Connect with us

    LATEST NEWS

    ಅನಿಲ ಸೋರಿಕೆ: ರಿಯಾಕ್ಟರ್ ಸ್ಫೋಟಗೊಂಡು 6 ಮಂದಿ ಕಾರ್ಮಿಕರು ಸಜೀವ ದಹನ

    Published

    on

    ಹೈದರಾಬಾದ್: ಅನಿಲ ಸೋರಿಕೆಯಿಂದ ರಿಯಾಕ್ಟರ್ ಸ್ಫೋಟಗೊಂಡು ಔಷಧಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿ ಸಜೀವ ದಹನವಾಗಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಅಕ್ಕಿರೆಡ್ಡಿಗುಡೆಂನಲ್ಲಿ ನಡೆದಿದೆ.


    ಉದುರುಪತಿ ಕೃಷ್ಣಯ್ಯ, ಬಿ ಕಿರಣ್ ಕುಮಾರ್, ಕಾರು ರವಿ ದಾಸ್, ಮನೋಜ್ ಕುಮಾರ್, ಸುವಾಸ್ ರವಿ ದಾಸ್ ಮತ್ತು ಹಬ್ದಾಸ್ ರವಿ ದಾಸ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

    ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
    ಮೃತಪಟ್ಟ 6 ಮಂದಿಯಲ್ಲಿ ನಾಲ್ವರು ಬಿಹಾರದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.

    ಬೆಂಕಿ ಕಾಣಿಸಿಕೊಂಡಾಗ 18 ಮಂದಿ ಔಷಧಿ ಘಟಕದ 1ನೇ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ತೀವ್ರವಾದ ನಷ್ಟ ಉಂಟಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಎರಡು ಗಂಟೆ ಹಿಡಿಯಿತು.

    ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ, ಅನಿಲ ಸೋರಿಕೆಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಘಟನೆಯ ಬಗ್ಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಳುಗಳಿಗೆ 2ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

    bangalore

    ಬಿಗ್ ಬಾಸ್ ನಿಂದ ಧರ್ಮ ಎಲಿಮಿನೆಟ್ ಆಗಿದ್ದು ಯಾಕೆ ಗೊತ್ತಾ ?

    Published

    on

    ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ರ ರಿಯಾಲಿಟಿ ಶೋ 119ನೇ ದಿನಕ್ಕೆ ಕಾಲಿಡುತ್ತಿದೆ. ಅದರ ನಡುವೆ ವಾರ ವಾರ ಎಲಿಮಿನೇಟ್ ಪ್ರಕ್ರಿಯೆ ತೀವ್ರ ಕೂತುಹಲ ಕೆರಳಿಸಿದೆ. ಈ ವಾರ ಬಿಗ್ ಬಾಸ್ ನಿಂದ ಧರ್ಮ ಕೀರ್ತಿರಾಜ್ ಎಲಿಮೀನೆಟ್ ಆಗಿ ಹೊರಬಂದಿದ್ದಾರೆ.


    ಸದಾ ನಗುಮುಖದಲ್ಲೇ ಕಾಣಿಸಿಕೊಳ್ಳುವ ಧರ್ಮ, ಯಾರ ತಂಟೆಗೂ ಹೊಗುತ್ತಿರಲಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದ್ದರು. ಆದರೆ ಧರ್ಮ ಮತ್ತು ಅನುಷಾ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಅನುಷಾ ಈ ಮೊದಲೇ ಎಲಿಮಿನೇಟ್ ಆಗಿದ್ದರು. ಇದು ಧರ್ಮ ಅವರಿಗೆ ಬೇಸರ ಮೂಡಿಸಿತ್ತು.
    ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಚೈತ್ರಾ ಉಳಿದುಕೊಂಡಿದ್ದರು. ಫೈನಲ್ ಆಗಿ ಧರ್ಮ ಮನೆಯಿಂದ ಹೊರಬಂದರು. ಧರ್ಮ ಬೇಸರದಿಂದಲೇ ಹೊರನಡೆದರು.

    ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

    ಧರ್ಮ ಸದಾ ಕೂಲ್ ಆಗಿಯೇ ಇರುತ್ತಾರೆ. ಅವರು ಯಾವುದೇ ಕಿತ್ತಾಟಕ್ಕೂ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇನ್ನೊಂದು ಕಡೆ, ಧರ್ಮ ಎಲ್ಲಿಯೂ ಕೂಡ ಹೈಲೈಟ್ ಆಗುತ್ತಿರಲಿಲ್ಲ. ಇವರಿಗಿಂತ ನಂತರ ವೈಲ್ಡ್ ಕಾರ್ಡ್ ನಲ್ಲಿ ಬಂದ ಹನುಮಂತ, ರಜತ್ ಹಾಗೂ ಶೋಭಾ ಶೆಟ್ಟಿ ಈಗಗಾಲೇ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
    ಧರ್ಮ ಶಾಂತತೆಯ ಸ್ವರೂಪವನ್ನು ಹೊಂದಿರುವ ವ್ಯಕ್ತಿತ್ವ. ಈ ಮೊದಲು ಎಲಿಮಿನೇಟ್ ಆಗಿರುವ ಲಾಯರ್ ಜಗದೀಶ್ ವಿರುದ್ದ ಇಡೀ ಮನೆಯೇ ತಿರುಗಿ ಬಿದ್ದಾಗಲೂ ಧರ್ಮ ಫೈಟ್ ಗೆ ಹೋಗಿರಲಿಲ್ಲ. ಇದು ಅವರ ಮುಗ್ದತೆ ಮತ್ತು ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ.
    ಬಿಗ್ ಬಾಸ್ ಮನೆ ಎಂದರೆ ನೆನಪಾಗುವುದೇ ಜಗಳ, ಕೋಪ ಮತ್ತು ಮಾತುಗಾರಿಕೆ. ಎಲ್ಲೋ ಒಂದು ಕಡೆ ಧರ್ಮ ಅವರಿಗೆ ತಮ್ಮ ತಾಳ್ಮೆಯೇ ಮುಳುವಾಗಿ ಎಲಿಮಿನೇಟ್ ಆಗಲು ಕಾರಣವಾಯಿತು ಎಂದು ಹೇಳಬಹುದು.

     

    Continue Reading

    LATEST NEWS

    ಸ್ನೇಹಿತನಿಗೆ ಥಳಿಸಿ ಅ*ಪ್ರಾಪ್ತೆ ಮೇಲೆ ಅ*ತ್ಯಾಚಾ*ರ ಎಸಗಿದ ಟ್ರಕ್ ಚಾಲಕ

    Published

    on

    ಮಂಗಳೂರು/ ಮಧ್ಯಪ್ರದೇಶ : 15 ವರ್ಷದ ಬಾ*ಲಕಿಯ ಮೇಲೆ ಟ್ರಕ್ ಚಾಲಕ ಅ*ತ್ಯಾಚಾ*ರವೆಸಗಿರುವ ಘಟನೆ ರೈಸನ್ ಜಿಲ್ಲೆಯಲ್ಲಿ ನಡೆದಿದೆ. ಸಿಲ್ವಾನಿ – ಸಾಗರ್ ರಸ್ತೆಯಲ್ಲಿರುವ ಸಿಯರಾಮೌ ಅರಣ್ಯದಲ್ಲಿ ಕೃ*ತ್ಯ ನಡೆದಿದೆ. ಟ್ರಕ್ ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.

    ಸ್ನೇಹಿತನಿಗೆ ಥಳಿಸಿ ಕೃ*ತ್ಯ :

    ಸಂ*ತ್ರಸ್ತೆ ಮತ್ತು ಆಕೆಯ 21 ವರ್ಷದ ಸ್ನೇಹಿತ ವನದೇವಿ ದೇವಾಲಯ ಭೇಟಿ ನೀಡಲು ತಮ್ಮ ಬೈಕನ್ನು ರಸ್ತೆ ಬದಿ ನಿಲ್ಲಿಸಿ ತೆರಳುತ್ತಿದ್ದರು. ಈ ವೇಳೆ ಒಂದು ಟ್ರಕ್ ಕೆಟ್ಟು ನಿಂತಿತ್ತು. ಅದರ ಚಾಲಕ ಮತ್ತು ಅವನ ಸಹಚರರು ಕೂಡ ಕಾಡಿನೊಳಗೆ ಹೋಗಿದ್ದಾರೆ.  ಬಾಲಕಿಯ ಸ್ನೇಹಿತನಿಗೆ ಥಳಿಸಿ ಬೈಕ್ ಕೀ ಕಿತ್ತುಕೊಂಡಿದ್ದಾರೆ. ಟ್ರಕ್ ಚಾಲಕ ಸಂಜು ಅ*ಪ್ರಾಪ್ತೆಯನ್ನು ಕಾಡಿನೊಳಗೆ ಎಳೆದೊಯ್ದು ಆಕೆಯ ಮೇಲೆ ಆ*ತ್ಯಾಚಾ*ರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

    ಮೂವರು ಆರೋಪಿಗಳು ಹೋದ ಬಳಿಕ ಅಪ್ರಾ*ಪ್ತೆ ಹಾಗೂ ಆಕೆಯ ಸ್ನೇಹಿತ ಮುಖ್ಯರಸ್ತೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬೆಂಬತ್ತಿದ ಪೊಲೀಸರು ಟ್ರಕ್ ಚಾಲಕ ಸಂಜು, ಸಹಚರರಾದ ಶಿವನಾರಾಯಣ ಎಂಬವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊರ್ವ ಆರೋಪಿ  ಅಕ್ಷಯ್ ಗಾಗಿ ಬಲೆ ಬೀಸಿದ್ದಾರೆ.

