Connect with us

LATEST NEWS

ಇರಾನ್‌ ಬಂದರಿನಲ್ಲಿ ಸಿಕ್ಕಿಕೊಂಡ ಭಟ್ಕಳಿಗನಿಗೆ ಬೇಕಿದೆ ಸಹಾಯಹಸ್ತ..

Published

on

ಭಟ್ಕಳ: ಭಟ್ಕಳ ಮೂಲದ ಯುವಕನೋರ್ವ 19 ತಿಂಗಳಿಗೂ ಹೆಚ್ಚು ಕಾಲ ಇರಾನ್ ಬಂದರುವಿನಲ್ಲಿ ಸಿಕ್ಕಿಕೊಂಡು ಮರಳಿ ಭಾರತಕ್ಕೆ ಬರಲು ಸಂಘ- ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ನೆರವಿಗಾಗಿ ಈತ ಕಾಯುತ್ತಿದ್ದಾನೆ.


ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿದ್ದ ಯಾಸೀನ್, 2020ರ ಜನವರಿಯಲ್ಲಿ ಇರಾನ್ ಬಂದರಿನಲ್ಲಿ ಇಳಿದಿದ್ದ. ಕೋವಿಡ್ ಕಾರಣದಿಂದ ಹಡಗನ್ನು ಬಂದರಿನಲ್ಲೇ ಲಂಗರು ಹಾಕಲಾಗಿತ್ತು. ಈ ಹಡಗು ಮೂವರ ಪಾಲುದಾರಿಕೆ ಹೊಂದಿದ್ದು, ಈ ಮಾಲೀಕರುಗಳ ನಡುವಿನ ವಿವಾದದ ಕಾರಣದಿಂದ ಒಂದು ವರ್ಷಗಳ ವೇತನವನ್ನೇ ನೀಡಿಲ್ಲ. ಇದೀಗ ಸರಕು ಹಡಗುಗಳ ಚಲನೆ ಪುನರಾರಂಭಗೊಂಡಿದ್ದರೂ ಯಾಸೀನ್ ಇರುವ ಹಡಗು ಅಲ್ಲಿಂದ ತೆರಳಿಲ್ಲ ಎನ್ನಲಾಗಿದೆ.

ಯಾಸೀನ್ ಇರಾನ್‌ಗೆ ತೆರಳಲು ಏಜೆನ್ಸಿಯೊಂದರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಇರಾನ್‌ನಲ್ಲಿ ಬದಲಿಸಲಾಗಿತ್ತು. ಬಹುತೇಕ ಇರಾನ್ ಏಜೆನ್ಸಿಗಳು ಪರ್ಸಿಯನ್ ಭಾಷೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು, ವೇತನ ಪಾವತಿಸದೆ ಕೆಲಸಗಾರರಿಗೆ ವಂಚಿಸುತ್ತದೆ.

ಪರ್ಸಿಯನ್ ಭಾಷೆ ಅಲ್ಪಸ್ವಲ್ಪ ತಿಳಿದಿದ್ದ ಯಾಸೀನ್, ಏಜೆನ್ಸಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಕಳೆದ ಆರು ತಿಂಗಳಿನಿಂದ ಯಾಸೀನ್‌ಗೆ ಆಹಾರ ಸಾಮಗ್ರಿಗಳನ್ನೂ ನೀಡುತ್ತಿಲ್ಲ.

ಬಂದರಿನಲ್ಲಿ ಲಂಗರು ಹಾಕಿರುವ ಇತರ ಹಡಗುಗಳಿಂದ ಆಹಾರಗಳನ್ನು ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆನ್ನಲಾಗಿದೆ. ತಾನು ಇರಾನ್‌ನಲ್ಲಿ ಅನುಭವಿಸುತ್ತಿರುವ ಸಂಕಷ್ಟದ ಕುರಿತು ಯಾಸೀನ್ ಭಾರತೀಯ ದೂತಾವಾಸ ಮತ್ತು ಇತರ ಸಂಸ್ಥೆಗಳಿಗೆ ಸಂಪರ್ಕಿಸಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಈಗಾಗಲೇ ಸಂಪರ್ಕ ಸಾಧಿಸಲಾಗಿದೆ. ಇರಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯನಿಗೆ ವೇತನ ಪಾವತಿಸಿ, ಮರಳಿ ಮನೆಗೆ ಕರೆತರಲು ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ ಶೇಖ್ ಮುಜಾಫರ್ ಶಿರಾಲಿ ಒತ್ತಾಯಿಸಿದ್ದಾರೆ.

news update

ಸಂಕಷ್ಟದಲ್ಲಿರುವ ಈ ಭಾರತೀಯ ಪ್ರಜೆಯ ಸಂರಕ್ಷಣೆ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ Aim India Forum ಪರವಾಗಿ Shaikh Muzaffer Shirali ಅವರು ಈಗಾಗಲೇ ಪ್ರಧಾನ ಮಂತ್ರಿ ಸೇರಿದಂತೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿ ವಲಕ್ಕೆ ವಿಶೇಷ ಮನವಿಯ ಮೂಲಕ ಪ್ರಯತ್ನಿಸುತಿದ್ದು,ಭಾರತ ಮತ್ತು ಇರಾನ್ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಪ್ರಯತ್ನದ ಫಲವಾಗಿ ಯಾಸೀನಶಾ ಇವರ ಪಾಸಪೋರ್ಟ ಆತನ ಇರಾನ್ ಮಾಲೀಕರಿಂದ ಮರಳಿ ಪಡೆಯಲಾಗಿದ್ದು, ಇಂದಿನಿಂದ ನಿಯಮಿತ ಆಹಾರವನ್ನು ಸಹ ಪೂರೈಸಲಾಗುತ್ತಿದೆ.

