Connect with us

MANGALORE

ಗಣಪತಿ ಮೂರ್ತಿ ವಿಸರ್ಜನೆಗೆ ಉತ್ತಮ ವ್ಯವಸ್ಥೆ ಮಾಡಿ: ಹಿಂದೂ ಜನಜಾಗೃತಿ ಸಮಿತಿ ಮನವಿ

Published

on

ಮಂಗಳೂರು: ಗಣೇಶ ಚತುರ್ಥಿಯ ನಂತರ ಮೂರ್ತಿ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡುವಂತೆ ಹಿಂದೂ ಜನಜಾಗೃತಿ ಸಮಿತಿ ಮಂಗಳೂರು ಮಹಾನಗರ ಪಾಲಿಕೆಯ ಡೆಪ್ಯೂಟಿ ಆಯುಕ್ತ ರವಿಕುಮಾರ್‌ಗೆ ಮನವಿ ಮಾಡಿದರು.


ಮನವಿಯಲ್ಲಿ ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ.

ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ (ಮೊಬೈಲ್‌) ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ.

ಸರಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜೊತೆಗೆ ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರಕಾರದ ವತಿಯಿಂದ ಅನುದಾನ ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ದ.ಕ ಸಮನ್ವಯಕ ಚಂದ್ರ ಮೊಗೇರ ನೇತೃತ್ವದಲ್ಲಿ ಆಗ್ರಹಿಸಿದರು.
ಈ ಸಂಧರ್ಭ ಹಿಂದೂ ಜನ ಜಾಗೃತಿ ಸಮಿತಿಯ ಸರ್ವಶ್ರೀ ವಿವೇಕ್ ಪೈ, ಸುಪಣ್ಣ, ರಾಜೇಶ್ ಆಚಾರ್ಯ ಪ್ರಭಾಕರ್ ನಾಯಕ್, ಶನೇಶ್ವರ ಸೇವಾ ಸಮಿತಿ ಇದರ ಅಧ್ಯಕ್ಷ ಸುಬ್ರಹ್ಮಣ್ಯ ರೆಡ್ಡಿ ಧರ್ಮ ಪ್ರೇಮಿ ರೂಪೇಶ್ ರೈ, ಸುರೇಶ್ ಕೊಣಾಜೆ, ರಮೇಶ್ ಕುಮಾರ್, ಕಿಶೋರ್ ಕುಮಾರ್, ಉಳ್ಳಾಲ ಸುನಿಲ್ ಕುರ್ನಾಡ್, ಉಪಸ್ಥಿತರಿದ್ದರು

Click to comment

Leave a Reply

Your email address will not be published. Required fields are marked *

DAKSHINA KANNADA

ನಿಮ್ಮ ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನು ಇಟ್ಟರೆ ಶುಭ

Published

on

ಮಂಗಳೂರು: ವಾಸ್ತುಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅದನ್ನು ಪಾಲಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಕಚೇರಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅನುಸರಿಸಿ ಕೆಲಸದಲ್ಲಿ ಪ್ರಗತಿ ಹೊಂದಬಹುದು. ಈ ವಾಸ್ತುಗಳನ್ನು ಅನುಸರಿಸಿದರೆ ನಿಮಗೆ ಬಡ್ತಿ ದೊರೆಯುವುದಲ್ಲದೆ, ಸಂಬಳ ಕೂಡ ಹೆಚ್ಚಾಗುತ್ತದೆ.

ಸ್ಫಟಿಕ ಲೋಹ

ವಾಸ್ತು ಪ್ರಕಾರ ನಿಮ್ಮ ಆಫೀಸ್ ಡೆಸ್ಕ್ ಮೇಲೆ ಸ್ಫಟಿಕ ಲೋಹವನ್ನು ಇಟ್ಟರೆ ಅದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ಬಿದಿರಿನ ಗಿಡ

ವಾಸ್ತು ಪ್ರಕಾರ ಬಿದಿರಿನ ಗಿಡವನ್ನು ನೀವು ಡೆಸ್ಕ್ ಮೇಲೆ ಇಡುವುದು ಬಹಳ ಮಂಗಳಕರ. ಇದು ನಿಮಗೆ ಚೈತನ್ಯ ತುಂಬುತ್ತದೆ.

