Connect with us

LATEST NEWS

ವಸ್ತ್ರಸಂಹಿತೆ ವಿಚಾರಣೆ ಮತ್ತೆ ಆರಂಭ: ನ್ಯಾಯಧೀಶ ಕೃಷ್ಣ ಎಸ್‌. ದೀಕ್ಷಿತ್‌ ಆಗಮನ

Published

on

ಬೆಂಗಳೂರು: ಹಿಜಾಬ್ ವಿವಾದ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯುತ್ತಿದ್ದು, ಊಟದ ವಿರಾಮದ ಬಳಿಕ ಮತ್ತೆ ಅರ್ಜಿ ವಿಚಾರಣೆ ಆರಂಭವಾಗಿದೆ.

ಏಕಸದಸ್ಯದಲ್ಲಿ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ. ಈಗ ಮತ್ತೆ ವಾದ-ಪ್ರತಿವಾದ ಮುಂದುವರೆದಿದೆ.


ಮಧ್ಯಾಹ್ನದವರೆಗೆ ನಡೆದ ಅರ್ಜಿ ವಿಚಾರಣೆ ವೇಳೆ,  ಎರಡು ತಿಂಗಳು ಹಿಜಾಬ್‌ ಧರಿಸಲು ಅವಕಾಶ ನೀಡಲಿ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಗ್ಗೆ ಸರ್ಕಾರ ನೂತನ ನೀತಿ ತಯಾರಿಸಲಿ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಸರ್ಕಾರದ ಪರ ವಕೀಲರು ಒಪ್ಪಲಿಲ್ಲ. ನಂತರ ಜಡ್ಜ್‌ ಪವಿತ್ರ ಕುರಾನ್‌ ಪ್ರತಿಯನ್ನು ಕೋರ್ಟ್‌ ಲೈಬ್ರೆರಿಯಿಂದ ತರಿಸಿದ್ದಾರೆ.

ಖುರಾನ್‌ನಲ್ಲಿರುವ ವಸ್ತ್ರಸಂಹಿತೆ ಬಗ್ಗೆ ಉಲ್ಲೇಖ ನಡೆಯುತ್ತಿತ್ತು. ಈ ಮಧ್ಯೆ ಒಂದೂವರೆ ಗಂಟೆಯಿಂದ ವಾದ-ಪ್ರತಿವಾದ ನಡೆಯುತ್ತಿದ್ದಾಗ ಊಟದ ವಿರಾಮ ಘೋಷಿಸಿದ್ದರು. ಇದೀಗ ಮತ್ತೆ ಅರ್ಜಿ ವಿಚಾರಣೆ ಮುಂದುವರೆದಿದೆ.

Click to comment

Leave a Reply

Your email address will not be published. Required fields are marked *

LATEST NEWS

ಧಾರಾಕಾರವಾಗಿ ಸುರಿದ ಮೀನಿನ ಮಳೆ.. ಫಿಶ್​ಗಳನ್ನ ಕ್ಯಾಚ್ ಹಿಡಿದ ಜನ!

Published

on

ಇರಾನ್‌ನ ಯಸುಜ್ ನಗರದಲ್ಲಿ ಅಪರೂಪದ ವಿದ್ಯಮಾನವೊಂದು ನಡೆದಿದ್ದು ಮೀನುಗಳ ಮಳೆಯಾಗಿದೆ. ಸದ್ಯ ಎಲ್ಲೆಡೆ ಮಳೆ ಸುರಿಯುತ್ತಿರುವುದು ಸಾಮಾನ್ಯವಗಿದೆ. ಆದರೆ ಯಸುಜ್ ನಗರದಲ್ಲಿ ಮಾತ್ರ ಭರ್ಜರಿ ವರುಣರಾಯ ಬಿರುಗಾಳಿ ಸಮೇತ ಆರ್ಭಟಿಸಿದ್ದಾನೆ. ಈ ವೇಳೆ ಆಗಸದಿಂದ ಮೀನುಗಳು ನಗರದ ಎಲ್ಲೆಂದರಲ್ಲಿ ಬಿದ್ದಿವೆ.

ಅಲ್ಲಿನ ಜನರು ಇವುಗಳನ್ನು ನೋಡಿ ಆಶ್ಚರ್ಯವಾಗಿದ್ದು ಕೆಲವರಂತೂ ಮೇಲಿಂದ ಬೀಳುವ ಮೀನುಗಳನ್ನು ಕ್ಯಾಚ್ ಹಿಡಿದುಕೊಂಡಿದ್ದಾರೆ. ಕೆಲವೊಂದು ಮೇಲಿಂದ ಬಿದ್ದ ರಭಸಕ್ಕೆ ರಸ್ತೆಯಲ್ಲೇ ಉಸಿರು ಚೆಲ್ಲಿವೆ ಎಂದು ಹೇಳಲಾಗಿದೆ.

ಸದ್ಯ ಆಗಸದಿಂದ ಮೀನುಗಳು ಮನೆ, ಕಾರು, ಛಾವಣಿ, ಹೋಟೆಲ್​ಗಳ ಮೇಲೆ ಬಿದ್ದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಯಾವುದೇ ಜೀವಿಯಾದರೂ ಆಗಸದಿಂದ ಬೀಳುವುದಿಲ್ಲ. ಸಮುದ್ರದಲ್ಲಿ ಸುಳಿಗಾಳಿಯಿಂದ ಮೀನುಗಳು ತೀವ್ರ ಮೇಲಕ್ಕೆ ಹೋಗಿ ಈ ರೀತಿ ಅಲ್ಲಾಲ್ಲಿ ಬೀಳುತ್ತಾವೆ. ಈ ರೀತಿ ಆಗಾಗ ಅಲ್ಲಾಲ್ಲಿ ಮಳೆಗಾಲದಲ್ಲಿ ನಡೆಯುತ್ತಿರುತ್ತಾವೆ ಎಂದು ಹೇಳಲಾಗುತ್ತಿರುತ್ತದೆ.

Continue Reading

FILM

ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

Published

on

ತಿರುವನಂತಪುರಂ/ಮಂಗಳೂರು: ಮಲಯಾಳಂ ನಟಿ ಕನಕಲತಾ(63 ವ)  ತಿರುವನಂತಪುರಂ ಜಿಲ್ಲೆಯ ಮಲಯಿಂಕೀಝುನಲ್ಲಿರುವ ತಮ್ಮ ನಿವಾಸದಲ್ಲಿ ಎ.06ರಂದು ಅನಾರೋಗ್ಯದಿಂದಾಗಿ ನಿಧನರಾದರು. ಇವರು ಪಾರ್ಕಿನ್ಸನ್ ಮತ್ತು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದರು.

kanakalatha

300 ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ:

ಕಳೆದ ವರ್ಷ ಅವರ ಸಹೋದರಿ ವಿಜಯಮ್ಮ ಅವರು ಕನಕಲತಾ ಅವರ ಅನಾರೋಗ್ಯವನ್ನು ಬಹಿರಂಗಪಡಿಸಿದ್ದರು. ಆಗಸ್ಟ್ 2022 ರಲ್ಲಿ, ವೈದ್ಯರು MRI ಸ್ಕ್ಯಾನ್ ಮೂಲಕ ಬುದ್ಧಿಮಾಂದ್ಯತೆಯನ್ನು ಪತ್ತೆಹಚ್ಚಿದ್ದರು. ರಂಗಭೂಮಿಯಲ್ಲಿ ಹಿನ್ನೆಲೆ ಹೊಂದಿರುವ ಕನಕಲತಾ ಸುಮಾರು 300 ಚಲನಚಿತ್ರಗಳು ಮತ್ತು ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. “ಒರು ಯಾತ್ರಾಮೊಳಿ,” “ಗುರು,” “ಕಿಲುಕಿಲ್ ಪಂಬರಂ,” “ಪಾರ್ವತಿ ಪರಿಣಯಂ,” “ತುಂಪೋಲಿ ಕಡಪ್ಪುರಂ,” “ಆದ್ಯತೆ ಕಣ್ಮಣಿ,” “ಎಫ್.ಐ.ಆರ್.,” “ಆಕಾಶಗಂಗಾ,” “ಅನಿಯತಿಪ್ರವು,” “ಅಂಚರಕಲ್ಯಾಣಂ,” “ದೋಸ್ತ್,” ಮಾಯಿಲ್‌ಪೀಲಿಕ್ಕಾವು,” ಮತ್ತು “ಮಂತ್ರಮೋತಿರಂ”, ಇವುಗಳು ಅವರ ಜನಪ್ರಿಯ ಚಲನಚಿತ್ರಗಳಾಗಿದೆ.

ಮುಂದೆ ಓದಿ..; ಹೆಣ್ಣು ಮಕ್ಕಳು ಕನಿಷ್ಠ 25 ದಾಟಿದ ಮೇಲೆ ಮದುವೆಯಾಗಿ; ಮಿಲನಾ ನಾಗರಾಜ್

“ಪೂಕ್ಕಳಂ” ಚಿತ್ರ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.  ಆದರೆ, ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ ಸಿನಿಮಾ ಮತ್ತು ಧಾರಾವಾಹಿಗಳೆರಡರಿಂದಲೂ ಹಿಂದೆ ಸರಿಯಬೇಕಾಯಿತು. “ಅಮ್ಮ” ಸಂಸ್ಥೆಯ ಆರ್ಥಿಕ ನೆರವು ಮತ್ತು ಚಲನಚಿತ್ರ ಅಕಾಡೆಮಿಯ ಬೆಂಬಲವು ಅವರ ವೈದ್ಯಕೀಯ ಚಿಕಿತ್ಸೆಗೆ ಸಹಕಾರ ನೀಡಿತ್ತು ಎನ್ನಲಾಗಿದೆ.

Continue Reading

DAKSHINA KANNADA

ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

Published

on

ಮಂಗಳೂರು: ಮಂಗಳೂರು ಸಬ್ ಜೈಲಿನಲ್ಲಿದ್ದ ಕೇರಳ ಮೂಲದ ಖೈದಿಯೊಬ್ಬ ಆಸ್ಪತ್ರೆಯಲ್ಲೇ ಕುಣಿಕೆಗೆ ಕೊರಳೊಡ್ಡಿ ಜೀವಾಂತ್ಯಗೊಳಿಸಿದ್ದಾನೆ. ಕೊಣಾಜೆಯ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022 ರಲ್ಲಿ ಈತ ಬಂಧಿತನಾಗಿದ್ದ . ಕೇರಳ ಮೂಲದವನಾಗಿದ್ದ ಮಹಮ್ಮದ್ ನೌಫಲ್ ಜೀವಾಂತ್ಯಗೊಳಿಸಿದ ಖೈದಿಯಾಗಿದ್ದಾನೆ. ಕೆಲ ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 25 ರಂದು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯ ಸೆಲ್ ವಾರ್ಡ್ ಗೆ ದಾಖಲಿಸಲಾಗಿತ್ತು. ಸೆಲ್ ವಾರ್ಡನಲ್ಲಿ ಇರುವಾಗಲೇ ಈತ ಜೀವಾಂತ್ಯಗೊಳಿಸಿದ್ದಾನೆ. ಈತನನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳ ನಡೆಸಿದರಾದ್ರೂ ಸಾದ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

Continue Reading

LATEST NEWS

Trending