Connect with us

    MANGALORE

    ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಹೋಂ ಸೈನ್ಸ್ ಪಠ್ಯಕ್ಕೆ ಅನುಮತಿ

    Published

    on

    ಮಂಗಳೂರು: ನಗರದ ಕೋಡಿಯಾಲ್ ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಿಯುಸಿ ಶಿಕ್ಷಣದಲ್ಲಿ ಹೋಂ ಸೈನ್ಸ್ ಪಠ್ಯ ವಿಷಯವನ್ನಾಗಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.


    ನೀಟ್ ಪರೀಕ್ಷೆ ಬರೆಯುವ ಮತ್ತು ವೈದ್ಯಕೀಯ ಸಂಬಂಧಿ ಶಿಕ್ಷಣ ಕಲಿಯಲು ಆಸಕ್ತಿ ಇರುವ, ಆದರಲ್ಲೂ ಮ್ಯಾಥಮೆಟಿಕ್ಸ್ ಪಠ್ಯ ವಿಷಯ ಕಷ್ಟವಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫಿಸಿಕ್ಸ್, ಕೆಮೆಸ್ಟ್ರಿ, ಹೋಂ ಸೈನ್ಸ್ ಮತ್ತು ಬಯೋ ಕಾಂಬಿನೇಷನ್ ಆರಂಭಿಸಲು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಉದ್ದೇಶಿಸಿದೆ ಎಂದು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
    ಪಿಯುಸಿಯಲ್ಲಿ ಮ್ಯಾಥಮೆಟಿಕ್ಸ್ ಆಯ್ಕೆ ಮಾಡಿದರೆ ಪದವಿ ಪರೀಕ್ಷೆ, ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುವುದರೊಂದಿಗೆ ಮ್ಯಾಥಮೆಟಿಕ್ಸ್‌ಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗುತ್ತದೆ.

    ವೈದ್ಯಕೀಯ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಮ್ಯಾಥಮೆಟಿಕ್ಸ್ ವಿಷಯ ಆದ್ಯತಾ ವಿಷಯ ವಾಗಿರುವುದಿಲ್ಲ.

    ಈ ನಡುವೆ ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯ ಸ್ಪರ್ಧೆಯು ಅಖಿಲ ಭಾರತ ಮಟ್ಟದಲ್ಲಿ ಇರುತ್ತದೆ.

    ಇದರಿಂದಾಗಿ ವಿದ್ಯಾರ್ಥಿ ಗಳಿಗೆ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಮ್ಯಾಥಮೆಟಿಕ್ಸ್ ಬದಲು ಹೋಂ ಸೈನ್ಸ್ ವಿಷಯ ವನ್ನು ಆಯ್ಕೆ ಮಾಡಲು ಆಯ್ಕೆ

    ಕೋರಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಅರ್ಜಿ ಸಲ್ಲಿಸಿತ್ತು.

    ಇದೀಗ ಅರ್ಜಿಯನ್ನು ಮಾನ್ಯ ಮಾಡಿರುವ ಸರಕಾರ ಈ ಶೈಕಣಿಕ ವರ್ಷದಿಂದ ಈ ಸಂಯೋಜನೆ ಆರಂಭಿಸಲು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

    ಕಾಂಬಿನೇಷನ್ ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗಳಿಗೆ ಹೆಚ್ಚಿನ ಸಿದ್ಧತೆ ಮಾಡಲು ಅವಕಾಶ ಸಿಗುತ್ತದೆ.

    ಆದುದರಿಂದ ಪಿಯುಸಿಯಲ್ಲಿ ಪಿಸಿಎಚ್ ಎಸ್‌ಬಿ ಅಧ್ಯಯನ ನಡೆಸಲು ಆಸಕ್ತ ವಿದ್ಯಾರ್ಥಿಗಳು ಕೋಡಿಯಾಲ್ ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಕಚೇರಿಯನ್ನು ಸಂಪರ್ಕಿ ಸಬಹುದು ಎಂದು ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಡಬ : ಕಾರು – ಬೈಕ್ ನಡುವೆ ಅಪಘಾ*ತ; ಸವಾರ ಸಾ*ವು

    Published

    on

    ಕಡಬ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃ*ತಪಟ್ಟಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಹಳೆ ಸ್ಟೇಷನ್ ನಿವಾಸಿ, ಕಡಬ ಸಿ.ಎ. ಬ್ಯಾಂಕ್ ಮಾಜಿ ಉದ್ಯೋಗಿ ಹಸೈನಾರ್(57) ಮೃ*ತ ಬೈಕ್ ಸವಾರ.

    ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಸಾಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀ*ರ ಗಾ*ಯಗೊಂಡ ಹಸೈನಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : 200 ಅಡಿ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್; 30 ಕ್ಕೂ ಅಧಿಕ ಮಂದಿ ಸಾವು

    ಅಪಘಾ*ತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ವೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

     

     

    Continue Reading

    LATEST NEWS

    ದಸರಾ ಪ್ರಯುಕ್ತ 2000ಕ್ಕೂ ಹೆಚ್ಚು ವಿಶೇಷ KSRTC ಬಸ್​ ವ್ಯವಸ್ಥೆ!

