FILM
ಚಾರ್ಲಿ ಕಡೆಯಿಂದ ಸಿಕ್ತು ಗುಡ್ ನ್ಯೂಸ್; ಸಂಭ್ರಮ ಹಂಚಿಕೊಂಡ ರಕ್ಷಿತ್ ಶೆಟ್ಟಿ
ಮೈಸೂರು : ಎರಡು ವರ್ಷಗಳ ಹಿಂದೆ ತೆರೆಕಂಡು ಭಾರೀ ಯಶಸ್ಸು ಬಾಚಿಕೊಂಡ ಚಿತ್ರ 777 ಚಾರ್ಲಿ. ಈ ಸಿನಿಮಾ ನೋಡಿದವರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಚಾರ್ಲಿ ಕಡೆಯಿಂದ ಶುಭಸುದ್ದಿ ಸಿಕ್ಕಿದೆ. ಹೌದು, ಚಾರ್ಲಿ ಪಾತ್ರ ಮಾಡಿದ್ದ ನಾಯಿ, 6 ಮರಿಗಳಿಗೆ ಜನ್ಮ ನೀಡಿದೆ. 5 ಹೆಣ್ಣು ಮರಿಗಳು, ಒಂದು ಗಂಡು ಮರಿಗೆ ಅವಳು ಜನ್ಮ ನೀಡಿದ್ದಾಳೆ. ಸ್ವತಃ ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್‌ಗೆ ಬಂದ ಅವರು, ಮೈಸೂರಿನಲ್ಲಿದ್ದು, ಚಾರ್ಲಿ ಆರು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದಾಳೆ. ಅವನ್ನು ನೋಡಲು ಬಂದಿದ್ದೇನೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಚಾರ್ಲಿಯನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿನ ಪ್ರಮೋದ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?
ಅಲ್ಲಿಂದಲೇ ಲೈವ್ ಮಾಡಿ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ. ಚಾರ್ಲಿ ಸಿನಿಮಾಗೆ ಸಾಕಷ್ಟು ಪ್ರೀತಿ ಸಿಕ್ಕಿದೆ, ವಿಶೇಷವಾಗಿ ಮಕ್ಕಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಈ ವಿಚಾರ ತಿಳಿಸಬೇಕು ಎನ್ನಿಸಿತು ಅದಕ್ಕಾಗಿ ಲೈವ್‌ಗೆ ಬಂದೆ ಎಂದು ಹೇಳಿದ್ದಾರೆ.
ಸದ್ಯ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸಿನಿಮಾದ ತಯಾರಿಯಲ್ಲಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.
FILM
ಒಂದೇ ಧಾರಾವಾಹಿಯಲ್ಲಿ ನಟಿಸಿದ ಈ ನಟಿಯರು ಈಗ ಒಟ್ಟಿಗೆ ಪ್ರೆಗ್ನೆಂಟ್; ಸುಂದರ ಫೋಟೋಶೂಟ್ ವೈರಲ್
ಬೆಂಗಳೂರು: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನೇಹಾ ಗೌಡ ಹಾಗೂ ಕವಿತಾ ಗೌಡ ಅವರು ಒಟ್ಟಾಗಿ ನಟಿಸಿದ್ದರು. ಈ ಧಾರಾವಾಹಿ ಗಮನ ಸೆಳೆದಿತ್ತು. ಈಗ ಇಬ್ಬರೂ ಪ್ರೆಗ್ನೆಂಟ್ ಆಗಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹಳೆಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಈ ಮೊದಲು ಈಟಿವಿಯಲ್ಲಿ ಪ್ರಸಾರ ಕಂಡಿತ್ತು. ಈ ಧಾರಾವಾಹಿಯಲ್ಲಿ ಕವಿತಾ ಗೌಡ ಪತಿ ಚಂದನ್ ಕುಮಾರ್ ಕೂಡ ನಟಿಸಿದ್ದರು. ಸಮಯ ಕಳೆದಂತೆ ಪಾತ್ರವರ್ಗ ಬದಲಾವಣೆ ಆಗುತ್ತಾ ಬಂತು. ನಿಜ ಜೀವನದಲ್ಲಿ ನೇಹಾ ಹಾಗೂ ಕವಿತಾ ಮಧ್ಯೆ ಒಳ್ಳೆಯ ಗೆಳೆತನ ಇದೆ.
ನೇಹಾ ಗೌಡ ಹಾಗೂ ಕವಿತಾ ಗೌಡ ಒಟ್ಟಾಗಿ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಈ ಫೋಟೋ 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ.
ಅಚ್ಚರಿಯ ವಿಚಾರ ಎಂದರೆ ನೇಹಾ ಹಾಗೂ ಕವಿತಾ ಇಬ್ಬರ ಪತಿಯರ ಹೆಸರೂ ಚಂದನ್ ಎಂದೇ ಅನ್ನೋದು ವಿಶೇಷ. ಕವಿತಾ ಗೌಡ ಚಂದನ್ ಕುಮಾರ್ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ.
ಇತ್ತ, ನೇಹಾ ಗೌಡ ಅವರ ಪತಿ ಚಂದನ್ ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ನೇಹಾ ಗೌಡ ಜೊತೆ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.
