MANGALORE
ಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕರಾಗಿ ಜೀವನ್‍ದಾಸ್ ಹಾಗೂ ಗುರುರಾಜ ಆಚಾರ್ಯ ನೇಮಕ
ಮಂಗಳೂರು: ಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕರಾಗಿ ಜೀವನ್‍ದಾಸ್ ನಾರಾಯಣ್ ಹಾಗೂ ಕಲ್ಮಂಜೆ ಗುರುರಾಜ ಆಚಾರ್ಯ ಅವರನ್ನು ನೇಮಕ ಮಾಡಲಾಗಿದೆ.
ಜೀವನ್‍ದಾಸ್ ನಾರಾಯಣ್
ಕಂಪನಿ ಕಾಯ್ದೆ 2013ರ ಸೆಕ್ಷನ್ 161ರ ಅಡಿಯಲ್ಲಿ ಮಾಡಿರುವ ಈ ನೇಮಕವನ್ನು, ಮಂಗಳವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಅನುಮೋದಿಸಲಾಯಿತು.
ಜೀವನ್‍ದಾಸ್ ನಾರಾಯಣ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು. 40 ವರ್ಷಗಳ ಸುದೀರ್ಘ ಅನುಭವವನ್ನು ಬ್ಯಾಂಕಿಂಗ್ ರಂಗ ಹಾಗೂ ಹಣಕಾಸು ವಲಯದಲ್ಲಿ ಹೊಂದಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
ನಿವೃತ್ತಿಯ ನಂತರ ಅವರು 2017ರಲ್ಲಿ ಅಲ್ಪಾವಧಿಗೆ ‘ಸೋಮಾ ಎಂಟರ್ ಪ್ರೈಸಸ್ ಲಿಮಿಟೆಡ್’ನ ಮಂಡಳಿಯಲ್ಲಿ ಎಸ್‍ಬಿಐನ ನಾಮನಿರ್ದೇಶಿತ ನಿರ್ದೇಶಕರಾಗಿದ್ದರು.
2016ರ ಬಿಎಫ್‌ಎಸ್‌ಐ ಸೆಕ್ಟರ್‌ನ ಬಿಟಿ–ಪಿಡ್ಲ್ಯುಸಿಯಿಂದ ಮಾನ್ಯತೆಗೊಂಡ ಭಾರತದ 40 ಶ್ರೇಷ್ಠ ಸಿಇಒಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಮಂಗಳೂರಿನ ಪ್ರಮುಖ ಮ್ಯಾನೇಜ್‍ಮೆಂಟ್ ಇನ್‌ಸ್ಟಿಟ್ಯೂಟ್ ಎಂಎಸ್‌ಎನ್‌ಐಎಂನ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಅದರ ಕರೆಸ್ಪಾಂಡೆಂಟ್ ಆಗಿ ನಾಮನಿರ್ದೇಶನಗೊಂಡಿದ್ದಾರೆ.
ಆಡಳಿತ ಮಂಡಳಿಯ ಸದಸ್ಯ ಹಾಗೂ ಕರೆಸ್ಪಾಂಡೆಂಟ್ ಈ ಎರಡೂ ಸ್ಥಾನಗಳಿಗೆ ವೇತನರಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಲ್ಮಂಜೆ ಗುರುರಾಜ ಆಚಾರ್ಯ ಅವರು ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 30 ವರ್ಷಗಳ ಅನುಭವ ಹೊಂದಿದ್ದಾರೆ. ಬಿಕಾಂ, ಸಿಎಂಎ, ಸಿಎ ಪರೀಕ್ಷೆಯಲ್ಲಿ ಉನ್ನತ ರ್‍ಯಾಂಕ್ ಪಡೆದಿದ್ದಾರೆ.
ಪ್ರಸ್ತುತ ‘ಕೆ.ಜಿ ಆಚಾರ್ಯ ಆಂಡ್ ಕೋ’ ಸಂಸ್ಥೆಯ ಮುಖ್ಯ ಪಾಲುದಾರರಾಗಿದ್ದಾರೆ ಹಾಗೂ ‘ಬೆಂಗಳೂರು- ಫೈನಾನ್ಶಿಯಲ್ ರಿಪೋರ್ಟಿಂಗ್ ರಿವ್ಯೂ ಗ್ರೂಪ್’ ಸದಸ್ಯರಾಗಿದ್ದಾರೆ.
ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು ಮತ್ತು ಲೆಕ್ಕ ಪರಿಶೋಧನಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿ, ನಾಮಿನೇಷನ್ ಕಮಿಟಿ, ರೆಮ್ಯುನರೇಷನ್ ಕಮಿಟಿ ಹಾಗೂ ಹೈವ್ಯಾಲ್ಯು ಫ್ರಾಡ್ ಕಮಿಟಿ ಗಳಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.
