LATEST NEWS
ನನಗೆ ಗೃಹ ಖಾತೆ ಕೊಟ್ಟು ನೋಡಲಿ ಒಬ್ಬನೂ ಕಮಕ್ ಕಿಮಕ್ ಅನ್ನದಂತೆ ಮಾಡುತ್ತೇನೆ: ಶಾಸಕ ಯತ್ನಾಳ್
ವಿಜಯಪುರ: ನನಗೆ ಗೃಹ ಖಾತೆ ಕೊಟ್ಟು ನೋಡಲಿ ಒಬ್ಬನೂ ಕಮಕ್ ಕಿಮಕ್ ಅನ್ನದಂತೆ ಮಾಡುತ್ತೇನೆ ಎಂದು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಭಾವಿತ ವ್ಯಕ್ತಿ. ಅವರಿಗೆ ಕಂದಾಯ, ಅರಣ್ಯ ಖಾತೆಗಳು ಸೂಕ್ತ. ರಾಜ್ಯದಲ್ಲಿ ಪದೇ ಪದೇ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುತ್ತಿವೆ. ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕುರಿತು ನಾನು ಸಿಎಂಗೆ ಒತ್ತಾಯಿಸಿದ್ದೇನೆ. ಮೆತ್ತಗೆ ಮಾತನಾಡಿದರೆ ಕೆಲವರಿಗೆ ಅರ್ಥವಾಗುವುದಿಲ್ಲ, ಇದರಿಂದ ಕಾನೂನು ಪಾಲನೆ ಅಸಾಧ್ಯ. ನನಗೆ ಗೃಹ ಖಾತೆ ಕೊಟ್ಟರೆ ಕೋಮು ಗಲಭೆಯ ಮಾತಿರಲಿ, ಒಬ್ಬನೂ ಕಮಕ್ ಕಿಮಕ್ ಅನ್ನದಂತೆ ಮಾಡುತ್ತೇನೆ ಎಂದರು.
LATEST NEWS
ಕೊನೆಗೂ ಮೌನ ಮುರಿದ ಎಚ್ಡಿ ದೇವೇಗೌಡ..! ಪ್ರಜ್ವಲ್ ಬಗ್ಗೆ ಹೇಳಿದ್ದೇನು?
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನ ಮಂತ್ರಿ ದೇವೇಗೌಡರವರು ಮೌನ ಮುರಿದಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ಪೆಂಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ಪ್ರಜ್ವಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ನಮ್ಮದೇನು ತಕರಾರಿಲ್ಲ. ಆದರೆ ರೇವಣ್ಣ ವಿಚಾರದಲ್ಲಿ ಜನರಿಗೆ ಸತ್ಯ ಗೊತ್ತಿದೆ. ರೇವಣ್ಣ ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ರೇವಣ್ಣರನ್ನು ಯಾವ ರೀತಿ ಸಿಲುಕಿಸಿದ್ದಾರೆ. ಕೇಸ್ ಹೇಗೆ ದಾಖಲು ಮಾಡಿದ್ದಾರೆ ಎಂದು ನಮಗೆ ತಿಳಿದಿದೆ. ಕೋರ್ಟ್ನಲ್ಲಿ ಜಡ್ಜ್ಮೆಂಟ್ ನಡೀತಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇದನ್ನೂ ಓದಿ..; ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್
ಇಂದು 92ನೇ ಹುಟ್ಟು ಹಬ್ಬ ಹಿನ್ನೆಲೆ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ದೇವೇಗೌಡರು ಈಗಾಗಲೇ ಈ ಘಟನೆ ಬಗ್ಗೆ ಕುಮಾರಾಸ್ವಾಮಿ ಅವರು ನಮ್ಮ ಕುಟುಂಬದ ಪರವಾಗಿ ಮಾತನಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಇದರಲ್ಲಿ ಅನೇಕರ ಹೆಸರು ಇದೆ, ಆದರೆ ನಾನು ಅವರ ಹೆಸರನ್ನು ಹೇಳಲು ಬಯಸುವುದಿಲ್ಲ. ಇನ್ನು ಸಂತ್ರಸ್ಥ ಮಹಿಳೆಯರಿಗೆ ಪರಿಹಾರ ನೀಡಬೇಕು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರೆಲ್ಲರಿಗೂ ಶಿಕ್ಷೆ ಆಗಬೇಕು. ಈ ಕುರಿತಾಗಿ ಕುಮಾರಸ್ವಾಮಿಯವರು ಬಿಡಿ ಬಿಡಿಯಾಗಿ ತಿಳಿಸಿದ್ದಾರೆಎಂದು ಹೇಳಿದರು. .
FILM
ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!
ಕಿರುತೆರೆಯ ಖ್ಯಾತ ನಟಿ ಪವಿತ್ರಾ ಜಯರಾಮ್ ಇತ್ತೀಚೆಗೆ ಹೈದರಾಬಾದ್ ಸಮೀಪ ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಈ ವೇಳೆ ಅವರ ಗೆಳೆಯ ಹಾಗೂ ತೆಲುಗು ನಟ ಚಂದು ಅವರಿಗೂ ಪೆಟ್ಟಾಗಿದೆ. ಗೆಳತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಚಂದು ಆತ್ಮಹ*ತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಚಂದು ಹಾಗೂ ಪವಿತ್ರಾ ಜಯರಾಂ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ಪವಿತ್ರಾ ಹಾಗೂ ಚಂದು ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿದ್ದರು. ಇಬ್ಬರು ಜೊತೆಯಾಗಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ದರ್ಶನ್ ಸಿನಿಮಾಗೆ ಪವಿತ್ರಾ ಅವರಿಗೆ ಆಫರ್ ಬಂದಿತ್ತು. ಹೀಗಾಗಿ ಇವರಿಬ್ಬರು ಜೊತೆಯಾಗಿ ಬೆಂಗಳೂರಿಗೆ ಬಂದಿದ್ದರು. ಹಿಂತಿರುಗುವಾಗ ಪ್ರಯಾಣಿಸುತ್ತಿರುವ ಕಾರು ಅಪಘಾತವಾಗಿತ್ತು. ಈ ವೇಳೆ ನಟಿ ಪವಿತ್ರಾ ಜಯರಾಂ ಸಾ*ವನ್ನಪ್ಪಿದ್ದರು. ಚಂದು ಗಾಯಗೊಂಡಿದ್ದರು.
ಇದನ್ನೂ ಓದಿ : ಬ್ಯಾಂಡೇಜ್ ಸುತ್ತಿಕೊಂಡೇ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಐಶ್ವರ್ಯ ರೈ
ಪವಿತ್ರಾ ಸಾವಿಗೆ ತೀವ್ರ ನೊಂದಿದ್ದ ಚಂದು ಸೋಶಿಯಲ್ ಮೀಡಿಯಾದಲ್ಲಿ ಮಿಸ್ ಯೂ ಎಂದು ಪವಿತ್ರಾ ಜೊತೆಗಿನ ವೀಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.
DAKSHINA KANNADA
ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ
ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.
ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.
ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್
ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
- LATEST NEWS6 days ago
ಖಾಲಿ ಬಿಯರ್ ಬಾಟಲಿಗಳಿಂದ ಲಕ್ಷಾಧಿಪತಿಯಾದ ವ್ಯಕ್ತಿ..!
- LATEST NEWS6 days ago
ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!
- DAKSHINA KANNADA6 days ago
ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!
- LATEST NEWS7 days ago
Watch : ಇಬ್ಬರು ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತ್ನಿ; ಹಿಗ್ಗಾಮುಗ್ಗ ಥಳಿಸಿದ ಪತಿ