ಬುದ್ಧನ ಪ್ರತಿಮೆ

ಬುದ್ಧನ ಪ್ರತಿಮೆಯನ್ನು ಡೆಸ್ಕ್ ಮೇಲಿಟ್ಟರೆ ಅದು ನಿಮ್ಮನ್ನು ಶಾಂತಿಯುತವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಹಡಗು ಚಿತ್ರವಿರುವ ನಾಣ್ಯ

ನಿಮಗೆ ಉದ್ಯೋಗದಲ್ಲಿ ಬಡ್ತಿ ಬೇಕಾದರೆ ವಾಸ್ತುಪ್ರಕಾರ ನಿಮ್ಮ ಟೇಬಲ್ ಮೇಲೆ ಹಡಗು ಚಿತ್ರವಿರುವ ನಾಣ್ಯ ಇಟ್ಟುಕೊಳ್ಳಬೇಕು.

ಗಣೇಶ ಮೂರ್ತಿ

ಇವಿಷ್ಟೇ ಅಲ್ಲದೆ ನೀವು ಮೇಜಿನ ಮೇಲೆ ಗಣೇಶ ಮೂರ್ತಿಯನ್ನು ಇಟ್ಟುಕೊಂಡರೆ ನಿಮಗೆ ಎಂದಿಗೂ ಯಾವ ವಿಘ್ನಗಳೂ ಬರುವುದಿಲ್ಲ.

Continue Reading

DAKSHINA KANNADA

ಪುರುಷರಲ್ಲಿ ಅತಿಯಾಗಿ ಕೂದಲು ಉದುರಲು ಇವೇ ಪ್ರಮುಖ ಕಾರಣಗಳು!

Published

on

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಹೆಣ್ಣಿರಲಿ ಗಂಡಿರಲಿ ಚಿಕ್ಕ ವಯಸ್ಸಿನಿಂದಲೇ ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ತಲೆ ಬೋಳಾಗುತ್ತಿದೆ. ಬೊಕ್ಕತಲೆಯ ಅಂದ ಕೆಡಲು ಕಾರಣವಾಗಿದೆ.

ಹಾಗಾದರೆ ಗಂಡುಮಕ್ಕಳಲ್ಲಿ ಕೂದಲು ಉದುರಲು ಕಾರಣವೇನು? ಇದನ್ನು ನಿಯಂತ್ರಿಸುವುದು ಹೇಗೆ ನೋಡಿ.

ಸಾಮಾನ್ಯವಾಗಿ ಪುರುಷರು ತಲೆಗೆ ಸಿಕ್ಕ ಸಿಕ್ಕ ಶಾಂಪೂ, ಸಾಬೂನುಗಳನ್ನು ಬಳಸುತ್ತಾರೆ. ಇದು ಅವರಲ್ಲಿ ಅಕಾಲಿಕ ಕೂದಲು ಉದುರುವ ಸಮಸ್ಯೆಗೆ ಕಾರಣವಾಗುತ್ತದೆ. ಆಹಾರವು ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ. ಎಣ್ಣೆಯಂಶ ಇರುವ ಆಹಾರಗಳನ್ನು ಅತಿಯಾಗಿ ತಿನ್ನುವುದು ಕೂದಲು ಉದುರಲು ಕಾರಣವಾಗುತ್ತದೆ.

ಕೂದಲಿಗೆ ಬಣ್ಣ ಹಚ್ಚಿಸುವುದು ಇಂದಿನ ಫ್ಯಾಷನ್. ಇದು ಸ್ಟೈಲಿಶ್ ನೋಟಕ್ಕೆ ಬೆಸ್ಟ್ ಎನ್ನಿಸಿದರೂ ಕೂಡ ಇದರಲ್ಲಿರುವ ರಾಸಾಯನಿಕಗಳು ಕೂದಲು ಉದುರಲು ಕಾರಣವಾಗುತ್ತದೆ. ಇನ್ನು ಪದೇ ಪದೇ ತಲೆಗೆ ಸ್ನಾನ ಮಾಡುವುದು ಅಂದರೆ ದಿನದಲ್ಲಿ 2, 3 ಬಾರಿ ತಲೆ ಸ್ನಾನ ಮಾಡುವುದು ಕೂಡ ಕೂದಲು ಉದುರಲು ಕಾರಣವಾಗುತ್ತದೆ.

