Connect with us

bengaluru

ಬಾಯಿಯೊಳಗೂ ಚಿನ್ನ, ಹೇರ್‌ ಬ್ಯಾಂಡ್‌ ನಲ್ಲೂ ಚಿನ್ನ: ಕಸ್ಟಮ್ಸ್ ಕಾರ್ಯಚರಣೆ..!

Published

on

ಮಂಗಳೂರು: ಬಾಯಿಯೊಳಗೆ ಮತ್ತು ಹೇರ್‌ ಬ್ಯಾಂಡ್‌ ನಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ 11 ಲಕ್ಷ ರೂ. ಮೌಲ್ಯದ ಮೌಲ್ಯದ 191 ಗ್ರಾಂ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಬುಧವಾರ ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಓರ್ವ ಪುರುಷ ಮತ್ತು ಮಹಿಳೆಯನ್ನು ತಪಾಸಣೆ ನಡೆಸಿದ ವೇಳೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕ ಮುಖಕ್ಕೆ ಮಾಸ್ಕ್ ಧರಿಸಿದ್ದು, ಆತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳ ಪಡಿಸಿದಾಗ ಆತನ ಕೆನ್ನೆಯ ಭಾಗ ಊದಿಕೊಂಡಂತೆ ಭಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಲಂಕುಷ ತಪಾಸಣೆ ನಡೆಸಿದಾಗ ಬಾಯಿಯ ಒಳಗೆ ಎರಡು ಚಿನ್ನದ ತುಂಡುಗಳನ್ನು ಬಚ್ಚಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಇದೆ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ತನ್ನ ತಲೆ ಕೂದಲಿಗೆ ಹಾಕಿಕೊಂಡಿದ್ದ ಬ್ಯಾಂಡ್ ನಲ್ಲಿ ರೇಡಿಯಂ ಲೇಪಿತ ಮಣಿಯಂತಹ ಹೇರ್ ಬ್ಯಾಂಡ್ ಗಳು ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅದರಲ್ಲೂ ಚಿನ್ನವನ್ನು ಕರಗಿಸಿ ಲೇಪನ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರಿಂದ ಒಟ್ಟು 11 ಲಕ್ಷ ರೂಪಾಯಿ ಮೌಲ್ಯದ 191 ಗ್ರಾಂ ಚಿನ್ನವನ್ನು ವಶಪಡಿಸಿದ್ದಾರೆ.

bangalore

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮ ನಿಧನ..!

Published

on

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅಮ್ಮ ವಯೋಸಹಜದ ಕಾಯಿಲೆಯಿಂದ ಇಂದು ನಿಧನ ಹೊಂದಿದರು.

ಲೀಲಾವತಿ ಅವರು ಕೆಲವು ಸಮಯದ ಹಿಂದೆ ಆರೋಗ್ಯ ಸಮಸ್ಯೆಯಿಂದ ಬಳಳುತ್ತಿದ್ದರು. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು ಮಧ್ಯಾಹ್ನ ದಿಢೀರ್ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ಲೀಲಾವತಿ ಅವರು ಕೆಲವು ದಿನಗಳಿಂದ ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ಯೋಗ ಕ್ಷೇಮ ವಿಚಾರಿಸಲು ಖುದ್ದು ಸಿಎಂ ಸಿದ್ದರಾಮಯ್ಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದರು.

ಸಿನಿಮಾ ರಂಗಕ್ಕೆ ಕಾಲಿಟ್ಟ ಲೀಲಾವತಿ ಅಮ್ಮ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿದ್ದ ಅವರು ಕಿರಿಯ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಸುಮಾರು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಹಲವಾರು ಪುರಸ್ಕಾರಗಳೂ ಸಂದಿವೆ. ಕರ್ನಾಟಕ ಸರಕಾರ ಕೊಡಮಾಡುವ ಜೀವಮಾನ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತುಮಕೂರ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 

Continue Reading

bangalore

ದೈವದ ರೀಲ್ಸ್ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ ಕಾಂತಾರ ರಿಷಬ್ ಶೆಟ್ಟಿ..!!

Published

on

ಇತ್ತೀಚಿನ ದಿನಗಳಲ್ಲಿ ದೈವದ ಬಗ್ಗೆ ರೀಲ್ಸ್ ಮಾಡೋದು ಹೆಚ್ಚಾಗುತ್ತಿದೆ. ಅಲ್ಲದೆ ವೇದಿಕೆಗಳಲ್ಲೂ ದೈವದ ವೇಷ ಹಾಕಿ ನೃತ್ಯ ಮಾಡುತ್ತಿದ್ದಾರೆ. ಇಂತಹ ವೇಷಗಳು, ನೃತ್ಯಗಳು ಹಾಗೂ ರೀಲ್ಸ್ ಗಳನ್ನು ಮಾಡೋದರಿಂದ ದೈವಾರಾಧಕರಿಗೆ, ದೈವ ನರ್ತಕರಿಗೆ ಬೇಸರ ಆಗ್ತಾ ಇದೆ. ಇದರ ಬಗ್ಗೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಂದಿ ಅವಾರ್ಡ್ ಫಂಕ್ಷನ್ ನಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ ಚಿತ್ರ ಬಂದ್ಮೇಲೆ ಒಂದಷ್ಟು ಬೇಸರದ ಸಂಗತಿಗಳೂ ನಡೆದವು. ದೈವದ ರೀಲ್ಸ್ ಮಾಡೋರು ಹೆಚ್ಚಾಗಿದ್ದಾರೆ. ಅದರಿಂದ ದೈವವನ್ನ ನಂಬೋ ಜನರಿಗೆ, ದೈವವನ್ನ ಆರಾಧಿಸೋ ನರ್ತಕರಿಗೆ ಬೇಸರ ಕೂಡ ಆಗಿದೆ. ನನಗೆ ಇವರೆಲ್ಲ ಈ ಒಂದು ಸತ್ಯದ ಬಗ್ಗೆ ಹೇಳ್ತಾನೇ ಇದ್ದಾರೆ. ಹಾಗಾಗಿಯೇ ಈ ಒಂದು ವಿಚಾರವನ್ನು ಮಾಧ್ಯಮದ ಮೂಲಕ ತಿಳಿಸೋಕೆ ಇಷ್ಟಪಡುತ್ತೇನೆ. ಇದರಿಂದ ಇದು ಎಲ್ಲೋ ಒಂದು ಕಡೆಗೆ ಇಡೀ ಕಾಂತಾರ ಚಿತ್ರ ಉದ್ದೇಶಕ್ಕೆ ಕಪ್ಪು ಚುಕ್ಕಿ ಆಗುತ್ತಿದೆ ಅನಿಸುತ್ತಿದೆ. ಇದನ್ನ ಯಾರೂ ಮಾಡ್ಬೇಡಿ. ಇದರಿಂದ ಎಲ್ಲರಿಗೂ ಹರ್ಟ್ ಆಗುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

