Connect with us

  FILM

  ಹೈಕೋರ್ಟ್ ಮೊರೆ ಹೋದ ನಟ ದರ್ಶನ್; ಬೇಡಿಕೆಗಳೇನು?

  Published

  on

  ಬೆಂಗಳೂರು : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮನೆಯಿಂದ ಊಟ, ಹಾಸಿಗೆ, ಪುಸ್ತಕಗಳನ್ನು ಪಡೆಯಲು ಅನುಮತಿ ಕೋರಿ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.


  ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ತಮಗೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

  ಅರ್ಜಿಯಲ್ಲಿ ಏನಿದೆ?

  ಜೈಲಿನಲ್ಲಿ ನೀಡುತ್ತಿರುವ ಊಟದಿಂದ ಆರೋಗ್ಯ ಹದಗೆಡುತ್ತಿರುವ ಬಗ್ಗೆ ದರ್ಶನ್ ಪರ ವಕೀಲರು ರಿಟ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಇದರಿಂದ ಅತಿಸಾರ – ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

  ಅತಿಸಾರ, ಭೇದಿಯಿಂದಾಗಿ ದರ್ಶನ್ ದೇಹದ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ಮನೆ ಊಟಕ್ಕೆ ಅನುಮತಿ ನೀಡುವಂತೆ ಮಾಡಿದ್ದ ಕೋರಿಕೆಯನ್ನು ಮನ್ನಿಸಿಲ್ಲ, ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಜೈಲು ಅಧಿಕಾರಿಗಳ ನಿರಾಕರಣೆ ಕಾನೂನುಬಾಹಿರ ಮತ್ತು ಅಮಾನವೀಯವಾಗಿದೆ.

  ಇದನ್ನೂ ಓದಿ : ಮನೆಗೆ ಬರುತ್ತೆ ಕೂಪನ್​​​, ಸ್ಕ್ಯಾನ್​ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಮಾಯ

  ಇದೇ ರೀತಿ ಮುಂದುವರಿದರೆ ದರ್ಶನ್ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

  FILM

  20 ವರ್ಷಗಳ ನಂತರ ಕೊಲೆ ಆರೋಪಿ ಅರೆಸ್ಟ್..! ಈಗ ಈ ಆರೋಪಿ ಸಿನೆಮಾ ನಿರ್ದೇಶಕ..

  Published

  on

  ಬೆಂಗಳೂರು: ಈಗಾಗಲೇ ಸ್ಯಾಂಡಲ್‌ವುಡ್‌ ನಲ್ಲಿ ದರ್ಶನ್‌ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕನ್ನಡ ಚಿತ್ರರಂಗದ ಒಬ್ಬ ಸ್ಟಾರ್ ನಟ ಕೊಲೆ ಕೇಸ್‌ ನಲ್ಲಿ ಜೈಲು ಸೇರಿರುವುದು ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಾಗಿಬಿಟ್ಟಿದೆ. ಇದೀಗ ಇಪ್ಪತ್ತು ವರ್ಷಗಳ ಹಿಂದೆ ಕೊಲೆಯಲ್ಲಿ ಭಾಗಿಯಾಗಿದ್ದ ಸಿನೆಮಾ ನಿರ್ದೇಶಕ ಈಗ ಪೊಲೀಸ್ ಅತಿಥಿಯಾಗಿದ್ದಾರೆ. ವಿಶೇಷ ಅಂದರೆ ಈ ಆರೋಪಿ ಈಗ ಸಿನೆಮಾ ನಿರ್ದೇಶಕರಾಗಿದ್ದಾರೆ.

  ದರ್ಶನ್‌ ಆ್ಯಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ..! 14 ದಿನಗಳ ಕಾಲ ಮತ್ತೆ ಜೈಲು ವಾಸ..!

