Thursday, October 29, 2020

ಪಚ್ಚನಾಡಿ ಸಂತ್ರಸ್ಥರಿಗೆ ಪರಿಹಾರ ಕೊಡಲು ಮಂಗಳೂರು ಪಾಲಿಕೆಯಲ್ಲಿ ದುಡ್ಡಿಲ್ಲ ಹೇಳಿದಕ್ಕೆ ಹೈಕೋರ್ಟ್ ಸೂಚಿಸಿದ್ದೇನು..!?

ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ : ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ..!

ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ : ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ..! ಬಂಟ್ವಾಳ :ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ ಮುಂದುವೆರೆದಿದೆ. ಫೋಟೋ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ಫೋಟೊ ಗ್ರಾಫರ್ ಮೇಲೆ ತಲವಾರು...

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..!

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..! ಮೈಸೂರು: ಕೊಲೆ ಪ್ರಕರಣದ ಆರೋಪದಲ್ಲಿ ಸೋಜಿಗದ ಸೋಜಿಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ನನ್ನು...

ಯುರೋಪ್‌ ನಲ್ಲಿ ಕೊರೋನದ 2 ಅಲೆ ಶುರು :ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ..!

ಯುರೋಪ್‌ ನಲ್ಲಿ ಕೊರೋನದ 2 ಅಲೆ ಶುರು :ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ..! ಸ್ಪೇನ್ :   ಭಾರತದ ಹಲವೆಡೆ ಕೋವಿಡ್ 19 ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ ಯುರೋಪ್‌ ನ ಅನೇಕ...

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..!

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..! ಉಡುಪಿ :  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪುವಿನ ಅಮೃತೇಶ್ ಮಗಳಾದ ತೃಷಾ ಅವರನ್ನು ನಿನ್ನೆ ಕಾಪು ವೃತ್ತ ಕಛೇರಿಯಲ್ಲಿ ಸನ್ಮಾನಿಸಲಾಗಿದೆ. ತೃಷಾ ಉಡುಪಿಯ...

ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ

ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ.. ಮಂಗಳೂರು : ಸರಣಿ ಅಪಘಾತ ಮತ್ತು ಜೀವಹಾನಿಗೆ ಕುಖ್ಯಾತಿ ಪಡೆದ ಮಂಗಳೂರು ಹೊರವಲಯದ...

ಪಚ್ಚನಾಡಿ ಸಂತ್ರಸ್ಥರಿಗೆ ಪರಿಹಾರ ಕೊಡಲು ಮಂಗಳೂರು ಪಾಲಿಕೆಯಲ್ಲಿ ದುಡ್ಡಿಲ್ಲ ಹೇಳಿದಕ್ಕೆ ಹೈಕೋರ್ಟ್ ಸೂಚಿಸಿದ್ದೇನು..!?

ಮಂಗಳೂರು : ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯ ಜರಿದು ಉಂಟಾಗಿರುವ ಅನಾಹುತದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿ ಅಗತ್ಯ ಮೊತ್ತ ಕ್ರೋಡೀಕರಿಸಲು ಪಾಲಿಕೆಯ ಸ್ಥಿರಾಸ್ತಿಯನ್ನು ಅಡವು ಇರಿಸಲು ಮತ್ತು ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು ಪಾಲಿಕೆಗೆ ಅನುಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನ್ಯಾಯಾಲಯದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಹಣದ ಕೊರತೆ ಇದೆ. ಅಲ್ಲದೆ 14 ಕೋ.ರೂ.ಗಳನ್ನು ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂಬ ವಿಚಾರವನ್ನು ಪಾಲಿಕೆ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಯಾಗಿ, ಪಾಲಿಕೆಯ ಕಟ್ಟಡ ಅಥವಾ ಸ್ಥಿರಾಸ್ತಿ ಮಾರಾಟ ಮಾಡಿ ಪರಿಹಾರ ಕೊಡಿ ಎಂದು ನ್ಯಾಯಪೀಠವು ಆರಂಭದಲ್ಲಿ ಮೌಖೀಕವಾಗಿ ಹೇಳಿತು.

ಒಂದೆಡೆ ಪಾಲಿಕೆ ತನ್ನ ಬಳಿ ಹಣ ಇಲ್ಲ ಎಂದು ಹೇಳುತ್ತಿದೆ. ಮತ್ತೂಂದೆಡೆ ಸರಕಾರಕ್ಕೆ 14 ಕೋ.ರೂ. ಹಣ ಬಿಡುಗಡೆ ಮಾಡುವ ಇಚ್ಛೆ ಇರುವಂತೆ ಕಾಣುತ್ತಿಲ್ಲ.

ಆದರೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲೇಬೇಕು. ಹೀಗಾಗಿ ತನ್ನ ಸ್ಥಿರಾಸ್ತಿಯನ್ನು ಅಡಮಾನ ಇರಿಸಿ ಬ್ಯಾಂಕಿನಿಂದ ಸಾಲ ಪಡೆಯಲು ಪಾಲಿಕೆಗೆ ಒಂದು ವಾರದಲ್ಲಿ ನೀಡುವಂತೆ ನ್ಯಾಯಪೀಠವು ಸರಕಾರಕ್ಕೆ ನಿರ್ದೇಶನ ನೀಡಿತು.

ಅಲ್ಲದೆ ಪರಿಹಾರ ಮೊತ್ತದ 22 ಕೋಟಿ ರೂಪಾಯಿಗಳ ಪೈಕಿ ಬರೀ 8 ಕೋ.ರೂ.ಗಳನ್ನಷ್ಟೇ ಬಿಡುಗಡೆ ಮಾಡಿದ್ದೇಕೆ, ಬಾಕಿ ಹಣ ಏಕೆ ಬಿಡುಗಡೆ ಮಾಡಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ಸರಕಾರಕ್ಕೆ ಸೂಚಿಸಿತು.

ಸಂತ್ರಸ್ತ 35 ಮಂದಿಗೆ ಕೇವಲ ಬೆಳೆ ನಷ್ಟ ಪರಿಹಾರ ಮಾತ್ರ ನೀಡಲಾಗಿದೆ. ಮನೆ ಹಾನಿಗೆ ಪರಿಹಾರ ನೀಡಿಲ್ಲ. ಅಲ್ಲದೆ ಘನತ್ಯಾಜ್ಯ ನಿರ್ವಹಣೆ ನಿಯಮ ಗಳು-2016ರ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.

ಈ ಬಗ್ಗೆ ಪಾಲಿಕೆ ಆಯುಕ್ತರು ಪ್ರಮಾಣಪತ್ರ ಸಲ್ಲಿಸಬೇಕು ಮತ್ತು ಮುಂದಿನ ವಿಚಾರಣೆ ವೇಳೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಬೇಕು ಎಂದು ತಾಕೀತು ಮಾಡಿತು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಕಾರಣಗಳನ್ನು ನೀಡಿ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿಗೆ ಸೂಚಿಸಿದ ಹೈಕೋರ್ಟ್‌ ವಿಚಾರಣೆ ಮುಂದೂಡಿತು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.