ಇವರ ಮಾಲೀಕರಿಂದ ವೇತನ ಪಾವತಿಯ ಜೊತೆಗೆ ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವ ಕುರಿತು Aim India Forum ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದು,ಪ್ರಕರಣ ಆದಷ್ಟು ಬೇಗ ಸುಖಾಂತ ಕಾಣುವ ವಿಶ್ವಾಸವಿದೆ ಎಂದು Aim India Forum ತಿಳಿಸಿದೆ.

DAKSHINA KANNADA

ಪತಿ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗಿ ಮತದಾನದ ಕೊನೆ ಆಸೆ ತೀರಿಸಿದ ಪತ್ನಿ.‌.!

Published

on

ಮಂಗಳೂರು : ಅವರ ಪತಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಅದೇ ದಿನ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಕೂಡಾ ನಡೆದಿದೆ. ಆಕೆಗೆ ಪತಿ ಇನ್ನಿಲ್ಲ ಅನ್ನೋ ವಿಚಾರವನ್ನು ಯಾರೋ ತಿಳಿಸಿದ್ದಾರೆ. ಆದ್ರೆ ಆಕೆ ಪತಿಯ ಕೊನೆ ಆಸೆ ಈಡೇರಿಸಿದ ಬಳಿಕ ಪತಿಯ ಅಂತಿಮ ದರ್ಶನ ಪಡೆದಿದ್ದಾರೆ‌.

ಇದು ಮತದಾನ ಮಾಡದೇ ಇರುವವರಿಗೆ ಇವರೊಂದು ಪಾಠವಾಗಿದೆ. ಮಂಗಳವಾರ ರಾಜ್ಯದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ನಡೆದ ಘಟನೆ ಇದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಪಂಚಾಯತ್ ವ್ಯಾಪ್ತಿಯಲ್ಲಿ ಇದು ನಡೆದಿದೆ. ಇಲ್ಲಿನ ಆಡುಗೋಡಿನ ಕಲಾವತಿ ವೆಂಕಟೇಶ್ ಇವರ ಪತಿ ವೆಂಕಟೇಶ್ ಚುನಾವಣೆಯ ದಿನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ  ಇಹಲೋಕ ತ್ಯಜಿಸಿದ್ದಾರೆ.  ಇನ್ನೇನು ಓಟು ಹಾಕಲು ಹೋಗಬೇಕು ಅನ್ನೋ ಅಷ್ಟರಲ್ಲಿ ಪತಿ ಇಹಲೋಕ ತ್ಯಜಿಸಿದ ಮಾಹಿತಿ ಪತ್ನಿ ಕಲಾವತಿಗೆ ಬಂದಿದೆ. ಆದ್ರೆ ಕಲಾವತಿ ಅವರು ಈ ವೇಳೆ ತಮ್ಮ ಅಮೂಲ್ಯ ಮತ ಚಲಾಯಿಸಿ, ಬಳಿಕ ಪತಿಯ ದೇಹವನ್ನು ನೋಡಲು ತೆರಳಿದ್ದಾರೆ.

ಪತಿ ಒಂದು ಪಕ್ಷದ ಅಭಿಮಾನಿಯಾಗಿದ್ದು ,ಆ ಪಕ್ಷದ ನಾಯಕನನ್ನು ಯಾವಾಗಲು ಜಪಿಸ್ತಾ ಇದ್ರು ಹಾಗಾಗಿ ಪತಿಯ ಕೊ‌‌ನೆಯ ಆಸೆಯಾಗಿ ಅವರ ಪ್ರೀಯಪಟ್ಟವರಿಗೆ ಮತ ಚಲಾಯಿಸಿದೆ ಅಂತ ಕಲಾವತಿ ಹೇಳಿಕೊಂಡಿದ್ದಾರೆ.

Continue Reading

DAKSHINA KANNADA

ಪ್ರಜ್ವಲ್‌ ಅಶ್ಲೀಲ್ ವಿಡಿಯೋ ಡಿಲೀಟ್ ಮಾಡಿ..! ಎಸ್‌ಐಟಿ ವಾರ್ನಿಂಗ್..!

Published

on

ಮಂಗಳೂರು : ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣ ಬೆಂಬತ್ತಿರುವ ಎಸ್ ಐ ಟಿ ಖಡಕ್ ವಾರ್ನ್ ಮಾಡಿದೆ. ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡದಂತೆ ಹೇಳಿದೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿದ್ದರೆ, ಒಂದು ವೇಳೆ ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಯಾವುದೇ ಅಶ್ಲೀಲ ವೀಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಇದ್ದರೆ ಅದರ ರಚನಕಾರರು ನೀವು ಎಂದು ಪರಿಗಣಿಸಿ ಕ್ರಿಮಿನಲ್ ಕೇಸ್ ಬೀಳುತ್ತದೆ. ಆದ್ದರಿಂದ, ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BANTWAL

ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!

Published

on

ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ‌ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.


ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending