Connect with us

    LATEST NEWS

    ಐಪಿಎಲ್ 2025: ಮೊದಲ ಪಂದ್ಯದಿಂದ ಮುಂಬೈ ಪಡೆಯ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್

    Published

    on

    ಮುಂಬೈ: ಐಪಿಎಲ್ 2025ಕ್ಕಾಗಿ ಎಲ್ಲಾ ತಂಡಗಳು ಸಿದ್ಧಗೊಂಡಿವೆ. ಈ ಬಾರಿಯೂ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಆದರೆ ಅವರನ್ನು ಮೊದಲ ಪಂದ್ಯದಿಂದ ಬ್ಯಾನ್ ಮಾಡಲಾಗಿದೆ.

    ಹೌದು ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್‌ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

    ಈ ಒಂದು ಪಂದ್ಯದ ನಿಷೇಧದ ಶಿಕ್ಷೆ ಐಪಿಎಲ್ ಸೀಸನ್ 18ರಲ್ಲಿ ಮುಂದುವರೆಯಲಿದೆ. ಅದರಂತೆ ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ತಂಡವನ್ನು ಜಸ್‌ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?

    Published

    on

    ಮಂಗಳೂರು/ಮುಂಬೈ : 2025ರ ಐಪಿಎಲ್ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ ಇಡೀ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದಿದ್ದು ಮಾತ್ರ, ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಈ ಮಹಿಳೆ.

    ಇಂಡಿಯನ್ ಪ್ರೀಮಿಯರ್ ಲೀಗ್-2025ರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದಿದ್ದು, ಬಹಳ ಕುತೂಹಲ ಕೆರಳಿಸಿತ್ತು. ಕೆಲವು ಆಟಗಾರರನ್ನು ಕೋಟಿ ಬೆಲೆಯಲ್ಲಿ ತಂಡಗಳು ಖರೀದಿಸಿದರೆ, ಇನ್ನೂ ಕೆಲವು ಆಟಗಾರರು ಅನ್ ಸೋಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಈ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮಹಿಳೆ ಹೆಚ್ಚು ಗಮನ ಸಳೆದಿದ್ದಾರೆ.

    ಆ ಮಹಿಳೆಯ ಹೆಸರು ಮಲ್ಲಿಕಾ ಸಾಗರ್. ಮೂಲತಃಹ ಮುಂಬೈ ಮೂಲದವರು. ಇವರು ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಮಲ್ಲಿಕಾ ಸಾಗರ್ ಕಲಾ ಸಂಗ್ರಾಹಕಿ ಮತ್ತು ಸಲಹೆಗಾರ್ತಿಯು ಆಗಿದ್ದಾರೆ. ಜಗತ್ತಿನಲ್ಲೇ ಶ್ರೇಷ್ಟ ಹರಾಜುಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇವರು ಸತತ ಎರಡನೇ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆ ಮುನ್ನಡೆಸುತ್ತಿದ್ದಾರೆ
    2001ರಲ್ಲಿ ಅಂತಾರಾಷ್ಟ್ರೀಯ ಹರಾಜು ಸಂಸ್ಥೆಗಳಲ್ಲಿ ಒಂದಾದ ಕ್ರಿಸ್ಟಿಸ್ ನಲ್ಲಿ ಮಲ್ಲಿಕಾ ಸಾಗರ್ ತಮ್ಮ ವೃತ್ತಿಜೀವವನ್ನು ಪ್ರಾರಂಭಿಸಿದರು. ಭಾರತೀಯ ಮೂಲದ ಮೊದಲ ಹರಾಜುಗಾರ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.

    ಇದನ್ನೂ ಓದಿ: ಖ್ಯಾತ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಲವ್ ಸ್ಟೋರಿ ಗೊತ್ತಾ ??
    ಹಲವಾರು ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಸಿದ ಅನುಭವವನ್ನು ಹೊಂದಿದ್ದಾರೆ. 2021ರ ಪ್ರೊ ಕಬ್ಬಡಿ ಲೀಗ್ ಆಟಗಾರರ ಹರಾಜಿಗೆ ಮಲ್ಲಿಕಾ ಸಾಗರ್ ಹರಾಜು ವ್ಯವಸ್ಥಾಪಕರಾಗಿದ್ದರು.
    ರಿಚರ್ಡ್ ಮ್ಯಾಡ್ಲಿ ಮತ್ತು ಎಡ್ಮೀಡ್ಸ್ ಐಪಿಎಲ್ ಹರಾಜುಗಳಲ್ಲಿ ಹೆಸರುಗಳಿಸಿದ್ದಾರೆ. 2023ರ ಟಿ-20 ಲೀಗ್ ಹರಾಜನ್ನು ನಡೆಸಿಕೊಡುವ ಮೂಲಕ ಈ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮೊದಲ ಭಾರತೀಯ ಹರಾಜುಗಾರ್ತಿ ಎಂಬ ಇತಿಹಾಸವನ್ನು ಮಲ್ಲಿಕಾ ಸಾಗರ್ ನಿರ್ಮಿಸಿದ್ದಾರೆ.

    Continue Reading

    LATEST NEWS

    ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು

    Published

    on

    ಮಂಗಳೂರು/ಬೆಂಗಳೂರು : ಎಟಿಎಂನಿಂದ ಹಣ ದೋಚಲು ಯತ್ನಿಸಿ ವಿಫಲವಾದ ಖದೀಮರು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಘಟನೆ  ಬೆಂಗಳೂರಿನ ವಡ್ಡರಪಾಳ್ಯದಲ್ಲಿ ನಡೆದಿದೆ. ಬ್ಯಾಂಕಿನ ಎಟಿಎಂಗೆ ಬಂದಿದ್ದ ಇಬ್ಬರು ಕಳ್ಳರು, ಎಟಿಎಂನಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದೆ ಹೋದಾಗ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ. ಇದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

    ಯಂತ್ರ ಬಿಟ್ಟು ಪರಾರಿ:

    ಯಂತ್ರ ಹೊತ್ತೊಯ್ದಿದ್ದ ಕಳ್ಳರು ಜನ ಸಂಚಾರ ಕಡಿಮೆಯಿದ್ದ ಮಂಚನಹಳ್ಳಿ ಸಮೀಪದ ನೀಲಗಿರಿ ತೋಪಿಗೆ ಬಂದಿದ್ದಾರೆ. ಆಕ್ಸಲ್ ಬ್ಲೇಡ್ ಬಳಸಿ ಯಂತ್ರ ತುಂಡರಿಸಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ವಿಫಲವಾಗಿದೆ.

    ಇದನ್ನೂ ಓದಿ : 15 ವರ್ಷದ ಲವ್; ಬಾಯ್‌ಫ್ರೆಂಡ್ ಜೊತೆ ಕೀರ್ತಿ ಸುರೇಶ್ ಫೋಟೋ ವೈರಲ್ !!

    ಜನಸಂಚಾರ ಆರಂಭವಾಗುತ್ತಿದ್ದ ಭಯಗೊಂಡ ದುಷ್ಕರ್ಮಿಗಳು ಯಂತ್ರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಎಟಿಎಂ ಯಂತ್ರದಲ್ಲಿ 10 ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ ಅತ್ತಿಬೆಲೆ ಪೊಲೀಸರು.

    Continue Reading

    LATEST NEWS

    ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!

    Published

    on

    ಮಂಗಳೂರು/ಬೆಂಗಳೂರು : ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಸ್ಸಾಂ ಮೂಲದ ವ್ಲಾಗರೊಬ್ಬಳು  ಶ*ವವಾಗಿ ಪತ್ತೆಯಾಗಿದ್ದು, ಇದೀಗ ಕೃ*ತ್ಯ ನಡೆಸಿದ್ದು ಬೇರ್ಯಾರು ಅಲ್ಲ ಆಕೆಯ ಪ್ರಿಯತಮ ಎಂಬುದು ಬಹಿರಂಗವಾಗಿದೆ. ಮಾತ್ರವಲ್ಲ, ಆತ ಒಂದು ದಿನ ಪ್ರೇಯಸಿಯ ಶ* ವದ  ಜೊತೆ ಕಾಲ ಕಳೆದಿದ್ದ ಎಂಬ ಶಾಂ*ಕಿಂಗ್ ವಿಚಾರ ತನಿಖೆಯ ವೇಳೆ ಹೊರಬಿದ್ದಿದೆ.