    Continue Reading

    International news

    ನಿನ್ನೆಯ ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ ಆಟಗಾರರು ಇವರೇ !

    Published

    on

    ಮಂಗಳೂರು/ಸೌದಿ ಅರೇಬಿಯಾ: ಐಪಿಎಲ್ ಸೀಸನ್ 18ರ ಹರಾಜು ಪ್ರಕ್ರಿಯೆ ನಿನ್ನೆಯಿಂದಲೇ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿದೆ. ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 72 ಆಟಗಾರರು ಹರಾಜಾಗಿದ್ದು, ಅದರಲ್ಲಿ ಆರ್ ಸಿಬಿಗೆ ಯಾರೆಲ್ಲಾ ಆಟಗಾರರು ಬಂದಿದ್ದಾರೆ ಇಲ್ಲಿದೆ ನೋಡಿ.


    ಮೆಗಾ ಹರಾಜು ಪ್ರಕ್ರಿಯೆ ಇವತ್ತು ಕೂಡ ಮುಂದುವರಿಯಲ್ಲಿದ್ದು, ನಿನ್ನೆಯ ಹರಾಜಿನಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆದರೆ ಆರ್ ಸಿಬಿಯ ಅಭಿಮಾನಿಗಳಿಗೆ ಶಾಕ್ ಎದುರಾಗಿತ್ತು. ಕನ್ನಡಿಗ ಕೆ. ಎಲ್ ರಾಹುಲ್ ಈ ಬಾರಿಯಾದರು ಆರ್ ಸಿಬಿಗೆ ಬರಬಹುದು ಎಂಬ ನಿರೀಕ್ಷೆ ಈಡೆರಲಿಲ್ಲ.
    ಅಲ್ಲದೆ, ಪ್ರಮುಖ ಆಟಗಾರರದ ರಿಷಭ್ ಪಂತ್, ಜೋಸ್ ಬಟ್ಲರ್, ಮಾಜಿ ಆಟಗಾರ ಯಜುವೇಂದ್ರ ಚಹಲ್ ರವರನ್ನು ಖರೀದಿಸಲು ವಿಫಲವಾಯಿತು. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅವರನ್ನು ಆರ್ ಟಿಎಂ ಬಳಸಿ ಉಳಿಸಿಕೊಳ್ಳದ ಆರ್ ಸಿಬಿ ಮ್ಯಾನೆಜ್ ಮೆಂಟ್ ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.

    ಇನ್ನೂ ಮೊದಲನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ 6 ಆಟಗಾರರನ್ನು ಖರೀದಿಸಿತು. ಅದರಲ್ಲಿ ಮೂವರು ವಿದೇಶಿಯರು ಹಾಗೂ ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ.

    ಇದನ್ನೂ ಓದಿ: ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!

    ಮೊದಲ ದಿನದ ಹರಾಜಿನಲ್ಲಿ ಆರ್ ಸಿಬಿ ಖರೀದಿಸಿದ ಆಟಗಾರರು ಇವರೇ :

    1.ಲಿಯಾಮ್ ಲಿವಿಂಗ್ ಸ್ಟೋನ್- ರೂ 8.75 ಕೋಟಿ
    2.ಫಿಲ್ ಸಾಲ್ಟ್- ರೂ. 11.5 ಕೋಟಿ
    3.ಜಿತೇಶ್ ಶರ್ಮಾ- ರೂ. 11 ಕೋಟಿ
    4.ಜೋಶ್ ಹ್ಯಾಜಲ್ ವುಡ್- ರೂ. 12.5 ಕೋಟಿ
    5.ಅನೂಜ್ ರಾವತ್- ರೂ. 30 ಲಕ್ಷ
    6.ರಾಸಿಖ್ ಸಲಾಮ್ ದಾರ್-ರೂ. 6ಕೋಟಿ
    7.ಸುಯಾಶ್ ಶರ್ಮಾ-ರೂ. 2.6ಕೋಟಿ

    Continue Reading

    LATEST NEWS

    Trending