LATEST NEWS
ಭೀ*ಕರ ರಸ್ತೆ ಅ*ಪಘಾತ: ನವವಿವಾಹಿತರು ಸೇರಿ ಏಳು ಮಂದಿ ಸಾ*ವು
Published
4 hours agoon
By
NEWS DESK4ಮಂಗಳೂರು/ಬಿಜ್ನೋರ್ : ಭೀಕರ ಅಪಘಾ*ತ ಸಂಭವಿಸಿ ನವವಿವಾಹಿತರು ಸೇರಿದಂತೆ ಏಳು ಮಂದಿ ಮೃ*ತಪಟ್ಟಿರುವ ದು*ರಂತ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ಡೆಹ್ರಾಡೂನ್-ನೈನಿತಾಲ್ ಹೆದ್ದಾರಿಯಲ್ಲಿ ಧಮ್‌ಪುರದ ಅ*ಗ್ನಿಶಾಮಕ ಠಾಣೆ ಬಳಿ ಇಂದು(ನ.16) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ನವವಿವಾಹಿತ ಜೋಡಿ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಟೆಂಪೋಗೆ ಹಿಂದಿನಿಂದ ಕಾರೊಂದು ಡಿ*ಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿಯ ರಭಸಕ್ಕೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಏಳು ಜನರು ತೀ*ವ್ರವಾಗಿ ಗಾ*ಯಗೊಂಡು ಸ್ಥಳದಲ್ಲೇ ಸಾ*ವನ್ನಪ್ಪಿದರೆ, ಅದರ ಚಾಲಕ ಅಜಬ್ ಸಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾ*ವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ವಾಹನ ಚಾಲನೆ ಮಾಡಿದ ಚಾಲಕ; ಕಾರ್ಮಿಕ ಸಾ*ವು
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾ*ಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜಿನಿಂದಾಗಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಈ ಅಪಘಾ*ತ ಸಂಭವಿಸಿದೆ ಎಂದು ಹೇಳಲಾಗಿದೆ
20 ವರ್ಷದ ನಂತರ ಮತ್ತೆ ಅಖಾಡಕ್ಕೆ ಇಳಿದ ಬಾಕ್ಸಿಂಗ್ ಲೋಕದ ಲೆಜೆಂಡ್ ಮೈಕ್ ಟೈಸನ್ ಶನಿವಾರ ( ನ .16) ನಡೆದ ಜೇಕ್ ಪಾಲ್ ವಿರುದ್ಧದ ಪಂದ್ಯದಲ್ಲಿ 79-73 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.
2003ರಲ್ಲಿ ಮೈಕ್ ಟೈಸನ್ ಕೊನೆಯದಾಗಿ ಬಾಕ್ಸಿಂಗ್ ಪಂದ್ಯ ಗೆದ್ದಿದ್ದರು. 2004 ಮತ್ತು 2005ರಲ್ಲಿ ಸೋಲನುಭವಿಸಿದ ಬಳಿಕ ಬಾಕ್ಸಿಂಗ್‌ನಿಂದ ದೂರವುಳಿದಿದ್ದರು. ಅದಾದ ನಂತರ 20 ವರ್ಷಗಳ ಕಳೆದು ಈಗ ಮತ್ತೆ ಬಾಕ್ಸಿಂಗ್ ರಿಂಗ್‌ಗೆ ಮರಳಿದ್ದ ಕಾರಣ ಈ ಪಂದ್ಯವನ್ನು ಬಹಳ ವಿಶೇಷವಾಗಿ ಪರಿಗಣಿಸಲಾಗಿತ್ತು
