಿರದಲ್ಲಿ 98ಕ್ಕೂ ಅಧಿಕ ನಾಗರಿಕರು ರಕ್ತದಾನ ಮಾಡಿದರು.

    ಇದನ್ನೂ ಓದಿ : ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

    ಅರ್ಚನಾ ಕಾಮತ್ ಅವರ ಪತಿ, ಸಹೋದರಿ ಹಾಗೂ ಸಂಬಂಧಿಕರು ರಕ್ತದಾನ ಮಾಡಿ ನೋವಿನಲ್ಲಿಯೂ ಹೃದಯ ವೈಶಾಲ್ಯತೆ ಮೆರೆದು ಮಾದರಿಯಾದರು.

    Continue Reading

    FILM

    ಎರಡು ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿದ ಸಾಯಿ ಪಲ್ಲವಿ

    Published

    on

    ನಟನೆ, ಡ್ಯಾನ್ಸಿಂಗ್‌ ಅಪಾರ ಅಭಿಮಾನಿಗಳ ಮನಗೆದ್ದಿರುವ ಸಾಯಿ ಪಲ್ಲವಿ ಇದೀಗ ಎರಡು ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ್ದಾರೆ. ‘ಅಮರನ್’  ಚಿತ್ರದ ಮೂಲಕ ಮತ್ತೆ ನಟಿ ಸದ್ದು ಮಾಡುತ್ತಿದ್ದಾರೆ. ನಟಿಯ ಕ್ಯಾರೆಕ್ಟರ್ ಟೀಸರ್ ರಿವೀಲ್ ಚಿತ್ರತಂಡ ಸರ್ಪ್ರೈಸ್ ನೀಡಿದೆ.

    ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಿದ್ದಾರೆ. ವೀರಯೋಧ ಮೇಜರ್ ಮುಕುಂದ ವರದರಾಜನ್ ಬಯೋಪಿಕ್ ಆಗಿದೆ. ಇದರಲ್ಲಿ ವೀರಯೋಧನಾಗಿ ಶಿವಕಾರ್ತಿಕೇಯನ್ ನಟಿಸಿದ್ರೆ, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ.

    ಇನ್ನೂ ಚಿತ್ರದಲ್ಲಿ ನಟಿಯ ಕ್ಯಾರೆಕ್ಟರ್ ಟೀಸರ್ 1.22 ನಿಮಿಷವಿದ್ದು, ಸಾಯಿ ಪಲ್ಲವಿ ಗುಂಗುರು ಕೂದಲು ಬಿಟ್ಟು ನಯಾ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ‘ಅಮರನ್’ ಚಿತ್ರವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ಅ.11ಕ್ಕೆ ರಿಲೀಸ್ ಆಗಲಿದೆ.

    Continue Reading

    LATEST NEWS

    Trending