FILM
ನಟ ಧ್ರುವ ಸರ್ಜಾ ಮ್ಯಾನೇಜರ್ ಬಂಧನ
ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ವಿವಾದಗಳೇ ಇತ್ತೀಚೆಗೆ ಸುದ್ದಿಯಾಗುತ್ತಿದೆ. ಒಂದಲ್ಲಾ ಒಂದು ಅವಘ*ಡಗಳು ವರದಿಯಾಗುತ್ತಿವೆ. ಒಂದೆಡೆ, ನಟ ದರ್ಶನ್ ವಿಚಾರವಿದ್ದರೆ, ಮತ್ತೊಂದೆಡೆ ಹಲವು ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ನಟ ಧ್ರುವ ಸರ್ಜಾ ಆಪ್ತನ ಬಂಧನವಾಗಿದೆ.
ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲಿನ ಹ*ಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಮೇ 26 ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹ*ಲ್ಲೆ ನಡೆದಿತ್ತು. ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹ*ಲ್ಲೆ ಮಾಡಿದ್ದರು. ಹ*ಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ ಎನ್ನಲಾಗಿದೆ. ಧ್ರುವ ಸರ್ಜಾಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿದ್ದ. ನಾಗೇಂದ್ರಗೆ ಜೊತೆಯಾಗಿದ್ದು, ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂಬ ದೂರು ಕೇಳಿ ಬಂದಿದೆ.
ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಗೆ ಜಿಮ್ನಲ್ಲಿ ತರಬೇತಿ ನೀಡುತ್ತಿದ್ದುದ್ದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್ ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹ*ಲ್ಲೆಗೆ ಯೋಜನೆ ರೂಪಿಸಿದ್ದರು.
ಇದನ್ನೂ ಓದಿ : ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ
ಸ್ನೇಹಿತರ ಕೈಯಲ್ಲಿ ಹ*ಲ್ಲೆ ಮಾಡಿಸಿದ್ದರು ಎನ್ನಲಾಗಿದೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್ ಹ*ಲ್ಲೆ ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಅಶ್ವಿನ್ ನನ್ನು ಬಂಧಿಸಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ.
FILM
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್‌ಫರ್ಮ್!
ಬಿಗ್ ಬಾಸ್ ವೀಕ್ಷಕರಿಗೆ ಅಂತೂ ಸಿಹಿ ಸುದ್ದಿ ಬಂದಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ನಿರೂಪಣೆ ಮಾಡೋರು ಯಾರು? ಯಾವಾಗಿನಿಂದ ಶುರು ? ಎಂದು ತಿಳಿಯಲು ಮುಂದೆ ಓದಿ.
ಬಿಗ್ ಬಾಸ್ ಸೀಸನ್ 11ಕ್ಕೆ ಅಂತೂ ಮುಹೂರ್ತ ಫಿಕ್ಸ್ ಆಗಿದೆ. ಬಹು ದಿನಗಳಿಂದ ಕಾದಿದ್ದ ವೀಕ್ಷಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲೇ 11 ನೇ ಬಿಗ್ ಬಾಸ್ ಆಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಬಿಗ್ ಬಾಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ. ಸದ್ದಿಲ್ಲದೆ ಹೈದರಾಬಾದ್ ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.
ಸೀಸನ್ 11 ಕ್ಕೆ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬ್ರೇಕ್ ಕನ್ಪರ್ಮ್
ಈ ಮುಂಚೆ ಸೀಸನ್ 11ರಲ್ಲಿ ರಿಷಬ್ ಶೆಟ್ಟಿ ಅಥವಾ ಗೋಲ್ಡನ್ ಸ್ಟಾರ್ ಗಣೇಶ್ ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲ ವದಂತಿಗಳಿಗೆ ಫುಲ್‌ಸ್ಟಾಪ್ ಇಡಲಾಗಿದೆ. ಇದೇ ತಿಂಗಳ 23 ಕ್ಕೆ ಬಿಗ್ ಬಾಸ್ ತಂಡ ಪ್ರೆಸ್ ಮೀಟ್ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್ ಬಾಸ್ ಪ್ರೆಸ್ ಮೀಟ್ ನಡೆಯುತ್ತಿದೆ.
ಈ ಮುಂಚೆ ವಾಹಿನಿ ಹಂಚಿಕೊಂಡ ಪ್ರೊಮೋದಲ್ಲಿ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇಲ್ಲವಾಗಿತ್ತು ಹಾಗಾಗಿಯೇ ಕಿಚ್ಚ ಇರಲ್ಲ ಎನ್ನುವ ಗಾಸಿಪ್ ಶುರುವಾಗಿತ್ತು,
ಸ್ಪರ್ಧಿಗಳು ಯಾರೆಲ್ಲ?
ಬಿಗ್ ಬಾಸ್ ಸ್ಪರ್ಧಿಗಳಾಗಿ ಸೋಷಿಯಲ್ ಮೀಡಿಯಾ influencer ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಕಿರುತೆರೆ ಸ್ಟಾರ್ ಗಳ ಜೊತೆ ಬಿಗ್ ಬಾಸ್ ನಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್ ಸೀಸನ್‌ಗೆ ಹೋಗೋದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.
- LATEST NEWS7 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- LATEST NEWS2 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- DAKSHINA KANNADA6 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM6 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