ಆರಂಭಿಕ ಸುತ್ತಿನಲ್ಲಿ ನಿಧಾನಗತಿಯಲ್ಲಿ ಆಡಿದ 58 ವರ್ಷದ ಟೈಸನ್ ಬಳಿಕ ಆಕ್ರಮಣಕಾರಿ ಪಂಚ್‌ಗಳ ಮೂಲಕ ಸತತವಾಗಿ ಅಂಕಗಳಿಸಿದರು. ಆದರೂ, ಅಂತಿಮವಾಗಿ 6 ಅಂಕಗಳ ಹಿನ್ನಡೆಯಿಂದ ಸೋಲನ್ನು ಅನುಭವಿಸಿದರು. ಗೆಲುವಿನ ಬಳಿಕ ಮಾತನಾಡಿದ 27 ವರ್ಷದ ಯುವ ಬಾಕ್ಸರ್ ಜೇಕ್ ಜೇಕ್ ಪಾಲ್, ‘ಇದು ಮರೆಯಲಾಗದ ಪಂದ್ಯವಾಗಿದ್ದು. “ನಾನು ಗೆದ್ದಿರಬಹುದು. ಆದರೆ ನನ್ನ ಪ್ರಕಾರ ಈ ಪಂದ್ಯವನ್ನು ಗೆದ್ದಿರುವುದು ಟೈಸನ್. ಏಕೆಂದರೆ ಅವರು ದಿಗ್ಗಜ ಬಾಕ್ಸರ್, ಇಷ್ಟು ವಯಸ್ಸಾಗಿದ್ದರೂ ಇಂತಹ ಒಳ್ಳೆಯ ಪ್ರದರ್ಶನ ನೀಡಿದ ಅವರ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು'” ಎಂದು ಹೇಳುವ ಮೂಲಕ ಟೈಸನ್‌ಗೆ ಗೌರವ ಸೂಚಿಸಿದರು.
ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಒಟ್ಟು 8 ಸುತ್ತಿನ ಸ್ಫರ್ಧೆ ನಡೆದಿದ್ದು, ಪೌಲ್ ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರೇ, ಮೈಕ್ ಟೈಸನ್ ಕೇವಲ ಎರಡು ಸುತ್ತುಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪೌಲ್ 10-9, 10-9, 9-10, 9-10, 9-10, 9-10, 9-10, 9-10 ಅಂಕಗಳಿಂದ ಜಯಭೇರಿ ಬಾರಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿಲು ಜೇಕ್ ಪೌಲ್ ಬರೋಬ್ಬರಿ 40 ಮಿಲಿಯನ್ ಡಾಲರ್ (ರೂ.337 ಕೋಟಿ) ಪಡೆದುಕೊಂಡಿದ್ದು, ಟೈಸನ್ ರೂ.168 ಕೋಟಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಪ್ರಸಿದ್ಧಿ ಪಡೆದ ನಿತಿನ್ ಚೌಹಾಣ್ ಶ*ವವಾಗಿ ಪತ್ತೆಯಾಗಿದ್ದು, ಅವರು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ಧಿಯಾಗಿತ್ತು. 35 ವರ್ಷದ ನಿತಿನ್ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ಮತ್ತು ‘ಕ್ರೈ ಪ್ಯಾಟ್ರೋಲ್’ನಂಥ ರಿಯಾಲಿಟಿ ಶೋ ಗಳಿಂದ ಚಿರಪರಿಚಿತರಾಗಿದ್ದಾರೆ ನಿತಿನ್.
‘ಮುಂಬೈನಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇವರ ಶವ ಪತ್ತೆಯಾಗಿತ್ತು. 2009 ರಲ್ಲಿ ಪ್ರಸಾರವಾದ ‘ದಾದಾಗಿರಿ 2’ ಮೂಲಕ ಎಂಟ್ರಿ ಕೊಟ್ಟಿದ್ದ ಇವರು, ‘ಸ್ಪ್ಲಿಟ್ಸ್ ವಿಲ್ಲಾ ಸೀಸನ್ 5′ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಇಲ್ಲಿ ಅಭಿಮಾನಿಗಳ ಸಂಖ್ಯೆ ಏರಿಸಿಕೊಂಡಿದ್ದ ಅವರಿಗೆ ಜಿಂದಗಿ ಡಾಟ್ ಕಾಮ್, ಕ್ರೈಮ್ ಪ್ಯಾಟ್ರೋಲ್, ತೇರಾ ಯಾರ್ ಹೂ ಮೇ ಮುಂತಾದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೂ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಹಿಂದಿನ ಕಾರಣ ಮಾತ್ರ ತಿಳಿದಿಲ್ಲ’ ಎಂದು ಬಹುತೇಕ ಮಾಧ್ಯಮಗಳು ವರದಿಯನ್ನು ಬಿತ್ತರಿಸಿದವು.