  ಅಷ್ಟಕ್ಕೂ ಏನಿದು ಘಟನೆ:
  20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕೇಬಲ್ ದಂಧೆಯಲ್ಲಿ ಅದೆಷ್ಟೋ ಹಣವನ್ನು ಗಳಿಸುತ್ತಿದ್ದರು. ಇದೇ ಕೇಬಲ್ ದಂಧೆಯಲ್ಲಿ ನಟೋರಿಯಸ್ ರೌಡಿಯ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಭಾಗಿಯಾಗಿದ್ದ ಈಗ ನಿರ್ದೇಶಕನಾಗಿರುವ ಗಜೇಂದ್ರ ಅಲಿಯಾಸ್ ಗಜ ಜೈಲು ಸೇರಿದ್ದ ಆತ ಬೇಲ್ ಮೂಲಕ ಹೊರ ಬಂದಿದ್ದ. ಆದರೆ ಕಳೆದ 20 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತದ್ದ ಈತ ಸಮಾಜದಲ್ಲಿ ನಾನೊಬ್ಬ ನಿರ್ದೇಶಕ ಮತ್ತು ಸಿನೆಮಾ ನಟ ಎಂಬ ಹಣೆಪಟ್ಟಿಯಲ್ಲಿ ಜೀವನ ನಡೆಸುತ್ತಿದ್ದ. ಇದೀಗ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನೆಮಾವನ್ನು ನಿರ್ದೇಶನ ಮಾಡಿದ್ದಾನೆ.

  Continue Reading

  FILM

  ದರ್ಶನ್‌ ಆ್ಯಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ..! 14 ದಿನಗಳ ಕಾಲ ಮತ್ತೆ ಜೈಲು ವಾಸ..!

  Published

  on

  ಬೆಂಗಳೂರು/ಮಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು 14 ದಿನಗಳ ಕಾಲ ವಿಸ್ತರಣೆ ಮಾಡಿ ನ್ಯಾಯಾಧೀಶ ವಿಶ್ವನಾಥ ಪಿ ಗೌಡ ಜು.18ರಂದು ಆದೇಶ ಹೊರಡಿಸಿದ್ದಾರೆ.

  ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್​ ಮೂಲಕ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳು ಹಾಜರಾಗಿದ್ದರು. ಎಲ್ಲರಿಗೂ 14 ದಿನಗಳ ಕಾಲ ಅಂದರೆ ಆಗಸ್ಟ್​ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

  ದರ್ಶನ್ ಗಾಗಿ ಶಪಥ ಮಾಡಿದ ಅಭಿಮಾನಿ..!! ಅದೇನು ಗೊತ್ತಾ?

  ದರ್ಶನ್‌ಗೆ ಬೇಲ್ ಕಷ್ಟ ಎಂದ ಪತ್ನಿ, ಸಹೋದರ:

  ಜೈಲಿನಲ್ಲಿರುವ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪರವರು ಭೇಟಿ ಮಾಡಿ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ದರ್ಶನ್‌ ಜೊತೆ ಮಾತನಾಡಿದ ಅವರು ಸದ್ಯಕ್ಕೆ ಬೇಲ್ ಸಿಗುವುದು ಕಷ್ಟಕರವಾಗಿದ್ದು, ಬೇಲ್‌ ಗಾಗಿ ಪ್ರಯತ್ನ ಪಡುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಜೈಲಿನಲ್ಲಿರುವ ದರ್ಶನ್ ಗೆ ಸ್ವಲ್ಪ ಕಾಲ ಸಮಾಧಾನದಿಂದಿರುವಂತೆ ಹೇಳಿದ್ದಾರೆ. ಕೊಲೆ ಆರೋಪಿಗಳಾದ ದರ್ಶನ್ ತಂಡದ ಪರ ಪೊಲೀಸರು ಸಾಕ್ಷ್ಯಾಧಾರಗಳನ್ನು ಬಲಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

  Continue Reading

  FILM

  ಕನ್ನಡದ ಹಾಟ್ ನಟಿ, ಟೋಬಿಯ ಬೇಬಿ ತಮಿಳಿನ ಸಿದ್ಧಾರ್ಥ್‌ಗೆ ಜೋಡಿ..!

  Published

  on

  ಬೆಂಗಳೂರು: ರಾಜ್ ಬಿ ಶೆಟ್ಟಿ ಹೀರೋಯಿನ್‌ಗೆ ಬ್ಯಾ ಕ್ ಟು ಬ್ಯಾಕ್ ಆಫರ್‌ಗಳು ಒಲಿದು ಬರುತ್ತಿದೆ. ಹೌದು, ಸ್ಯಾಂಡಲ್‌ವುಡ್ ಹಾಟ್ ಹೀರೋಯಿನ್ ಚೈತ್ರಾ ಆಚಾರ್ ಇದೀಗ ತಮಿಳಿನ ಸಿದ್ಧಾರ್ಥ್ ನಟನೆಯ ಸಿನೆಮಾಗೆ ಸೆಲೆಕ್ಟ್ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸಥರ ಸಿನೆಮಾಗಳು ಹಾಗೂ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಚೈತ್ರಾ ಆಚಾರ್ ತಮ್ಮದೇ ಆದ  ನಿಲುವನ್ನು ಕಂಡುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಿರುವ ಇವರು ಇದೀಗ ಪರಭಾಷೆಗಳಲ್ಲೂ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ.