    ಮಾಯಾ ಗೊಗೊಯ್ ಹ*ತ್ಯೆಗೀಡಾದ ವ್ಲಾಗರ್ ಆಗಿದ್ದು, ಆರವ್ ಹರ್ನಿ ಕೃ*ತ್ಯ ಎಸಗಿದ ಗೆಳೆಯ. ನವೆಂಬರ್ 23 ರಂದು ಆರವ್ ಹರ್ನಿ  ಹಾಗೂ ಮಾಯಾ ಗೊಗೊಯ್ ಇಂದಿರಾ ನಗರದ  ಸರ್ವೀಸ್ ಅಪಾರ್ಟ್ ಮೆಂಟ್ ಬುಕ್ ಮಾಡಿದ್ದರು. ಇಬ್ಬರೂ ಅಪಾರ್ಟ್ ಮೆಂಟ್ ನ ಲಾಬಿಗೆ ಪ್ರವೇಶಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭಿಸಿದೆ. ಅದರ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರ ಮುಂದೆ ಸತ್ಯ ಬಯಲಾಗಿದೆ.

    ಚಾಕು ಇರಿದು ಹ*ತ್ಯೆ :

    ಆರವ್ ಹರ್ನಿ ನವೆಂಬರ್ 25 ರಂದು ಮಾಯಾಳನ್ನು ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದಾನೆ. ಮಂಗಳವಾರ ಅಲ್ಲಿಂದ ಹೊರ ನಡೆದಿದ್ದಾನೆ. ಒಂದು ಇಡೀ ದಿನ ಆತನ ಗೆಳತಿಯ ಶ*ವದ ಜೊತೆ ಕಾಲ ಕಳೆದಿದ್ದಾನೆ. ಅಲ್ಲೇ ಸಿಗರೇಟ್ ಬೇರೆ ಸೇದಿದ್ದನಂತೆ. ಕೊ*ಲೆ ಬಳಿಕ ಆಕೆಯ ದೇಹವನ್ನು ಪೀಸ್ ಪೀಸ್ ಮಾಡುವ ಆಲೋಚನೆಯಲ್ಲಿ ಹಂ*ತಕನಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ಹೋಟೆಲ್ ನಲ್ಲಿಯೇ ಶ*ವ ಬಿಟ್ಟು ಆತ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ವರೆಗೂ ಹೋಗಿದ್ದಾನೆ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ.  ಸದ್ಯ ಆರೋಪಿ ಕೇರಳಕ್ಕೆ ಪರಾರಿ ಆಗಿದ್ದಾನೆ ಎಂಬ ಅನುಮಾನ ಪೊಲೀಸರದ್ದು.

    ಪ್ರೀ ಪ್ಲಾನ್ಡ್ ಮರ್ಡರ್?
    ಹ*ತ್ಯೆಯಾಗಿರುವ ಮಾಯಾ ಅಕ್ಕ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಶುಕ್ರವಾರ ರಾತ್ರಿ ಕರೆ ಮಾಡಿದ್ದ ಮಾಯಾ,  ಆಫೀಸ್ ಪಾರ್ಟಿ ಇದೆ ಮನೆಗೆ ಬರಲ್ಲ ಎಂದಿದ್ದಳಂತೆ. ಶನಿವಾರವೂ ಹಾಗೇ ತಿಳಿಸಿದ್ದಳು. ಹಂ*ತಕ ಆರವ್ ಹಾಗೂ ಮಾಯಾ 6 ತಿಂಗಳಿಂದ ಪ್ರೀತಿಸುತ್ತಿದ್ದರು ಎಂಬುದು ಆಕೆಯ ಅಕ್ಕಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

    ಇದನ್ನೂ ಓದಿ : ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ

    ಹೋಟೆಲ್‌ಗೆ ಬರೋಕು ಮುನ್ನ ಆರವ್ ಚಾಕುವೊಂದನ್ನು ತಂದಿದ್ದ. ಹೋಟೆಲ್‌ಗೆ ಬಂದ ಬಳಿಕ ನೈಲಾನ್ ದಾರವನ್ನು ಆನ್‌ಲೈನ್ ಮೂಲಕ ಆರ್ಡರ್‌ ಮಾಡಿ ತರಿಸಿಕೊಂಡಿದ್ದ ಎಂದಬುದು ತಿಳಿದು ಬಂದಿದೆ. ಹಾಗಾಗಿ ಇದೊಂದು ಪ್ರೀ ಪ್ಲಾನ್ ಮಾಡಿ ಮಾಡಿರುವ ಹ*ತ್ಯೆ ಎಂಬುದು ಖಚಿತವಾಗಿದೆ, ಸದ್ಯ ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಆತ ಸಿಕ್ಕ ಮೇಲಷ್ಟೇ ಕೃ*ತ್ಯ ನಡೆಸಲು ಕಾರಣ ತಿಳಿದು ಬರಲಿದೆ.

    Continue Reading

    LATEST NEWS

    Trending