Thursday, October 29, 2020

ಪುತ್ತೂರು ಬೊಳುವಾರಿನಲ್ಲಿ ವಾಣಿಜ್ಯ ಮಳಿಗೆಗೆ ಬೆಂಕಿ : ಸಮಯ ಪ್ರಜ್ಞೆ ಮೆರೆದ ಹೈವೇ ಸ್ಕ್ವಾಡ್..!

ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ : ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ..!

ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ : ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ..! ಬಂಟ್ವಾಳ :ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ ಮುಂದುವೆರೆದಿದೆ. ಫೋಟೋ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ಫೋಟೊ ಗ್ರಾಫರ್ ಮೇಲೆ ತಲವಾರು...

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..!

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..! ಮೈಸೂರು: ಕೊಲೆ ಪ್ರಕರಣದ ಆರೋಪದಲ್ಲಿ ಸೋಜಿಗದ ಸೋಜಿಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ನನ್ನು...

ಯುರೋಪ್‌ ನಲ್ಲಿ ಕೊರೋನದ 2 ಅಲೆ ಶುರು :ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ..!

ಯುರೋಪ್‌ ನಲ್ಲಿ ಕೊರೋನದ 2 ಅಲೆ ಶುರು :ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ..! ಸ್ಪೇನ್ :   ಭಾರತದ ಹಲವೆಡೆ ಕೋವಿಡ್ 19 ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ ಯುರೋಪ್‌ ನ ಅನೇಕ...

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..!

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..! ಉಡುಪಿ :  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪುವಿನ ಅಮೃತೇಶ್ ಮಗಳಾದ ತೃಷಾ ಅವರನ್ನು ನಿನ್ನೆ ಕಾಪು ವೃತ್ತ ಕಛೇರಿಯಲ್ಲಿ ಸನ್ಮಾನಿಸಲಾಗಿದೆ. ತೃಷಾ ಉಡುಪಿಯ...

ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ

ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ.. ಮಂಗಳೂರು : ಸರಣಿ ಅಪಘಾತ ಮತ್ತು ಜೀವಹಾನಿಗೆ ಕುಖ್ಯಾತಿ ಪಡೆದ ಮಂಗಳೂರು ಹೊರವಲಯದ...

ಪುತ್ತೂರು ಬೊಳುವಾರಿನಲ್ಲಿ ವಾಣಿಜ್ಯ ಮಳಿಗೆಗೆ ಬೆಂಕಿ : ಸಮಯ ಪ್ರಜ್ಞೆ ಮೆರೆದ ಹೈವೇ ಸ್ಕ್ವಾಡ್..!

ಪುತ್ತೂರು: ಪುತ್ತೂರು ಬೋಳುವಾರಿನಲ್ಲಿ ವಾಣಿಜ್ಯ ಕಟ್ಟಡ ಮಳಿಗೆಗೆ ಮಧ್ಯ ರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಆ ದಾರಿಯಾಗಿ ಬಂದ ಪೊಲೀಸ್ ಹೈವೇ ಸ್ಕ್ವಾಡ್‌ ಸಿಬಂದಿಗಳ ಸಮಯ ಪ್ರಜ್ಞೆಯಿಂದ ಅಗಬಹುದಾದದ ಭಾರಿ ಅನಾಹುತಾ ಒಂದು ತಪ್ಪಿದೆ.  

ಬೊಳುವಾರಿನಲ್ಲಿರುವ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿತ್ತು.

ಆ ಸಂದರ್ಭ ಸಮಯ ಪ್ರಜ್ಞೆ ಮೆರೆದ ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳ ಸಕಾಲಿಕ ಮಾಹಿತಿಯ ಮೂಲಕ ತಕ್ಷಣ ಅಗ್ನಿಶಾಮಕದಳದವರು ಆಗಮಿಸಿ ಸತತ ಮೂರುವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನಗೊಳಿಸಿದ್ದಾರೆ.

ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬೊಳುವಾರು ಏಕಮುಖ ರಸ್ತೆಯ ಬಳಿಯಲ್ಲಿರುವ ಉಸ್ಮಾನ್ ಮಾಲಕತ್ವದ ಹ್ಯಾರಿಂಗ್ ಸ್ಟುಡಿಯೋ ಹೆಸರಿನಲ್ಲಿರುವ ಸೆಲೂನ್‌ವೊಂದರಿಂದ ಹೊಗೆ ಬರುವುದನ್ನು ಗಮನಿಸಿದ ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕದಳಕ್ಕೆ ಪೋನ್ ಮಾಡಿದ್ದರು.

ಈ ನಡುವೆ ಸ್ಥಳೀಯರ ಮೂಲಕ ಸೆಲೂನ್ ಮಾಲಕರನ್ನು ಸ್ಥಳಕ್ಕೆ ಕೆರೆಸಿ ಸಂಸ್ಥೆಯ ಬಾಗಿಲನ್ನು ತೆರೆಯುವ ವೇಳೆ ಒಳಗೆ ಬೆಂಕಿ ಜ್ವಾಲೆ ಹತ್ತಿಕೊಳ್ಳುತ್ತಿತ್ತಲ್ಲದೆ ಪಕ್ಕದಲ್ಲಿರುವ ದಾರಂದ ಕುಕ್ಕು ನಿಶಾದ್ ಎಂಬವರ ಮಾಲಕತ್ವದ ಡಿ.ಕೆ.ಮೊಬೈಲ್ಸ್ ಅಂಗಡಿಗೂ ಪಸರಿಸಿತ್ತು.

ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸುವಲ್ಲಿ ಯತ್ನಿಸುತ್ತಿದ್ದ ವೇಳೆ ಬೆಂಕಿ ಜ್ವಾಲೆ ಅಂಗಡಿಯ ಮೇಲ್ಛಾವಣಿಯ ಮೂಲಕ ಪಕ್ಕದ ತರಕಾರಿ ಅಂಗಡಿ ಮತ್ತು ಅಕ್ಕಪಕ್ಕದಲ್ಲಿರುವ ಎರಡು ಹೊಟೇಲ್‌ಗಳಿಗೂ ಪಸರಿಸಿತ್ತು.

ಅಗ್ನಿಶಾಮಕದಳದವರು ನಿರಂತರ ಮೂರುವರೆ ಗಂಟೆ ಕಾರ್ಯಾಚರಣೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ಶಮನಗೊಳಿಸಲಾಗಿದ್ದು ಭಾರೀ ಅನಾಹುತವನ್ನು ತಪ್ಪಿಸಲಾಗಿದೆ.

ದುರ್ಘಟನೆಗೆ ಶಾರ್ಟ್ ಸರ್ಕಿಟ್ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.