ಪುರುಷರು ಚಿಕ್ಕ ತಲೆ ಕೂದಲನ್ನು ಹೊಂದಿರುತ್ತಾರೆ. ಅವರು ತಮ್ಮ ಕೂದಲಿನ ಬುಡದಿಂದಲೇ ಕಂಡೀಷನರ್ ಬಳಸುತ್ತಾರೆ. ನೆತ್ತಿಯ ಭಾಗಕ್ಕೆ ಕಂಡೀಷನರ್ ಬಳಸುವುದು ಕೂಡ ಕೂದಲು ಉದುರಲು ಕಾರಣವಾಗುತ್ತದೆ.

ಕೂದಲು ಉದುರುವುದನ್ನು ತಡೆಯಲು ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ. ತಲೆಹೊಟ್ಟು ಇದ್ದರೆ ವಾರಕ್ಕೊಮ್ಮೆ ಮೊಸರಿನ ಹೇರ್‌ಪ್ಯಾಕ್ ಹಚ್ಚಿ. ನೆತ್ತಿಯ ಭಾಗಕ್ಕೆ ಯಾವೂದೇ ಕಾರಣಕ್ಕೂ ಕಂಡೀಷನಲ್ ತಾಕದಂತೆ ನೋಡಿಕೊಳ್ಳಿ.

ಶಾಂಪೂ ಸೇರಿದಂತೆ ಯಾವೂದೇ ರಾಸಾಯನಿಕ ವಸ್ತುಗಳು ಕೂದಲ ಬುಡಕ್ಕೆ ತಾಕದಂತೆ ನೋಡಿಕೊಳ್ಳಿ. ದಿನಕ್ಕೊಮ್ಮೆ ತಲೆಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಿ. ಆಗ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

Continue Reading

DAKSHINA KANNADA

ಉಳ್ಳಾಲ ಮಾಜಿ ಶಾಸಕರ ಮೊಮ್ಮಗನಿಗೆ ಜಾಮೀನು; UAPA ಕೇಸ್ ಬಗ್ಗೆ ದೆಹಲಿ ಹೈಕೋರ್ಟ್‌ ಹೊಸ ವ್ಯಾಖ್ಯಾನ

Published

on

ಮಂಗಳೂರು : ಯುಎಪಿಎ ( ದೇಶದ್ರೋಹ ) ಕಾಯ್ದೆ ವಿಚಾರವಾಗಿ ದೆಹಲಿಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 2021 ರಲ್ಲಿ ಐಸಿಸ್‌ ಉಗ್ರರ ಜೊತೆ ನಂಟಿದೆ ಎಂಬ ಆರೋಪದಲ್ಲಿ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಅವರ ಮೊಮ್ಮಗನ ಬಂಧನವಾಗಿತ್ತು.

ಎನ್‌ಐಎ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇದಿನಬ್ಬ ಮೊಮ್ಮಗ ಅಬ್ದುಲ್ ರೆಹಮಾನ್‌ ಹಾಗೂ ಇದಿನಬ್ಬ ಮಗ ಬಿ‌.ಎಂ.ಭಾಷಾರ ಮಗ ಅನಾಸ್ ಅಬ್ದುಲ್ ಅವರ ಪತ್ನಿ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಮ್ಮ ಬಂಧನವಾಗಿತ್ತು. 2021 ರ ಆಗಸ್ಟ್‌ 21 ರಂದು ಅಮರ್ ಅಬ್ದುಲ್‌ ರೆಹಮಾನ್ ಬಂಧನವಾಗಿದ್ರೆ, 2022 ರ ಜನವರಿ 4 ರಂದು ಮರಿಯಮ್ಮ ಬಂಧನವಾಗಿತ್ತು. ಸದ್ಯ ಅಬ್ದುಲ್‌ ರೆಹಮಾನ್‌ಗೆ ಜಾಮೀನು ಮಂಜೂರು ಆಗಿದೆಯಾದ್ರೂ, ಮರಿಯಮ್ಮ ಜಾಮೀನು ಅರ್ಜಿಯ ವಿಚಾರಣೆ ಇನ್ನೂ ಬಾಕಿ ಉಳಿದಿದೆ.

ಇದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ದೀಪ್ತಿ ಮಾರ್ಲ, ಅಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದ ಆರೋಪ ಮಾಡಲಾಗಿತ್ತು. ದೀಪ್ತಿ ಮಾರ್ಲ ಭಾಗಿದಾರಿಕೆ ಬಗ್ಗೆ ಎನ್‌ಐಎ ಚಾರ್ಚ್ ಶೀಟ್ ಸಲ್ಲಿಸಿತ್ತು. ಐಸಿಸ್ ಇಸ್ಲಾಮಿಕ್ ಸ್ಟೇಟ್ ಐಡಿಯಾಲಾಜಿಗೆ ಪ್ರಭಾವಿತಳಾಗಿದ್ದಳು ಎಂದು ಎನ್‌ಐಎ ಆರೋಪಿಸಿತ್ತು.


ಈ ಬಂಧನವನ್ನು ಪ್ರಶ್ನಿ ವಿಚಾರಣಾಧೀನ ಕೋರ್ಟ್‌ನಲ್ಲಿ ಅಮ್ಮರ್ ಅಬ್ದುಲ್‌ ರೆಹಮಾನ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದ್ರೆ ವಿಚಾರಣಾಧೀನ ಕೋರ್ಟ್‌ ಜಾಮೀನು ನಿರಾಕರಿಸಿದ ಕಾರಣ, ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿ ಆರೋಪಿಗೆ ಜಾಮೀನು ನೀಡಿದೆ.

ಇದನ್ನೂ ಓದಿ : ಚಾರ್ಲಿ ಕಡೆಯಿಂದ ಸಿಕ್ತು ಗುಡ್ ನ್ಯೂಸ್; ಸಂಭ್ರಮ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಮೊಬೈಲ್‌ನಲ್ಲಿ ವಿಡಿಯೋ ಫೋಟೊ ಇದ್ರೆ ಉಗ್ರ ಆಗಲ್ಲ :

ಐಸಿಸ್‌ ಬಾವುಟ, ಕರಪತ್ರ, ವಿಡಿಯೋಗಳು, ಮೊಬೈಲ್‌ನಲ್ಲಿ ಇದ್ರೆ ಉಗ್ರ ಎನ್ನಲು ಪೂರಕ ದಾಖಲೆ ಅಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಈ ಕೇಸ್‌ನಲ್ಲಿ ಎನ್‌ಐಎ ಅಧಿಕಾರಿಗಳು ಆರೋಪಿಗಳ ಮೊಬೈಲ್‌ನಲ್ಲಿ ಉಗ್ರ ಸಂಘಟನೆಗೆ ಸಂಬಂಧಿಸಿದ ವಿಡಿಯೋಗಳು ಹಾಗೂ ಕರಪತ್ರಗಳು ಇತ್ತು ಎಂಬುದನ್ನು ಪರಿಗಣಿಸಿ ಬಂಧಿಸಿದೆ ಎಂದು ಹೇಳಿದೆ.

ದೆಹಲಿ ಹೈ ಕೋರ್ಟ್‌ ಹೇಳಿದ ಪ್ರಮುಖ ಅಂಶಗಳು :

  • ಉಗ್ರ ಸಂಘಟನೆಯ ಮೇಲೆ ಆಕರ್ಷಣೆ ಆದ್ರೆ ಅದು ಉಗ್ರ ನಂಟು ಎನ್ನಲು ಆಗುವುದಿಲ್ಲ.
  • ಐಸಿಸ್ ಪರ ವಿಡಿಯೋ ಡೌನ್ ಲೋಡ್, ಭಾಷಣ ಆಲಿಸೋದು ಯುಎಪಿಎ ಕಾಯ್ದೆಯಡಿ ತರಲು ಆಗಲ್ಲ.
  • ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39 ರಡಿ ತರಲು ಬರಲ್ಲ.
  • ಆರೋಪಿ ಮೊಬೈಲ್ ನಲ್ಲಿ ಲಾಡೆನ್, ಐಸಿಸ್ ಬಾವುಟಗಳು, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ.
  • ಆದರೆ, ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎನ್ನಲು‌ ಆಗಲ್ಲ.
  • ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಸಿಗುತ್ತದೆ.
  • ಕುತೂಹಲ ಇರೋ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು.
  • ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗಲ್ಲ.
Continue Reading

LATEST NEWS

Trending