ಅಲ್ಲೇ ಆದದ್ದು ಎಡವಟ್ಟು. ಅದೇನೆಂದರೆ, ನಿಜವಾಗಿ ಸಾ*ವನ್ನಪ್ಪಿದ ನಟ ನಿತಿನ್ ಚೌಹಾಣ್ ಬದಲಿಗೆ ಇನ್ನೋರ್ವ ಅದೇ ಹೆಸರಿನ ನಟ ನಿತಿನ್ ಚೌಹಾಣ್ ಫೋಟೋ ಬಳಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಬದುಕಿರುವ ನಿತಿನ್ ಫೋಟೋ ಶೇರ್ ಆಗುತ್ತಿದ್ದು, ಸಂತಾಪಗಳ ಸುರಿಮಳೆಯಾಗುತ್ತಿದೆ. ಇದನ್ನು ನೋಡಿ ನಟ ನಿತಿನ್ ಆಶ್ಚರ್ಯಚಕಿತರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಅವರು, ‘ನಾನಿನ್ನೂ ಸ*ತ್ತಿಲ್ಲ ಕಣ್ರಿ, ಬದುಕಿದ್ದೇನೆ. ರಿಪ್ ಹಾಕಿ ನನ್ನನ್ನು ಸಾಯಿಸ್ಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಹಠಾತ್ ಸಾ*ವು
‘ವರದಿ ಬಿತ್ತರಿಸುವಾಗ ಹೀಗೆ ಯಾರದ್ದೋ ಫೋಟೋ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಮಾಹಿತಿಯ ಪೋಸ್ಟ್ ಮತ್ತು ಪ್ರಸರಣಕ್ಕೆ ಸಾಮಾಜಿಕ ಮಾಧ್ಯಮ, ಸುದ್ದಿ ಮೂಲಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಒಂದೇ ವ್ಯಕ್ತಿ ಎಂದು ಗುರುತಿಸುವುದು ಅತ್ಯಂತ ಬೇಜವಾಬ್ದಾರಿ. ಇದು ಎರಡು ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಎಂದು ನಿತಿನ್ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಈ ಸತ್ಯ ಸುದ್ದಿ ತಿಳಿಯದೆ, ಇದುವರೆಗೆ ಬದುಕಿರುವ ನಿತಿನ್‌ಗೆ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವರು ಕರೆ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಎಲ್ಲರ ಕರೆ ಸ್ವೀಕರಿಸಿ ಅವರಿಗೆ ಸ್ಪಷ್ಟನೆ ನೀಡುವಲ್ಲಿ ನಿತಿನ್ ಸುಸ್ತಾಗಿದ್ದರು. ಒಟ್ಟಾಗಿ ಫೋಟೋ ಹಂಚಿಕೊಂಡವನ ಪತ್ತೆ ಹಚ್ಚಿ, ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿತಿನ್ ಪೊಲೀಸರಿಗೆ ಒತ್ತಾಯಿಸಿದ್ದಾರೆ.