ಐಸಿಎಐ ನವದೆಹಲಿಯ ತಜ್ಞರ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ದೇವದಾಸ್ ಉಡುಪ ತಿಳಿಸಿದ್ದಾರೆ.
LATEST NEWS
ವಾಮಂಜೂರು ಶಾರದಾ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ
ಮಂಗಳೂರು: ಶ್ರೀ ರಕ್ತೇಶ್ವರಿ ಮತ್ತು ಪಂಚದೇವತಾ ಸಾನಿಧ್ಯ ಶ್ರೀರಾಮನಗರ,ವಾಮಂಜೂರು ಹಾಗೂ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ(ರಿ)ವತಿಯಿಂದ ಅಕ್ಟೋಬರ್ 9ರಿಂದ 13ರವರೆಗೆ ವಾಮಂಜೂರಿನ ಕೇಂದ್ರ ಮೈದಾನದಲ್ಲಿ “ವಾಮಂಜೂರು ಶಾರದಾ ಮಹೋತ್ಸವ” ನಡೆಯಲಿದ್ದು,ಇದರ ಕಾರ್ಯಾಲಯವನ್ನ ವಾಮಾಂಜೂರಿನ ಬಾವ ಬಿಲ್ಡರ್ಸ್ ನ ಕಟ್ಟಡದಲ್ಲಿ ಸೆ.17 ಉದ್ಘಾಟಿಸಲಾಯಿತು.
ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಪ್ರಮುಖರಾದ ಚಂದ್ರಶೇಖರ ರಾಮನಗರ,ಸದಾನಂದ ಪೂಜಾರಿ,ಮೋಹನ್ ಪಚ್ಚನಾಡಿ,ರಾಕೇಶ್ ಶೆಟ್ಟಿ ಅಮೃತನಗರ,ಅಜಯ್ ಮಂಗಳನಗರ,ಬಿಪಿನ್ ವಾಮಂಜೂರು,ಗೋಪಾಲ್ ದೇವಿನಗರ, ಸುರೇಂದ್ರ ಗುರುಪುರ, ನವೀನ್ ಅಮೃತ ನಗರ,ವೆಂಕಪ್ಪ ಅಮೃತ ನಗರ,ನವೀನ್ ಶೆಟ್ಟಿ ಸಂತೋಷ್ ನಗರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
LATEST NEWS
ಕರಾವಳಿಯಲ್ಲಿ ಮುಂದಿನ 7 ದಿನ ಮಳೆ ಸಾಧ್ಯತೆ
ಬೆಂಗಳೂರು: ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮುಂದಿನ ಒಂದು ವಾರ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಇಂದು ಸಾಧಾರಣ ಮಳೆಯಾಗಲಿದೆ.
LATEST NEWS
ಏಕಕಾಲದಲ್ಲಿ ಸಾವಿರಾರು ಪೇಜರ್ ಬ್ಲಾಸ್ಟ್..! ಇಸ್ರೇಲ್ ಕೃತ್ಯದ ಅನುಮಾನ..!
ಲೆಬೆನಾನ್ ( ಬೈರುತ್ ) : ಏಕಕಾಲದಲ್ಲಿ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ ಕಾರಣ 9 ಜನರು ಸಾವನ್ನಪ್ಪಿದ್ದು, 2700 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಲೆಬೆನಾನ್‌ನಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್ ಈ ಸ್ಫೋಟಕ್ಕೆ ಕಾರಣವಾಗಿರುವ ಅನುಮಾನ ಮೂಡಿಸಿದೆ. ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆ 5 ಸಾವಿರ ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ ಸಣ್ಣ ಪ್ರಮಾಣದ ಸ್ಫೋಟಕ ಇರಿಸಿದೆ ಎಂದು ಲೆಬನಾನಿನ ಗೆಜ್ಬೊಲ್ಲಾಹ್ ಗುಂಪು ಮಾಹಿತಿ ನೀಡಿದ್ದಾಗಿ ಲೆಬೆನಾನ್ ಭದ್ರತಾ ಮೂಲಗಳು ರಾಯಿಟರ್ಸ್‌ಗೆ ಮಾಹಿತಿ ನೀಡಿದೆ. ಸ್ಫೋಟದ ನಂತರ ಇರಾನ್ ಬೆಂಬಲಿತ ಹಿಜ್ಬುಲ್ಲಾ, ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.
ಸ್ಫೋಟಕ್ಕೆ ತಿಂಗಳುಗಟ್ಟಲೆ ಯೋಜನೆ ನಡೆಸಲಾಗಿತ್ತೇ ?