ರೀಲ್ಸ್ ಅನ್ನೋದು ಸದ್ಯದ ಅತಿ ದೊಡ್ಡ ಕಿಚ್ಚಾಗಿದೆ. ಇದರಿಂದ ಒಳ್ಳೆಯ ಎಂಜಾಯ್ ಮೆಂಟ್ ಸಿಗುತ್ತಿದೆ. ಆದರೆ ಇದರ ಎಫೆಕ್ಟ್ ಬೇರೆನೆ ಆಗ್ತಾ ಇದೆ. ಕಾಂತಾರ ದೈವದ ರೀಲ್ಸ್ ಮಾಡೋದರಿಂದಲೇ ತುಳುನಾಡ ದೈವಾರಾಧಕರಿಗೆ, ದೈವ ನರ್ತಕರಿಗೆ, ಬೇಸರ ಆಗುತ್ತದೆ. ನಾನು ಒಬ್ಬ ದೈವ ಭಕ್ತನೇ ಆಗಿದ್ದೇನೆ. ಇದು ನನಗೂ ಬೇಸರ ತರಿಸುತ್ತಿದೆ. ಚಿತ್ರದ ಮೂಲ ಉದ್ದೇಶ ದೈವದ ಶಕ್ತಿ ಮತ್ತು ಸಂಸ್ಕೃತಿಯನ್ನ ಎಲ್ಲೆಡೆ ಹೇಳೋದೇ ಆಗಿದೆ. ಆದರೆ ರೀಲ್ಸ್ ಅನ್ನೋದು ಎಲ್ಲೋ ಒಂದು ಕಡೆಗೆ ಕಪ್ಪು ಚುಕ್ಕೆ ಆಗುತ್ತದೆ ಎಂದು ನೊಂದು ಕೊಂಡು ಹೇಳಿದ್ದಾರೆ. ಕಾಂತಾರ ಚಿತ್ರದಲ್ಲಿ ದೈವಾರಾಧನೆ ಇದೆ. ಇದನ್ನ ಅಷ್ಟೆ ಗೌರವದಿಂದಲೇ ಮಾಡಿದ್ದೇವೆ. ದೈವ ನರ್ತಕರನ್ನ ಸಲಹೆ-ಸೂಚನೆಯಂತೆ ಚಿತ್ರೀರಿಸಿದ್ದೇವೆ. ಇಲ್ಲಿ ದೈವಕ್ಕೆ ಮಾಡಬೇಕಿರೋ ಎಲ್ಲ ಪಾವಿತ್ರ್ಯತೆಯನ್ನು ಅಚ್ಚುಕಟ್ಟಾಗಿಯೆ ಮಾಡಿದ್ದೇವೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಂತಾರ ಚಿತ್ರ ಮಾಡಿದ್ದೇವೆ ಎಂದಿದ್ದಾರೆ. ಚಿತ್ರಕ್ಕೆ ಬಂದ ಪ್ರಶಸ್ತಿಯನ್ನ ದೈವ ನರ್ತಕರಿಗೆ, ಕನ್ನಡಿಗರಿಗೆ, ಪವರ್ ಸ್ಟಾರ್ ಪುನೀತ್ ಅವರಿಗೆ ಅರ್ಪಿಸಿದ್ದಾರೆ ಎಂದರು. ಜೊತೆಗೆ ದೈವದ ರೀಲ್ಸ್ ಮಾಡ್ಬೇಡಿ ಅಂತಲೂ ರಿಕ್ವೆಸ್ಟ್ ಮಾಡಿದ್ದಾರೆ.

 

Continue Reading

bengaluru

ಹೈಕೋರ್ಟ್​ ಕಲಾಪವನ್ನೂ ಬಿಡದ ಸೈಬರ್​ ಹ್ಯಾಕರ್ಸ್​​-ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್

Published

on

ಬೆಂಗಳೂರು: ಸೈಬರ್‌ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.

ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್‌ ನಂಬರ್‌ 6, 12, 18, 23, 24, 26 ಮತ್ತು ಇತರ ಹಾಲ್‌ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್‌ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಅವರು ಸೆಂಟ್ರಲ್‌ ಸೆನ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವೀಡಿಯೋ ಕಾನ್ಫರೆನ್ಸ್‌ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್‌ ಆ್ಯಪ್‌ ಅನ್ನು ಹ್ಯಾಕ್‌ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್‌ ಲೋಡ್‌ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್‌ ಹ್ಯಾಕ್‌ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

Continue Reading

LATEST NEWS

Trending