  ಇತ್ತೀಚೆಗಷ್ಟೇ ತಮಿಳಿನ ಶಶಿಕುಮಾರ್ ನಟನೆಯ ಸಿನೆಮಾಕ್ಕೆ ಆಯ್ಕೆಯಾಗಿದ್ದ ಚೈತ್ರಾ ಇದೀಗ ಸಿದ್ಧಾರ್ಥ್‌ ಸಿನೆಮಾಗೆ ಆಫರ್ ಬಂದಿದೆ. ತಮಿಳಿನ ಸ್ಟಾರ್ ನಟ ಸಿದ್ದಾರ್ಥ್ ರವರ 40 ನೇ ಸಿನೆಮಾ ಇದಾಗಿದ್ದು ಚೈತ್ರಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ಎಂದು ಹೇಳಲಾಗಿದೆ.

  ನಟಿ ಊರ್ವಶಿ ರೌಟೇಲಾ ಬಾತ್ ರೂಂ ವೀಡಿಯೋ ಲೀಕ್; ಸೋಶಿಯಲ್ ಮೀಡಿಯಾದಲ್ಲಿ ಸಂಚಲನ

  ರಾಜ್ ಬಿ ಶೆಟ್ಟಿಯವರ ಟೋಬಿ ಸಿನೆಮಾ ಮೂಲಕ ತನ್ನ ನಟನೆಯನ್ನು ಪ್ರೇಕ್ಷಕರಿಗೆ ರೀಚ್ ಮಾಡಿದ್ದ ಚೈತ್ರಾ ಆಚಾರ್ ಬಳಿಕ ಸಪ್ತಸಾಗರದಾಚೆ ಎಲ್ಲೋ ಸಿನೆಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಮತ್ತೊಮ್ಮ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಆದರೆ ನಟನೆಯ ಜೊತೆಗೆ ತಮ್ಮ ಉಡುಗೆ ತೊಡುಗೆಯಿಂದಲೂ ಟ್ರೋಲಿಗರಿಂದ ಹೆಚ್ಚಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದರು ಈ ನಟಿ. ಸಿನೆಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇವರು ತೊಟ್ಟಿದ್ದ ಬಟ್ಟೆಗೆ ನೆಗೆಟಿವ್ ಕಮೆಂಟ್ಸ್ ಗಳು ಬಂದಿತ್ತು. ಈ ವಿಷಯವಾಗಿ ಬಹಳ ನೊಂದಿದ್ದ ಚೈತ್ರಾ ಖಾಸಗಿ ಕಾರ್ಕ್ರಮವೊಂದರಲ್ಲಿ ಈ ಘಟನೆ ಬಗ್ಗೆ ಮಾತನಾಡಿ ‘ಹೆಣ್ಮಕ್ಕಳನ್ನು ಅವರು ತೊಡುವು ಬಟ್ಟೆಗಳಿಂದ ವ್ಯಕ್ತಿತ್ವವನ್ನು ಅಳಿಯಬಾರದು’ ಎಂದಿದ್ಳಿದ ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದರು.

  ಅದೇನೆ ಇರಲಿ ಕನ್ನಡದ ಮತ್ತೋರ್ವ ನಟಿ ಇದೀಗ ಪರಭಾಷೆಯಲ್ಲೂ ಕಾಣಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರೇಕ್ಷಕರು ನನ್ನನ್ನು ಸ್ವೀಕಾರ ಮಾಡಿ ಪ್ರೀತಿ ಕೊಟ್ಟಿದ್ದಾರೆ. ನನ್ನ ಕೆಲಸ ನನಗೆ ಒಳ್ಳೆಯ ಹೆಸರು ಹಾಗೂ ಐಡೆಂಟಿಯನ್ನು ಕೊಟ್ಟಿದೆ. ಇನ್ನೂ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಒಳ್ಳೆಯ ಸಿನೆಮಾಗಳನ್ನು ಮಾಡುತ್ತೇನೆ ಎಂದು ಚೈತ್ರಾ ಆಚಾರ್ ಹೇಳುತ್ತಾರೆ.

  Continue Reading

  LATEST NEWS

  Trending