ಪೇಜರ್‌ಗಳ ಈ ಸ್ಫೋಟಕ್ಕೆ ಹಲವಾರು ತಿಂಗಳುಗಳಿಂದ ತಯಾರಿ ನಡೆದಿರಬಹುದು ಎಂದು ಲೆಬೆನಾನ್ ಭದ್ರತಾ ಮೂಲಗಳು ಮಾಹಿತಿ ನೀಡಿದೆ. ತೈವಾನ್ ಮೂಲದ ಗೋಲ್ಡ್ ಅಪೋಲೋ ಕಂಪೆನಿ ತಯಾರಿಸಿದ 5 ಸಾವಿರ ಪೇಜರ್‌ಗಳು ಇದಕ್ಕಾಗಿ ದೇಶಕ್ಕೆ ತರಲಾಗಿದೆ ಎಂದು ಅದು ಹೇಳಿದೆ. AP924 ಮಾದರಿಯ ಪೇಜರ್‌ಗಳು ಇದಾಗಿದ್ದು, ಕೇವಲ ಟೆಕ್ಸ್ಟ್ ಮೆಸೇಜ್ ಕಳುಹಿಸಲಷ್ಟೇ ಇದು ಬಳಕೆಯಾಗುತ್ತದೆ. ಇಸ್ರೇಲಿನ ಸ್ಥಳ ಟ್ರ್ಯಾಕ್ ಮಾಡುವ ತಂತ್ರಜ್ಞಾನದಿಂದ ತಪ್ಪಿಸಿಕೊಳ್ಳಲು ಹಿಜ್ಬುಲ್ಲಾ ಹೋರಾಟಗಾರರು ಈ ಪೇಜರ್‌ಗಳನ್ನು ಬಳಸುತ್ತಿದ್ದಾರೆ.
ಉತ್ಪಾದನಾ ಮಟ್ಟದಲ್ಲಿ ಸ್ಫೋಟಕ ತುಂಬಿದ ಅನುಮಾನ..!
ಇಸ್ರೇಲ್‌ನ ಗುಪ್ತಚರ ಸಂಸ್ಥೆಯು ಈ ಪೇಜರ್‌ಗಳನ್ನು ಉತ್ಪಾದನಾ ಮಟ್ಟದಲ್ಲಿ ಮಾರ್ಪಡಿಸಲಾಗಿದೆ ಎಂದು ಲೆಬನಾನ್ ಮೂಲವೊಂದು ತಿಳಿಸಿದೆ. ಈ ಮೂಲವು, “ಮೊಸಾದ್ ಸಾಧನದೊಳಗೆ ಒಂದು ಬೋರ್ಡ್ ಅನ್ನು ಸ್ಥಾಪಿಸಿದೆ, ಅದು ಕೋಡ್ ಅನ್ನು ಸ್ವೀಕರಿಸುತ್ತದೆ. ಯಾವುದೇ ಸಾಧನ ಅಥವಾ ಸ್ಕ್ಯಾನರ್ ಸಹಾಯದಿಂದ ಅದನ್ನು ಪತ್ತೆಹಚ್ಚುವುದು ತುಂಬಾ ಕಷ್ಟ. ಕೋಡ್ ಮಾಡಲಾದ ಸಂದೇಶವನ್ನು ಕಳುಹಿಸಿದಾಗ 3 ಸಾವಿರ ಪೇಜರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡಿದೆ. ಪೇಜರ್‌ನಲ್ಲಿ 3 ಗ್ರಾಂ ನಷ್ಟು ಸ್ಫೋಟಕಗಳನ್ನು ಅಡಗಿಸಿ ಇಡಲಾಗಿತ್ತು ಎಂದು ಅನುಮಾನ ವ್ಯಕ್ತ ಪಡಿಸಿದೆ.
ತೈವಾನ್ ಕಂಪನಿ ಆರೋಪಗಳನ್ನು ನಿರಾಕರಿಸಿದೆ
ಮತ್ತೊಂದೆಡೆ, ತೈವಾನ್ ಮೂಲದ ಗೋಲ್ಡ್ ಅಪೊಲೊ ಕಂಪನಿ ಈ ಆರೋಪಗಳನ್ನು ನಿರಾಕರಿಸಿದೆ. ಲೆಬನಾನ್‌ನಲ್ಲಿ ಮಂಗಳವಾರ ನಡೆದ ಸ್ಫೋಟಗಳಲ್ಲಿ ಬಳಸಲಾದ ಪೇಜರ್‌ಗಳನ್ನು ತೈವಾನ್‌ನ ಗೋಲ್ಡ್ ಅಪೊಲೊ ತಯಾರಿಸಿಲ್ಲ ಎಂದು ಕಂಪನಿ ಸಂಸ್ಥಾಪಕ ಸು ಚಿಂಗ್-ಕುವಾಂಗ್ ಮಾದ್ಯಮಕ್ಕೆ ತಿಳಿಸಿದ್ದಾರೆ. ಅದು ನಮ್ಮ ಉತ್ಪನ್ನವಲ್ಲ, ಅದು ನಮ್ಮ ಬ್ರಾಂಡ್ ಲೋಗೋವನ್ನು ಹೊಂದಿತ್ತು” ಎಂದು ಸು ಚಿಂಗ್-ಕುವಾಂಗ್ ಹೇಳಿದ್ದಾರೆ.