LATEST NEWS
‘ಅಮರನ್’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್ ಮೇಲೆ ಪೆಟ್ರೋಲ್ ಬಾಂ*ಬ್ ಎಸೆತ
Published
1 hour agoon
16/11/2024By
NEWS DESK4ಮಂಗಳೂರು/ ತಿರುನೆಲ್ವೇಲಿ : ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದ ಮೇಲೆ ಅಪರಿಚಿತ ದುರ್ಷರ್ಮಿಗಳು ಪೆಟ್ರೋಲ್ ಬಾಂ*ಬ್ ಎಸೆದಿದ್ದಾರೆ.
ಇಂದು(ನ.16) ಬೆಳಗಿನ ಜಾವ 3 ಗಂಟೆಗೆ ಇಬ್ಬರು ದುಷ್ಕರ್ಮಿಗಳು ಮೇಳಪಾಳ್ಯಂನ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದಾರೆ. ಅವು ಸ್ಫೋ*ಟಗೊಂಡಿವೆ. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
‘ಅಮರನ್’ ಗೆ ಉತ್ತಮ ರೆಸ್ಪಾನ್ಸ್ :
ಯೋಧನೊಬ್ಬನ ಜೀವನಾಧಾರಿತ ಸಿನಿಮಾವಾಗಿರುವ ಅಮರನ್ ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಂಡಿದ್ದು, ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಅಕ್ಟೋಬರ್ 31 ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತ ಚಿತ್ರವನ್ನು ರಾಜ್ ಕುಮಾರ್ ಪೆರಿಯಸ್ವಾಮಿ ನಿರ್ದೇಶಿಸಿದ್ದು, ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸಿದೆ.
ಇದನ್ನೂ ಓದಿ : ಮಗಳ ದೇ*ಹವನ್ನೇ ತುಂ*ಡರಿಸಿ, ಲಿ*ವರ್ ತಿಂದ ಕ್ರೂ*ರಿ ತಾಯಿ ..!
ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ.
LATEST NEWS
ಸಂಜು ಸ್ಯಾಮ್ಸನ್-ತಿಲಕ್ ವರ್ಮಾ ಜೊತೆಯಾಟ: ಭಾರತಕ್ಕೆ ಜಯ
ಕ್ರಿಕೆಟರ್ ಆಗಬೇಕಿದ್ದ ಆದಿತ್ಯ ಹೀರೋ ಆಗಿದ್ದರ ಹಿಂದಿನ ಕಥೆ ಗೊತ್ತಾ ?
ಭೀ*ಕರ ರಸ್ತೆ ಅ*ಪಘಾತ: ನವವಿವಾಹಿತರು ಸೇರಿ ಏಳು ಮಂದಿ ಸಾ*ವು
ಮಗಳ ದೇ*ಹವನ್ನೇ ತುಂ*ಡರಿಸಿ, ಲಿ*ವರ್ ತಿಂದ ಕ್ರೂ*ರಿ ತಾಯಿ ..!
ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ವಾಹನ ಚಾಲನೆ ಮಾಡಿದ ಚಾಲಕ; ಕಾರ್ಮಿಕ ಸಾ*ವು
ದಾರಿ ತಪ್ಪಿಸಿದ ಗೂಗಲ್ ಮ್ಯಾಪ್ : ರಂಗ ಕಲಾವಿದರಿಬ್ಬರ ದಾ*ರುಣ ಸಾವು..!
Trending
- LATEST NEWS3 days ago
ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್ ಆಹಾರದಿಂದಲೇ 32 ಕೆಜಿ ಸ್ಲಿಮ್ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್!
- FILM3 days ago
ಅಭಿಷೇಕ್-ಅವಿವಾ ಪುತ್ರನಿಗೆ ಅಂಬರೀಷ್ ಹೆಸರು
- FILM4 days ago
ಅಂಬಿ ಮನೆಗೆ ಜ್ಯೂನಿಯರ್ ಅಭಿ ಎಂಟ್ರಿ; ಗಂಡು ಮಗುವಿಗೆ ಜನ್ಮವಿತ್ತ ಅವಿವಾ
- DAKSHINA KANNADA3 days ago
ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್ಪೋರ್ಟ್ ಪಡೆದ ಮಗ .. !