    Published

    on

    ಬೆಂಗಳೂರು: ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ದಸರಾ ಹಬ್ಬ ಆಚರಣೆ ಮಾಡಲಾಗ್ತಿದೆ. ಮೈಸೂರು ಮಾತ್ರವಲ್ಲ, ಶ್ರೀರಂಗಪಟ್ಟಣ, ಮಂಗಳೂರು, ರಾಯಚೂರು, ಚಿಕ್ಕಮಗಳೂರು ಹೀಗೆ ಹಲವು ಕಡೆಗಳಲ್ಲಿ ನಾಡಹಬ್ಬವನ್ನ ಆಚರಣೆ ಮಾಡಲಾಗ್ತಿದೆ.

    ನಾಡಹಬ್ಬ ದಸರಾಕ್ಕೆ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ತಮ್ಮ ಊರುಗಳಿಗೆ ತೆರಳಿ ಫುಲ್​ ಮಜಾ ಮಾಡೋಣ ಅಂತಾ ದಸರಾ ರಜೆ ಬಗ್ಗೆ ಜನರು ಪ್ಲಾನ್​ ಮಾಡ್ಕೊಂಡಿರುತ್ತಾರೆ. ತಮ್ಮ ತವರು ಮೈಸೂರು ಅಂತಾ ಹಲವೆಡೆ ತೆರಳೋದಕ್ಕೆ ಸಕಲ ಸಿದ್ಧತೆ ಮಾಡ್ಕೊಂಡಿದ್ದಾರೆ. ಹಾಗೆಯೇ ಹೊರಡೋದಕ್ಕೆ ಸಿದ್ಧವಾಗಿರೋ ಜನಕ್ಕಾಗಿ ಕರ್ನಾಟಕ ಸಾರಿಗೆ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್​ 9 ರಿಂದ ಅಕ್ಟೋಬರ್​ 12 ರವರೆಗೆ 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

    ಈ ವಿಶೇಷ ಬಸ್​ಗಳು ಎಲ್ಲೆಲ್ಲಿಗೆ?

    ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ಈ ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ.

    Continue Reading

    BANTWAL

    ಅಕ್ರಮ ಮರಳು ಅಡ್ಡೆಗೆ ದಾಳಿ; 20 ಬೋಟ್ ವಶಕ್ಕೆ

    Published

    on

    ಬಂಟ್ವಾಳ: ತುಂಬೆ, ಮಾರಿಪಳ್ಳ ಭಾಗದ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಶುಕ್ರವಾರ ದ.ಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ದ.ಕ ಜಿಲ್ಲಾಧಿಕಾಗಳ ಆದೇಶದಂತೆ 20 ಬೋಟ್‌ಗಳನ್ನು ವಶಪಡಿಸಿಕೊಂಡಿದ್ದರು. ಅಧಿಕಾರಿಗಳ ದಾಳಿಯ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಪಲಾಯನಗೈದಿದ್ದಾರೆಂದು ವರದಿಯಾಗಿದೆ.


    ದೋಣಿಗಳನ್ನು 4ರಂತೆ ಜೋಡಸಿಕೊಂಡು 5 ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್‌ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಬೋಟ್‌ನಲ್ಲಿ ಯಾವುದೇ ರೀತಿಯ ಮರಳು ಪತ್ತೆಯಾಗಿಲ್ಲ. ಮರಳುಗಾರಿಕೆಲ್ಲಿ ತೊಡಗಿದ್ದವರು ಯಾರು, ಬೋಟ್‌ಗಳು ಯಾರಿಗೆ ಸಂಬಂಧಟ್ಟದ್ದು ಎಂಬುವುದರ ಕುರಿತು ಅಧಿಕಾರಿಗಳ ತನಿಖೆಯ ಬಳಿಕ ತಿಳಿದುಬರಬೇಕಷ್ಟೇ.
    ಸಾಕಷ್ಟು ಸಮಯದಿಮದ ಕೇಳಿ ಬರುತ್ತಿದ್ದ ಆರೋಪ:
    ದೋಣಿಗಳ ಸಹಾಯದಿಂದ ನದಿಯಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಅರೋಪ ಸಾಕಷ್ಟು ಸಮಯದಿಂದ ಕೇಳಿ ಬರುತ್ತಿದ್ದವು. ಈ ಹಿನನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ದಾಳಿ ನಡೆಸಿ ಆಕ್ರಮವನ್ನು ಮಟ್ಟ ಹಾಕುವಂತೆ ಗಣಿ ಇಲಾಖೆಗೆ ಆದೇಶವನ್ನು ನೀಡಿದ್ದರು.
    ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಹಿರಿಯ ಭೂ ವಿಜ್ಞಾನಿ ಗಿರಿಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ಧನ್ ಜೆ., ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

    Continue Reading

    LATEST NEWS

    Trending